ಪವಿತ್ರ ತಿಪಿಟಕ ಸದ್ಧಮ್ಮ ಸಜ್ಜಾಯನ (ತಿಪಿಟಕ ಪಠಣ) - 2025

 ಪವಿತ್ರ ತಿಪಿಟಕ ಸದ್ಧಮ್ಮ ಸಜ್ಜಾಯನ (ತಿಪಿಟಕ ಪಠಣ) - 2025

ಮಹಾ ಬೋಧಿ ಸೊಸೈಟಿ, ಬೆಂಗಳೂರು ಮತ್ತು ಇಂಟರ್‌ನ್ಯಾಷನಲ್ ತಿಪಿಟಕ ಚಾಂಟಿಂಗ್ ಕೌನ್ಸಿಲ್ ಸಹಯೋಗದೊಂದಿಗೆ ಫೆಬ್ರವರಿ 16, 2025 ರಂದು ಬೆಂಗಳೂರಿನ ಗಾಂಧೀನಗರದ ಮಹಾಬೋಧಿ ಸೊಸೈಟಿಯಲ್ಲಿ ಪವಿತ್ರ ತಿಪಿಟಕ ಸದ್ಭಮ್ಮ ಸಜ್ಜಾಯನ (ತಿಪಿಟಕ ಪಠಣ) ವನ್ನು ಹಮ್ಮಿಕೊಂಡಿದೆ.

ಭಗವಾನ್ ಬುದ್ಧರ ಬೋಧಿಸಿದ ಪವಿತ್ರ ತಿಪಿಟಕ ಪಠಣೆಯನ್ನು ಸುಮಾರು ಒಂದು ಸಾವಿರ ವರ್ಷಗಳ ಕಾಲ, ಬೋಧಗಯಾದ ಮಹಾಬೋಧಿ ಮಹಾವಿಹಾರದಲ್ಲಿ ಪಠಿಸಲಾಗುತ್ತಿತ್ತು. ಈಗ, ಭಾರತದಲ್ಲಿ ಮತ್ತು ಪ್ರಪಂಚದಾದ್ಯಂತ ಬೌದ್ಧ ಸಂಸ್ಕೃತಿಯ ಪುನರುಜ್ಜಿವನದ ಭಾಗವಾಗಿ ಬುದ್ಧರ ಜ್ಞಾನೋದಯ ಸ್ಥಳವಾದ ಬುದ್ಧಗಯೆ ಸ್ಥಳದಿಂದ ಪಾಲಿ ತಿಪಿಟಕ ಪರಿಸುವ ಸಂಪ್ರದಾಯವನ್ನು ಪುನರಾರಂಭಿಸಿ, ಹಲವಾರು ವರ್ಷಗಳ ನಂತರ ದಕ್ಷಿಣ ಭಾರತದಲ್ಲಿ ನಡೆಯುತ್ತಿದೆ. ಇದು ಪ್ರತಿ ವರ್ಷ ಚಳಿಗಾಳದ ತಿಂಗಳಿನಲ್ಲಿ ತಿಪಿಟಕ ಪರಣೆಯ ಸರಣಿಯು ವಿವಿಧ ಭಾಗಗಳಲ್ಲಿ ನಡೆಸಲಾಗುತ್ತದೆ.

ಈ ತಿಪಿಟಕ ಪಠಣೆ ಕಾರ್ಯಕ್ರಮದಲ್ಲಿ 108 ಪೂಜ್ಯ ಭಿಕ್ಖುಗಳು ಈ ಪವಿತ್ರ ತಿಪಿಟಕವನ್ನು ಪಠಿಸಲಿದ್ದಾರೆ. ಪೂಜ್ಯ ಭಿಕ್ಖುಸಂಘ ನೋಡಲು ಮತ್ತು ಭಗವಾನ್ ಬುದ್ಧರ ಪವಿತ್ರ ಪದಗಳ ಪಠಣವನ್ನು ಕೇಳುವ ಅಪರೂಪದ ಅವಕಾಶ ಇದಾಗಿದೆ. ಪವಿತ್ರ ತಿಪಿಟಕ ಸದ್ಭಮ್ಮ ಸಜ್ಜಾಯನವು ಹಲವಾರು ವರ್ಷಗಳ ನಂತರ ದಕ್ಷಿಣ ಭಾರತದಲ್ಲಿ ನಡೆಯುತ್ತಿದೆ.

ನಿಮ್ಮ ವರದಿಗಾರರನ್ನು ಈ ಕಾರ್ಯಕ್ರಮಕ್ಕೆ ಕಳುಹಿಸಿ. ನಿಮ್ಮ ಮಾದ್ಯಮ ಮಿತ್ರರನ್ನು ನಿಯೋಜಿಸಿ ನಮ್ಮ ಕಾರ್ಯಕ್ರಮದ ಬಗ್ಗೆ ವರದಿಯನ್ನು ಮುದ್ರಣ ಮಾಧ್ಯಮ ಮತ್ತು ಟಿವಿ ಮಾಧ್ಯಮದಲ್ಲಿ ಪ್ರಸಾರ ಮಾಡಬೇಕಾಗಿ ತಮ್ಮಲ್ಲಿ ವಿನಂತಿ. ಇದರೊಂದಿಗೆ ಆಹ್ವಾನಪತ್ರಿಕೆ ಮತ್ತು ಕಾರ್ಯಕ್ರಮದ ವಿವರಗಳನ್ನು ಲಗತ್ತಿಸಲಾಗಿದೆ.

- ಹೆಚ್ಚಿನ ಮಾಹಿತಿಗಾಗಿ:

1 9731635108

2. 8123420039


Comments

Popular posts from this blog

ಗ್ರಾಮ ಸಹಾಯಕರ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಅನಿರ್ದಿಷ್ಠಾವಧಿ ಮುಷ್ಕರ ದಿನಾಂಕ 9/6/2025 ರಂದು ಫ್ರೀಡಂ ಪಾರ್ಕ್ ನಲ್ಲಿ ನಡೆಯುತ್ತದೆ

ಮುಳಖೇಡ, ಸೇಡಂ ತಾಲ್ಲೂಕು, ಕಲಬುರ್ಗಿ ಜಿಲ್ಲಾ ಗ್ರಾಮ ಪಂಚಾಯತ್ ಗ್ರಂಥಪಾಲಕಿ ಶ್ರೀಮತಿ ಭಾಗ್ಯವತಿ ಮಠ ಆತ್ಮಹತ್ಯೆ

Methodist Church in India Announces New Leadership, Disputes Former Bishop’s Claims