ಲಯನ್ಸ್ ಕ್ಲಬ್ ವತಿಯಿಂದ ಫೆಬ್ರವರಿ 16 ರಂದು ಸೇವಾ ಚಟುವಟಿಕೆ
ಲಯನ್ಸ್ ಕ್ಲಬ್ ವತಿಯಿಂದ ಫೆಬ್ರವರಿ 16 ರಂದು ಸೇವಾ ಚಟುವಟಿಕೆ

ಬೆಂಗಳೂರು, ಫೆ. 14: ಲಯನ್ಸ್ ಅಂತರಾಷ್ಟ್ರೀಯ ಟೀಮ್ ಸ್ಪರ್ಶ, ಡಿಸ್ಟ್ರಿಕ್ಟ್ 317ಎ ವತಿಯಿಂದ ಪ್ರದೇಶ-IV ಪ್ರಾದೇಶಿಕ ಸಭೆ ಹಾಗೂ ವಿವಿಧ ಸೇವಾ ಚಟುವಟಿಕೆಗಳು ಫೆಬ್ರವರಿ 16ರಂದು ಬೆಂಗಳೂರಿನ ಕಾಸಿಯಾ ಸಭಾಂಗಣದಲ್ಲಿ ಮಧ್ಯಾಹ್ನ 3.30 ರಿಂದ ನಡೆಯಲಿದೆ.
ಈ ಸಂದರ್ಭದಲ್ಲಿ ಆಶಾ ದೀಪ ವೃದ್ಧಾಶ್ರಮ, ಲಯನ್ಸ್ ಕಣ್ಣಿನ ಆಸ್ಪತ್ರೆ, ಹಸಿವು ನಿವಾರಣಾ ಯೋಜನೆಗಳಿಗೆ ತಲಾ ₹25,000 ದೇಣಿಗೆ ನೀಡಲಾಗುವುದು. ಜೊತೆಗೆ, ಸ್ಯಾನಿಟರಿ ಪ್ಯಾಡ್ ವಿತರಣಾ ಯಂತ್ರ, ಡಯಾಲಿಸಿಸ್ ಯಂತ್ರ, ಬುಗಿ ವ್ಯಾನ್ ಸೇರಿ ಹಲವು ಸಾಮಾಜಿಕ ಸೇವಾ ಕಾರ್ಯಕ್ರಮಗಳ ನೆರವು ವಿತರಿಸಲಾಗಲಿದೆ.
ಮುಖ್ಯ ಅತಿಥಿಯಾಗಿ ನಿವೃತ್ತ ನಿಮ್ಹಾನ್ಸ್ ಪ್ರಾಧ್ಯಾಪಕ, ಪದ್ಮಶ್ರೀ ಡಾ. ಸಿ.ಆರ್. ಚಂದ್ರಶೇಖರ್ ಭಾಗವಹಿಸಲಿದ್ದಾರೆ. ಲಯನ್ಸ್ ಕ್ಲಬ್‌ನ ಮಾಜಿ ರಾಜ್ಯಪಾಲರು, ಪದಾಧಿಕಾರಿಗಳು ಹಾಗೂ ಕ್ಲಬ್ ಸದಸ್ಯರು ಈ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.
ಡಿಸ್ಟ್ರಿಕ್ಟ್ ಗವರ್ನರ್ ಲಯನ್ ಎನ್. ಮೋಹನ್ ಕುಮಾರ್, ರೀಜನಲ್ ಚೇರ್‌ಪರ್ಸನ್ ಲಯನ್ ಸೋಮಲತಾ, ಚೇರ್ಮನ್ ಲಯನ್ ಮಲ್ಲೇಶಯ್ಯ ಅವರ ನೇತೃತ್ವದಲ್ಲಿ ಈ ಕಾರ್ಯಕ್ರಮ ನಡೆಯಲಿದೆ ಎಂದು ಲಯನ್ಸ್ ಮಾಧ್ಯಮ ವಿಭಾಗದ ಅಧ್ಯಕ್ಷ ಲಯನ್ ಡಾ. ಉಮೇಶ್ ಕುಮಾರ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. ಲಯನ್ ಗಾಯತ್ರಿ ಗಿರೀಶ್ ಹಾಗೂ ಲಯನ್ಸ್ ಕ್ಲಬ್‌ನ ಇತರ ಪದಾಧಿಕಾರಿಗಳು ಈ ಸಂದರ್ಭ ಉಪಸ್ಥಿತರಿದ್ದರು.
Comments
Post a Comment