ರಾಜ್ಯಾದ್ಯಂತ ಬಾಣಂತಿಯರ ಮತ್ತು ನವಜಾತ ಶಿಶುಗಳ ಸರಣೆ ಸಾವು

 

ರಾಜ್ಯಾದ್ಯಂತ ಬಾಣಂತಿಯರ ಮತ್ತು ನವಜಾತ ಶಿಶುಗಳ ಸರಣೆ ಸಾವು ಹಾಗೂ ಆರೋಗ್ಯ ಇಲಾಖಾ ಸಚಿವರ ಮತ್ತು ಅಧಿಕಾರಿಗಳ ಬೇಜವಾಬ್ದಾರಿ ನಡವಳಿಕೆಗಳಿಂದ ಆಗುತ್ತಿರುವ ಅನಾಹುತಗಳ ಬಗ್ಗೆ ಜನತಾ ಪಕ್ಷದ ವತಿಯಿಂದ ರಾಷ್ಟ್ರೀಯ ಮಹಿಳಾ ಅಧ್ಯಕ್ಷರಾದ ಡಾ.ವಾಣಿ ಎನ್ ಶೆಟ್ಟಿ ರವರ ನೇತೃತ್ವದಲ್ಲಿ  ಪತ್ರಿಕಾಗೋಷ್ಠಿ


ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ನಡವಳಿಕೆಯಿಂದಾಗಿ ಹಾಗೂ ಹಿಂದಿನ ಅವಧಿಯಲ್ಲಿ ಅಧಿಕಾರದಲ್ಲಿದ್ದ ಭಾರತೀಯ ಜನತಾಪಕ್ಷದ ಹೊಣೆಗೇಡಿ ನೀತಿಯಿಂದಾಗಿ ಆರೋಗ್ಯ ಇಲಾಖೆ ಸೇರಿದಂತೆ ಇಡೀ ಆಡಳಿತದೇ ಅವ್ಯವಸ್ಥೆಯ ತಾಣವಾಗಿರುವುದು ನಾಚಿಕೆಗೇಡಿನ ವಿಷಯ ಪ್ರಸ್ತುತ ವೈದ್ಯರ ಹಾಗೂ ಸಿಬ್ಬಂದಿಗಳ ನಿರ್ಲಕ್ಷ್ಯದಿಂದಾಗಿ ವಾಣಂತಿಯರ ಸಾವುಗಳು ದಿನೇದಿನೇ ಹೆಚ್ಚಾಗುತ್ತಿದ್ದು, ಸಾರ್ವಜನಿಕರು ಕಂಗಾಲಾಗಿದ್ದಾರೆ. ಮಾಧ್ಯಮಗಳಲ್ಲಿ ಬಿತ್ತರವಾಗುತ್ತಿರುವ ಸುದ್ದಿಗಳನ್ನು ಗಮನಿಸಿದರೆ ನಾಡಿನ ಜನರ ಆರೋಗ್ಯದ ಬಗ್ಗೆ ರಾಜಕಾರಣಿಗಳಿಗೆ, ಅಧಿಕಾರಿಗಳಿಗೆ ಮತ್ತು ನಾಡಿನ ಸಾಕ್ಷಿಪ್ರಶ್ನೆಗಳಿಗೆ ಕಾಳಜಿಯೇ ಇಲ್ಲದಂತಾಗಿದೆ. ಸರ್ಕಾರದ ವಿರೋಧಾಭಾಸದ

ಆರೋಗ್ಯ ಇಲಾಖೆಯ ನಿರ್ಲಕ್ಷ್ಯದಿಂದಾಗಿ ಸಾವಿಗೀಡಾಗುತ್ತಿರುವ ಅಸಂಖ್ಯಾತ ಬಾಣಂತಿಯರು ಒಂದೆಡೆಯಾದರೆ, ಮತ್ತೊಂದೆಡೆ ನವಣಾತ ಶಿಶುಗಳ ದಾರುಣ ಸಾವು ನಿರಂತರವಾಗಿದೆ. ಸರಣಿ ದುರ್ಘಟನೆಗಳು ಕಣ್ಣೆದುರಿಗೆ ಇದ್ದರೂ ಮಾನ್ಯ ಆರೋಗ್ಯ ಸಚಿವರು “ನನ್ನ ತಪ್ಪಿದ್ದರೆ ರಾಜೀನಾಮೆಗೆ ಸಿದ್ದ” ಎಂಬ ಬೇಜಾವಾಬ್ದಾರಿ ಹೇಳಿಕೆ ನೀಡಿ ಅನುಕಂಪ ಗಿಟ್ಟಿಸಿಕೊಳ್ಳಲು ನೋಡುತ್ತಿದ್ದಾರೆ. ಮುಂದುವರೆದು ಸದರಿ ಸಚಿವರು “ಗ್ಲೋಕೋಸ್ ಕಾರಣವಾಗಿದ್ದರೆ ಕಂಪೆನಿಗಳ ಮೇಲೆ ಕ್ರಮ” ಎಂದಿದ್ದಾರೆ. ಕಳಪೆ ಗುಣಮಟ್ಟದ ಉಪಕರಣಗಳನ್ನು ಸರಬರಾಜು ಮಾಡಿದ ಕಂಪೆನಿಗಳ ಜೊತೆಗೆ, ಸದರಿ ಔಷಧಿಗಳನ್ನು ನಿಯಮಾನು ಅನುಸಾರ ಪರೀಕ್ಷಿಸದೆ ಉಪಯೋಗಿಸಿದ ವೈದ್ಯಕೀಯ ಸಿಬ್ಬರಿ ಬ್ಬಂದಿಗಳ ವಿರುದ್ದವೂ ಸ್ವವೂ ಕ್ರಮ ಜರುಗಿಸುವ మాడుతారు? ಧೈದ್ಯವನ್ನು ಮಾನ್ಯ ಆರೋಗ್ಯ ಸಚಿವರು ಮಾಡ

ಸರಣಿ ದುರ್ಘಟನೆಗಳ ಬಗ್ಗೆ ಮಾಧ್ಯಮಗಳಲ್ಲಿ “ಸಿ.ಎಂ. ಸಿಡಿಮಿಡಿ” ಎಂಬ 327 meoãost మర గావు ఎం చిత్తివాగుడే బుద్ద: ತಕ್ಷಣವೇ ಪ್ರಕಾರ ಎಂದಿದ್ದರೂ, ದಿನೂರನ್ನೂ ದಾಟರುವ ಸಾಧ್ಯತೆಯಿದೆ. ಮೊದಲಿನ ಒಂದೆರೆಡು ಪ್ರಕರಣಗಳು ವರದಿಯಾದ ಸಚಿವರುಗಳು ಮತ್ತು ಅಧಿಕಾರಿಗಲು ಎಚ್ಚರಿಕೆ ವ ವಹಿಸಿದ್ದರೆ, ಇಷ್ಟೊಂದು ಪ್ರಮ ಮಾಣದ ಹೊಣೆಯಾಗಬೇಕಿದೆ. ಈ ಅಂಕಿ- ನೋವನ್ನು ತಪ್ಪಿಸಬಹುದಿತ್ತು. ಇಷ್ಟೊಂದು ಸಾವುಗ ವುಗಳಿಗೆ ಸರ್ಕಾರವೇ ಹೆ ಅಂಶಗಳು . ತಾಯ್ತನದ ಮಹಿಳೆಯ ು ರಲ್ಲಿ ಆತಂಕವನ್ನುಂಟುಮಾಡಿದೆ. ಂಬ ಬಾಲಿಶ ವರದಿಗಳು

ಮಹಿಳಾ ಮತ್ತು ಮಕ್ಕಳ ಮಕ್ಕಳ ಅಭಿವೃದ್ಧಿ ಸಚಿವೆಯವರು “ಇಲಾಖಾ ತನಿಖೆಗೆ ಆದೇಶಿಸಲಾಗಿವೆ” ಎಂಬ ತಿಪ್ಪೇಸಾರಿಸುವ ಹೇಳಿಕೆ ನೀಡಿದ್ದಾರೆ. ರೆ. ಇವರದೇ ಆಡಳಿತದಲ್ಲಿ ಆಗಿರುವ ದಗಳಿಗೆ ಇವರೇ ಪ್ರಮಾದಗ ನೇಮಿಸಿದ ತನಿಖಾ ತಂಡದಿಂದ ಇಸ ಇವರದೇ ‘ಕರ್ತವ್ಯಲೋಪದ ಬಗ್ಗೆ ಯಾವ ಅಧಿಕಾರಿಂ ಕಾರಿಯಾದರೂ ಸತ್ಯಾ ಸತ್ಯಾಂಶದ ವರದಿ ನೀಡಲು ಸಾಧ್ಯವೇ? ಸಾರ್ವಜನಿಕರನ್ನು ದಾರಿತಪ್ಪಿಸುವ ಹೇಳಿಕೆ ಇದಾಗಿದ್ದು, ತಪ್ಪಿತಸ್ಥರ ವಿರುದ್ಧ ಯಾವುದೇ ಕ್ರಮವೂ ಜರುಗುವುದಿಲ್ಲ ಎಂಬುದು ಸಾಮಾನ್ಯಜ್ಞಾನ ಇರುವ ಯಾರಿಗಾದರೂ ಅರ್ಥವಾಗುತ್ತದೆ.

ಹೊಣೆಗೇಡಿ ಸರ್ಕಾರವು ನಾಮಕೇವಾಸ್ತೆ ನೇಮಿಸಿರುವ ಐಎಎಸ್ ಅಧಿಕಾರಿಯಿಂದ ಬಾರದರ್ಶಕ ತನಿಖೆ ಅಸಾಧ್ಯ. ಇಂತಹ ಗಂಭೀರ ಪ್ರಕರಣಗಳ ತನಿಖೆ ನಡೆಸಬೇಕಾದವರು ವೈದ್ಯಕೀಯ ವಿಜ್ಞಾನದಲ್ಲಿ ವಿಶೇಷವಾಗಿ ಸ್ತ್ರೀರೋಗ ಮತ್ತು ಪ್ರಸೂತಿ ಹಾಗೂ ಮಕ್ಕಳ ತಜ್ಞರಾಗಿರಬೇಕು. ಹೀಗಾಗಿ ಸದರಿ ತನಿಖಾ ತಂಡದ ಸೇಮಕಾತಿಯ ಕಣ್ಣೂರೆಸುವ ತಂತ್ರವಾಗಿದೆ. ಇದರಿಂದಾಗಿ ಸಮಯ ಹಾಗೂ ದೊಕ್ಕಸಕ್ಕೆ ಮತ್ತಷ್ಟು ಹಾನಿಯೇ ಹೊರತು ಯಾವುದೇ ಸತ್ಯಾಂಶವೂ ಹೊರಬರುವುದಿಲ್ಲ ಮತ್ತು ತಪ್ಪಿತಸ್ಥರ ಬಗ್ಗೆಯೂ ಜಗತ್ತಿಗೆ ತಿಳಿಯುವುದಿಲ್ಲ,

ಬಾಣಂತಿಯರ ಸಾವಿಗೆ ಸಂಬಂಧಿಸಿದಂತೆ ಮುಖ್ಯಮಂತ್ರಿಗಳು ಘೋಷಿಸಿರುವ ರೂ.5 ಲಕ್ಷಗಳ ಪರಿಹಾರವಂತೂ ಅವೈಜ್ಞಾನಿಕ, ಅಸಂಬದ್ಧ, ಅತಾರ್ಕಿಕ ತೀರ್ಮಾನವಾಗಿದೆ. ಇದರಿಂದಾಗಿ ಪರಿಹಾರ ವಿತರಣೆಯಲ್ಲೂ ಭ್ರಷ್ಟಾಚಾರಕ್ಕೆ ದಾರಿ ಮಾಡಿಕೊಟ್ಟಂತಾಗುತ್ತದೆ. ಬಾಣಂತಿಯರ ಮತ್ತು ನವಜಾತ ಶಿಶುಗಳ ಜೀವಕ್ಕೆ ಸರ್ಕಾರವೇ ಬೆಲೆ ಕಟ್ಟಿದಂತಾಗುತ್ತದೆ. ಅಸಂಬದ್ದ ಪದ್ಧತಿಯನ್ನು ಹುಟ್ಟುಹಾಕಿದಂತೆ.

ವಿರೋಧಪಕ್ಷದ ನಾಯಕರು ಹಾಗೂ ಕೇಂದ್ರ ಸಚಿವರಾದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರು ನ್ಯಾಯಾಂಗ ತನಿಖೆಗೆ ಒತ್ತಾಯಿಸಿದ್ದಾರೆ. ಇಲ್ಲಿಯೂ ಆಡಳಿತ ಪಕ್ಷದವರು ತಮಗೆ ಅನುಕೂಲವಾಗುವಂತಹ ನಿವೃತ್ತ ವ್ಯಕ್ತಿಗಳನ್ನೇ ನೇಮಿಸುವುದು, ತಿಪ್ಪೆಸಾರಿಸುವುದು. ವರದಿಯ ಅನುಷ್ಠಾನವಾಗದೆ ಕ್ರಮೇಣ ಪ್ರಕರಣಗಳು ಮುಚ್ಚಿಹೋಗಿರುವುದನ್ನು ನೋಡಿದ್ದೇವೆ. ಹಾಗಾಗಿ ಹಾಲಿ ಹೈಕೋರ್ಟ್ ನ್ಯಾಯಾಧೀಶರಿಂದ ಮಾತ್ರವೇ ತನಿಖೆ ನಡೆಸಬೇಕೆಂದು ಜನತಾಪಕ್ಷವು ಆಗ್ರಹಿಸುತ್ತದೆ.

ಇವೆಲ್ಲದರ ಪರಿಣಾಮವಾಗಿ ಬಡಬಗ್ಗರು ಸರ್ಕಾರಿ ಆಸ್ಪತ್ರೆಗಳನ್ನು ಸಾವಿನ ಮನೆಗಳನ್ನು ಕಂಡಂತೆ ಭಯಭೀತರಾಗಿದ್ದಾರೆ. ಪರೋಕ್ಷವಾಗಿ ಸಾಲ-ಸೋಲ ಮಾಡಿ ದುಬಾರಿ ಖಾಸಗಿ ಆಸ್ಪತ್ರೆಗಳಿಗೆ ಹೋಗುವಂತಹ ಅನಿವಾರ್ಯ ವಾತಾವರಣವನ್ನು ಸರ್ಕಾರವೇ ಸೃಷ್ಟಿಸುತ್ತಿರುವ ಅನುಮಾನ ಸಾರ್ವಜನಿರನ್ನು ಕಾಡುತ್ತಿದೆ. ಒಟ್ಟಾರೆ ಪ್ರಸ್ತುತ ಸರ್ಕಾರ ಮತ್ತು ಸರ್ಕಾರಿ ಆಸ್ಪತ್ರೆಗಳು ಬಡವರ ಪರವಾಗಿಲ್ಲ ಎಂಬುದು ಸ್ಪಷ್ಟವಾಗಿ ಕಾಣುತ್ತಿದೆ. ಈ ಎಲ್ಲ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಘಟಿಸುತ್ತಿರುವ ಬಾಣಂತಿಯರ ಸಾವು, ನವಜಾತ ಶಿಶುಗಳ ಸಾವು ಒಳಗೊಂಡಂತೆ ಸಮಸ್ತ ಆರೋಗ್ಯ ಇಲಾಖೆಗೇ ಮೇಜರ್ ಸರ್ಜರಿಯ ಅಗತ್ಯವಿದೆ.

ಸದರಿ ಪ್ರಕರಣಗಳ ಕುರಿತು ಹಾಲಿ ಹೈಕೋರ್ಟ್ ನ್ಯಾಯಮೂರ್ತಿಗಳ ನೇತೃತ್ವದ ಆಯೋಗದಿಂದ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಜನತಾಪಕ್ಷವು ಕೆಳಕಂಡ ಪದಾಧಿಕಾರಿಗಳ ನೇತೃತ್ವದಲ್ಲಿ ಸರ್ಕಾರವನ್ನು ಆಗ್ರಹಿಸುತ್ತದೆ ಎಂದು ರಾಷ್ಟ್ರೀಯ ಮಹಿಳಾ ಅಧ್ಯಕ್ಷರಾದ ಡಾ.ವಾಣಿ ಎನ್ ಶೆಟ್ಟಿ ರವರ ನೇತೃತ್ವದಲ್ಲಿ ನಾಗೇಶ್.ಎನ್,ಜನತಾ ಪಕ್ಷದ ರಾಜ್ಯ ಮಹಾಪ್ರಧಾನ ಕಾರ್ಯದರ್ಶಿಗಳ ಸಮ್ಮುಖದಲ್ಲಿ ಪ್ರೆಸ್ ಕ್ಲಬ್ ಆಫ್ ಬೆಂಗಳೂರ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಲಾಯಿತು.

ಪತ್ರಿಕಾಗೋಷ್ಠಿಯಲ್ಲಿ, ಶ್ರೀಮತಿ ಕನ್ಯಾ ಭೂಷಣ್ :ನಿವೃತ್ತ ಶಿಕ್ಷಕಿ ಹಾಗೂ ರಾಜ್ಯ ಹಿರಿಯ ಉಪಾಧ್ಯಕ್ಷರು, ಮಹಿಳಾ ಘಟಕ, ಶ್ರೀಮತಿ ಸುನಂದ: ನಿವೃತ್ತ ಶಿಕ್ಷಕಿ ಹಾಗೂ ರಾಜ್ಯ ಉಪಾಧ್ಯಕ್ಷರು, ಮಹಿಳಾ ಘಟಕ, ಶ್ರೀಮತಿ ಸ್ನೇಹ: ರಾಜ್ಯ ಪ್ರಧಾನ ಕಾರ್ಯದರ್ಶಿ, ಮಹಿಳಾ ಘಟಕ, ಶ್ರೀ ದಿಲೀಪ್‌ ಕುಮಾರ್: ರಾಜ್ಯ ಕಾರ್ಯದರ್ಶಿ ಹಾಗೂ ಶ್ರೀ ಎ.ರಾಜ್: ಬೆಂಗಳೂರು ನಗರ ಘಟಕದ ಅಧ್ಯಕ್ಷರು ಉಪಸ್ಥಿತರಿದ್ದರು .

Comments

Popular posts from this blog

ಗ್ರಾಮ ಸಹಾಯಕರ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಅನಿರ್ದಿಷ್ಠಾವಧಿ ಮುಷ್ಕರ ದಿನಾಂಕ 9/6/2025 ರಂದು ಫ್ರೀಡಂ ಪಾರ್ಕ್ ನಲ್ಲಿ ನಡೆಯುತ್ತದೆ

ಮುಳಖೇಡ, ಸೇಡಂ ತಾಲ್ಲೂಕು, ಕಲಬುರ್ಗಿ ಜಿಲ್ಲಾ ಗ್ರಾಮ ಪಂಚಾಯತ್ ಗ್ರಂಥಪಾಲಕಿ ಶ್ರೀಮತಿ ಭಾಗ್ಯವತಿ ಮಠ ಆತ್ಮಹತ್ಯೆ

Methodist Church in India Announces New Leadership, Disputes Former Bishop’s Claims