ಅಂತರಾಷ್ಟ್ರೀಯ ಅಂಧರ ಪುಟ್‌ಬಾಲ್ ಸೂಪರ್ ಲೀಗ್ ಬೆಂಗಳೂರು ಕಣ್ ಕೇಂದ್ರದಲ್ಲಿ ಆರಂಭ
ಅಂತರಾಷ್ಟ್ರೀಯ ಅಂಧರ ಪುಟ್‌ಬಾಲ್ ಸೂಪರ್ ಲೀಗ್ ಬೆಂಗಳೂರು ಕಣ್ ಕೇಂದ್ರದಲ್ಲಿ ಆರಂಭ

ಬೆಂಗಳೂರು: ಅಂತರಾಷ್ಟ್ರೀಯ ಅಂಧರ ಪುಟ್‌ಬಾಲ್ ಸೂಪರ್ ಲೀಗ್ ಪಂದ್ಯಾವಳಿ ಇದೇ ಮೊದಲ ಬಾರಿಗೆ ಬೆಂಗಳೂರಿನಲ್ಲಿ ಆಯೋಜಿಸಲಾಗಿದೆ. ಈ ಪಂದ್ಯಾವಳಿ ಜನವರಿ 23 ರಿಂದ 26ರವರೆಗೆ ನ್ಯೂ ಬಿ.ಇ.ಎಲ್. ರಸ್ತೆಯಲ್ಲಿರುವ ಮೈದಾನದಲ್ಲಿ ನಡೆಯಲಿದೆ. ಈ ಘಟನೆ ಅಶ್ವಿನಿ ಅಂಗಡಿ ಟ್ರಸ್ಟ್ ಮತ್ತು ಭಾರತೀಯ ಅಂಧರ ಪುಟ್‌ಬಾಲ್ ಸಂಸ್ಥೆಯ ಸಹಯೋಗದಲ್ಲಿ ನಡೆಯುತ್ತಿದೆ.
ಪತ್ರಿಕಾಗೋಷ್ಠಿಯಲ್ಲಿ ಟ್ರಸ್ಟ್ ಸಂಸ್ಥಾಪಕಿ ಅಶ್ವಿನಿ ಅಂಗಡಿ, ಭಾರತೀಯ ಅಂಧರ ಪುಟ್‌ಬಾಲ್ ಸಂಸ್ಥೆಯ ಅಧ್ಯಕ್ಷ ನಿಡೋ ಟಾಮ್, ಮತ್ತು ಅಂತರಾಷ್ಟ್ರೀಯ ಫುಟ್‌ಬಾಲ್ ಕ್ರೀಡಾಪಟುಗಳು ಪಾಲ್ಗೊಂಡಿದ್ದರು. ಅಶ್ವಿನಿ ಅಂಗಡಿ ತಮ್ಮ ಭಾಷಣದಲ್ಲಿ, “ಅಂಗನ್ಯೂನತೆಯ ಬಾಧೆ ಎದುರಿಸಿ ಸಾಧನೆ ತೋರಲು ಅವಕಾಶ ನೀಡುವ ಈ ಕ್ರೀಡಾಪಟುಗಳು ಸಮಾಜಕ್ಕೆ ಪ್ರೇರಣೆ ಆಗುತ್ತಾರೆ” ಎಂದು ಹೇಳಿದರು.
ಈ ಪಂದ್ಯಾವಳಿಯಲ್ಲಿ ಪುರುಷರು ಮತ್ತು ಮಹಿಳೆಯರು ಭಾಗವಹಿಸುತ್ತಿದ್ದು, ಮೆಕ್ಸಿಕೊ ಮತ್ತು ಸೌತ್ ಕೊರಿಯಾ ಪ್ಯಾರಾಲಿಂಪಿಕ್ ಚಿನ್ನದ ಪದಕ ವಿಜೇತರು ಕೂಡ ಪಾಲ್ಗೊಳ್ಳಲಿದ್ದಾರೆ.
ಉದ್ಘಾಟನಾ ಕಾರ್ಯಕ್ರಮ:
ಜನವರಿ 23ರಂದು ಬೆಳಿಗ್ಗೆ 9 ಗಂಟೆಗೆ ಕನ್ನಡ ಮತ್ತು ಸಂಸ್ಕೃತ ವಿಶ್ವವಿದ್ಯಾಲಯದ ಕುಲಸಚಿವ ವಿಶ್ವನಾಥ್ ಹಿರೇಮಠ, ಡಾ. ಪ್ರಶಾಂತ್ (ಕೆ.ಎಸ್.ಡಿ.ಎಲ್.), ಸಿ.ಕೆ. ಬಾವ (ಪೋಲೀಸ್ ಅಧಿಕಾರಿ) ಸೇರಿದಂತೆ ಗಣ್ಯರು ಉದ್ಘಾಟನೆ ನೆರವೇರಿಸಲಿದ್ದಾರೆ.
ಸಮಾರೋಪ ಸಮಾರಂಭ:
ಜನವರಿ 26ರಂದು ನಡೆದ ಸಮಾರೋಪ ಕಾರ್ಯಕ್ರಮದಲ್ಲಿ ಮಾಜಿ ಉಪಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವಥ್ ನಾರಾಯಣ್, ಶಾಸಕರಾದ ಎನ್.ಎ. ಹ್ಯಾರೀಸ್, ವಿಧಾನಪರಿಷತ್ ಸದಸ್ಯ ವೈ.ಎಂ. ಸತೀಶ್ ರೆಡ್ಡಿ, ಮತ್ತು ಹಸಿರು ಫಾರ್ಮ್ ಸಿ.ಇ.ಒ ಲಕ್ಷಾರ್ ಎಂ.ಎಸ್ ಸೇರಿದಂತೆ ಗಣ್ಯರು ಪಾಲ್ಗೊಳ್ಳಲಿದ್ದಾರೆ.
ಈ ಕ್ರೀಡಾಕೂಟವು ಅಂಧ ಕ್ರೀಡಾಪಟುಗಳ ಕೌಶಲ್ಯ ಮತ್ತು ಛಲವನ್ನು ತೋರುವ ವೇದಿಕೆಯಾಗಿದೆ ಎಂದು ಪ್ರೆಷಕ್ಲಬ್ ಆಫ್ ಬೆಂಗಳೂರ್ ನಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು.
Comments
Post a Comment