ಸಂತಾನ ಭಾಗ್ಯಕ್ಕಾಗಿ ಸ್ಪರ್ಶ್ ನಿಂದ ಅತ್ಯಾಧುನಿಕ ಫಲವಂತಿಕೆ ರಕ್ಷಾ ಕೇಂದ್ರ ಆರಂಭ
ಸಂತಾನ ಭಾಗ್ಯಕ್ಕಾಗಿ ಸ್ಪರ್ಶ್ ನಿಂದ ಅತ್ಯಾಧುನಿಕ ಫಲವಂತಿಕೆ ರಕ್ಷಾ ಕೇಂದ್ರ ಆರಂಭ
ಅತ್ಯಾಧುನಿಕ ಆರೋಗ್ಯ ಸೇವೆಗಳನ್ನು ಒದಗಿಸುವಲ್ಲಿ ಸ್ಪರ್ಶ್ ಆಸ್ಪತ್ರೆ ಮುಂಚೂಣಿಯಲ್ಲಿದೆ. ಇದೀಗ ಬೆಂಗಳೂರಿನ ಆರ್ ಆರ್ ನಗರದಲ್ಲಿರುವ ಎಸ್ ಎಸ್ ಸ್ಪರ್ಶ್ ಆಸ್ಪತ್ರೆಯಲ್ಲಿ ಅತ್ಯಾಧುನಿಕ ಫರ್ಟಿಲಿಟಿ ರಕ್ಷಾ ಕೇಂದ್ರವನ್ನು ಆರಂಭಿಸಿದೆ. ಆರೋಗ್ಯ ರಕ್ಷಣೆಯಲ್ಲಿ ಬದ್ರತೆ, ಅರ್ಪಣೆ ಮತ್ತು ಅತ್ಯಾಧುನಿಕ ಸೌಲಭ್ಯಗಳ ಸಂಗಮ ಸ್ನಾನದಂತಿರುವ ಸ್ಪರ್ಶ್ ಸಂತಾನ ಹೀನತೆಯನ್ನು ನಿವಾರಿಸಿ ಮಕ್ಕಳಿದ್ದರೆ ಸ್ವರ್ಗ ಎಂಬ ಭಾರತೀಯ ಮನೋಭಾವವನ್ನು ಸಾಕಾರಗೊಳಿಸಲು ಈ ಫಲವಂತಿಕೆ ಕೇಂದ್ರವನ್ನು ಆರಂಭಿಸಿದೆ. ಇದರಲ್ಲಿ ತಜ್ಞ ವೈದ್ಯರು, ಸಂತಾನೋತ್ಪತ್ತಿ ಪ್ರಕ್ರಿಯೆಗಳಲ್ಲಿ ಅಪೂರ್ವ ಪರಿಣತಿ ಪಡೆದಿರುವ ತಂಡ ನಿಮ್ಮ ಮಡಿಲು ತುಂಬುತ್ತದೆ.
ಈ ಫಲವಂತಿಕೆ ಕೇಂದ್ರದ ಉದ್ಘಾಟನೆಯನ್ನು ಸ್ಪರ್ಶ್ ಗ್ರೂಪ್ ಆಫ್ ಹಾಸ್ಪಿಟಲ್ಸ್ ಅಧ್ಯಕ್ಷ ಮತ್ತು ಮುಖ್ಯ ಮೂಳೆ ಶಸ್ತ್ರಚಿಕಿತ್ಸಕ ಡಾ.ಶರಣ್ ಶಿವರಾಜ್ ಪಾಟೀಲ್ ನೆರವೇರಿಸಿದರು. "ಈ ಅತ್ಯಾಧುನಿಕ ಕೇಂದ್ರವು ಸುಧಾರಿತ ಚಿಕಿತ್ಸೆಯಿಂದ ಅಸಂಖ್ಯಾತ ಕುಟುಂಬಗಳ ಕುಡಿ ಕನಸನ್ನು ಚಿಗುರೊಡೆಸುತ್ತದೆ. ತಜ್ಞ ವೈದ್ಯರ ತಂಡ ದಂಪತಿಗೆ ಪಿತೃ ಮತ್ತು ಮಾತ್ರ ಪಾತ್ರವನ್ನು ನಲುಮೆಯಿಂದ ನೀಡುತ್ತದೆ. ಸಹಜವಾಗಿಯೇ ಪೋಷಕತ್ವವನ್ನು ಪ್ರದಾನ ಮಾಡುತ್ತದೆ. ಜಾಗತಿಕ ಮಟ್ಟದ ರಕ್ಷೆಯನ್ನು ಒದಗಿಸಬೇಕು ಎಂಬುದು ನಮ್ಮ ಗುರಿಯಾಗಿದೆ. ಸ್ಪರ್ಶ್ ಆಸ್ಪತ್ರೆಗಳು ಆರೋಗ್ಯ ಉತ್ಕೃಷ್ಟತೆಯ ದಾರಿ ದೀಪವಾಗಬೇಕೆಂದು ನಾವು ಬಯಸುತ್ತೇವೆ," ಎಂದು ಹೇಳಿದರು.
ಐವಿಎಫ್ ಕೇಂದ್ರವು ಸುಧಾರಿತ ಭ್ರೂಣಶಾಸ್ತ್ರ ಪ್ರಯೋಗಾಲಯಗಳು ಮತ್ತು ಎಐ-ನೆರವಿನ ಭ್ರೂಣ ಆಯ್ಕೆ ಸೇರಿದಂತೆ ಇತ್ತೀಚಿನ ತಂತ್ರಜ್ಞಾನವನ್ನು ಹೊಂದಿದೆ.
ಸ್ಪರ್ಶ್ ಆಸ್ಪತ್ರೆಯ ಗ್ರೂಪ್ ಸಿಒಒ ಜೋಸೆಫ್ ಪಸಂಗಾ ಮಾತನಾಡಿ, "ನಮ್ಮ ಪರಿಣತಿ, ಕೌಶಲ ಮತ್ತು ಅತ್ಯಾಧುನಿಕ ಸೌಲಭ್ಯಗಳ ಒತ್ತಾಸೆಯಿಂದ ಸಂತಾನ ಭಾಗ್ಯದ ಸವಾಲುಗಳನ್ನು ಎದುರಿಸುತ್ತಿರುವ ದಂಪತಿಗಳಿಗೆ ವಿಶ್ವದರ್ಜೆಯ ಚಿಕಿತ್ಸೆಯ ಆಯ್ಕೆಗಳನ್ನು ಖಚಿತಪಡಿಸುತ್ತೇವೆ. ತಾಯಿ ಮತ್ತು ಮಗುವಿನ ಆರೋಗ್ಯವು ರಾಷ್ಟ್ರದ ಅಭಿವೃದ್ಧಿಯೊಂದಿಗೆ ನಂಟನ್ನುಹೊಂದಿದೆ. ಆದ್ದರಿಂದ ಈ ಕ್ರಮವು ಆರೋಗ್ಯಕರ ಶಿಶುಗಳು ಮತ್ತು ಆರೋಗ್ಯಕರ ಭಾರತವನ್ನು ಖಚಿತಪಡಿಸುತ್ತದೆ" ಎಂದು ಹೇಳಿದರು.
ಮುಖ್ಯ ಅತಿಥಿಯಾಗಿದ್ದ ನಟಿ ಹರ್ಷಿಕಾ ಪೂಣಚ್ಚ ಮಾತನಾಡಿ, ಫಲವಂತಿಕೆ ಆರೈಕೆ ಕ್ಷೇತ್ರದಲ್ಲಿ
ಅತ್ಯಾಧುನಿಕ ಸೌಲಭ್ಯದ ಮೂಲಕ ಸಂತಾನ ಭಾಗ್ಯವನ್ನು ಖಾತ್ರಿಗೊಳಿಸುವ ಸ್ಪರ್ಶ್ ಆಸ್ಪತ್ರೆಯ ಈ ಉಪಕ್ರಮದಲ್ಲಿ ಪಾಲ್ಗೊಳ್ಳುವುದು ದೊಡ್ಡ ಗೌರವ ಎಂದು ಭಾವಿಸುವೆ. ತಾಯ್ತನ ನೀಡುವ ಧನ್ಯತೆ, ಸಂತಸಕ್ಕೆ ಬದಲಿಯೇ ಇಲ್ಲ. ಇದು ಎಲ್ಲ ವಿವಾಹಿತೆಯರ ಕನಸು. ಈ ಕೇಂದ್ರ ಭರವಸೆಯ ಕೇಂದ್ರ, ಅಗಾಧ ಸಂಖ್ಯೆಯ ದಂಪತಿಗಳ ಕನಸು ನನಸಾಗಿಸುವ ತಾಣ. ದಂಪತಿಗಳ ಕನಸು ನನಸಾಗುವ ಕೇಂದ್ರವಿದು ಎಂದು ಬಣ್ಣಿಸಿದರು. ಸಂತಾನ ಭಾಗ್ಯಕ್ಕಾಗಿ ದೊಡ್ಡ ರಕ್ಷೆ ನೀಡುವ ಭಾಗವಾಗಿ ನಾವು ಸ್ಪರ್ಶ್ ನ ಶ್ರೇಷ್ಠತೆಯ ಪರಂಪರೆಯನ್ನು ನಾವು ಮುಂದುವರಿಸುತ್ತೇವೆ. ಈ ಹೊಸ ಸೌಲಭ್ಯದೊಂದಿಗೆ, ಆಸ್ಪತ್ರೆಯು ಜೀವನವನ್ನು ಸ್ಪರ್ಶಿಸುವ ಮತ್ತು ಕನಸುಗಳಿಗೆ ಜೀವ ನೀಡುವ ಬದ್ಧತೆಯನ್ನು ಸಾಕ್ಷೀಕರಿಸುತ್ತದೆ ಎಂದು ಎಂದು ಆರ್ ಆರ್ ನಗರದ ಎಸ್ ಎಸ್ ಸ್ಪರ್ಶ್ ಆಸ್ಪತ್ರೆಯ ಸಿಒಒ ಶ್ರೀ ಸುಧೀಂದ ಜಿ ಭಟ್ ಹೇಳಿದರು.



Comments
Post a Comment