ಸಮಗ್ರ ಎಐ, ಸಾಮಾಜಿಕ ಮಾಧ್ಯಮ ಮತ್ತು ಸುಸ್ಥಿರತೆ ಮಾರ್ಗಸೂಚಿಗಳನ್ನು ಅನಾವರಣಗೊಳಿಸಿದ ಎನ್‌ಎಂಐಎಂಎಸ್‌ ಬೆಂಗಳೂರು


  ಸಮಗ್ರ ಎಐ, ಸಾಮಾಜಿಕ ಮಾಧ್ಯಮ ಮತ್ತು ಸುಸ್ಥಿರತೆ ಮಾರ್ಗಸೂಚಿಗಳನ್ನು ಅನಾವರಣಗೊಳಿಸಿದ ಎನ್‌ಎಂಐಎಂಎಸ್‌ ಬೆಂಗಳೂರು

- ಸುಧಾರಿತ ಕಲಿಕೆ ಮತ್ತು ಭವಿಷ್ಯದ ವೃತ್ತಿಪರರು ಮತ್ತು ಉದ್ಯಮಶೀಲರಿಗೆ ಎಐ ಶಕ್ತಿಯನ್ನು ಬಳಸಿಕೊಳ್ಳಲು ಅನುಕೂಲ ಮಾಡಿಕೊಡುವುದಕ್ಕೆ ಮಾರ್ಗಸೂಚಿಗಳು ಪೂರಕವಾಗಿವೆ

ಬೆಂಗಳೂರು, ಜನವರಿ 17, 2025: ಎನ್‌ಎಂಎಐಎಂಎಸ್ ಬೆಂಗಳೂರು ಶೈಕ್ಷಣಿಕ, ಸಂಶೋಧನೆ ಮತ್ತು ಆಡಳಿತಾತ್ಮಕ ವಲಯಗಳಲ್ಲಿ ನೈತಿಕ ಮತ್ತು ಜವಾಬ್ದಾರಿಯುತ ತೊಡಗಿಸಿಕೊಳ್ಳುವಿಕೆ ಸಮಗ್ರ ರೂಪುರೇಷೆಯನ್ನು ಪ್ರಕಟಿಸಿದೆ. ಜನರೇಟಿವ್ ಆರ್ಟಿಫಿಶಿಯಲ್ ಇಂಟಲಿಜೆನ್ಸ್ (ಜೆನ್ ಎಐ), ಸಾಮಾಜಿಕ ಮಾಧ್ಯಮ ಮತ್ತು ಸುಸ್ಥಿರತೆಯ ಕುರಿತ ಭವಿಷ್ಯದ ಚಿಂತನೆಗಳುಳ್ಳ ನೀತಿಗಳನ್ನು ರೂಪಿಸಿರುವ ಸಂಸ್ಥೆಯು, ಅನ್ವೇಷಣೆ, ಹೊಣೆಗಾರಿಕೆ ಮತ್ತು ಪರಿಸರ ರಕ್ಷಣೆಯಲ್ಲಿ ಹೊಸ ಮಾನದಂಡವನ್ನು ಹುಟ್ಟುಹಾಕುವುದಕ್ಕೆ ಪ್ರಯತ್ನಿಸುತ್ತಿದೆ.

ಎಐನ ಸಾಧ್ಯತೆಯನ್ನು ನೈತಿಕವಾಗಿ ಬಳಸಿಕೊಳ್ಳಲು ಜೆನರೇಟಿವ್ ಎಐ ಬಳಕೆದಾರರ ಮಾರ್ಗಸೂಚಿಗಳು ಮತ್ತು ಪಾಲಿಸಿಯು ವಿದ್ಯಾರ್ಥಿಗಳು, ಶಿಕ್ಷಣ ತಜ್ಞರು ಮತ್ತು ಆಡಳಿತಗಾರರಿಗೆ ಸಹಾಯ ಮಾಡುತ್ತದೆ. ನೈತಿಕ ಬಳಕೆ, ಶೈಕ್ಷಣಿಕ ಘನತೆ, ಡೇಟಾ ರಕ್ಷಣೆ ಮತ್ತು ಮಾಹಿತಿಯುಲ್ಳ ಎಐ ಟೂಲ್ ಅಳವಡಿಕೆಯ ಮೇಲೆ ಈ ಸಿದ್ಧಾಂತವು ಹೆಚ್ಚಿನ ಗಮನ ನೀಡುತ್ತದೆ. ಈ ಕಾರ್ಯತಂತ್ರದಿಂದ ನೈತಿಕ ಎಐ ಬಳಕೆಯಲ್ಲಿ ಮತ್ತು ಬದಲಾಗುತ್ತಿರುವ ಡಿಜಿಟಲ್ ಜಗತ್ತಿನಲ್ಲಿ ಸಮುದಾಯವು ಮುಂಚೂಣಿಯನ್ನು ಸಾಧಿಸಲು ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಎನ್‌ಎಂಎಐಎಂಎಸ್ ಬೆಂಗಳೂರು ಮಹತ್ವದ ಸ್ಥಾನವನ್ನು ಪಡೆಯುತ್ತದೆ.

ಎನ್‌ಎಂಎಐಎಂಎಸ್ ಬೆಂಗಳೂರಿನ ನಿರ್ದೇಶಕಿ ಮತ್ತು ಪ್ರೊಫೆಸರ್ ಡಾ. ನಾರಾಯಣಿ ರಾಮಚಂದ್ರನ್ ಮಾತನಾಡಿ, “ನಮ್ಮ ಜೀವನದಲ್ಲಿ ಎಐ ಒಂದು ಮಹತ್ವದ ಭಾಗವಾಗಿದೆ. ಎನ್‌ಎಂಎಐಎಂಎಸ್‌ನಲ್ಲಿ ನಾವು ಮಾನವೀಯ ಮೌಲ್ಯಗಳನ್ನು ಆಧರಿಸಿ ನಿರ್ಮಿಸಿದ ಅಡಿಪಾಯದಲ್ಲಿ ತಂತ್ರಜ್ಞಾನವನ್ನು ಸಮ್ಮಿಶ್ರಗೊಳಿಸಿದ ಭವಿಷ್ಯವನ್ನು ರೂಪಿಸುವ ಕೆಲಸ ಮಾಡುತ್ತಿದ್ದೇವೆ. ಈ ಪಾಲಿಸಿಗಳನ್ನು ಅತ್ಯಂತ ಕಾಳಜಿಯಿಂದ ರೂಪಿಸಲಾಗಿದ್ದು, ಡೇಟಾ ಗೌಪ್ಯತೆ, ನೈತಿಕವಾಗಿ ಎಐ ಬಳಕೆ ಮತ್ತು ಹೊಸ ಕಾಲದ ಮಾಧ್ಯಮಗಳಂತಹ ಪ್ರಮುಖಳ ವಲಯಗಳನ್ನು ಗಮನದಲ್ಲಿಟ್ಟುಕೊಂಡಿದೆ. ಭವಿಷ್ಯವನ್ನು ಎದುರಿಸಲು ನಮ್ಮ ವಿದ್ಯಾರ್ಥಿಗಳನ್ನು ನಾವು ಸಿದ್ಧಪಡಿಸುತ್ತಿರುವ ಸಮಯದಲ್ಲಿ, ಎಐ ಒದಗಿಸುವ ಹೊಸ ಸಾಧ್ಯತೆಗಳನ್ನು ಬಳಸಿಕೊಳ್ಳುವುದು ಮತ್ತು ಎಐ ಉತ್ತಮ ಬಳಕೆಯನ್ನು ಹೇಗೆ ಮಾಡುವುದು ಎಂಬುದನ್ನು ನಾವು ತಿಳಿದುಕೊಳ್ಳಬೇಕಾಗಿದೆ.

ಕಲಿಕೆಯ ಮಟ್ಟವನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯಲು ಮುಂದಿನ ತಲೆಮಾರಿನ ಸಾಮರ್ಥ್ಯಗಳನ್ನು ಬಳಸಿಕೊಳ್ಳುವಲ್ಲಿ ಈ ಉಪಕ್ರಮವು ಪ್ರಮುಖ ಹಂತವಾಗಿದೆ. ಅನ್ವೇಷಣೆಯನ್ನು ಮುನ್ನಡೆಸಲು, ನೈತಿಕ ವರ್ತನೆಗಳನ್ನು ಅಳವಡಿಸಿಕೊಳ್ಳಲು ಮತ್ತು ಪರಿಸರ ರಕ್ಷಣೆಯಲ್ಲಿ ನಾಯಕತ್ವ ವಹಿಸಲು ಮುಂದಿನ ತಲೆಮಾರಿನ ವೃತ್ತಿಪರರು ಮತ್ತು ಉದ್ಯಮಶೀಲರನ್ನು ಪೋಷಿಸುವುದಕ್ಕೆ ನಾವು ಎಷ್ಟು ಬದ್ಧವಾಗಿದ್ದೇವೆ ಎಂಬುದನ್ನು ಈ ನೀತಿಗಳು ಸೂಚಿಸುತ್ತವೆ. ನಮ್ಮ ಸಮುದಾಯಗಳಿಗೆ ಅಗತ್ಯ ಕೌಶಲ್ಯಗಳು ಮತ್ತು ರೂಪುರೇಷೆಗಳನ್ನು ಒದಗಿಸುವ ಮೂಲಕ, ಘನತೆ, ಪರಿಣಿತಿ ಮತ್ತು ತಾದಾತ್ಮ್ಯದಿಂದ ಮುನ್ನಡೆಯಲು ಅವರಿಗೆ ಸಹಾಯ ಮಾಡುತ್ತಿದ್ದೇವೆ” ಎಂದು ಅವರು ಹೇಳಿದರು.

ಈ ಉಪಕ್ರಮಗಳನ್ನು ಬೆಂಬಲಿಸಲು ಎನ್‌ಎಂಎಐಎಂಎಸ್ ಉತ್ತಮವಾದ ವ್ಯವಸ್ಥೆಗಳನ್ನು ರೂಪಿಸಿದೆ. ಇದರಲ್ಲಿ ತರಬೇತಿ ಕಾರ್ಯಾಗಾರಗಳು, ಕೇಂದ್ರೀಕೃತ ಸಂಪನ್ಮೂಲಗಳು ಮತ್ತು ಮುಕ್ತ ಚರ್ಚೆಗೆ ವೇದಿಕೆಗಳಿವೆ. ಈ ಪ್ರಯತ್ನಗಳು ನಿರಂತರ ಕಲಿಕೆ ಮತ್ತು ಸುಧಾರಣೆಗೆ ನೆರವಾಗುತ್ತವೆ. ಜವಾಬ್ದಾರಿಯುತ ತೊಡಗಿಸಿಕೊಳ್ಳುವಿಕೆ ಮತ್ತು ಸುಸ್ಥಿರ ಅಭಿವೃದ್ಧಿಯ ಸಂಸ್ಕೃತಿಯನ್ನೂ ಇದು ಪ್ರೋತ್ಸಾಹಿಸುತ್ತಿದೆ.

ಈ ಮಹತ್ವದ ನೀತಿಗಳ ಮೂಲಕ, ಅನ್ವೇಷಣೆಯನ್ನು ಪ್ರೋತ್ಸಾಹಿಸುವುದು, ನೈತಿಕ ಮಾನದಂಡಗಳನ್ನು ಎತ್ತಿಹಿಡಿಯುವುದು ಮತ್ತು ಸುಸ್ಥಿರ, ಸಮಾನ ಮತ್ತು ಸಂಪದ್ಭರಿತ ಭವಿಷ್ಯಕ್ಕೆ ಕೊಡುಗೆ ನೀಡಲು ಎನ್‌ಎಂಎಐಎಂಎಸ್ ಬೆಂಗಳೂರು ಬದ್ಧವಾಗಿದೆ.

ಉತ್ತಮ ಭವಿಷ್ಯಕ್ಕೆ ಅರ್ಥವತ್ತಾದ ಕ್ರಮಗಳನ್ನು ತೆಗೆದುಕೊಳ್ಳಲು ಸಮುದಾಯವನ್ನು ಪ್ರೋತ್ಸಾಹಿಸುವುದಕ್ಕೆ ಸುಸ್ಥಿರತೆ ಪ್ರಮಾಣವಚನವನ್ನೂ ಎನ್‌ಎಂಎಐಎಂಎಸ್ ಬೆಂಗಳೂರು ಅಳವಡಿಸಿಕೊಂಡಿದೆ. ಈ ಪ್ರಮಾಣವಚನವು ಹೀಗಿದೆ:

“ನನ್ನ ಜೀವನದ ಎಲ್ಲ ಕ್ಷಣಗಳಲ್ಲೂ ಸುಸ್ಥಿರತೆಯನ್ನು ನಾನು ಮುನ್ನಡೆಸುತ್ತೇನೆ, ಸುಸ್ಥಿರತೆ, ಸಮಾನತೆ ಮತ್ತು ಸಂಪದ್ಭರಿತ ವಿಶ್ವವನ್ನು ರೂಪಿಸಲು ನಾನು ಪ್ರಮಾಣ ಮಾಡುತ್ತೇನೆ.

ನಾನು ಸಂಪನ್ಮೂಲಗಳನ್ನು ರಕ್ಷಿಸುತ್ತೇನೆ, ತ್ಯಾಜ್ಯವನ್ನು ಕಡಿಮೆ ಮಾಡುತ್ತೇವೆ ಮತ್ತು ಜೀವೈವಿಧ್ಯತೆಯನ್ನು ರಕ್ಷಿಸುತ್ತೇನೆ ಹಾಗೂ ವೈವಿಧ್ಯತೆ, ಸಮಾನತೆ ಮತ್ತು ಸಮಗ್ರತೆಯನ್ನೂ ಪ್ರೋತ್ಸಾಹಿಸುತ್ತೇನೆ.

ನೈತಿಕ ವರ್ತನೆ, ನೈತಿಕ ಸ್ಥೈರ್ಯ ಮತ್ತು ಹೊಣೆಗಾರಿಕೆಯಿಂದ ನಾನು ಪಾರದರ್ಶಕವಾಗಿ ಮತ್ತು ಪರಿಣಿತಿಯಿಂದ ವರ್ತಿಸುತ್ತೇನೆ.

ಸಮಗ್ರತೆಯಿಂದ ನಾನು ಮಾನವೀಯತೆಯ ಮೌಲ್ಯಗಳನ್ನು ಎತ್ತಿಹಿಡಿಯುತ್ತೇನೆ ಮತ್ತು ನಮ್ಮ ಗ್ರಹವನ್ನು ಜವಾಬ್ದಾರಿಯುತವಾಗಿ ನಿರ್ವಹಿಸುತ್ತೇನೆ ಮತ್ತು ಹಾಗೆ ಮಾಡುವಂತೆ ಇತರರಿಗೂ ಸ್ಫೂರ್ತಿ ನೀಡುತ್ತೇನೆ”.

ಎನ್‌ಎಂಎಐಎಂಎಸ್ ಬೆಂಗಳೂರು ಸಾಮಾಜಿಕ ಮಾಧ್ಯಮ ನೀತಿಯು ಡಿಜಿಟಲ್ ಮಾಧ್ಯಮದಲ್ಲಿ ಕಾಳಜಿಯಿಂದ ಮತ್ತು ವಿನಯದಿಂದ ಸಂವಾದ ನಡೆಸುವುದನ್ನು ಪ್ರೋತ್ಸಾಹಿಸುತ್ತದೆ. ಸಂವಹನ, ಕಲಿಕೆ ಮತ್ತು ವೃತ್ತಿಪರ ನೆಟ್‌ವರ್ಕಿಂಗ್‌ಗೆ ಒಂದು ಪ್ರಮುಖ ಸಲಕರಣೆಯಾಗಿರುವ ಸಾಮಾಜಿಕ ಮಾಧ್ಯಮದಲ್ಲಿ ವ್ಯಕ್ತಿಯ ಗೌರವವನ್ನು ಕಾಪಾಡುವುದು ಮತ್ತು ಎನ್‌ಎಂಎಐಎಂಎಸ್ ಬೆಂಗಳೂರಿನ ಸಮಗ್ರತೆಯನ್ನು ಕಾಯ್ದುಕೊಳ್ಳುವುದು ಮತ್ತು ಬೌದ್ಧಿಕ ಸ್ವತ್ತು, ಸೈಬರ್‌ ದಾಳಿ ಮತ್ತು ಡಿಜಿಟಲ್ ಅಸ್ತಿತ್ವದಂತಹ ಕಳವಳಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಈ ನೀತಿಯಲ್ಲಿ ಮಾಹಿತಿಗಳಿವೆ.

NMIMS ಬೆಂಗಳೂರು ಕುರಿತು

NMIMS ಬೆಂಗಳೂರು, NMIMS ಡೀಮ್ಡ್-ಟು-ಬಿ ವಿಶ್ವವಿದ್ಯಾನಿಲಯದ ಭಾಗವಾಗಿದ್ದು, ನವೀನ ಮತ್ತು ಸಮಗ್ರ MBA ಕಾರ್ಯಕ್ರಮಗಳ ಮೂಲಕ ಭವಿಷ್ಯಕ್ಕೆ ಸಿದ್ಧವಾಗಿರುವ ಬ್ಯುಸಿನೆಸ್ ಲೀಡರ್ ಅನ್ನು ಪೋಷಿಸಲು ಸಮರ್ಪಿತವಾಗಿದೆ. 2008 ರಲ್ಲಿ ಪ್ರಾರಂಭವಾದ NMIMS

ಬೆಂಗಳೂರು ನಗರ ವಿಭಾಗದಲ್ಲಿ ಫಾರ್ಚೂನ್ ಇಂಡಿಯಾ ಮ್ಯಾಗಜೀನ್‌ ಪಟ್ಟಿಯಲ್ಲಿ ಎರಡನೇ ಸ್ಥಾನವನ್ನು ಪಡೆದುಕೊಂಡಿತು ಮತ್ತು ಬ್ಯುಸಿನೆಸ್ ಇಂಡಿಯಾ ಮ್ಯಾಗಜೀನ್‌ನಿಂದ A+++ ರೇಟಿಂಗ್ ಪಡೆದುಕೊಂಡಿದೆ. ಬ್ಯುಸಿನೆಸ್ ಟುಡೆ ಮ್ಯಾಗಜೀನ್ ನಗರ ವಿಭಾಗದಲ್ಲಿ NMIMS ಬೆಂಗಳೂರಿಗೆ ಮೂರನೇ ಸ್ಥಾನ, ದಕ್ಷಿಣ ವಲಯ ವಿಭಾಗದಲ್ಲಿ ಏಳನೇ ಮತ್ತು ಖಾಸಗಿ ಬಿ-ಸ್ಕೂಲ್‌ಗಳ ವಿಭಾಗದಲ್ಲಿ 15 ನೇ ಸ್ಥಾನದಲ್ಲಿದೆ. ಇಂಡಿಯಾ ಟುಡೇ ಮ್ಯಾಗಜೀನ್ SBM, NMIMS ಬೆಂಗಳೂರಿಗೆ 'ನಗರವಾರು' ವಿಭಾಗದಲ್ಲಿ 2ನೇ ಮತ್ತು 'ದಕ್ಷಿಣ-ವಲಯ' ವಿಭಾಗದಲ್ಲಿ 5ನೇ ಸ್ಥಾನ ನೀಡಿ, ಒಟ್ಟಾರೆ 15ನೇ ಶ್ರೇಯಾಂಕವನ್ನು ನೀಡಿದೆ. ಫಾರ್ಚೂನ್ ಇಂಡಿಯಾ ಮತ್ತು ಓಪನ್ ಮ್ಯಾಗಜೀನ್ 'ನಗರ-ವಾರು' ವಿಭಾಗದಲ್ಲಿ 2ನೇ ಸ್ಥಾನ, ಮತ್ತು 'ದಕ್ಷಿಣ-ವಲಯ' ವಿಭಾಗದಲ್ಲಿ 11ನೇ ಸ್ಥಾನ ನೀಡಿದೆ. ಇನ್‌ಸ್ಟಿಟ್ಯೂಟ್ ಆಫ್ ಇನ್‌ಸ್ಟಿಟ್ಯೂಶನಲ್ ರ್‍ಯಾಂಕಿಂಗ್ಸ್‌ (IIRF) ನಲ್ಲಿ NMIMS 'ದಕ್ಷಿಣ-ವಲಯ' ವಿಭಾಗದಲ್ಲಿ 7 ನೇ ಸ್ಥಾನ ಮತ್ತು 'ರಾಜ್ಯ-ವಾರು' ಶ್ರೇಯಾಂಕದಲ್ಲಿ 5 ನೇ ಸ್ಥಾನ ಪಡೆದಿದೆ. ಕ್ಯಾಂಪಸ್ 4 ಶಾಲೆಗಳನ್ನು ಹೊಂದಿದೆ. ಅವುಗಳೆಂದರೆ: ಸ್ಕೂಲ್ ಆಫ್ ಬಿಸಿನೆಸ್ ಮ್ಯಾನೇಜ್ಮೆಂಟ್, ಸ್ಕೂಲ್ ಆಫ್ ಕಾಮರ್ಸ್, ಸ್ಕೂಲ್ ಆಫ್ ಎಕನಾಮಿಕ್ಸ್ ಮತ್ತು ಸ್ಕೂಲ್ ಆಫ್ ಲಾ. ಸ್ಕೂಲ್ ಆಫ್ ಬ್ಯುಸಿನೆಸ್ ಮ್ಯಾನೇಜ್‌ಮೆಂಟ್ ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವವನ್ನು ಪೋಷಿಸುತ್ತದೆ ಮತ್ತು ಮೌಲ್ಯಾಧಾರಿತ ಶಿಕ್ಷಣವನ್ನು ನೀಡುವ ಮೂಲಕ ಅವರನ್ನು ನಾಯಕರು ಮತ್ತು ಜವಾಬ್ದಾರಿಯುತ ನಾಗರಿಕರನ್ನಾಗಿ ರೂಪಿಸುತ್ತದೆ.

 

Comments

Popular posts from this blog

ಗ್ರಾಮ ಸಹಾಯಕರ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಅನಿರ್ದಿಷ್ಠಾವಧಿ ಮುಷ್ಕರ ದಿನಾಂಕ 9/6/2025 ರಂದು ಫ್ರೀಡಂ ಪಾರ್ಕ್ ನಲ್ಲಿ ನಡೆಯುತ್ತದೆ

ಮುಳಖೇಡ, ಸೇಡಂ ತಾಲ್ಲೂಕು, ಕಲಬುರ್ಗಿ ಜಿಲ್ಲಾ ಗ್ರಾಮ ಪಂಚಾಯತ್ ಗ್ರಂಥಪಾಲಕಿ ಶ್ರೀಮತಿ ಭಾಗ್ಯವತಿ ಮಠ ಆತ್ಮಹತ್ಯೆ

Methodist Church in India Announces New Leadership, Disputes Former Bishop’s Claims