ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರ ಏಕ ಪಕ್ಷೀಯ ವರ್ತನೆ.
ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರ ಏಕ ಪಕ್ಷೀಯ ವರ್ತನೆ.

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘವು ಸುಮಾರು 7.00 ಲಕ್ಷ ಸರ್ಕಾರಿ ನೌಕರರನ್ನು ಪ್ರತಿನಿಧಿಸುತ್ತಿದ್ದು, ಅವರ ಸೇವಾ ಭದ್ರತೆ, ವೇತನ ತಾರತಮ್ಮ ಸರಿಪಡಿಸುವ ಮೂಲಕ ಆರ್ಥಿಕ ಸಬಲತೆ ಮತ್ತು ಖಾಲಿ ಹುದ್ದೆಗಳ ಭರ್ತಿ ಇತರ ಹತ್ತು ಹಲವು ವಿಷಯಗಳ ಕುರಿತು ಕಾರ್ಯನಿರ್ವಹಿಸಬೇಕಾಗುತ್ತದೆ. ಈ ನಿಟ್ಟಿನಲ್ಲಿ 2024-29ನೇ ಸಾಲಿನ ಚುನಾವಣೆ ನಡೆದಿದ್ದು, ಎರಡು ತಂಡಗಳಲ್ಲಿ ಪ್ರಜಾಸತ್ತಾತ್ಮಕ ನೌಕರರ ವೇದಿಕೆಯು ಖಾಜಾಂಚಿ ಸ್ನಾನದ ಚುನಾವಣೆಯಲ್ಲಿ ಗೆಲುವನ್ನು ಪಡೆದಿರುತ್ತದೆ. ನೌಕರರ ಹಿತದೃಷ್ಟಿಯಿಂದ ಎರಡು ತಂಡಗಳು ಸಮಾನ ಜವಾಬ್ದಾರಿಯೊಂದಿಗೆ ಕಾರ್ಯನಿರ್ವಹಿಸಬೇಕಾಗುತ್ತದೆ. ಆದರೆ ಪ್ರಸ್ತುತ ಪುನರಾಯ್ಕೆಯಾಗಿರುವ ಅಧ್ಯಕ್ಷರು ಯಾವುದೇ ಕಾರ್ಯಕಾರಿ ಸಮಿತಿ ಸಭೆ ಕರೆಯದೇ ಚುನಾವಣೆಯಲ್ಲಿ ಸ್ಪರ್ಧಿಸಿರುವ ಪ್ರತಿ ಸ್ಪರ್ಧಿಗಳನ್ನು ಹತ್ತಿಕ್ಕುವ ಮನೋಧೋರಣೆಯೊಂದಿಗೆ ಚುನಾವಣೆಯಲ್ಲಿ ಗೆದ್ದಿರುವ ಖಾಜಾಂಚಿಯವರನ್ನು ಮೂಲೆ ಗುಂಪು ಮಾಡುವ ಉದ್ದೇಶದಿಂದ ಅವರೊಂದಿಗೆ ಚರ್ಚಿಸದೇ ಏಕ ಪಕ್ಷೀಯವಾಗಿ ಬಹುಪಾಲು ಸ್ವಪಕ್ಷೀಯರನ್ನು ಸಂಘದ ಪ್ರಮುಖ ಹುದ್ದೆಗಳಿಗೆ ತುಂಬುವ ಮೂಲಕ ಸಂಘವನ್ನು ತಮ್ಮ ಸ್ವಹಿತಾಸಕ್ತಿಗೆ ಬಳಸಿಕೊಳ್ಳುತ್ತಿರುವುದನ್ನು ಸಮಸ್ತ ನೌಕರ ಭಾಂದವರಿಗೆ ತಿಳಸಲು ಬಯಸುವ ಸಲುವಾಗಿ ಪ್ರೆಸ್ ಕ್ಲಬ್ ಆಫ್ ಬೆಂಗಳೂರ್ ನಲ್ಲಿ ಪತ್ರಿಕಾ ಗೋಷ್ಠಿಯನ್ನು ಶಿವರುದ್ರಯ್ಯ ವಿ.ವಿ, ಖಜಾಂಚಿ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ, ರವರು ಏರ್ಪಡಿಸಿದರು
Comments
Post a Comment