AILU ಬೆಂಗಳೂರು ಜಿಲ್ಲಾ ಐದನೇ ಸಮ್ಮೇಳನ

AILU ಬೆಂಗಳೂರು ಜಿಲ್ಲಾ ಐದನೇ ಸಮ್ಮೇಳನ 

 ಭಾರತ ದೇಶಕ್ಕೆ ಸ್ವಾತಂತ್ರ್ಯ ಬಂದು 77 ವರ್ಷಗಳು ಕಳೆದಿದ್ದರೂ ಸಹ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸ್ವಾತಂತ್ರ್ಯ ಚಳುವಳಿಯ ಸಂದರ್ಭದಲ್ಲಿ ಇಟ್ಟುಕೊಂಡಿದ್ದ ಕಾರಣಗಳನ್ನು ಇದುವರೆಗೂ ಆಶಯಗಳು ಈಡೇರದಿರುವುದಕ್ಕೆ ಪರಾಮರ್ಶಿಸಬೇಕಾಗಿದೆ. ಕಾನೂನಿನ ಆಡಳಿತವೇ ಪ್ರಜಾಪ್ರಭುತ್ವದ ಬೆನ್ನೆಲುಬಾಗಿದ್ದರೂ ಸಹ ಮೇಲ್‌ಸ್ತರಗಳಲ್ಲಿಯೇ ಪ್ರತಿನಿತ್ಯ ಕಾನೂನು ಉಲ್ಲಂಘನೆಯ ಪ್ರಕರಣಗಳನ್ನು ನಾವು ನೋಡುತ್ತಲೇ ಇದ್ದೇವೆ. ಜನತೆಯ ಹಕ್ಕುಗಳು ದಮನಗೊಂಡ ಸಂದರ್ಭದಲ್ಲಿ, ಪ್ರಜಾಪ್ರಭುತ್ವಕ್ಕೆ ಧಕ್ಕೆ ಬಂದ ಸಂದರ್ಭಗಳಲೆಲ್ಲಾ ನ್ಯಾಯಾಂಗದ ಕ್ರಿಯಾಶೀಲತೆ ಹಾಗೂ ನಿರಂತರ ಮಧ್ಯಪ್ರವೇಶದಿಂದಾಗಿ ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನು ಉಳಿಸಲು, ಮುಂದುವರೆಸಲು ಪ್ರಯತ್ನಿಸಲಾಗುತ್ತಿದೆ. ಈ ಪ್ರಕ್ರಿಯೆಯಲ್ಲಿ ವಕೀಲರ ಪಾತ್ರವು ಅತ್ಯಂತ ಮಹತ್ತರ ಹಾಗೂ ಪರಿಣಾಮಕಾರಿಯಾಗಿದೆ.

ಈ ದಿಶೆಯಲ್ಲಿ ಪ್ರಜಾಪ್ರಭುತ್ವ, ಜಾತ್ಯಾತೀತತೆ, ನ್ಯಾಯ, ಸಮಾಜವಾದದ ಉದ್ದೇಶಗಳ ಅಡಿಯಲ್ಲಿ ಅಖಿಲ ಭಾರತ ವಕೀಲರ ಒಕ್ಕೂಟ (AILU) 1982ರಲ್ಲಿ ಸ್ಥಾಪನೆಯಾಗಿ ಭಾರತದ ಸರ್ವೋಚ್ಚ ನ್ಯಾಯಾಲಯದ ಗೌರವಾನ್ವಿತ ನ್ಯಾಯಮೂರ್ತಿಗಳಾದ ಸನ್ಮಾನ್ಯ ದಿ. ವಿ.ಆರ್. ಕೃಷ್ಣ ಅಯ್ಯರ್, ಗೌರವಾನ್ವಿತ ನ್ಯಾಯಮೂರ್ತಿಗಳಾದ ಸನ್ಮಾನ್ಯ ದಿ. ಹೆಚ್.ಆರ್. ಖನ್ನಾ, ಗೌರವಾನ್ವಿತ ನ್ಯಾಯಮೂರ್ತಿಗಳಾದ ಸನ್ಮಾನ್ಯ ದಿ. ಎ.ಸಿ.ಗುಪ್ತಾ, ಮಾಜಿ ಮುಖ್ಯಮಂತ್ರಿಗಳಾದ

ದಿ. ಜ್ಯೋತಿಬಸು, ಬ್ಯಾರಿಸ್ಟರ್ ಹಾಗೂ ಹಿರಿಯ ವಕೀಲರಾದ ದಿ. ಶ್ರೀ. ಡ್ಯಾನಿಕ್ ಆಲಿ ಲತೀಫ್ ಹಾಗೂ ಭಾರತದ ಸರ್ವೋಚ್ಚ ನ್ಯಾಯಾಲಯದ ವಿಶ್ರಾಂತ ನ್ಯಾಯಮೂರ್ತಿಗಳಾದ ಸನ್ಮಾನ್ಯ ಶ್ರೀ ವಿ. ಗೋಪಾಲಗೌಡ ಮತ್ತು ಕರ್ನಾಟಕ ಉಚ್ಚನ್ಯಾಯಾಲಯದ ವಿಶ್ರಾಂತ ನ್ಯಾಯಮೂರ್ತಿಗಳಾದ ಸನ್ಮಾನ್ಯ ಶ್ರೀ ಹೆಚ್. ಎನ್.ನಾಗಮೋಹನ್ ದಾಸ್, ಬ್ಯಾರಿಸ್ಟರ್ ಹೆಚ್.ಕೆ.ವಾಸುದೇವ ರೆಡ್ಡಿ ಹಾಗೂ ದೇಶದ ಮತ್ತು ರಾಜ್ಯದ ಇತರ ಹಿರಿಯ ವಕೀಲರ ಮುಂದಾಳತ್ವದಲ್ಲಿ ವಕೀಲರ ಸಮಸ್ಯೆ ಮತ್ತು ಸವಾಲುಗಳ ಕುರಿತು ಮತ್ತು ನ್ಯಾಯಾಂಗದ ಘನತೆಯನ್ನು ಹಾಗೂ ಸಂವಿಧಾನದ ಆಶಯಗಳಿಗೆ ತಕ್ಕಂತೆ ಹಲವಾರು ಕಾರ್ಯಕ್ರಮಗಳ ಮೂಲಕ ವಕೀಲರ ನಡುವೆ ಕಾರ್ಯನಿರ್ವಹಿಸುತ್ತಾ ಬಂದಿರುವ ವಕೀಲರ ಸಂಘಟನೆಯಾಗಿದೆ. ಅಲ್ಲದೇ ಈ ದೇಶದ ಜನಸಾಮಾನ್ಯರ ಬದುಕನ್ನು ಉತ್ತಮಗೊಳಿಸಲು ಹಲವಾರು ಸಾಮಾಜಿಕ ಕಾರ್ಯ ಚಟುವಟಿಕೆಗಳನ್ನು ಹಮ್ಮಿಕೊಳ್ಳುತ್ತಾ ಬಂದಿರುತ್ತೇವೆ.

ಇವೆಲ್ಲದರ ಜೊತೆಯಲ್ಲಿ ಕಿರಿಯ ವಕೀಲ ಸಹೋದ್ಯೋಗಿಗಳಿಗೆ ವೃತ್ತಿಯನ್ನು ಆರಂಭಿಸಲು ಬೇಕಾದ ಪ್ರೋತ್ಸಾಹದಾಯಕ ವಾತಾವರಣವಿಲ್ಲ. ಭವಿಷ್ಯದಲ್ಲಿ ಯಾವುದೇ ಭದ್ರತೆಯಿಲ್ಲ. ವೃತ್ತಿ ಮಾರ್ಗದರ್ಶನದ ಕೊರತೆಯಿದೆ. ಆದ್ದರಿಂದಲೇ ಕರ್ನಾಟಕದಲ್ಲಿ ಮಾತ್ರ ಮೊದಲ ಬಾರಿಗೆ ಕಿರಿಯ ವಕೀಲರಿಗೆ ಸೈಫಂಡ್ ನೀಡುವಂತೆ ಹೋರಾಟ ನಡೆಸಿದ್ದರ ಭಾಗವಾಗಿ ಇಂದು ಸೈಫಂಡ್ ಯೋಜನೆ ಜಾರಿಯಾಗಿದೆ. ವೆಲ್‌ಫೇರ್ ಹಣದ ಮೊತ್ತವನ್ನು ಸ್ವಲ್ಪಮಟ್ಟಿಗೆ ಹೆಚ್ಚಿಸಲಾಗಿದೆಯಾದರೂ ಕನಿಷ್ಠ ಇಪ್ಪತ್ತು ಲಕ್ಷ ರೂಪಾಯಿಗಳಿಗೆ ಹೆಚ್ಚಿಸಲು ಒತ್ತಾಯಿಸಬೇಕಿದೆ.

ಈ ಹಿನ್ನೆಲೆಯಲ್ಲಿ ದಿನಾಂಕ: 19.01.2025 ರಂದು ಎಐಎಲ್‌ಯು (AILU) ಬೆಂಗಳೂರು ಜಿಲ್ಲಾಮಟ್ಟದ 5ನೇ ಸಮ್ಮೇಳನವನ್ನು ಆಯೋಜಿಸಲಾಗಿದೆ. ವಕೀಲ ಮಿತ್ರರು, ಕಾನೂನು ವಿದ್ಯಾರ್ಥಿಗಳು ಉದಾರವಾಗಿ ಧನ ಸಹಾಯ ಮಾಡುವ ಮೂಲಕ ಈ ಸಮ್ಮೇಳನದಲ್ಲಿ ಭಾಗವಹಿಸಿ ಸಮ್ಮೇಳನವನ್ನು ಯಶಸ್ವಿಗೊಳಿಸಬೇಕೆಂದು ವಿನಂತಿಸಲಾಗಿದೆ.

Comments

Popular posts from this blog

ಗ್ರಾಮ ಸಹಾಯಕರ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಅನಿರ್ದಿಷ್ಠಾವಧಿ ಮುಷ್ಕರ ದಿನಾಂಕ 9/6/2025 ರಂದು ಫ್ರೀಡಂ ಪಾರ್ಕ್ ನಲ್ಲಿ ನಡೆಯುತ್ತದೆ

ಮುಳಖೇಡ, ಸೇಡಂ ತಾಲ್ಲೂಕು, ಕಲಬುರ್ಗಿ ಜಿಲ್ಲಾ ಗ್ರಾಮ ಪಂಚಾಯತ್ ಗ್ರಂಥಪಾಲಕಿ ಶ್ರೀಮತಿ ಭಾಗ್ಯವತಿ ಮಠ ಆತ್ಮಹತ್ಯೆ

Methodist Church in India Announces New Leadership, Disputes Former Bishop’s Claims