ಶ್ರೀ ನಿಜ ಶರಣ ಅಂಬಿಗರ ಚೌಡಯ್ಯನವರ 905ನೇ ಜಯಂತಿ ಮತ್ತು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ
ಶ್ರೀ ನಿಜ ಶರಣ ಅಂಬಿಗರ ಚೌಡಯ್ಯನವರ 905ನೇ ಜಯಂತಿ ಮತ್ತು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ

ಶ್ರೀ ನಿಜ ಶರಣ ಅಂಬಿಗರ ಚೌಡಯ್ಯನವರ 905ನೇ ಜಯಂತಿ ಮತ್ತು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮದ ಪ್ರಯುಕ್ತ ಪ್ರೆಸ್ ಕ್ಲಬ್ ಆಫ್ ಬೆಂಗಳೂರ್ ನಲ್ಲಿ ಪತ್ರಿಕಾ ಗೋಷ್ಠಿಯನ್ನು ಕಾರ್ಯಾಧ್ಯಕ್ಷರಾದ ಶ್ರೀ ಪ್ರಮೋದ್ ಮಧ್ವರಾಜ್, ಶ್ರೀ ನಿಜ ಶರಣ ಅಂಬಿಗರ ಚೌಡಯ್ಯನವರ ಗುರುಪೀಠ( ದಿ) ಸುಕ್ಷೇತ್ರ ನರಸಿಪುರ ಹಾವೇರಿ ಹಾಗೂ ಮಾಜಿ ಸಚಿವರು ಕರ್ನಾಟಕ ಸರಕಾರ, ರವರ ನೇತೃತ್ವದಲ್ಲಿ ಗುರುಪೀಠದ ಮುಖಂಡರುಗಳ ಸಮ್ಮುಖದಲ್ಲಿ ನಡೆಸಿ ಕೆಳಕಂಡ ಮಾಹಿತಿ ನೀಡಿದರು.
ಸ್ಥಳ: ಶ್ರೀ ನಿಜ ಶರಣ ಅಂಬಿಗರ ಚೌಡಯ್ಯನವರ ಗುರುಪೀಠ(ರಿ), ಸುಕ್ಷೇತ್ರ ನರಸಿಪುದ, ಹಾವೇರಿ : 14 ಮತ್ತು 15 ಜನವರಿ 2025.
ಶ್ರೀ ನಿಜ ಶರಣ ಅಂಬಿಗರ ಚೌಡಯ್ಯನವರ ಗುರುಪೀಠದಲ್ಲಿ 7ನೇ ಅಂಬಿಗರ ಶರಣ ಸಂಸ್ಕೃತಿ ಉತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ಈ ಸಂದರ್ಭದಲ್ಲಿ, ಶ್ರೀ ನಿಜ ಶರಣ ಅಂಬಿಗರ ಚೌಡಯ್ಯನವರ 905ನೇ ಜಯಂತಿಯನ್ನು ಆಚರಿಸಲಾಗುತ್ತಿದೆ.

‘ಕಾರ್ಯಕ್ರಮದ ವಿಶೇಷತೆಗಳು:
ನೇತೃತ್ವ ಜಗದ್ಗುರು ಪೂಜ್ಯಶ್ರೀ ಶಾಂತಭೀಷ್ಮ ಚೌಡಯ್ಯ ಪೀಠಾಧ್ಯಕ್ಷರು ಶ್ರೀ ನಿಜಶರಣ ಅಂಬಿಗರ ಚೌಡಯ್ಯನವರ ಗುರುಪೀಠ ಸುಕ್ಷೇತ್ರ ನರಸೀಪುರ ತಾಲ್ಲೂಕು ಹಾವೇರಿ
ಮುಖ್ಯ ಅತಿಥಿಗಳು : ಕರ್ನಾಟಕದ ಗೌರವಾನ್ವಿತ ಮುಖ್ಯಮಂತ್ರಿಗಳು ಶ್ರೀ ಸಿದ್ದರಾಮಯ್ಯನವರು
ವಿವಿಧ ಧಾರ್ಮಿಕ ಕಾರ್ಯಕ್ರಮಗಳು: ಶ್ರೀ ಅಂಬಿಗರ ಚೌಡಯ್ಯನವರ ತೊಟ್ಟಿಲು ಉತ್ತವ ಹಾಗೂ ಮೂಲ ಐಕ್ಕ ಮಂಟಪದ ಪೂಜೆ
ಸಮಾಜ ಸೇವೆ: ರಕ್ತದಾನ ಶಿಬಿರ
ಸಾಮಾಜಿಕ ಕಾರ್ಯಕ್ರಮಗಳು : ಸರಳ ಸಾಮೂಹಿಕ ವಿವಾಹ ಮಹೋತ್ಸವ, ಸಾಂಸ್ಕೃತಿಕ ಕಾರ್ಯಕ್ರಮಗಳು: ರಾಜ್ಯಮಟ್ಟದ ವಚನ ಕಂಠಪಾಠ ಸ್ಪರ್ಧೆ, ಪ್ರಪ್ರಥಮ ಐತಿಹಾಸಿಕ ಗಂಗಾರತಿ ಕಾರ್ಯಕ್ರಮ.
ಸಾಹಿತ್ಯಕ ಕಾರ್ಯಕ್ರಮ: ಶ್ರೀ ನಿಜ ಶರಣ ಅಂಬಿಗರ ಚೌಡಯ್ಯನವರ ಗ್ರಂಥ ಬಿಡುಗಡೆ.
ಹಾಗಾಗಿ ಈ ಕಾರ್ಯಕ್ರಮವು ಸಮಸ್ತ ಕರ್ನಾಟಕದ ಜನತೆಗ ಹಾಗೂ ಅಂಬಿಗ, ಮೀನುಗಾರ. ಕಬ್ಬಲಿಗ ಹಾಗೂ ಇನ್ನಿತರ ಮೀನುಗಾರ ಸಮಾಜದ ಬಂಧುಗಳು ಆಗಮಿಸಲು ಕಾರ್ಯಕ್ರಮವನ್ನು ಯಶಸ್ವೀ ಗೊಳಿಸಲು ತಮ್ಮಲ್ಲಿ ಪ್ರಾರ್ಥಿಸಿಕೊಳ್ಳುತ್ತೇವೆ ಅಂದರು
Comments
Post a Comment