38TH INTERNATIONAL CONFERENCE ON VLSI DESIGN & 24TH INTERNATIONAL CONFERENCE ON EMBEDDED SYSTEM 4-8 January 2025 |
38TH INTERNATIONAL CONFERENCE ON VLSI DESIGN & 24TH INTERNATIONAL CONFERENCE ON EMBEDDED SYSTEM 4-8 January 2025 |
ಸೆಮಿಕಂಡಕ್ಟರ್ ವಲಯದ ಪ್ರಾವಿಣ್ಯರು ಮತ್ತು ಸರ್ಕಾರದ ಗಣ್ಯರ ಸಮ್ಮುಖದಲ್ಲಿ ಅತ್ಯುತ್ತಮ ಪ್ರಾಬಲ್ಯ ತೋರಿದ ವಿಎಲ್‌ಎಸ್‌ಐಡಿ 2025 ಉದ್ಘಾಟನಾ ಸಮಾರಂಭ
ಬೆಂಗಳೂರು, ಜನವರಿ 6, 2025: ವಿಎಲ್‌ಎಸ್‌ಐ ಸೊಸೈಟಿ ಆಫ್ ಇಂಡಿಯಾ (ವಿಎಸ್‌ಐ) ಆಯೋಜಿಸಿರುವ
ವಿಎಲ್‌ಎಸ್‌ಐ ವಿನ್ಯಾಸ ಮತ್ತು ಎಂಬೆಡೆಡ್ ಸಿಸ್ಟಮ್ಸ್ ನ 24 ನೇ ಅಂತರರಾಷ್ಟ್ರೀಯ ಸಮ್ಮೇಳನದ 38 ನೇ ಆವೃತ್ತಿ ಉನ್ನತ ಸೆಮಿಕಂಡಕ್ಟರ್ ದಿಗ್ಗಜರ ಮತ್ತು ಸರ್ಕಾರದ ಗಣ್ಯರ ಸಮ್ಮುಖದಲ್ಲಿ ಇಂದು, ಜನವರಿ 6, 2025 ರಂದು ಬೆಂಗಳೂರಿನ ಲೀಲಾ ಪ್ಯಾಲೇಸ್ ನಲ್ಲಿ ಅಧಿಕೃತವಾಗಿ ಉದ್ಘಾಟಿಸಲಾಯಿತು.
ಉದ್ಘಾಟನಾ ಸಮಾರಂಭದ ಪ್ರಾಥಮಿಕವಾಗಿ "ಸಿಲಿಕಾನ್ ಮೀಟ್ಸ್ ಎಐ: "ವೇಗವರ್ಧಿತ ಕಂಪ್ಯೂಟಿಂಗ್. ಸುರಕ್ಷಿತ ಕನೆಕ್ಟಿವಿಟಿ ಮತ್ತು ಚಾಣಾಕ್ಷ ಚಲನಶೀಲತೆಯ ಸುಸ್ಥಿರ ಆವಿಷ್ಕಾರಗಳು" ಎಂಬ ಪರಿಕಲ್ಪನೆಯ ಮೂಲಕ ಪ್ರಾರಂಭವಾಯಿತು. ಈ ಕಾರ್ಯಕ್ರಮ ಕೃತಕ ಬುದ್ದಿಮತ್ತೆ/ಯಂತ್ರಕಲಿಕೆ, 5ಜಿ, ಐಓಟಿ (ಇಂಟರ್ನೆಟ್ ಆಫ್ ಥಿಂಗ್ಸ್), ಕ್ವಾಂಟಮ್ ಕಂಪ್ಯೂಟಿಂಗ್, ಕ್ವಾಂಟಮ್ ಕಂಪ್ಯೂಟಿಂಗ್ ಮತ್ತು ವಿದ್ಯುತ್ ಚಾಲಿತ ವಾಹನಗಳ ಪರಿವರ್ತಕ ಪ್ರಗತಿಯನ್ನು ಚಾಲನೆ ಮಾಡುವ ವ್ಯವಸ್ಥೆಗಳ ವಿಎಲ್‌ಎಸ್‌ಐ ಮತ್ತು ಎಂಬೆಡೆಡ್ ಸಿಸ್ಟಮ್‌ಗಳ ನಿರ್ಣಾಯಕ ಪಾತ್ರವನ್ನು ಪ್ರದರ್ಶಿಸಿತು. ವಿಎಲ್‌ಎಸ್‌ಐಡಿ 2025 ಪ್ರತಿಷ್ಠಿತ ವಿಚಾರ ಘೋಷಿಯಲ್ಲಿ ಅಂತಿಮವಾಗಿ ಮತ್ತು ಕ್ಕೂ ಹೆಚ್ಚು ಪ್ರಾಯೋಜಕರು ಸೇರಿದಂತೆ 1500 ಕ್ಕೂ ಹೆಚ್ಚು ನೋಂದಾಯಿತ ಸದಸ್ಯರು, 18 ಮುಖ್ಯ ಟಿಪ್ಪಣಿಗಳು, 32 ಟ್ಯುಟೋರಿಯಲ್‌ಗಳು, 74 ಪೇಪರ್‌ಗಳು, 5 ಪರಿಣಿತ ಸಮಿತಿ ಸಭೆಗಳು, 16 ಬಳಕೆದಾರರ ವಿನ್ಯಾಸ ಅಧಿವೇಶನಗಳು, 50 ಕ್ಕೂ ಹೆಚ್ಚು ಪ್ರದರ್ಶನಗಳು, 13 ಉದ್ಯಮ ವೇದಿಕೆ ಸ್ಪರ್ಧೆಗಳು, 13 ಉದ್ಯಮದ ವೇದಿಕೆ ಸ್ಪರ್ಧೆಗಳು, ಒಟ್ಟುಗೂಡಿಸುವ ಹೆಗ್ಗಳಿಕೆಯ ಪ್ರಮುಖ ಜಾಗತಿಕ ಕಾರ್ಯಕ್ರಮವಾಗಿ ತನ್ನ ಸ್ಥಾನವನ್ನು ಪುನರುಚ್ಚರಿಸಿದೆ.
ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಟಫ್ಟ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕ, ಚಿಪ್ ವಾರ್: ದಿ ಫೈಟ್ ಫಾರ್ ದಿ ವರ್ಲ್ಡ್ ಮೋಸ್ಟ್ ಕ್ರಿಟಿಕಲ್ ಟೆಕ್ನಾಲಜಿ ಖ್ಯಾತಿಯ ಲೇಖಕ ಡಾ. ಕ್ರಿಸ್ ಮಿಲ್ಲರ್ ಪ್ರಮುಖರಾಗಿದ್ದರು. ಕ್ರಿಸ್ ಮಿಲ್ಲರ್ ಅವರೊಂದಿಗೆ ಚಿಪ್-ಪೆ-ಚರ್ಚಾ ಕಾರ್ಯಕ್ರಮದಲ್ಲಿ ವಿಎಸ್‌ಐ ಅಧ್ಯಕ್ಷ ಡಾ. ಸತ್ಯ ಗುಪ್ತಾ ಸಾಂದರ್ಭಿಕ ಸಮಾಲೋಚನೆ ನಡೆಸಿದ್ದು ಉದ್ಘಾಟನಾ ಸಮಾರಂಭದ ಪ್ರಮುಖ ಅಂಶವಾಗಿತ್ತು.
ಸೆಮಿಕಂಡಕ್ಟರ್‌ಗಳಲ್ಲಿ ಜಾಗತಿಕ ಆವಿಷ್ಕಾರಗಳು: ಎಡ್ಜ್ ಕಂಪ್ಯೂಟಿಂಗ್, ದತ್ತಾಶ ಕೇಂದ್ರಗಳು ಮತ್ತು ಸಂಯುಕ್ತ ಸೆಮಿಕಂಡಕ್ಟರ್‌ಗಳಂತಹ ಉದಯೋನ್ಮುಖ ತಂತ್ರಜ್ಞಾನಗಳ ಒಳನೋಟಗಳು.
ಭಾರತದ ಸೆಮಿಕಂಡಕ್ಟರ್ ಮಾರ್ಗಸೂಚಿ: ಸೆಮಿಕಂಡಕ್ಟರ್ ವಲಯದಲ್ಲಿ ಹೊಸತಾಗಿ ಭಾರತವನ್ನು ಜಾಗತಿಕ ಕೇಂದ್ರವನ್ನಾಗಿಸುವ ಕುರಿತು ಕಾರ್ಯತಂತ್ರದ ಚರ್ಚೆಗಳು.
. ಅತ್ಯುತ್ತಮ ಸಂಶೋಧನೆ: ಯಂತ್ರ ಕಲಿಕೆಗಾಗಿ ಹಾರ್ಡ್ ವೇರ್, ಆಟೋಮೋಟಿವ್ ಸಿಸ್ಟಮ್ ಗಳಿಗಾಗಿ ವಿಎಲ್‌ಎಸ್‌ಐ, ಕ್ವಾಂಟಮ್ ಕಂಪ್ಯೂಟಿಂಗ್ ಮತ್ತು ನ್ಯೂರೋಮಾರ್ಫಿಕ್ ಕಂಪ್ಯೂಟಿಂಗ್ ಸೇರಿದಂತೆ 22 ಕ್ಕೂ ಹೆಚ್ಚು ಅಧುನಿಕ ವಿಷಯಗಳನ್ನು ಅನ್ವೇಷಿಸಲಾಗಿದೆ.
ಸ್ಪೂರ್ತಿದಾಯಕ ಸಂವಾದಗಳು: ಉದ್ಯಮದ ದಾರ್ಶನಿಕರು ಹಾಗೂ ತಾಂತ್ರಿಕ ತಜ್ಞರ ನೇತೃತ್ವದಲ್ಲಿ ಪ್ರಮುಖ ಭಾಷಣಗಳು, ಕಾರ್ಯಾಗಾರಗಳು ಮತ್ತು ಸಮಿತಿ ಸಭೆಯ ಚರ್ಚೆಗಳು
ವಿಎಲ್‌ಎಸ್‌ಐ ಸೊಸೈಟಿ ಆಫ್ ಇಂಡಿಯಾದ ಅಧ್ಯಕ್ಷ ಡಾ. ಸತ್ಯ ಗುಪ್ತಾ ಮಾತನಾಡುತ್ತಾ, "ವಿಎಲ್‌ಎಸ್‌ಐಡಿ 2025 ಸಮ್ಮೇಳನ ಜಾಗತಿಕ ಪ್ರತಿಭೆ ಮತ್ತು ನಾವೀನ್ಯತೆಗಳ ಗಮನಾರ್ಹವಾಗಿದೆ. ಸೆಮಿಕಂಡಕ್ಟರ್ ಮತ್ತು ಕೃತಕ ಬುದ್ಧಿಮತ್ತೆ ಪರಿಸರ ವ್ಯವಸ್ಥೆಗಳಾದ್ಯಂತ ಸಹಯೋಗ ಬೆಳೆಸುವ ಸಂದರ್ಭದಲ್ಲಿ ನಾಳೆಯ ಸಂಕೀರ್ಣ ಸವಾಲುಗಳನ್ನು ಎದುರಿಸಲು ಒಂದು ಅನನ್ಯ ಅವಕಾಶ ಒದಗಿಸಿದೆ. ಸೆಮಿಕಂಡಕ್ಟರ್ ಉದ್ಯಮದಲ್ಲಿ ಭಾರತ ಉತ್ತಮ ತಂತ್ರಜ್ಞಾನದ ಕಡೆ ದಾಪುಗಾಲು ಇಡುತ್ತಿರುವುದನ್ನು ಜಗತ್ತು ಗಮನಿಸುತ್ತಿದೆ. ಈ ಸಮ್ಮೇಳನವು ಭಾರತದ ಮತ್ತೊಂದು ಗಮನಾರ್ಹ ಸಂಗತಿಯಾಗಿದೆ" ಎಂದು ಹೇಳಿದರು.
ಮೈಕ್ರೋಚಿಪ್ ಟೆಕ್ನಾಲಜಿಯ ಹಿರಿಯ ಕಾರ್ಪೊರೇಟ್ ಉಪಾಧ್ಯಕ್ಷ ಹಾಗೂ ವಿಎಲ್‌ಎಸ್‌ಐಡಿ ಸಮ್ಮೇಳನದ ಕಾರ್ಯನಿರ್ವಾಹಕ ಅಧ್ಯಕ್ಷ ಪ್ಯಾಟ್ರಿಕ್ ಜಾನ್ಸನ್ ಮಾತನಾಡುತ್ತಾ, "ಸಿಲಿಕಾನ್ ಮತ್ತು ಕೃತಕ ಬುದ್ಧಿಮತ್ತೆಯ ಏಕೀಕರಣವು ಅಭೂತಪೂರ್ವ ಅವಕಾಶಗಳನ್ನು ನೀಡಿದೆ. ವಿಎಲ್‌ಎಸ್‌ಐಡಿ 2025 ಸಮ್ಮೇಳನವು ಚಲನಶೀಲತೆ, ಸಂಪರ್ಕ ಮತ್ತು ಕಂಪ್ಯೂಟಿಂಗ್ ಅನ್ನು ಹೇಗೆ ಮರು ವ್ಯಾಖ್ಯಾನಿಸಬಹುದು ಎಂಬುದನ್ನು ಅನ್ವೇಷಿಸಲು ಸೂಕ್ತ ವೇದಿಕೆಯಾಗಿದೆ” ಎಂದರು.
ಮಾರ್ವೆಲ್ ಟೆಕ್ನಾಲಜಿ ಸಂಸ್ಥೆಯ ಮುಖ್ಯ ಅಭಿವೃದ್ಧಿ ಅಧಿಕಾರಿ ಸಂದೀಪ್ ಭಾರತಿ ಅವರು ಕಾರ್ಯಕ್ರಮ ಕುರಿತು ಮಾತನಾಡುತ್ತಾ, "ವಿನ್ಯಾಸ ಮತ್ತು ಉತ್ಪಾದನೆಯ ಉದಯೋನ್ಮುಖ ಸೆಮಿಕಂಡಕ್ಟರ್ ಪರಿಸರ ವ್ಯವಸ್ಥೆಯೊಂದಿಗೆ, ವೈಜ್ಞಾನಿಕವಾಗಿ ಬಲಪಡಿಸಲು ಮತ್ತು ಏಕೀಕರಣ ಪ್ರಕ್ರಿಯೆಗಳನ್ನು ವೇಗಗೊಳಿಸಲು ಕೃತಕ
ಬುದ್ಧಿಮತ್ತೆ ಮತ್ತು ಯಂತ್ರ ಕಲಿಕೆ ಅತ್ಯಗತ್ಯವಾಗಿದೆ. ಕೃತಕ ಬುದ್ಧಿಮತ್ತೆ ಮತ್ತು ಯಂತ್ರ ಕಲಿಕೆ ಕೇವಲ ಸೆಮಿಕಂಡಕ್ಟರ್ ವಿನ್ಯಾಸ ಪರಿಸರ ವ್ಯವಸ್ಥೆಯನ್ನು ಅಡ್ಡಿಪಡಿಸುತ್ತಿಲ್ಲ ಅದರ ಫ್ಯಾಬ್ರಿಕ್ ಅನ್ನು - ಮರುವ್ಯಾಖ್ಯಾನಿಸುತ್ತಿದ್ದಾರೆ. ದೊಡ್ಡ ಕನಸು ಕಾಣಲು ಮತ್ತು ಸಾಧ್ಯವಿರುವಷ್ಟು ನಾವೀನ್ಯತೆಗೆ ಅಧಿಕಾರ ನೀಡುತ್ತಿದ್ದಾರೆ. ಈ ಬೆಳವಣಿಗೆಗಳು ಚಲನಶೀಲತೆ, ಸಂಪರ್ಕವನ್ನು ಹೇಗೆ ಮರು ವ್ಯಾಖ್ಯಾನಿಸಬಹುದು ಮತ್ತು ಹೊಸ ಪೀಳಿಗೆಯ ತಾಂತ್ರಿಕ ಪ್ರಗತಿಯನ್ನು ಹೇಗೆ ಹುಟ್ಟುಹಾಕಬಹುದು ಎಂಬುದನ್ನು ಮತ್ತಷ್ಟು ಅನ್ವೇಷಿಸಲು ನಾವು ವಿಎಲ್‌ಎಸ್‌ಐಡಿ 2025 ನಲ್ಲಿ ಉತ್ತಮ ವೇದಿಕೆ ಕಲ್ಪಿಸಿದ್ದೇವೆ" ಎಂದು ಸಂತೋಷದಿಂದ ಹೇಳಿದರು.
ಎನ್ಎಕ್ಸ್‌ಪಿ ಸೆಮಿಕಂಡಕ್ಟರ್ಸ್ ನ ಉಪಾಧ್ಯಕ್ಷ ಮತ್ತು ಭಾರತದ ವ್ಯವಸ್ಥಾಪಕ ನಿರ್ದೇಶಕ ಹಿತೇಶ್ ಗರ್ಗ್ ಮಾತನಾಡುತ್ತಾ, "ಸೆಮಿಕಂಡಕ್ಟರ್ ಉದ್ಯಮದ ಭವಿಷ್ಯದ ಬೆಳವಣಿಗೆ ಮತ್ತು ನಾವೀನ್ಯತೆಯು ನಿರೀಕ್ಷಿತ ಸದೃಢ ಪ್ರತಿಭೆಗಳ ಮತ್ತು ಅಭಿವೃದ್ಧಿ ಹೊಂದುತ್ತಿರುವ ಆರಂಭಿಕ ಪರಿಸರ ವ್ಯವಸ್ಥೆಯನ್ನು ಅವಲಂಬಿಸಿದೆ. ಉದ್ಯಮ- ಅಕಾಡೆಮಿಯಾ ವಿನಿಮಯವನ್ನು ಸುಗಮಗೊಳಿಸುವ ಕಾರ್ಯಕ್ರಮಗಳು, ವಿದ್ಯಾರ್ಥಿಗಳು ಮತ್ತು ಯುವ ವೃತ್ತಿಪರರಿಗೆ ತರಬೇತಿ ಮತ್ತು ಮಾರ್ಗದರ್ಶನ ಒದಗಿಸುವ ಮೂಲಕ ನಾವೀನ್ಯತೆ ಮತ್ತು ಉದ್ಯಮಶೀಲತೆಯ ಸಂಸ್ಕೃತಿ ಮತ್ತಷ್ಟು ಹೆಚ್ಚಿಸಿದೆ ಮತ್ತು ಜಾಗತಿಕ ಮಾರುಕಟ್ಟೆಯಲ್ಲಿ ಸ್ಪರ್ಧಾತ್ಮಕವಾಗಿ ಉಳಿಯಬಹುದು. ವಿಎಲ್‌ಎಸ್‌ಐಡಿ 2025 ಉದ್ಯಮದಲ್ಲಿ ಭಾಗವಹಿಸುವವರು, ಆರಂಭಿಕ ಪರಿಸರ ವ್ಯವಸ್ಥೆ ಮತ್ತು ಅಕಾಡೆಮಿಯ ನಡುವೆ ಅತ್ಯುತ್ತಮ ಕಲಿಕೆಯ ಅವಕಾಶ ಒದಗಿಸುತ್ತದೆ, ವಿದ್ಯಾರ್ಥಿಗಳು ಮತ್ತು ಸಂಶೋಧಕರು ತಮ್ಮ ಆಲೋಚನೆಗಳನ್ನು ಉದ್ಯಮದ ಅನುಭವಿಗಳಿಗೆ ಪ್ರಸ್ತುತಪಡಿಸಲು ಮತ್ತು ಉದಯೋನ್ಮುಖ ಸವಾಲುಗಳನ್ನು ಪರಿಹರಿಸಲು ಮತ್ತು ಹೊಸ ಅವಕಾಶಗಳ ಲಾಭವನ್ನು ಪಡೆಯಲು ಅನುವು ಮಾಡಿಕೊಟ್ಟಿದೆ" ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದರು.
ಈ ಅದ್ಭುತ ಅಂತಾರಾಷ್ಟ್ರೀಯ ಕಾರ್ಯಕ್ರಮ ಉದ್ಯಮ ಮತ್ತು ಶಿಕ್ಷಣಕ್ಕೆ ನಿರ್ಣಾಯಕ ವೇದಿಕೆಯಾಗಿ ಕಾರ್ಯನಿರ್ವಹಿಸಿ, ನಾಳಿನ ಸವಾಲುಗಳು ಮತ್ತು ಅವಕಾಶಗಳನ್ನು ಪರಿಹರಿಸಲು ನೆಟ್ವಕಿರ್ಂಗ್ ಮತ್ತು ಜ್ಞಾನ ಹಂಚಿಕೆಯನ್ನು ಸುಗಮಗೊಳಿಸಿತು. ಇದು ಡಿಜಿಟಲ್ ಇಂಡಿಯಾ, ಮೇಕ್ ಇನ್ ಇಂಡಿಯಾ ಮತ್ತು ಸ್ಟಾರ್ಟ್ ಅಪ್ ಇಂಡಿಯಾ ದಂತಹ ಭಾರತದ ಪ್ರಮುಖ ಉಪಕ್ರಮಗಳನ್ನು ಬೆಂಬಲಿಸಿ. ಸುಸ್ಥಿರ ಮತ್ತು ನವೀನ ಡಿಜಿಟಲ್ ಆರ್ಥಿಕತೆಗೆ ಅಡಿಪಾಯ ಹಾಕಿತು. ಈ ಪ್ರದರ್ಶನ ಭಾರೀ ಜನಸಂದಣಿಯೊಂದಿಗೆ, 58 ಅತ್ಯುತ್ತಮ ಎಲೆಕ್ಟ್ರಾನಿಕ್ಸ್ ಸಿಸ್ಟಮ್ ವಿನ್ಯಾಸ ಮತ್ತು ಉತ್ಪಾದನಾ ಸಂಸ್ಥೆಗಳನ್ನು ಒಂದೇ ಸೂರಿನಡಿ ಸೇರುವ ಅವಕಾಶ ಕಲ್ಪಿಸಿತು.
ವಿಎಲ್‌ಎಸ್‌ಐ ವಿನ್ಯಾಸ ಸಮ್ಮೇಳನ 2025 ಕುರಿತು:
ಅಂತಾರಾಷ್ಟ್ರೀಯ ವಿಎಲ್‌ಎಸ್‌ಐ ವಿನ್ಯಾಸ ಮತ್ತು ಎಂಬೆಡೆಡ್ ಸಿಸ್ಟಮ್ಸ್ ಸಮ್ಮೇಳನವು ಮೂರುವರೆ ದಶಕಗಳಿಗೂ ಹೆಚ್ಚು ಪರಂಪರೆಯನ್ನು ಹೊಂದಿರುವ ಪ್ರಮುಖ ಜಾಗತಿಕ ಸಮ್ಮೇಳನವಾಗಿದೆ. ವಿಎಲ್‌ಎಸ್‌ಐ ಮತ್ತು ಎಂಬೆಡೆಡ್ ಸಿಸ್ಟಮ್‌ಗಳಲ್ಲಿನ ಇತ್ತೀಚಿನ ಅಭಿವೃದ್ಧಿಗಳ ಮೇಲೆ ಕೇಂದ್ರೀಕರಿಸುವ ಈ ಜಾಗತಿಕ ವಾರ್ಷಿಕ ತಾಂತ್ರಿಕ ಸಮ್ಮೇಳನದಲ್ಲಿ 2000 ಕ್ಕೂ ಹೆಚ್ಚು ಎಂಜಿನಿಯರ್‌ಗಳು, ವಿದ್ಯಾರ್ಥಿಗಳು ಮತ್ತು ಅಧ್ಯಾಪಕರು, ಉದ್ಯಮ, ಶೈಕ್ಷಣಿಕ, ಸಂಶೋಧಕರು, ಅಧಿಕಾರಿಗಳು ಮತ್ತು ಸರ್ಕಾರಿ ಸಂಸ್ಥೆಗಳು ಭಾಗವಹಿಸಿದ್ದರು.
ವಿಎಲ್‌ಎಸ್‌ಐ ವಿನ್ಯಾಸ ಸಮ್ಮೇಳನವು 1985 ರಲ್ಲಿ ಸರಳ ಉಪಾಯಕ್ಕಾಗಿ ಪ್ರಾರಂಭವಾಯಿತು: ಇಂಜಿನಿಯರಿಂಗ್ ಶಿಕ್ಷಣ ಮತ್ತು ಸಂಶೋಧನೆಯ ಮೇಲೆ ಕೇಂದ್ರೀಕೃತವಾಗಿರುವ ಭಾರತದಲ್ಲಿ ವಿಎಲ್‌ಎಸ್‌ಐ ಚಟುವಟಿಕೆಗಳ ಮಟ್ಟವನ್ನು ಗ್ರಹಿಸಲು. ಜಾಲತಾಣ:

Comments
Post a Comment