ಲೋಕಮಾತಾ ಅಹಲ್ಯಾದೇವಿ ಹೋಳ್ಳರ್ 300ನೇ ವರ್ಷದ ಜಯಂತಿಯ ವರ್ಷಾಚರಣೆ
ಲೋಕಮಾತಾ ಅಹಲ್ಯಾದೇವಿ ಹೋಳ್ಳರ್ 300ನೇ ವರ್ಷದ ಜಯಂತಿಯ ವರ್ಷಾಚರಣೆ
ಲೋಕಮಾತಾ ಅಹಲ್ಯಾದೇವಿ ಹೋಳ್ಳರ್ 300ನೇ ವರ್ಷದ ಜಯಂತಿಯ ವರ್ಷಾಚರಣೆಯನ್ನು ಮೇಲ್ಕಂಡ ಸಮಿತಿಯು ಆಚರಿಸುವ ಈ ಸುಸಂದರ್ಭದಲ್ಲಿ ರಾಜ್ಯದ ದಕ್ಷಿಣದ 8 ವಿಭಾಗಳಲ್ಲಿ ಹತ್ತಿರ 400 ಕಾರ್ಯಕ್ರಮಗಳ ಮುಖಾಂತರ ಅಹಲ್ಯಾದೇವಿ ಹೋಳ್ಯರವರು ಮಾಡಿದ ಸೇವಾ ಕಾರ್ಯಗಳು ಸೇರಿದಂತೆ ಇಡೀ ಜೀವನದ ಬಗ್ಗೆ ತಿಳಿಸಿಕೊಡುವ ಪ್ರಯತ್ನ ಮಾಡಲಾಗುತ್ತಿದೆ. ಇನ್ನೂ ನಡೆಯುತ್ತಲೇ ಇವೆ. ಸಮಿತಿಯ ಸ್ವಾಗತ ಸಮಿತಿಯ ಅಧ್ಯಕ್ಷರಾಗಿ ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿಯಾಗಿದ್ದ ಶ್ರೀಮತಿ ರತ್ನಪ್ರಭರವರ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ. ಬಸ್ಟೀಸ್ ಮಂಜುಳಾ ಚೆಲ್ಲೂರರವರ ಮತ್ತು ಡಾ.ಗೀತಾ ರಾಮನುಜಂ, ವೀಣಾ ಬನ್ನಂಜೆ ಸೇರಿದಂತೆ ಆನೇಕ ಹಿರಿಯ ಅನುಭವಿ ದುಹಿಳೆಯರು ಈ ಸ್ವಾಗತ ಸಮಿತಿಯಲ್ಲಿದ್ದಾರೆ. ಇದೀಗ ಸಮಾರೋಪ ಕಾರ್ಯಕ್ರಮವನ್ನು ಮಹಿಳಾ ಸಮಾವೇಶವನ್ನು, ಬೆಂಗಳೂರಿನ ಜ್ಞಾನಜ್ಯೋತಿ ಸಭಾಂಗಣದಲ್ಲಿ ಜನವರಿ 19 ರಂದು ಪೂರ್ಣ ದಿವಸ ಮಾಡಲಾಗುತ್ತಿದೆ. ಕಾರ್ಯಕ್ರಮವು ಬೆಳಿಗ್ಗೆ 9 ರಿಂದ ಸಂಜೆ 5 ರವರೆಗೆ ನಡೆಯಲಿದ್ದು, 3 ಗಂಟೆಗೆ ನೊಂದಣಿ, ಉಪಹಾರದಿಂದ ಸಂಜೆ ಮುಕ್ತಾಯ ಸಮಾರಂಭದತನಕ, ವಿವಿಧ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿದೆ.
ಸಮಾಜದ ವಿವಿಧ ಸ್ತರಗಳಲ್ಲಿರುವ ಮಹಿಳೆಯರು ಇದರಲ್ಲಿ ಪಾಲ್ಗೊಳ್ಳುತ್ತಿದ್ದಾರೆ ಪ್ರತಿಯೊಬ್ಬರಬ್ಬು ಸಂಪರ್ಕ ಮಾಡಿ, ಸಮಾರಂಭದ ವಿಶೇಷತೆಯನ್ನು ತಿಳಿಸಿ ಕರೆಯಲಾಗುತ್ತಿದೆ. ಅಹಲ್ಯಾದೇವಿ ಹೋಳ್ಳ ರವರ ಜೀವನದ ಬಗ್ಗೆ ಪ್ರದರ್ಶಿನಿಯ ಉದ್ಘಾಟನೆಯನ್ನು ಹೋಳ್ಳರ್ ವಂಶಸ್ಥರಾದ ಶ್ರೀ ಉದಯಸಿಂಹ ರಾಜೇರವರು ಮಾಡುತ್ತಿದ್ದಾರೆ. ಪೂರ್ಣ ಕಾರ್ಯಕ್ರಮದಲ್ಲಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಉಪನ್ಯಾಸ, ಮಸ್ತಕ ಬಿಡುಗಡೆ, ಅವರು ಜನ್ಮಸ್ಥಳದಿಂದ ಆಡಳಿತ ನಡೆಸಿದ ಸ್ಥಳದವರೆಗಿನ ಸಾಕ್ಷ್ಯಚಿತ್ರ ಬಿಡುಗಡೆ ಮತ್ತು ಪ್ರದರ್ಶೆನ, ಚಿಂತನ ಗೋಷ್ಠಿ,, ಚರ್ಚಾಗೋಷ್ಠಿ, ಮಹಿಳೆಯರ ಡೊಳ್ಳುಕುಣಿತ ಸೇರಿದಂತೆ ವಿವಿಧ ಚಟುವಟಿಕೆಗಳಿರುತ್ತವೆ. ವೈಯಕ್ತಿಕವಾಗಿ ಭಾಗವಹಿಸಿದ ಮಹಿಳೆಯರೆಲ್ಲ ನಾನು ಅಹಲೈಯಾಗಿ ಸಮಾಜಕ್ಕೆ ನಾನೇನು ಮಾಡಬಲ್ಲೆ ಎಂದು ಚಿಂತಿಸುವ ಸಂಕಲ್ಪ ಮಾಡುವ ನಿಟ್ಟಿನತ್ತ ಗೋಷ್ಠಿಗಳು ಕೇಂದ್ರೀಕೃತವಾಗಿರುತ್ತದೆ.
ಪಾಪಕ ಕಾರ್ಮುಕ್ರಮ
ಕಳೆದ 6 ತಿಂಗಳಿನಲ್ಲಿ ನಡೆದ ಕಾರ್ಯಕ್ರಮಗಳ ವಿವರಗಳು : ಮೈಸೂರು ವಿಭಾಗದಲ್ಲಿ 4 ಸ್ಪರ್ಧೆಗಳು, ನಾಟಕ, 4 ಉಪನ್ಯಾಸಗಳು, 1 ಗ್ರಾಮೀಣ ಮಹಿಳೆಯರ ಸಭೆ ಒಟ್ಟು 22 ಕಾರ್ಯಕ್ರಮಗಳು, ಒಟ್ಟು 5354 ಮಹಿಳೆಯರು ಭಾಗವಹಿಸಿದ್ದಾರೆ.
ಹಾಸನ ವಿಭಾಗದಲ್ಲಿ ಒಟ್ಟು ವಿವಿಧ ಕಾರ್ಯಕ್ರಮಗಳು, 41 ಭಾಷಣಗಳು ನಡೆದಿವೆ. ಒಟ್ಟು 5120 ಮಹಿಳೆಯರು ಭಾಗವಹಿಸಿದ್ದಾರೆ.
ತುಮಕೂರು ವಿಭಾಗದಲ್ಲಿ 14 ಕಾರ್ಯಕ್ರಮಗಳು ನಡೆದಿವೆ ಅದರಲ್ಲಿ 2 ಚಿತ್ರಕಲಾ ಸ್ಪರ್ಧೆ, 12 ಭಾಷಣಗಳು ಸೇರಿದಂತೆ ವಿವಿಧ ಕಡ ಉಪನ್ಯಾಸಗಳನ್ನು ಮಾಡಲಾಗಿದೆ. ಒಟ್ಟು 1640 ಮಹಿಳೆಯರು ಭಾಗವಹಿಸಿದ್ದಾರೆ.
ಮಂಗಳೂರು ವಿಭಾಗದಲ್ಲಿ, ಉಪನ್ಯಾಸಗಳು, ಭಾಷಣಗಳು, ಕೈಮಗ್ಗ ಸೀರೆಗಳ ಪ್ರದರ್ಶನ ಮತ್ತು ಮಾರಾಟ ಸೇರಿದಂತೆ ಒಟ್ಟು 185 ಕಾರ್ಯಕ್ರಮಗಳು ಜರುಗಿದೆ. ಒಟ್ಟು 22284 ಕ್ಕೂ ಹೆಚ್ಚು ಮಹಿಳೆಯರು ಭಾಗವಹಿಸಿದ್ದಾರೆ.
ಕೋಲಾರ ವಿಭಾಗದ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 19 ಲಾವಣಗಳು, ಒಂದು ಪ್ರಬಂಧ ಸ್ಪರ್ಧೆ, ಒಂದು ನೇಕಾರರಿಗೆ ಸನ್ಮಾನ ವೇಷಭೂಷ ಸ್ಪರ್ಧೆ, ರಸಪ್ರಶ್ನೆ ಸೇರಿದಂತ ಒಟ್ಟು 30 ಕಾರ್ಯಕ್ರಮಗಳು ನಡೆದಿವೆ. ಒಟ್ಟು 2380 ಮಹಿಳೆಯರು ಭಾಗವಹಿಸಿದ್ದಾರೆ.
ಶಿವಮೊಗ್ಗ ವಿಭಾಗದಲ್ಲಿ, 23 ಉಪನ್ಯಾಸಗಳು, ಒಂದು ಶೋಭಾಯಾತ್ರೆ, ಸೇರಿದಂತೆ ಒಟ್ಟು 25 ಕಾರ್ಯಕ್ರಮಗಳು ನಡೆದಿವೆ. ಒಟ್ಟು ಒಟ್ಟು 1650 ಮಹಿಳೆಯರು ಭಾಗವಹಿಸಿದ್ದಾರೆ. ಬೆಂಗಳೂರು ದಕ್ಷಿಣ ಮತ್ತು ಬೆಂಗಳೂರು ಉತ್ತರ ಸೇರಿದಂತೆ, ವಿಭಾಗಗಳಿಂದ ಒಟ್ಟು ಕಾರ್ಯಕ್ರಮ 33 ನಡೆದಿದೆ. ಒಟ್ಟು ಭಾಗವಹಿಸಿದ ಮಹಿಳೆಯರ ಸಂಖ್ಯೆ 14,861.
ಸಾವಿರಾರು ಸಂಖ್ಯೆಯಲ್ಲಿ ಆಗಮಿಸುವ ಈ ಕಾರ್ಯಕ್ರಮಕ್ಕೆ ಆಸಕ್ತಿ, ಕಾರ್ಯಕ್ರಮದ ಮುಖಾಂತರ ತನ್ನ ಜವಾಬ್ದಾರಿಯನ್ನು ಮೆರೆಯುವ ಎಲ್ಲ ಮಹಿಳೆಯರು ಈ ಸಮಾರಂಭದಲ್ಲಿ ಪಾಲ್ಗೊಳ್ಳಬಹುದು. ಹೆಚ್ಚಿನ ವಿವರಗಳಿಗೆ ಮೇಲಿನ ಸಂಪರ್ಕ ಸಂಖ್ಯೆಗಳಿಗೆ ಕರೆ ಮಾಡಿ ಪಡೆಯಬಹುದು.


Comments
Post a Comment