ಬೆಂಗಳೂರು ವಿಶ್ವವಿದ್ಯಾಲಯದ ಸ್ನಾತಕೋತ್ತರ ಮತ್ತು ಸಂಶೋಧನಾ ವಿದ್ಯಾರ್ಥಿ ಒಕ್ಕೂಟದಿಂದ ದಿನಾಂಕ: 21.01.2025ರಂದು ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಬಿಡುಗಡೆ ಮಾಡಿದ ಹೇಳಿಕೆ. ಮಾನ್ಯರೆ, ನಾಡಿನ ಹಿರಿಯ ಹೋರಾಟಗಾರ ಮತ್ತು ಸಮತಾ ಸೈನಿಕ ದಳದ ರಾಷ್ಟ್ರೀಯ ಅಧ್ಯಕ್ಷರಾದ ಡಾ:ಎಂ.ವೆಂಕಟಸ್ವಾಮಿ ಅವರಿಗೆ 'ಸಮತಾ ಸಂಭ್ರಮ' ಸಮಾರಂಭದಲ್ಲಿ 'ಸಮತಾ ಸಾರಥಿ' ಸನ್ಮಾನ ಬಾಬಾಸಾಹೇಬ ಡಾ.ಬಿ.ಆರ್.ಅಂಬೇಡ್ಕರ್ ಸಂಸ್ಥಾಪಿಸಿದ ನಾಲ್ಕು ಮಹತ್ತರ ಸಂಘಟನೆಗಳ ಪೈಕಿ ಸೈನಿಕ ದಳವು ಇದೀಗ ದೇಶದಾತ್ಯಂತ ತನ್ನ ಶತಮಾನೋತ್ಸವವನ್ನು ಆಚರಿಸಿಕೊಳ್ಳುತ್ತಿದೆ. ಕರ್ನಾಟಕದಲ್ಲಿ ಈ ಸಂಘಟನೆಯು ನಡೆಸಿಕೊಂಡು ಬಂದಿರುವ ಹೋರಾಟಗಳು, ಚಿಂತನಾ ಕಾರ್ಯಕ್ರಮಗಳು ಮನೆಮನೆ ಮಾತಾಗಿವೆ. ನಾಡಿನ ಹಿರಿಯ ಹೋರಾಟಗಾರರಾಗಿರುವ ಡಾ.ಎಂ.ವೆಂಕಟಸ್ವಾಮಿ ಅವರು ಈ ಸಂಘಟನೆಯನ್ನು ನಾಡಿನ ಮೂಲೆ ಮೂಲೆಯಲ್ಲೂ ಸಂಘಟಿಸಿ ಅದರ ಕಾರ್ಯಕರ್ತರು ಸವಿರಾರು ಸಂಖ್ಯೆಯಲ್ಲಿದ್ದಾರೆ. ವಿಶೇಷವಾಗಿ ಡಾ. ಎಂ.ವೆಂಕಟಸ್ವಾಮಿ ಅವರು ಈ ಸಂಘಟನೆಯ ಮೂಲಕ ನಡೆಸಿದ ನೂರಾರು ಅವಿತರ ಹೋರಾಟಗಳು ನಾಡಿನ ಬಡವರ ಪರವಾಗಿ ಯಶಸ್ಸು ಗಳಿಸಿವೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರ ವಿದ್ಯಾರ್ಥಿಯಾಗಿ ನಡೆಸಿದ ಹತ್ತು ಹಲವು ಹೋರಾಟದಿಂದಾಗಿ ಇಂದಿನ ವಿದ್ಯಾರ್ಥಿ ಪೀಳಿಗೆಗೆ ಹೋರಾಟಗಳ ಮಾದರಿ ನಾಯಕರಾಗಿ ಗೋಚರಿಸಿದ್ದಾರೆ. ಇವರು ಮುನ್ನಡೆಸಿರುವ ಸಮತಾ ಸೈನಿಕ ದಳದ ಶತಮಾನೋತ್ಸವವನ್ನು ಇದೇ 24.04.2025ರಂದು ಬೆಳಗ್ಗೆ 10ಕ್ಕೆ ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಕ್ಯಾಂಪಸ್ ಆವರಣದ ಡಾ.ಹೆಚ್.ಎನ್. ಸಭಾಂಗಣದಲ್ಲಿ 'ಸಮತಾ ಸಂಭ್ರಮ' ಎಂಬು ಸಮಾರಂಭವನ್ನು ಸ್ನಾತಕೋತ್ತರ ಮತ್ತು ಸಂಶೋಧನಾ ವಿದ್ಯಾರ್ಥಿ ಒಕ್ಕೂಟದ ವತಿಯಿಂದ ಆಯೋಜಿಸಿದೆ. ಈ ಸಮಾರಂಭದಲ್ಲಿ ಡಾ.ಎಂ.ವೆಂಕಟಸ್ವಾಮಿ ಅವರಿಗೆ 'ಸಮತಾ ಸಾರಥಿ' ಎಂಬ ಸಾರ್ವಜನಿಕ ಸನ್ಮಾನವನ್ನು ನೀಡಿ ಗೌರವಿಸುತ್ತಿದ್ದೇವೆ. ಮಾನ್ಯ ಗೃಹ ಸಚಿವರಾದ ಡಾ. ಜಿ.ಪರಮೇಶ್ವರ್ ಅವರು ಈ ಕಾರ್ಯಕ್ರಮವನ್ನು ಉದ್ಘಾಟಿಸುವರು, ಬೆಂಗಳೂರು ವಿ.ವಿ.ಯ ಮಾನ್ಯ ಕುಲಪತಿಗಳಾದ ಡಾ. ಎಸ್.ಎಂ. ಜಯಕರ್ ಅವರು ಅಧ್ಯಕ್ಷತೆ ವಹಿಸುವರು. ಬೈಕ್ ರ್ಯಾಲಿಗೆ ಡಾ. ಜಿ.ಗೋವಿಂದಯ್ಯ ಚಾಲನೆ ನೀಡುವರು. ಯುವ ಚಿಂತಕ ಚಂದ್ರು ಪರಿಯಾರ್ ರವರು ಪ್ರಾಸ್ತಾವಿಕ ಭಾಷಣ ಮಾಡುವರು. ಕಾರ್ಯಕ್ರಮದ ಆಹ್ವಾನ ಪತ್ರಿಕೆಯನ್ನು ಈ ಹೇಳಿಕೆಗೆ ಲಗತ್ತಿಸಿದ್ದು ಇದರ ವಿವರಗಳು ಸ್ವಯಂವೇದ್ಯವಾಗಿವೆ. ಈ ವಿವರಗಳನ್ನು ತಮ್ಮ ಮಾಧ್ಯಮದಲ್ಲಿ ಪ್ರಕಟಿಸಬೇಕಾಗಿ ಕೋರುತ್ತೇವೆ. ವಂದನೆಗಳೊಂದಿಗೆ, (ಜಿ.ಕೆ.ಸತೀಷ್) ke ಅಧ್ಯಕ್ಷರು,ಸ್ನಾತಕೋತ್ರರ ಮತ್ತು ಸಂಶೋಧನಾ ವಿದ್ಯಾರ್ಥಿ ಒಕ್ಕೂಟ,
ಬೆಂಗಳೂರು ವಿಶ್ವವಿದ್ಯಾಲಯದ ಸ್ನಾತಕೋತ್ತರ ಮತ್ತು ಸಂಶೋಧನಾ ವಿದ್ಯಾರ್ಥಿ ಒಕ್ಕೂಟದಿಂದ ದಿನಾಂಕ: 21.01.2025ರಂದು ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಬಿಡುಗಡೆ ಮಾಡಿದ ಹೇಳಿಕೆ.
ನಾಡಿನ ಹಿರಿಯ ಹೋರಾಟಗಾರ ಮತ್ತು ಸಮತಾ ಸೈನಿಕ ದಳದ ರಾಷ್ಟ್ರೀಯ ಅಧ್ಯಕ್ಷರಾದ ಡಾ:ಎಂ.ವೆಂಕಟಸ್ವಾಮಿ ಅವರಿಗೆ 'ಸಮತಾ ಸಂಭ್ರಮ' ಸಮಾರಂಭದಲ್ಲಿ 'ಸಮತಾ ಸಾರಥಿ'
ಬಾಬಾಸಾಹೇಬ ಡಾ.ಬಿ.ಆರ್.ಅಂಬೇಡ್ಕರ್ ಸಂಸ್ಥಾಪಿಸಿದ ನಾಲ್ಕು ಮಹತ್ತರ ಸಂಘಟನೆಗಳ ಪೈಕಿ ಸೈನಿಕ ದಳವು ಇದೀಗ ದೇಶದಾತ್ಯಂತ ತನ್ನ ಶತಮಾನೋತ್ಸವವನ್ನು ಆಚರಿಸಿಕೊಳ್ಳುತ್ತಿದೆ. ಕರ್ನಾಟಕದಲ್ಲಿ ಈ ಸಂಘಟನೆಯು ನಡೆಸಿಕೊಂಡು ಬಂದಿರುವ ಹೋರಾಟಗಳು, ಚಿಂತನಾ ಕಾರ್ಯಕ್ರಮಗಳು ಮನೆಮನೆ ಮಾತಾಗಿವೆ. ನಾಡಿನ ಹಿರಿಯ ಹೋರಾಟಗಾರರಾಗಿರುವ ಡಾ.ಎಂ.ವೆಂಕಟಸ್ವಾಮಿ ಅವರು ಈ ಸಂಘಟನೆಯನ್ನು ನಾಡಿನ ಮೂಲೆ ಮೂಲೆಯಲ್ಲೂ ಸಂಘಟಿಸಿ ಅದರ ಕಾರ್ಯಕರ್ತರು ಸವಿರಾರು ಸಂಖ್ಯೆಯಲ್ಲಿದ್ದಾರೆ. ವಿಶೇಷವಾಗಿ ಡಾ. ಎಂ.ವೆಂಕಟಸ್ವಾಮಿ ಅವರು ಈ ಸಂಘಟನೆಯ ಮೂಲಕ ನಡೆಸಿದ ನೂರಾರು ಅವಿತರ ಹೋರಾಟಗಳು ನಾಡಿನ ಬಡವರ ಪರವಾಗಿ ಯಶಸ್ಸು ಗಳಿಸಿವೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರ ವಿದ್ಯಾರ್ಥಿಯಾಗಿ ನಡೆಸಿದ ಹತ್ತು ಹಲವು ಹೋರಾಟದಿಂದಾಗಿ ಇಂದಿನ ವಿದ್ಯಾರ್ಥಿ ಪೀಳಿಗೆಗೆ ಹೋರಾಟಗಳ ಮಾದರಿ ನಾಯಕರಾಗಿ ಗೋಚರಿಸಿದ್ದಾರೆ. ಇವರು ಮುನ್ನಡೆಸಿರುವ ಸಮತಾ ಸೈನಿಕ ದಳದ ಶತಮಾನೋತ್ಸವವನ್ನು ಇದೇ 24.04.2025ರಂದು ಬೆಳಗ್ಗೆ 10ಕ್ಕೆ ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಕ್ಯಾಂಪಸ್ ಆವರಣದ ಡಾ.ಹೆಚ್.ಎನ್. ಸಭಾಂಗಣದಲ್ಲಿ 'ಸಮತಾ ಸಂಭ್ರಮ' ಎಂಬು ಸಮಾರಂಭವನ್ನು ಸ್ನಾತಕೋತ್ತರ ಮತ್ತು ಸಂಶೋಧನಾ ವಿದ್ಯಾರ್ಥಿ ಒಕ್ಕೂಟದ ವತಿಯಿಂದ ಆಯೋಜಿಸಿದೆ. ಈ ಸಮಾರಂಭದಲ್ಲಿ ಡಾ.ಎಂ.ವೆಂಕಟಸ್ವಾಮಿ ಅವರಿಗೆ 'ಸಮತಾ ಸಾರಥಿ' ಎಂಬ ಸಾರ್ವಜನಿಕ ಸನ್ಮಾನವನ್ನು ನೀಡಿ ಗೌರವಿಸುತ್ತಿದ್ದೇವೆ.
ಮಾನ್ಯ ಗೃಹ ಸಚಿವರಾದ ಡಾ. ಜಿ.ಪರಮೇಶ್ವರ್ ಅವರು ಈ ಕಾರ್ಯಕ್ರಮವನ್ನು ಉದ್ಘಾಟಿಸುವರು, ಬೆಂಗಳೂರು ವಿ.ವಿ.ಯ ಮಾನ್ಯ ಕುಲಪತಿಗಳಾದ ಡಾ. ಎಸ್.ಎಂ. ಜಯಕರ್ ಅವರು ಅಧ್ಯಕ್ಷತೆ ವಹಿಸುವರು. ಬೈಕ್ ರ್ಯಾಲಿಗೆ ಡಾ. ಜಿ.ಗೋವಿಂದಯ್ಯ ಚಾಲನೆ ನೀಡುವರು. ಯುವ ಚಿಂತಕ ಚಂದ್ರು ಪರಿಯಾರ್ ರವರು ಪ್ರಾಸ್ತಾವಿಕ ಭಾಷಣ ಮಾಡುವರು. ಕಾರ್ಯಕ್ರಮದ ಆಹ್ವಾನ ಪತ್ರಿಕೆಯನ್ನು ಈ ಹೇಳಿಕೆಗೆ ಲಗತ್ತಿಸಿದ್ದು ಇದರ ವಿವರಗಳು ಸ್ವಯಂವೇದ್ಯವಾಗಿವೆ. ಈ ವಿವರಗಳನ್ನು ತಮ್ಮ ಮಾಧ್ಯಮದಲ್ಲಿ ಪ್ರಕಟಿಸಬೇಕಾಗಿ ಕೋರುತ್ತೇವೆ.

Comments
Post a Comment