ಬಿ.ಆರ್.ಅಂಬೇಡ್ಕರ್ ರವರು ಭಾರತದ ರತ್ನ ಮಾತ್ರವಲ್ಲ. ವಿಶ್ವದ ರತ್ನವಾಗಿ 1 ಹೊರಹೊಮ್ಮಿದ್ದಾರೆ. ವಿಶ್ವದ ಶೋಷಿತ ದಿನಚಳವಳಿಗಳು ಅಂಬೇಡ್ಕರ್

 ಬಿ.ಆರ್.ಅಂಬೇಡ್ಕರ್ ರವರು ಭಾರತದ ರತ್ನ ಮಾತ್ರವಲ್ಲ. ವಿಶ್ವದ ರತ್ನವಾಗಿ 1 ಹೊರಹೊಮ್ಮಿದ್ದಾರೆ. ವಿಶ್ವದ ಶೋಷಿತ ದಿನಚಳವಳಿ

ಬಿ.ಆರ್.ಅಂಬೇಡ್ಕರ್ ರವರು ಭಾರತದ ರತ್ನ ಮಾತ್ರವಲ್ಲ. ವಿಶ್ವದ ರತ್ನವಾಗಿ 1 ಹೊರಹೊಮ್ಮಿದ್ದಾರೆ. ವಿಶ್ವದ ಶೋಷಿತ ದಿನಚಳವಳಿ

ಅವರನ್ನು ತಮ್ಮ ವಿಮೋಚಕರನ್ನಾಗಿ ಆಯ್ಕೆ ಮಾಡಿಕೊಂಡಿದ್ದಾರೆ. ಅವರ ಬರಹ ಮತ್ತು ಭಾಷಣಗಳನ್ನು ಗಂಭೀರವಾಗಿ ಅಧ್ಯಯನ ಮಾಡುತ್ತಿದ್ದಾರೆ. ಆದರೆ ಅಂಬೇಡ್ಕರ್ ಜನಿಸಿದ ಭಾರತದಲ್ಲಿ ಕೆಲವು ದುಷ್ಟ ಶಕ್ತಿಗಳು ಅವರ ಹೆಸರನ್ನು ಹಿಡಿದು ವ್ಯಂಗ್ಯ ಮಾಡುತ್ತಿವೆ. ಇದಕ್ಕೆ ಇತ್ತೀಚಿನ ಉದಾಹರಣೆ ಭಾರತ ಸರ್ಕಾರದ ಬಿಜೆಪಿಯ ಗೃಹಮಂತ್ರಿ ಅಮಿತ್ ಶಾ ಸಂಸತ್ತಿನಲ್ಲಿ ಆಡಿರುವ ಉದ್ದೇಶಪೂರ್ವಕ ಮಾತುಗಳಾಗಿವೆ. ಗೌರವಾನ್ವಿತ ಪದವಿಯನ್ನು ಅಲಂಕರಿಸಿರುವ ಅಮಿತ್ ಶಾ ಪುಡಿ ರೌಡಿಯಂತೆ ದೇಶದ ಕೇಂದ್ರಸ್ಥಾನವಾದ ಸಂಸತ್ತಿನಲ್ಲಿ ಅಂಬೇಡ್ಕರ್ ಕುರಿತು ಆಡಿರುವ ಮಾತುಗಳು ಆತನ 'ವಿಷಯುಕ್ತ ಮನಸ್ಸನ್ನು' ಬಹಿರಂಗಪಡಿಸಿದೆ.

ದೆಹಲಿಯ ಸಂಸತ್ತಿನಲ್ಲಿ ಮಾತನಾಡುತ್ತಾ 'ಅಂಬೇಡ್ಕರ್... ಅಂಬೇಡ್ಕರ್... ಅಂಬೇಡ್ಕರ್... ಎಂದು ಹೇಳುವುದು ಇಂದು ಫ್ಯಾಶನ್ ಆಗಿದೆ. ಇಷ್ಟು ಬಾರಿ ದೇವರ ಹೆಸರು ಹೇಳಿದ್ದರೆ ಏಳೇಳು ಜನ್ಮಕ್ಕೂ ಸ್ವರ್ಗ | ಪ್ರಾಪ್ತವಾಗುತ್ತಿತ್ತು' ಎಂದು ಅಂಬೇಡ್ಕರ್ ಅಂಬೇಡ್ಕರ್ ಅವರಿಗೆ ಅವಮಾನ ಮಾಡಿರುವ ಅಮಿತ್ ಶಾ ಸ್ವಲ್ಪವೂ ಹಿಂಜರಿಕೆ ಇಲ್ಲದೆ ತನ್ನ ಮಾತುಗಳನ್ನು ಸಮರ್ಥಿಸಿಕೊಂಡಿದ್ದಾನೆ. ಈತನ ದೇಶದ್ರೋಹಿ ಮಾತುಗಳನ್ನು ಖಂಡಿಸಬೇಕಾಗಿದ್ದ ದೇಶದ ಪ್ರಧಾನಿ ನರೇಂದ್ರ ಮೋದಿ ಆತನ ಬೆನ್ನಿಗೆ ನಿಂತಿದ್ದಾರೆ. ಇಂತಹವರಿಂದ ನಾವು ಪಶ್ಚಾತ್ತಾಪ ಅಥವಾ ನ್ಯಾಯವನ್ನು ಬಯಸಲು ಸಾಧ್ಯವೇ?

1 ಇವರನ್ನು ಸಾಕಿ ಸಲಹುತ್ತಿರುವ ಆರ್‌ಎಸ್‌ಎಸ್ ಮತ್ತು ಸಂಘ ಪರಿವಾರ ಈ ಹಿಂದಿನಿಂದಲೂ ಅಂಬೇಡ್ಕರ್ ಅವರನ್ನು ಹೀಯಾಳಿಸುತ್ತಲೇ ಬಂದಿದೆ. 'ಅಂಬೇಡ್ಕರ್ ಮತ್ತು ಅಸ್ಪೃಶ್ಯರ ಮೇಲೆ ಹಣವನ್ನು ಖರ್ಚು ಮಾಡುವುದೆಂದರೆ ಹಾವಿಗೆ ಹಾಲೆರದಂತೆ' ಎಂದಿದ್ದ ಹಿಂದೂ ಮಹಾ ಸಭಾದ ಮೂಂಜೆಯ ಸಂತತಿಗೆ ಅಂಬೇಡ್ಕರ್ ಎಂದಿಗೂ ಶತ್ತುವಂತೆ ಕಂಡವರೇ, ಅಂಬೇಡ್ಕರ್ ಮನುಸ್ಮತಿಯನ್ನು ಸುಟ್ಟರೆ ಈ ಸಂಘಪರಿವಾರದ ದೇಶದ್ರೋಹಿಗಳು ಮನುಸ್ಮೃತಿಯನ್ನು ಅತ್ಯಂತ ಪೂಜನೀಯ ಗ್ರಂಥವೆಂದರು. ಅಂಬೇಡ್ಕರ್ ಜಾತಿವಿನಾಶ ಎಂದರೆ ಈ ಸನಾತನಿಗಳು ಜಾತಿಪದ್ಧತಿಯೇ ಶ್ರೇಷ್ಠವೆಂದರು. ಅಂಬೇಡ್ಕರ್ ಹಿಂದೂ ಕೋಡ್ ಬಿಲ್ ಮೂಲಕ ಮಹಿಳೆಯರಿಗೆ ಘನತೆ ತರಲು ಹೊರಟರೆ ಈ ಆರ್‌ಎಸ್‌ಎಸ್ ಕಾರ್ಯಕರ್ತರು ಅಂಬೇಡ್ಕರ್ ಭಾವಚಿತ್ರವನ್ನೇ ಸುಟ್ಟು ಪ್ರತಿಭಟನೆ ಮಾಡಿದರು. ಭೀಮಾ ಕೊರೆಗಾಂವ್ ವಿಜಯೋತ್ಸವ ಆಚರಿಸಿದ ಅಂಬೇಡ್ಕರ್ ಅವರನ್ನು 'ವಿಕೃತ' ಎಂದು ಕರೆದ ಪಾಪಿಗಳು ಈ ನೀಚರು. ಇಂತಹ ಅಂಬೇಡ್ಕರ್ ದ್ರೋಹಿಗಳು ಎಂದಾದರು ಅವರನ್ನು ಎದೆಗೆ ಹಾಕಿಕೊಳ್ಳುವುದುಂಟೆ? ಅಂಬೇಡ್ಕರ್ ಪ್ರಜ್ಞೆಯ ದಲಿತರನ್ನು ಅಪ್ಪಿಕೊಳ್ಳುವುದುಂಟುದಲ್ಲವೇ ಇಲ್ಲ. ಅಂಬೇಡ್ಕರ್ ಎಂದರೆ ಇವರಿಗೆ ದುಃಸ್ವಪ್ನ, ಹಾಗಾಗಿ ಅವರನ್ನು ವ್ಯಂಗ್ಯವಾಡುತ್ತಿದ್ದಾರೆ. ಇವರ ತಾಳಕ್ಕೆ ತಕ್ಕಂತೆ ಕುಣಿಯುವ ದಲಿತ ನಾಯಕರನ್ನೂ ಸಾಕಿಕೊಂಡಿದ್ದಾರೆ. ಪಾಪ! ಅಂತಹವರಿಗೆ ಇಂದಲ್ಲ ನಾಳೆ ಈ ದಲಿತದ್ರೋಹಿಗಳ ಬಣ್ಣ ತಿಳಿದೇ ತಿಳಿಯುತ್ತದೆ.

1970ರ ದಶಕದಲ್ಲಿ ದೇಶಾದ್ಯಂತ ದಲಿತ ಸಂಘರ್ಷ ಸಮಿತಿಯಂತೆ ದಲಿತ ಚಳವಳಿಯು ಸಿಡಿದೆದ್ದಿತು. ಈ ವಿದ್ಯಮಾನದಿಂದಾಗಿ ಭಾರತದ ಪಟ್ಟಭದ್ರ ಮನುವಾದಿಗಳು ಬೆಚ್ಚಿಬಿದ್ದರು ಅಂಬೇಡ್ಕ‌ರವರ ಬರಹ ಮತ್ತು ಭಾಷಣಗಳು ಮನೆ-ಮನ ತಲುಪಿದವು. ಸಾಮಾಜಿಕ ಹೆವಾಗಿ ಅಂಬೇಡ್ಕ‌ರ್ ಚಿಂತನೆ ಬೇಕಾದ್ಯಂತ ಹರಡಿತು. ಮೇಲಾತಿ-ಮೇಲ್ವರ್ಗದ ಯಜಮಾನಕೆ ಯಾಜಕೀಯವಾಗಿ ಅಂಬೇಡ್ಕಂಡು ಒಟ್ ಬ್ಲಾಕ್ ರಾಜಕಾರಣ ಮಾಡುವವರು ಒಂದೆಡೆ ಬೆಚ್ಚಿಬಿದ್ದರೆ ಮತ್ತೊಂದು ಕಡೆ ಕೋಮುವಾದಿ ರಾಜಕಾರಣ ಮಾಡುವವರು ಬೆಚ್ಚಿಬಿದ್ದರು. ಇದುವರೆಗೆ ಕಾಪಾಡಿಕೊಂಡು ಬಂದಿರುವ ಬ್ರಾಹ್ಮಣ್ಯ ಬುನಾದಿಯ ಜಾತಿಪದ್ಧತಿಯು ಅದಲ್ಲಿ ಅಲುಗಾಡುತ್ತದೆಯೋ ಎಂದು ಚಿಂತೆಗೀಡಾದರು. ದಲಿತರನ್ನು ಓಲೈಸಿಕೊಂಡು ಜಾತಿಪದ್ಧತಿಯನ್ನು ಉಳಿಸಿಕೊಳ್ಳುವ ಸಂಚು ರೂಪಿಸಿದರು. ಈ ಸಂಚಿನ ಭಾಗವಾಗಿಯೇ ನಿರಂತರವಾಗಿ ಅಂಬೇಡ್ಕರ್-ಫಲಿತ ದ್ರೋಹಿಗಳಾಗಿರುವ ಆರ್‌ಎಎಸ್-ಬಿಜೆಪಿ ದಲಿತರನ್ನು ಬಲೆಗೆ ಹಾಕಿಕೊಳ್ಳಲು ಅಂಬೇಡ್ಕರ್ ಆರಾಧನೆ ಆರಂಭಿಸಿತು, ಪಂಚತೀರ್ಥವೆಂಬ ನಾಟಕವಾಡಿತು. `ಬಾಬಾಸಾಹೇಬ್' ಎಂದು ಬಾಯಿ ತುಂಬ ಕರೆಯಿತು. ಆದರೆ ಇದೆಲ್ಲವೂ ದಲಿತರನ್ನು ಬಲೆಗೆ ಹಾಕಿಕೊಳ್ಳುವ ಸಂಚುಗಳೆಂದು ತಿಳಿಯಲು ಬಹಳ ದಿನ ಬೇಕಾಗಲಿಲ್ಲ. ಜಾತಿವಿಷದಿಂದ ತಪ್ಪಿಸಿಕೊಳ್ಳಲು ಮತಾಂತರವಾಗುವ ದಲಿತರನ್ನು ಜೈಲಿಗಟ್ಟುತ್ತಾ, ಗೋ ರಾಜಕಾರಣ ಮಾಡಿ ದಲಿತರನ್ನು ಥಳಿಸುತ್ತಾ-ಕೊಲ್ಲುತ್ತಾ, ದೇಗುಲ ಪ್ರವೇಶ ಮಾಡುವ ದಲಿತರ ಜೀವಂತ ದಹನ ಮಾಡುತ್ತಾ, ತಲೆ ಒಡೆಯುತ್ತಾ, ಮೇಲ್ದಾತಿ ಹೆಣ್ಣನ್ನು ಪ್ರೀತಿ ಮಾಡಿದ್ದಕ್ಕೆ ಕೊಲ್ಲುತ್ತಾ, ವಾಚ್ ಕಟ್ಟಿದ್ದಕ್ಕೆ, ಕುದುರೆ ಹತ್ತಿದ್ದಕ್ಕೆ, ಅಂಬೇಡ್ಕರ್ ರಿಂಗ್ ಟೋನ್ ಇಟ್ಟುಕೊಂಡಿದ್ದಕ್ಕೆ ಜೀವ ತೆಗೆಯುತ್ತಾ ಸಾಗಿದ ಜಾತಿವಾದಿಗಳ ಜೊತೆಗೆ ಒಂದಲ್ಲಾ ಒಂದು ರೀತಿಯಲ್ಲಿ ಈ ಸಂಘಪರಿವಾರದ ದುಷ್ಟರು ಕೈಜೋಡಿಸಿದ್ದರು. ಒಟ್ಟಾರೆಯಾಗಿ ಹೇಳಬೇಕೆಂದರೆ ಬಿ.ಜೆ.ಪಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ನಂತರ ದಲಿತರ ಮೇಲಿನ ದೌರ್ಜನ್ಯಗಳು ಮುಗಿಲುಮುಟ್ಟಿವೆ.

2014ರಲ್ಲಿ ನರೇಂದ್ರ ಮೋದಿಯವರು ದೇಶದ ಪ್ರಧಾನಿಯಾದ ಮೇಲೆ ಇಡೀ ದೇಶವನ್ನೇ ಹಿಂಚಲನೆಗೆ ದೂಡಲಾಗಿದೆ. ಚಾತುರ್ವಣ್ರ ವೈದಿಕ ಸಿದ್ಧಾಂತದ ಪ್ರತಿಪಾದಕರಾದ ಮೋದಿ ಮತ್ತು ಅಮಿತ್ ಶಾ ಸಾಂವಿಧಾನಿಕವಾಗಿ ಮತ್ತು ಪ್ರಜಾಸತ್ತಾತ್ಮಕವಾಗಿ ಆಡಳಿತ ನಡೆಸದೆ, ಆದಾಯ ತೆರಿಗೆ ಇಲಾಖೆ(1.T), ಜಾರಿ ನಿರ್ದೇಶನಲಯ(E.D) ಮತ್ತು ಕೇಂದ್ರ ತನಿಖಾ ದಳ(CBI)ಗಳನ್ನು ಬಳಸಿಕೊಂಡು ಇಡೀ ದೇಶವನ್ನು ಭಯ ಮತ್ತು ತಲ್ಲಣಗಳಿಗೆ ದೂಡಿದ್ದಾರೆ. ಎಲ್ಲಾ ಪ್ರಜಾಸತ್ತಾತ್ಮಕ ಮತ್ತು ಸಾಂವಿಧಾನಿಕ ಸಂಸ್ಥೆಗಳನ್ನು ಮೌಲ್ಯಗಳನ್ನು ನಾಶ ಮಾಡುತ್ತಿದ್ದಾರೆ. ವಿರೋಧ ಪಕ್ಷಗಳ ನಾಯಕರನ್ನು ಗುರಿಯಾಗಿಸಿ ಸುಳ್ಳು ಮೊಕದ್ದಮೆಗಳನ್ನು ಹೂಡಿ ಕಾನೂನನ್ನು ದುರುಪಯೋಗ ಪಡಿಸಿಕೊಂಡು ಅವರನ್ನೆಲ್ಲ ಜೈಲಿಗೆ ತಳ್ಳಲಾಗುತ್ತಿದೆ. ಇಲ್ಲವೇ ಬೆದರಿಸಿ ಬಾಯಿ ಮುಚ್ಚಿಸಲಾಗುತ್ತಿದೆ.

ಕರ್ನಾಟಕದಲ್ಲಿ ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾದ ಸರ್ಕಾರವನ್ನು ಕೆಡವಲು ಪಿತೂರಿಗಳನ್ನು ಮಾಡಲಾಗುತ್ತಿದೆ. ತಮ್ಮ ಇಡೀ ಸಾರ್ವಜನಿಕ ಬದುಕಿನಲ್ಲಿ ಒಂದೇ ಒಂದು ಕಪ್ಪು ಚುಕ್ಕೆಯೂ ಇಲ್ಲದ ಸರ್ವಜನ ನಾಯಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಇಲ್ಲಸಲ್ಲದ ಆಪಾದನೆ ಮಾಡಲಾಗುತ್ತಿದೆ. ಅವರಿಗೆ ನೇರವಾಗಿ ಸಂಬಂಧವೇ ಇಲ್ಲದ ಮೂಡ ಹಗರಣದಲ್ಲಿ ಸಿಲುಕಿಸಿ ಸರ್ಕಾರವನ್ನು ಬೀಳಿಸುವ ಹುನ್ನಾರ ಮಾಡಲಾಗುತ್ತಿದೆ. ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಜಾತಿವಾದಿ-ಕೋಮುವಾದಿ ದುರಾಡಳಿತದ ವಿರುದ್ಧ ಗಟ್ಟಿಯಾಗಿ ದನಿ ಎತ್ತುತ್ತಿರುವ ಮಲ್ಲಿಕಾರ್ಜುನ ಖರ್ಗೆಯವರನ್ನು ಎದುರಿಸಲಾಗದೇ ಹೇಡಿಗಳಂತೆ ಅವರ ಮಗೆ ಪ್ರಿಯಾಂಕ್ ಖರ್ಗೆ ವಿರುದ್ಧ ಸುಳ್ಳು ಆರೋಪ ಹೊರಿಸಿ ಸ್ವಾಭಿಮಾನಿ ದಲಿತ ಯುವ ನಾಯಕರ ಬಾಯಿ

ವಾಪಸು ಮುಂದಾಗಿದೆ. ಆದರೆ ಅಂಬೇಡ್ಕರ್ ಪ್ರಜ್ಞೆಯುಳ್ಳ ದಲಿತ ಬಂದುಗಳು ಅಂತಹ ಪೊಳ್ಳು ಬೆದರಿಕೆಗೆ ಬಗ್ಗುವವರಲ್ಲ. ಅನ್ಯಾಯದ ವಿರುದ್ಧ ತಲೆಎತ್ತಿ ಹೋರಾಡುವುದು ನಮ್ಮ ರುಕ್ಕರುಟದ ಇತಿಹಾಸವಾಗಿದೆ.

ರಬುತ್ ಶಾ ಇಂದು ಬಾಬಾಸಾಹೇಬ್ ಅಂಬೇಡ್ಕರ್ ಅವರಿಗೆ ಅವಮಾನ ಮಾಡಿ ನೆಮ್ಮದಿಯ ನಿದ್ದೆಗೆ ಜೋರಿರಬಹುದು. ಆದರೆ ಆತ ಪ್ರತಿನಿಧಿಸುತ್ತಿರುವ ಬೇಡರ್ ಅವರಿಗೆ ಅವಮಾನ ಮಾದ್ಧಾಂತ, ಜಾತಿವಾದಿ- ಅಂಬೇಡ್ಕ‌ರವರಿಗೆ ಮಾಡಿದ ಅವಮಾನವನ್ನು ನಾವು ಮುಂದೆ ಮಾನ ನೆಲದಲ್ಲಿ ನನದಲ್ಲಿ ಇಟ್ಟುಕೊಳ್ಳುತ್ತೇವೆ. ಕೊಡುತ್ತೇ ಹುಳುಗಳ ಸಿದ್ಧಾಂತವನ್ನು ಬುಡಸಮೇತ ಕತುತಮಾನಗಳವರೆಗೆ ನಶದ ಮನುಷ್ಯರಿಗೆ ಕರೆ భక్తిగనకే ఉందని మవాసభా మత్తు ఆరోఎనఎగా నంతవ ప్రతిగామ ಶಕ್ತಿಗಳೊಂದಿಗೆ ಕೈಜೋಡಿಸುವುದಿಲ್ಲ ಎಂದು ಪ್ರತಿಜ್ಞೆ ಮಾಡುತ್ತೇವೆ.

ಈ ಹಿನ್ನೆಲೆಯಲ್ಲಿ ಜನವರಿ 23, 2025ರ ಗುರುವಾರ ಬೆಳಿಗ್ಗೆ 10.30ರಿಂದ ಬೆಂಗಳೂರಿನ ಫ್ರೀಡಂ ಸಾವರ್ಕನಲ್ಲಿ ರಾಜ್ಯ ಮಟ್ಟದ ಬೃಹತ್ ಪ್ರತಿಭಟನಾ ಕ್ಯಾಲಿಯನ್ನು ಹಮ್ಮಿಕೊಳ್ಳಲಾಗಿದ್ದು ಸುಮಾರು 25ರಿಂದ 30 ಸಾವಿರ ಜನರು ಪಾಲ್ಗೊಳ್ಳಲಿದ್ದಾರೆ. ದಯವಿಟ್ಟೆಯನ್ನು ವ್ಯಾಪಕ ಪ್ರಚಾರ ನೀಡಿ ಸಹಕರಿಸಬೇಕಾಗಿ ವಿನಂತಿಸುತ್ತೇವೆ.

ನಮ್ಮ ಹಕ್ಕೊತ್ತಾಯಗಳು:

ಗೃಹಮಂತ್ರಿ ಅಮಿತ್ ಶಾ ಸಂಪುಟದಿಂದ ವಜಾ ಆಗಬೇಕು ಮತ್ತು ಆತ ಮಾಡಿದ ತಪ್ಪಿಗಾಗಿ ಅಂಬೇಡ್ಕರ್ ಪ್ರತಿಮೆ ಮುಂಭಾಗ ಮಂಡಿಯೂರಿ ಕ್ಷಮೆ ಕೇಳಬೇಕು. ಅಲ್ಲಿಯವರೆಗೂ ನಮ್ಮ ಹೋರಾಟವನ್ನು ಮುಂದುವರೆಸುತ್ತೇವೆ.

ಅಹಿಂದ ಸಮುದಾಯಗಳ ಸರ್ವೋಚ್ಚ ನಾಯಕ ಹಾಗೂ ಜನಪ್ರಿಯ ಮುಖ್ಯ ಮಂತ್ರಿ ಸನ್ಮಾನ್ಯ ಸಿದ್ದರಾಮಯ್ಯ ಮತ್ತು ಸ್ವಾಭಿಮಾನಿ ದಲಿತ ಯುವ ನಾಯಕ ಪ್ರಿಯಾಂಕ್ ಖರ್ಗೆ ಅವರುಗಳನ್ನು ಸುಳ್ಳು ಮೊಕದ್ದಮೆಗಳಲ್ಲಿ ಸಿಲುಕಿಸಿ ತೇಜೋವಧೆ ಮಾಡಲು ಯತ್ನಿಸುತ್ತಿರುವ ಬಿ.ಜೆ.ಪಿ ತನ್ನ ಕುತಂತ್ರಗಳನ್ನು ಕೂಡಲೇ ನಿಲ್ಲಿಸಬೇಕು.

@ ರಾಜ್ಯದ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಕಳೆದ ಹಲವು ವರ್ಷಗಳಿಂದ ನೆನಗುದಿಗೆ ಬಿದ್ದಿರುವ ಕಾಂತರಾಜು ಆಯೋಗದ ಜಾತಿ ಜನಗಣತಿ ವರದಿಯನ್ನು ಯಾವುದೇ ನೆಪಹೇಳದೆ ಮುಂದಿನ ಸಚಿವ ಸಂಪುಟದ ಸಭೆಯಲ್ಲಿ ಕಡ್ಡಾಯವಾಗಿ ಮಂಡಿಸಿ ಅನುಷ್ಠಾನಗೊಳಿಸಬೇಕು. ದಲಿತ ಸಮುದಾಯದ ಸಮಸ್ಯೆಗಳನ್ನು ಕುರಿತು ಚರ್ಚಿಸಲು ಮುಖ್ಯ ಮಂತ್ರಿಯವರು ಕೂಡಲೇ ದಲಿತ ಸಂಘಟನೆಗಳ ಸಭೆಯನ್ನು ಕರೆಯಬೇಕು

Comments

Popular posts from this blog

ಗ್ರಾಮ ಸಹಾಯಕರ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಅನಿರ್ದಿಷ್ಠಾವಧಿ ಮುಷ್ಕರ ದಿನಾಂಕ 9/6/2025 ರಂದು ಫ್ರೀಡಂ ಪಾರ್ಕ್ ನಲ್ಲಿ ನಡೆಯುತ್ತದೆ

ಮುಳಖೇಡ, ಸೇಡಂ ತಾಲ್ಲೂಕು, ಕಲಬುರ್ಗಿ ಜಿಲ್ಲಾ ಗ್ರಾಮ ಪಂಚಾಯತ್ ಗ್ರಂಥಪಾಲಕಿ ಶ್ರೀಮತಿ ಭಾಗ್ಯವತಿ ಮಠ ಆತ್ಮಹತ್ಯೆ

Methodist Church in India Announces New Leadership, Disputes Former Bishop’s Claims