ಕಲ್ಲು ಕ್ವಾರಿ ಮತ್ತು ಸ್ಟೋನ್ ಕ್ರಷರ್ ಗಳ ಮೇಲಿನ ಓಟಿಎಸ್ ಪದ್ಧತಿ ತೆಗೆಯಲು ಅಸೋಸಿಯೇಶನ್ ಒತ್ತಾಯ.
ಕಲ್ಲು ಕ್ವಾರಿ ಮತ್ತು ಸ್ಟೋನ್ ಕ್ರಷರ್ ಗಳ ಮೇಲಿನ ಓಟಿಎಸ್ ಪದ್ಧತಿ ತೆಗೆಯಲು ಅಸೋಸಿಯೇಶನ್ ಒತ್ತಾಯ.
ಬೆಂಗಳೂರು ಡಿಸೆಂಬರ್ 9; ಕಲ್ಲು ಕ್ವಾರಿ ಮತ್ತು ಸ್ಟೋನ್ ಕ್ರಷರ್ ಗಳಿಗೆ ಓಟಿಎಸ್ ಪದ್ಧತಿ ಮೂಲಕ ತೆರಿಗೆ ವಿಧಿಸಲು ರಾಜ್ಯ ಸರ್ಕಾರ ಮುಂದಾಗಿರುವುದು ಸರಿಯಲ್ಲ ಇದರ ವಿರುದ್ಧ ಹೋರಾಟ ನಡೆಸಲಾಗುವುದು ಎಂದು ಯೂನಿಯನ್ ಆಪ್ ಕರ್ನಾಟಕ ಕ್ವಾರಿ ಮತ್ತು ಸ್ಟೋನ್ ಕ್ರಷರ್ ಓನರ್ಸ್ ಅಸೋಸಿಯೇಶನ್ ಎಚ್ಚರಿಕೆ ನೀಡಿದೆ.
ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿಂದು ನಡೆದ ಸುದ್ದಿಗೋಷ್ಢಿಯಲ್ಲಿ ಮಾತನಾಡಿದ ರಾಜ್ಯಾಧ್ಯಕ್ಷ ಸಿದ್ಧರಾಜು, ಕಲ್ಲು ಗಣಿ ಮತ್ತು ಸ್ಟೋನ್ ಕ್ರಷರ್ ಉದ್ಯಮಕ್ಕೆ ಸಂಬಂಧಿಸಿದಂತೆ ಅದಿವೇಶನದಲ್ಲಿ ತಿದ್ದುಪಡಿ ಮಸೂದೆ ತರಲು ಮುಂದಾಗಿರುವುದು ಸರಿಯಲ್ಲ, ಈಗಾಗಲೇ ರಾಜಧನ ವೇದಾಸ್ ನ ಮೂಲಕ ಸರ್ಕಾರದ ಕಾಮಗಾರಿಗಳಿಂದ ರಾಜಧನ ಭರ್ತಿಯಾಗಿದ್ದು, ಓಟಿಎಸ್ ಪದ್ಧತಿಯಂತೆ ದಂಡ ವಿಧಿಸಿ ಮಾಲೀಕರಿಗೆ ತುಂಬಲಾರದ ಹೊರೆಯನ್ನು ಭರಿಸಲು ಸಾಧ್ಯವಿಲ್ಲ,ಇದೊಂದು ಅವೈಜ್ಞಾನಿಕ ಪದ್ಧತಿಯನ್ನು ಜಾರಿತರಬಾರದು ಎಂದು ಹೇಳಿದರು.
ಕಲ್ಲುಗಣಿಗೆ ವಿಧಿಸಿದ ಐದು ಪಟ್ಟು ದಂಡವನ್ನು ವಜಾಗೊಳಿಸಿ ಹೆಕ್ಟೇರ್ ಗೆ ಐದು ಲಕ್ಷದವರೆಗೆ ದಂಡ ವಿಧಿಸಿಬೇಕು, ಕೆಎಂಎಂಸಿಆರ್ ನಿಯಮದಲ್ಲಿ ಐದು ಪಟ್ಟು ದಂಡದ ವಿಷಯವನ್ನು ತೆಗೆದು ಹೆಕ್ಟೇರ್ ಗೆ 5ಲಕ್ಷ ರೂಪಾಯಿಗಳವರೆಗೆ ದಂಡ ವಿಧಿಸಬೇಕು ಎಂದು ತಿದ್ದುಪಡಿ ಮಾಡಿ ಸರಳೀಕರಣ ಮಾಡಿಕೊಡಬೇಕು, ಈಗಾಗಲೇ ಕಲ್ಲುಗಣಿಗಳಿಂದ ರಾಜಧನ ಬಂದಿರುತ್ತದೆ ಮತ್ತೇ ದಂಡ ವಿಧಿಸುವುದು ಸರಿಯಲ್ಲ
ಎಂದು ಹೇಳಿದರು.
ಸರ್ಕಾರ ತನ್ನ ತಿದ್ದುಪಡಿ ತೀರ್ಮಾನದಿಂದ ಹಿಂದೆ ಸರಿಯದಿದ್ದರೆ ಜನವರಿ ತಿಂಗಳಲ್ಲಿ ರಾಜ್ಯದಲ್ಲಿರುವ ಎಲ್ಲ ಕ್ರಷರ್ ಗಳನ್ನು ಬಂದ್ ಮಾಡಿ ಹೋರಾಟ ನಡೆಸಲಾಗುವುದು ಎಂದು ತಿಳಿಸಿದರು.
ಅವೈಜ್ಞಾನಿಕವಾಗಿ ಸ್ಟೋನ್ ಕ್ರಷರ್ ನಿಂದ ವಿದ್ಯುಚಕ್ತಿ ಪಡೆಯುವುದನ್ನು ತಕ್ಷಣ ನಿಲ್ಲಿಸಬೇಕು,ಲಾರಿಗಳಿಗೆ ಅಳವಡಿಸಲು ಸೂಚಿಸಿದ ಜಿಪಿಎಸ್ ವ್ಯವಸ್ಥೆ ತೆಗೆಯಬೇಕು ಎಂದರು.
ರಾಜ್ಯದಲ್ಲಿ ಪಟ್ಟಾ ಭೂಮಿಯಲ್ಲಿ ಕಲ್ಲು ಗಣಿಗಾರಿಕೆ ಮಾಡುವವರಿಗೆ ಸಂಪೂರ್ಣ ರಾಜಧನ ತೆಗೆಯಬೇಕು,ಕಲ್ಲು ಗಣಿ ಗುತ್ತಿಗೆ ಅವಧಿ 30 ವರ್ಷಗಳಿಂದ 50 ವರ್ಷಕ್ಕೆ ಡೀಮ್ಡ್ ಎಕ್ಸ್ ಟೆನ್ಸ್ ನ್ ಮಾಡಬೇಕು ಎಂದು ಒತ್ತಾಯಿಸಿದರು.