ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ ‘ಶ್ರೀ ವಾಸವಿ ಕಾಂಡಿಮೆಂಟ್ಸ್’ ನ ಸದಸ್ಯರು ಪತ್ರಿಕಾಗೋಷ್ಠಿ ಹಮ್ಮಿಕೊಂಡಿದ್ದರು.

 

ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ ‘ಶ್ರೀ ವಾಸವಿ ಕಾಂಡಿಮೆಂಟ್ಸ್’ ನ ಸದಸ್ಯರು ಪತ್ರಿಕಾಗೋಷ್ಠಿ 

ಬೆಂಗಳೂರಿನ ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಡಿಸೆಂಬರ್ 27, 2024 ರಿಂದ ಜನವರಿ 5, 2025ರವರೆಗೆ ‘ಶ್ರೀ ವಾಸವಿ ಅವರೆಬೇಳೆ ಮೇಳ’ ನಡೆಯಲಿದೆ ಎಂದು ತಿಳಿಸಿದರು.

ಬೆಂಗಳೂರಿನ ಮಂದಿಗೆ ‘ಶ್ರೀ ವಾಸವಿ’ ಕಾಂಡಿಮೆಂಟ್ಸ್ ನ ಪರಿಚಯ ಇದ್ದೇ ಇರುತ್ತದೆ. ರುಚಿಕಟ್ಟು, ಅತ್ಯುತ್ತಮ ಗುಣಮಟ್ಟ ಮತ್ತು ತಾಜಾ ತಿಂಡಿ ತಿನಿಸುಗಳಿಗೇ ಹೆಸರು ವಾಸಿಯಾದ ವಾಸವಿ ಕಾಂಡಿಮೆಂಟ್ಸ್ ಕಳೆದ ಇಪ್ಪತ್ತನಾಲ್ಕು ವರ್ಷಗಳಿಂದ ವಿನೂತನವಾದ ಸಾಹಸ- ಪ್ರಯೋಗವನ್ನು ಮಾಡುತ್ತಾ ಅದರಲ್ಲಿ ಅಮೋಘ ಯಶಸ್ಸು ಕಂಡಿದೆ.

ಅದೇನೆಂದರೆ ಕಳೆದ ಇಪ್ಪತ್ತನಾಲ್ಕು ವರ್ಷಗಳಿಂದ ಬೆಂಗಳೂರಿನ ಸಜ್ಜನ್ ರಾವ್ ಸರ್ಕಲ್‌ನಲ್ಲಿ ಶ್ರೀ ವಾಸವಿ ಕಾಂಡಿಮೆಂಟ್ಸ್ನ ವತಿಯಿಂದ ಅವರೇಕಾಯಿ ಮೇಳವನ್ನು ಆಯೋಜಿಸಲಾಗುತ್ತಿದೆ. ಇಲ್ಲಿ ಅವರೇಕಾಯಿಯಿಂದ ತಯಾರಾದ ಇಡ್ಲಿ, ದೋಸೆ, ಪಾಯಸ, ಚಕ್ಕುಲಿ, ನಿಪ್ಪಟ್ಟು, ಸಿಹಿ, ಖಾರ ಪದಾರ್ಥಗಳು ಸೇರಿದಂತೆ ಸುಮಾರು ನೂರು ಬಗೆಯ ತಿಂಡಿ, ತಿನಿಸುಗಳು, ರುಚಿಕಟ್ಟಾದ ಖಾದ್ಯಗಳು ಗ್ರಾಹಕರಿಗೆ ಲಭ್ಯವಾಗುತ್ತಿದೆ. ಹೀಗಾಗಿ ಬೆಂಗಳೂರಿನ ಬಹಗಳಷ್ಟು ಜನ ಈ ವಾರ್ಷಿಕ ಅವರೇಕಾಯಿ ಮೇಳಕ್ಕಾಗಿ ಕಾತರಿಸುವಂತಾಗಿದೆ. ಬಸವನಗುಡಿ ನ್ಯಾಷನಲ್ ಕಾಲೇಜ್ ಮೈದಾನದಲ್ಲಿ ಡಿಸೆಂಬರ್ 27, 2024 ರಿಂದ ಜನವರಿ 5, 2025ರ ತನಕ ಈ ಅದ್ದೂರಿ ಮೇಳ ನಡೆಯಲಿದ್ದು, ಎಂದಿನಂತೆ ಬೆಳಿಗ್ಗೆ 10ರಿಂದ 10ರ ತನಕ ಅಂಗಡಿ ತೆರೆದಿರುತ್ತದೆ. ಸಂಜೆ ತರಿಂದ ರಾತ್ರಿ 10ರ ತನಕ ಮಾತ್ರ ಕವಿಶೇಷ ಖಾದ್ಯಗಳಾದ ದೋಸೆ, ವಡೆ ಇತ್ಯಾದಿಗಳು ದೊರೆಯಲಿವ

ಮಾಗಡಿ ತಾಲೂಕಿನಲ್ಲಿ ರೈತರು ಬೆಳೆದ ಅವರೇಕಾಯಿಯನ್ನು ‘ವಾಸವಿ ಕಾಂಡಿಮೆಂಟ್ಸ್’ ನೇರವಾಗಿ ಖರೀದಿಸುತ್ತದೆ. ಇಲ್ಲಿ ಯಾವುದೇ ಮಧ್ಯವರ್ತಿಗಳ ಪ್ರವೇಶವಿಲ್ಲದೇ, ನೇರವಾಗಿ ಬೆಳೆಗಾರರ ಮನೆಬಾಗಿಲಿಗೇ ಹೋಗಿ ಅವರೇಕಾಯಿ ಖರೀದಿಸುವುದರಿಂದ ರೈತರಿಗೆ ಮಾರುಕಟ್ಟೆಯಲ್ಲಿ ಸಿಗುವ ಲಾಭಕ್ಕಿಂತ ಹೆಚ್ಚು. ಮೊತ್ತ ಕೈಸೇರುತ್ತದೆ. ಇದರಿಂದ ಕಷ್ಟಪಟ್ಟು ಅವರೇಕಾಯಿ ಬೆಳೆದ ರೈತಬಾಂದವರು ತಮ್ಮ ಶ್ರಮಕ್ಕೆ ತಕ್ಕ ಪ್ರತಿಫಲವನು, ಹೊಂದಿ ಸಂತೃಪ್ತರಾಗುತ್ತಿದ್ದಾರೆ.

Comments

Popular posts from this blog

Methodist Church in India Announces New Leadership, Disputes Former Bishop’s Claims

ಬೆಂಗಳೂರಿನಲ್ಲಿ ಡಿಸೆಂಬರ್ 14, 15ರಂದು ಮೂರನೇ ಆವೃತ್ತಿಯ ಜಾಗತಿಕ ಯೋಗ ಶೃಂಗ

BHARATIYA JAIN SANGHATANA Women’s Wing, Bengaluru Chapter PRESENTS”VANDE MATARAM”The Pride of Nation