ಅಲೈನ್ಸ್ ಕ್ಲಬ್ ಇಂಟರ್ನ್ಯಾಷನಲ್ ಇದೊಂದು ಸ್ವದೇಶದ್ದೇ ಆದ ಅಂತರಾಷ್ಟ್ರೀಯ ಸೇವಾ ಸಂಸ್ಥೆ. 2008ರಲ್ಲಿ ಭಾರತದಲ್ಲಿ ಸ್ಥಾಪನೆಯಾಗಿ
ಅಲೈನ್ಸ್ ಕ್ಲಬ್ ಇಂಟರ್ನ್ಯಾಷನಲ್ ಇದೊಂದು ಸ್ವದೇಶದ್ದೇ ಆದ ಅಂತರಾಷ್ಟ್ರೀಯ ಸೇವಾ ಸಂಸ್ಥೆ. 2008ರಲ್ಲಿ ಭಾರತದಲ್ಲಿ ಸ್ಥಾಪನೆಯಾಗಿ
ಅಲೈನ್ಸ್ ಕ್ಲಬ್ ಇಂಟರ್ನ್ಯಾಷನಲ್ ಇದೊಂದು ಸ್ವದೇಶದ್ದೇ ಆದ ಅಂತರಾಷ್ಟ್ರೀಯ ಸೇವಾ ಸಂಸ್ಥೆ. 2008ರಲ್ಲಿ ಭಾರತದಲ್ಲಿ ಸ್ಥಾಪನೆಯಾಗಿ ಇದೀಗ 22 ದೇಶಗಳಲ್ಲಿ ನೆಲೆಗೊಂಡಿದೆ. ಜಗತ್ತಿನಾದ್ಯಂತ ಸುಮಾರು ಒಂದು ಲಕ್ಷಕ್ಕೂ ಹೆಚ್ಚು ಸದಸ್ಯರನ್ನು ಹೊಂದಿರುವ ಈ ಸಂಸ್ಥೆ 2500ಕ್ಕೂ ಹೆಚ್ಚು ಕ್ಲಬ್ ಗಳನ್ನು ಹಾಗೂ ನೂರು ಜಿಲ್ಲೆಗಳನ್ನು ಹೊಂದಿದೆ ಅತಿ ವೇಗವಾಗಿ ಬೆಳೆಯುತ್ತಿರುವ ಈ ಸಂಸ್ಥೆ ಜಗತ್ತಿನಾದ್ಯಂತ ಜನರನ್ನು ಒಂದುಗೂಡಿಸುವದರ ಜೊತೆಗೆ ಬಡವರಿಗೆ, ವಿದ್ಯಾರ್ಥಿಗಳಿಗೆ, ರೋಗಿಗಳಿಗೆ, ಅಸಹಾಯಕರಿಗೆ ಅಗತ್ಯ ಸೇವೆ ಹಾಗೂ ಸಹಾಯವನ್ನು ನೀಡುತ್ತಿದೆ. 2024ರಲ್ಲಿ ಬೆಂಗಳೂರಿನಲ್ಲೂ ಆರಂಭಗೊಂಡ ಈ ಸಂಸ್ಥೆಯಲ್ಲಿ ಇದೀಗ ತಲಾ 30 ಕ್ಲಬ್ ಗಳನ್ನು ಹೊಂದಿರುವ ಮೂರು ಹೊಸ ಜಿಲ್ಲೆಗಳು ಸ್ಥಾಪನೆಯಾಗಿವೆ. ಕರ್ನಾಟಕದಲ್ಲಿ ಇದೀಗ ಒಟ್ಟು ಐದು ಜಿಲ್ಲೆಗಳಿವೆ.
ಎಷ್ಟೋ ಜನರಿಗೆ ಸೇವೆ ಮಾಡುವ ಅಭಿಲಾಷೆ, ಹಂಬಲ, ತುಡಿತ ಇದ್ದರೂ ಸಹ ದುಬಾರಿ ಸದಸ್ಯತ್ವದ ಕಾರಣದಿಂದ ಅಂತರರಾಷ್ಟ್ರೀಯ ಸೇವಾ ಸಂಸ್ಥೆಗಳಿಗೆ ಸೇರಲು ಹಿಂಜರಿಯುತ್ತಾರೆ. ಅವರು ಸ್ವದೇಶದ್ದೇ ಆಗಿರುವ, ಅತಿ ಕಡಿಮೆ ಸದಸ್ಯತ್ವ ದರ ಹೊಂದಿರುವ, ಭಾರತೀಯ ಕರೆನ್ಸಿಯಲ್ಲೇ ವ್ಯವಹರಿಸುವ ಅಲೆಯನ್ಸ್ ಕ್ಲಬ್ ಗಳನ್ನು ಸೇರಬಹುದು. 'ಸೇವೆಯೇ ನಮ್ಮ ಸುಯೋಗ' ಎಂಬ ಧೈಯ ವಾಕ್ಯ ಹೊಂದಿರುವ ಅಲೈಯನ್ಸ್ ಸಂಸ್ಥೆಗೆ ಸೇವಾ ಮನೋಭಾವದ ಎಲ್ಲರೂ ಕೂಡ ಸೇರಿಸಬಹುದು
ಇದೀಗ ಶನಿವಾರ 14ನೇ ತಾರೀಕು ಬೆಳಿಗ್ಗೆ 10.30 ಗಂಟೆಗೆ ಮೂಡಲಪಾಳ್ಯದ ಜ್ಞಾನಸೌಧ ಸಭಾಂಗಣದಲ್ಲಿ ನಮ್ಮ ಮೆಗಾ ಪ್ರಾಂತೀಯ ಸಮ್ಮೇಳನವನ್ನು ಆಯೋಜಿಸಲಾಗಿದೆ. ಸಮ್ಮೇಳನಕ್ಕೆ ಗೋವಿಂದರಾಜ ನಗರದ ಶಾಸಕರಾದ ಶ್ರೀ ಪ್ರಿಯಾ ಕೃಷ್ಣ ಅವರು ಮುಖ್ಯ ಅತಿಥಿಗಳಾಗಿದ್ದಾರೆ. 'ಸುಯೋಗದ ಸೇವೆಗೆ ಅರೋಗ್ಯವೇ ಆಧಾರ' ಎಂಬ ವಿಷಯದ ಕುರಿತು ಡಾ. ಜೆ ಹೆಚ್ ಅಂಜನಪ್ಪನವರು ಮಾತನಾಡಲಿದ್ದಾರೆ. ಅಂತರಾಷ್ಟ್ರೀಯ ನಿರ್ದೇಶಕರಾದ ಅಲೈ ಶ್ರೀ ನಾಗರಾಜ್ ಭೈರಿಯವರು, ಜಿಲ್ಲಾ ರಾಜ್ಯಪಾಲರಾದ ಲಿಲೈ ಡಾ ವೀರ ಕೆಂಪಯ್ಯ ಅವರು ಹಾಜರಿರುತ್ತಾರೆ. ಮೂರೂ ಪ್ರಾಂತ್ಯ ಅಧ್ಯಕ್ಷರುಗಳಾದ ಅಲೈ ನೇತ್ರ ರಾಮಚಂದ್ರ, ಲಿಲೈ ವನಜ ಪುಟ್ಟಸ್ವಾಮಿ. ಅಲೈ ಬಿ ಹೆಚ್ ಪಾಪರಾಜು ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸುತ್ತಾರೆ. ಅಲ್ಲಿ ಬಹಳಷ್ಟು ಸೇವಾ ಕಾರ್ಯಗಳನ್ನು ಕೈಗೊಳ್ಳುತ್ತೇವೆ. ಕಾರ್ಯಕ್ರಮದ ನಂತರ ಭೋಜನದ ವ್ಯವಸ್ಥೆ ಇದೆ. ತಾವುಗಳು ಈ ಕಾರ್ಯಕ್ರಮಕ್ಕೆ ಹಾಜರಿದ್ದು ನಮ್ಮ ಅತಿಥ್ಯ ಸ್ವೀಕರಿಸಬೇಕಾಗಿ ವಿನಂತಿ ಹಾಗೂ ಕಾರ್ಯಕ್ರಮದ ಕುರಿತಾಗಿ ತಮ್ಮ ಪತ್ರಿಕೆಯಲ್ಲಿ ಪ್ರಕಟಿಸಬೇಕಾಗಿ ಕೋರುತ್ತೇನೆ.
Comments
Post a Comment