ಬೆಂಗಳೂರಿನಲ್ಲಿ ಡಿಸೆಂಬರ್ 14, 15ರಂದು ಮೂರನೇ ಆವೃತ್ತಿಯ ಜಾಗತಿಕ ಯೋಗ ಶೃಂಗ
ಬೆಂಗಳೂರಿನಲ್ಲಿ ಡಿಸೆಂಬರ್ 14, 15ರಂದು ಮೂರನೇ ಆವೃತ್ತಿಯ ಜಾಗತಿಕ ಯೋಗ ಶೃಂಗ
• ರೋಟರಿ ಬೆಂಗಳೂರು ಗ್ಲೋಬಲ್ ಯೋಗ ಕ್ಲಬ್, ರೋಟರಿ ಅಂತಾರಾಷ್ಟ್ರೀಯ ಜಿಲ್ಲೆ 3492 ಮತ್ತು 3191 ಸಾರಥ್ಯದಲ್ಲಿ ಆಯೋಜನೆ
• ಸ್ವಾಮಿ ವಿವೇಕಾನಂದ ಯೋಗ ಸಂಶೋಧನೆ ಮತ್ತು ಸಮಗ್ರ ಆರೋಗ್ಯ ಟ್ರಸ್ಟ್ & ಯೋಗ ಯುನಿವರ್ಸಿಟಿ ಆಫ್ ಅಮೆರಿಕಾಸ್,
ರೋಟರಿ ಬೆಂಗಳೂರು ಗ್ಲೋಬಲ್ ಯೋಗ ಕ್ಲಬ್, ರೋಟರಿ ಅಂತಾರಾಷ್ಟ್ರೀಯ ಜಿಲ್ಲೆ 3492 ಮತ್ತು 3191 ಸಾರಥ್ಯದಲ್ಲಿ ಆಯೋಜನೆ
• ಸ್ವಾಮಿ ವಿವೇಕಾನಂದ ಯೋಗ ಸಂಶೋಧನೆ ಮತ್ತು ಸಮಗ್ರ ಆರೋಗ್ಯ ಟ್ರಸ್ಟ್ & ಯೋಗ ಯುನಿವರ್ಸಿಟಿ ಆಫ್ ಅಮೆರಿಕಾಸ್, ಮಯಾಮಿ, ಫ್ಲೋರಿಡಾ ಸಹಯೋಗ
* ಜಿಕೆವಿಕೆ ಕ್ಯಾಂಪಸ್‌ನಲ್ಲಿರುವ ಇಂಟರ್ ನ್ಯಾಷನಲ್ ಕನ್ವೆನ್ಸನ್ ಸೆಂಟರ್‌ನಲ್ಲಿ ನಡೆಯಲಿರುವ ಯೋಗ ಶೃಂಗ
* 2024ರ ಯೋಗ ಶೃಂಗದ ಥೀಮ್- ಸ್ವಯಂ ಆರೈಕೆ ಮತ್ತು ಸಾಮಾಜಿಕ ಸಾಮರಸ್ಯಕ್ಕಾಗಿ ಯೋಗ
* 5000ಕ್ಕೂ ಹೆಚ್ಚು ಪ್ರತಿನಿಧಿಗಳು ಜಗತ್ತಿನ 50ಕ್ಕೂ ಹೆಚ್ಚು ದೇಶಗಳಿಂದ ಭಾಗಿ * ಕರ್ನಾಟಕದ 5000+ ಯೋಗ ಶಿಕ್ಷಕರಿಗೆ, ಥೆರಪಿಸ್ಟ್‌ಗಳಿಗೆ ಮತ್ತು ಕನ್ಸಲ್ಲೆಂಟ್‌ಗಳಿಗೆ ಉದ್ಯೋಗಾವಕಾಶಗಳ ಶೋಧಕ್ಕೆ ಯೋಗ ಶೃಂಗದ ಮೂಲಕ ಪ್ರಯತ್ನ
* ಯೋಗ ಶೃಂಗದಲ್ಲಿ ಡಾಕ್ಟರ್‌ಗಳು, ಶಿಕ್ಷಣ ತಜ್ಞರು, ಯೋಗ ಗುರುಗಳು, ವೇದ ಗುರುಗಳು ಸೇರಿದಂತೆ 50ಕ್ಕೂ ಅಧಿಕ ಸಂಪನ್ಮೂಲ ವ್ಯಕ್ತಿಗಳಿಂದ ಉಪನ್ಯಾಸ: ವೈಜ್ಞಾನಿಕ ಪ್ರಬಂಧ ಮಂಡನೆಗಳು: ಪ್ರಾಯೋಗಿಕ ಯೋಗ ತರಗತಿಗಳು: ಯೋಗದ ಮೂಲಕ ದಾಖಲೆಗಳ ನಿರ್ಮಾಣ: ಔಷಧರಹಿತ ಚಿಕಿತ್ಸೆಗಳು

ಬೆಂಗಳೂರು, ಬುಧವಾರ, ಡಿಸೆಂಬರ್ 11, 2024: ಮೂರನೇ ಆವೃತ್ತಿಯ ಜಾಗತಿಕ ಯೋಗ ಶೃಂಗ (ಜಿವೈಎಸ್) ಆಯೋಜನೆಗೆ ಬೆಂಗಳೂರು ಸಜ್ಜಾಗಿದೆ. ಯೋಗ ಮತ್ತು ಸ್ವಯಂ ಆರೈಕೆಯ ಮೂಲಕ ಪರಿಪೂರ್ಣ ಬದುಕಿನ ಆಶಯದೊಂದಿಗೆ ಸಾಮಾಜಿಕ ಸಾಮರಸ್ಯವನ್ನು ಪಸರಿಸುವ ನಿಟ್ಟಿನಲ್ಲಿ ಈ ಶೃಂಗ ಆಯೋಜನೆಗೊಂಡಿದೆ. ರೋಟರಿ ಬೆಂಗಳೂರು ಗ್ಲೋಬಲ್ ಯೋಗ ಕ್ಲಬ್ ಮತ್ತು ರೋಟರಿ ಇಂಟರ್ ನ್ಯಾಷನಲ್ ಡಿಸ್ಟ್ರಿಕ್ಟ್ 3192 & 3191 ಸಂಸ್ಥೆಗಳು ಸ್ವಾಮಿ ವಿವೇಕಾನಂದ ಯೋಗ ಸಂಶೋಧನೆ ಮತ್ತು ಪರಿಪೂರ್ಣ ಆರೋಗ್ಯ ಟ್ರಸ್ಟ್ ಹಾಗೂ ಯೋಗ ಯುನಿವರ್ಸಿಟಿ ಆಫ್ ದಿ ಅಮೆರಿಕಾಸ್ (ಮಯಾಮಿ, ಫ್ಲೋರಿಡಾ) ಸಹಯೋಗದಲ್ಲಿ ಶೃಂಗವನ್ನು ಹಮ್ಮಿಕೊಂಡಿವೆ. ಎರಡು ದಿನಗಳ ಈ ಪ್ರತಿಷ್ಠಿತ ಯೋಗ ಸಮ್ಮೇಳನವು ಬೆಂಗಳೂರಿನ ಜಿಕೆವಿಕೆ ಕ್ಯಾಂಪಸ್‌ನಲ್ಲಿರುವ ಇಂಟರ್ ನ್ಯಾಷನಲ್ ಕ ನ್ಸನ್ ಸೆಂಟರ್‌ನಲ್ಲಿ 2024ರ ಡಿಸೆಂಬರ್ 14 ಮತ್ತು 15ರಂದು ನಡೆಯಲಿದೆ. ಸಂಪ್ರದಾಯ ಮತ್ತು ನಾವೀನ್ಯತೆಯ ಮಿಶ್ರಣವಾಗಿರುವ ಈ ಕಾರ್ಯಕ್ರಮಕ್ಕೆ ಭಾರತ ಸರ್ಕಾರದ ಆಯುಷ್ ಸಚಿವಾಲಯವು ಸಹಯೋಗ ನೀಡಿದೆ.
ಎರಡು ದಿನಗಳ ಶೃಂಗದಲ್ಲಿ ಜಗತ್ತಿನ 50ಕ್ಕೂ ಅಧಿಕ ದೇಶಗಳಿಂದ 5000ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಅವರಲ್ಲಿ ಶಿಕ್ಷಣ ತಜ್ಞರು, ಯೋಗ ಗುರುಗಳು, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದ ವೈದ್ಯರು, ವೇದ ಪಂಡಿತರು ಮತ್ತು ಯೋಗ ಕುತೂಹಲಿಗಳು ಸೇರಿದ್ದಾರೆ. ಈ ವರ್ಷದ ಯೋಗ ಶೃಂಗದ ಥೀಮ್ ‘Yogu for Self-Care and Social harmony (Empowering Life)’ (ಸ್ವಯಂ ಆರೈಕೆಗಾಗಿ ಮತ್ತು ಸಾಮಾಜಿಕ ಸಾಮರಸ್ಯಕ್ಕಾಗಿ ಯೋಗ (ಬದುಕಿನ ಸಬಲೀಕರಣ) ಎಂಬುದಾಗಿದೆ. ಯೋಗದ ಮೂಲಕ ಮಾನಸಿಕ ಆರೋಗ್ಯ, ಸಾಮುದಾಯಿಕ ಸ್ವಾಸ್ಥ್ಯ ಹಾಗೂ ಸ್ವಯಂ ಸಬಲೀಕರಣದ ಆಶಯ ಇದರ ಹಿಂದಿದೆ.
ಡಿಸೆಂಬರ್ 14ರಂದು ಶೃಂಗದ ಉದ್ಘಾಟನಾ ಸಮಾರಂಭದಲ್ಲಿ ಮೇಘಾಲಯದ ರಾಜ್ಯಪಾಲರಾಗಿರುವ ಘನತೆವೆತ್ತ ಶ್ರೀ ಸಿ.ಎಚ್.ವಿಜಯಶಂಕರ್ ಅವರು ಭಾಗವಹಿಸಲಿದ್ದಾರೆ. ಯಲಹಂಕದ ಶಾಸಕ ಶ್ರೀ ಎಸ್.ಆರ್.ವಿಶ್ವನಾಥ್, ಆರ್‌ಬಿಜಿವೈ ಚಾರ್ಟರ್ ಪ್ರೆಸಿಡೆಂಟ್ ಮತ್ತು ಜಿವೈಎಸ್ 2024 ಅಧ್ಯಕ್ಷರಾದ ರೊಟೇರಿಯನ್ ಡಾ.ಯೋಗಿ ದೇವರಾಜ್ ಗುರೂಜಿ ಉಪಸ್ಥಿತರಿರಲಿದ್ದಾರೆ. ಯೋಗಾಸಕ್ತರು ಹಾಗೂ ಆಯುಷ್ ತಜ್ಞರಿಗೆ ಶೃಂಗವು ಸಮಾಜದ ಒಳಿತಿಗಾಗಿ ಯೋಗದ ಕುರಿತಾದ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಲು ವೇದಿಕೆ ಒದಗಿಸಲಿದೆ. ಉದ್ಘಾಟನಾ ಸಮಾರಂಭದಲ್ಲಿ ಜಗದ್ಗುರು ಶ್ರೀ ಶ್ರೀ ಶ್ರೀ ನಿರಂಜನಾನಂದ ಪುಂ ಮಹಾಸ್ವಾಮೀಜಿ, ಜಗದ್ಗುರು ಶ್ರೀ ಶ್ರೀ ಶ್ರೀ ಡಾ.ನಿರ್ಮಲಾನಂದನಾಥ ಮಹಾಸ್ವಾಮೀಜಿ, ಶ್ರೀ ಶ್ರೀ ಶ್ರೀ ಡಾ.ಪ್ರಿನೇತ್ರ ಮಹಾಂತ ಶಿವಯೋಗಿ ಸ್ವಾಮೀಜಿ, ಅವಧೂತ ಶ್ರೀ ಶ್ರೀ ವಿನಯ ಗುರೂಜಿ ಮುಂತಾದ ಗಣ್ಯರು ಕೂಡ

ಉದ್ಘಾಟನಾ ಸಮಾರಂಭದಲ್ಲಿ ‘ಯುವ’ ಅಂತಾರಾಷ್ಟ್ರೀಯ ತಜ್ಞ ಹಾಗೂ ದಾಸಸಾಹಿತ್ಯ ನಿಪುಣ ಡಾ.ಅರಳುಮಲ್ಲಿಗೆ ಪಾರ್ಥಸಾರಥಿ ಗುರೂಜಿ ಹಾಗೂ ಭಾರತ ಸರ್ಕಾರದ ಆಯುಷ್ ಸಚಿವಾಲಯದ ಎಂಡಿಎನ್ ವೈ ಮಾಜಿ ನಿರ್ದೇಶಕ ಡಾ.ಈಶ್ವರ ವಿ. ಬಸವರಡ್ಡಿ ಅವರು ಪ್ರಧಾನ ಭಾಷಣ ಮಾಡಲಿದ್ದಾರೆ.
ಜಿವೈಎಸ್ 2024 ಚೇರ್ಮನ್ ರೊಟೇರಿಯನ್ ಬಿ.ಎಲ್.ನಾಗೇಂದ್ರಈ ಕುರಿತು ಹೆಚ್ಚಿನ ಮಾಹಿತಿ ನೀಡಿ, ಇದು ಕೇವಲ ಒಂದು ಶೃಂಗವಲ್ಲ, ಇದೊಂದು ಯೋಗ ಚಳವಳಿ, ಇಂದಿನ ಧಾವಂತದ ಯುಗದಲ್ಲಿ ಯೋಗವು ಎಲ್ಲರ ಕೈಗೆಟಕುವಂತೆ ಮಾಡಲು ಹಾಗೂ ಅದರ ಪ್ರಸ್ತುತತೆಯನ್ನು ಎನ್ನಲರಿಗೂ ತಿಳಿಸಲು ಯೋಗಾಸಕ್ತರು, ಸಂಶೋಧಕರು ಹಾಗೂ ಯೋಗ ವೃತ್ತಿಪರರಿಗೆ ವೇದಿಕೆಯನ್ನು ಇಲ್ಲಿ ಒದಗಿಸಲಾಗುತ್ತಿದೆ. ಯೋಗವು ಹೇಗೆ ಮಾನಸಿಕ ಆರೋಗ್ಯವನ್ನು ಸುಧಾರಿಸಿ ಪರಿಪೂರ್ಣ ಮತ್ತು ಅರ್ಥಪೂರ್ಣ ಬದುಕು ಸಾಗಿಸಲು ನೆರವಾಗಲಿದೆ ಎಂಬ ಸಂದೇಶವನ್ನು ಎಲ್ಲೆಡೆ ಹರಡುವುದು ಇದರ ಉದ್ದೇಶ, ಜೊತೆಗೆ ಯೋಗ ವ್ಯಕ್ತಿಪರರಿಗೆ ಉದ್ಯೋಗಾವಕಾಶಗಳನ್ನು ದೊರಕಿಸಲು ಇಲ್ಲಿ ಪ್ರಯತ್ನಿಸಲಾಗುತ್ತದೆ’ ಎಂದು ತಿಳಿಸಿದರು.
ಜಿವೈಎಸ್ 2024 ಅಧ್ಯಕ್ಷ ಡಾ.ಯೋಗಿ ದೇವರಾಜ್ ಮಾತನಾಡಿ, ‘ಯೋಗವು ಬದುಕಿನ ತತ್ವಜ್ಞಾನವಾಗಿದೆ. ಇದು ಕೇವಲ ಆಸನಗಳಿಗೆ ಸಂಬಂಧಿಸಿದ್ದಲ್ಲ. ಬದಲಿಗೆ ಯೋಗವು ಪರಿಪೂರ್ಣ ಬದುಕಿನ ಮಾರ್ಗವನ್ನು ತೋರಿಸುತ್ತದೆ. ಜೊತೆಗೆ ಧನಾತ್ಮಕ ಚಿಂತನೆ, ಭಾವನಾತ್ಮಕ ತಾಳ್ಮೆ ಹಾಗೂ ಸ್ವಯಂ ಜಾಗೃತಿಯನ್ನು ನಮ್ಮಲ್ಲಿ ಮೂಡಿಸುತ್ತದೆ. ಈ ವರ್ಷದ ಯೋಗ ಶೃಂಗದ ಆಶಯ ‘ಸ್ವಯಂ ಆರೈಕೆ ಹಾಗೂ ಸಾಮಾಜಿಕ ಸಾಮರಸ್ಯಕ್ಕಾಗಿ ಯೋಗ’ ಎಂಬುದಾಗಿದ್ದು, ಯೋಗವು ಹೇಗೆ ನಮ್ಮೊಳಗೆ ಪ್ರಶಾಂತತೆಯನ್ನು ಮೂಡಿಸಿ, ಅದರೊಂದಿಗೆ ಸಮಾಜದಲ್ಲೂ ಸಮತೋಲನವನ್ನು ತರಲು ಯತ್ನಿಸಲಿದೆ ಎಂಬುದನ್ನು ಇದು ಹೇಳುತ್ತದೆ’ ಎಂದು ಅಭಿಪ್ರಾಯಪಟ್ಟರು.
ಜಿವೈಎಸ್ 2024ನಲ್ಲಿ ಏನೇನು ಇರಲಿದೆ?
ಎರಡು ದಿನಗಳ ಯೋಗ ಶೃಂಗವು ಯೋಗಾಸಕ್ತರು, ಯೋಗ ತಜ್ಞರು, ಶಿಕ್ಷಣ ತಜ್ಞರು, ವೈದ್ಯಕೀಯ ವೃತ್ತಿಪರರು ಹಾಗೂ ಸ್ವಾಸ್ಥ್ಯ ತಜ್ಞರಿಗೆ ತಮ್ಮ ಕೌಶಲ ಮತ್ತು ಸಂಪರ್ಕ ಹೆಚ್ಚಿಸಿಕೊಳ್ಳಲು ಉತ್ತಮ ವೇದಿಕೆಯನ್ನು ಒದಗಿಸಲಿದೆ.
ಜಾಗತಿಕ ತಣ್ಣರಿಂದ ಪ್ರಧಾನ ಭಾಷಣ: ಯೋಗ ಗುರುಗಳು, ವೇದ ಪಂಡಿತರು. ಶಿಕ್ಷಣ ತಜ್ಞರು ಹಾಗೂ ಅಂತಾರಾಷ್ಟ್ರೀಯ ಖ್ಯಾತಿಯ ವೈದ್ಯರೂ ಸೇರಿದಂತೆ 50ಕ್ಕೂ ಹೆಚ್ಚು ವಿಷಯ ತಜ್ಞರು ಯೋಗ ಮತ್ತು ಆಧುನಿಕ ಬದುಕಿನ ನಡುವೆ ಸಂಪರ್ಕ ಕಲ್ಪಿಸುವ ಬಗ್ಗೆ ಶೃಂಗದಲ್ಲಿ ಮಾತನಾಡಲಿದ್ದಾರೆ. ಜರ್ಮನಿ, ಬ್ರಿಟನ್, ರಷ್ಯಾ, ಮಲೇಷ್ಯಾ, ನೇಪಾಳ ಮತ್ತು ಆಸ್ಟ್ರೇಲಿಯಾದಿಂದ ಆಗಮಿಸಿದ ತಜ್ಞರು ಕೂಡ ಈ ವಿಷಯದಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಳ್ಳಲಿದ್ದಾರೆ.
ವೈಜ್ಞಾನಿಕ ಪ್ರಬಂಧ ಮಂಡನೆಗಳು: ಸಂಶೋಧಕರು ಹಾಗೂ ತಜ್ಞರು ಯೋಗ ಮತ್ತು ಅದರ ಪ್ರಯೋಜನಗಳ ಕುರಿತಾಗಿ ತಾವು ಮಾಡಿದ ಸಂಶೋಧನೆಗಳ ಪ್ರಬಂಧವನ್ನು ಮಂಡಿಸಲಿದ್ದಾರೆ. ಅವುಗಳಲ್ಲಿ ಯೋಗದಿಂದ ಉಂಟಾಗುವ ದೈಹಿಕ, ಭಾವನಾತ್ಮಕ ಮತ್ತು ಸಾಮಾಜಿಕ ಬದಲಾವಣೆಗಳ ಕುರಿತಾಗಿ ಸಾಕ್ಷಾಧಾರಿತ ಒಳನೋಟಗಳು ಇರಲಿವೆ.
ಸಂವಾದ ಯೋಗ ಮತ್ತು ಥೆರಪಿ ವರ್ಕತಾಪ್: ಯೋಗ ಗುರುಗಳಿಂದ ಯೋಗದ ಹೊಸ ತಾಂತ್ರಿಕತೆಗಳ ಬಗ್ಗೆ ಹಾಗೂ ಔಷಧರಹಿತ ಚಿಕಿತ್ಸೆಗಳ ಬಗ್ಗೆ ಪ್ರಾಯೋಗಿಕ ತರಗತಿಗಳು ಇರಲಿವೆ. ಇದರಲ್ಲಿ ರೇಖ, ಆಕ್ಯುಪ್ರೆಷನರ್, ರಿಪ್ಲೆಕ್ನಾಲಜಿ ಮತ್ತು ಪ್ರಾಣಿಕ್ ಹೀಲಿಂಗ್ ಕೂಡ ಸೇರಿದೆ. ಮಾನಸಿಕ ಒತ್ತಡ, ಖಿನ್ನತೆ, ಆತಂಕ ಇತ್ಯಾದಿ ತೊಂದರೆಗಳಿಗೆ ಪರ್ಯಾಯ ಪರಿಹಾರಗಳನ್ನು ಒದಗಿಸುವ ನಿಟ್ಟಿನಲ್ಲಿ ಈ ವರ್ಕಶಾಪ್ಗಳು ನಡೆಯಲಿವೆ.
ಯೋಗವಿಜ್ಞಾನದ ಕುರಿತು ಚರ್ಚೆ: ಯೋಗ ಯುನಿವರ್ಸಿಟಿ ಆಫ್ ದಿ ಅಮೆರಿಕಾಸ್ ವತಿಯಿಂದ ಸಾಕ್ಷಾಧಾರಿತ ಸಂಶೋಧನೆ ಮತ್ತು ಕಲಿಕಾ ಪದ್ಧತಿಗಳ ಕುರಿತು ವಿಶೇಷ ಮಾಹಿತಿ ನೀಡುವ ಸೆಷನ್‌ಗಳು ಇರಲಿವೆ. ಸಾಂಪ್ರದಾಯಿಕ ಮತ್ತು ಆಧುನಿಕ ವೈದ್ಯ ವಿಜ್ಞಾನಗಳ ಮಿತ್ರಣದ ಬಗ್ಗೆ ಅದರಲ್ಲಿ ಒತ್ತು ನೀಡಲಾಗುತ್ತದೆ.
ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ದಾಖಲೆ: ಶೃಂಗದಲ್ಲಿ ಮಲ್ಲಖಂಬ ಹಾಗೂ ಡೊಳ್ಳು ಕುಣಿತದ ಪ್ರದರ್ಶನವಿರಲಿದೆ. ಜೊತೆಗೆ ಅಂತಾರಾಷ್ಟ್ರೀಯ ಮಟ್ಟದ ಯೋಗ ಪಟುಗಳಿಂದ ಯೋಗ ಪ್ರದರ್ಶನ ಮತ್ತು ದಾಖಲೆ ನಿರ್ಮಾಣ ನಡೆಯಲಿದೆ.
ಆಯುಷ್ ಥೆರಪಿಗಳ ಪ್ರದರ್ಶನ: ಪ್ರತಿನಿಧಿಗಳಿಗೆ ಆಕ್ಯುಪಂಕ್ಚರ್, ಕಪ್ಪಿಂಗ್ ಥೆರಪಿ, ಮೆಡಿಕಲ್ ಆಸ್ಥಾನಮಿ ಮುಂತಾದ ಬೇರೆ ಬೇರೆ ರೀತಿಯ ಥೆರಪಿ ಮತ್ತು ಚಿಕಿತ್ಸೆಗಳನ್ನು ಪಡೆಯಲು ಅವಕಾಶವಿರಲಿದೆ.
ಯೋಗಪಟುಗಳಿಗೆ ಉದ್ಯೋಗಾವಕಾಶ: ಜಿವೈಎಸ್ 2024ರ ಪ್ರಮುಖ ಉದ್ದೇಶಗಳಲ್ಲಿ 4000-5000 ಯೋಗ ಶಿಕ್ಷಕರು, ಥೆರಪಿಸ್ಟ್‌ಗಳು ಹಾಗೂ ಕನ್ನೆಲ್ಲೆಂಟ್‌ಗಳಿಗೆ ಉದ್ಯೋಗಾವಕಾಶಗಳನ್ನು ಹುಡುಕಿಕೊಳ್ಳಲು ನೆರವಾಗುವುದೂ ಆಗಿದೆ. ಯೋಗ. ವೃತ್ತಿಪರರು ಮತ್ತು ಕಾರ್ಪೊರೇಟ್ ಕ್ಷೇತ್ರದ ನಡುವೆ ಸಂಪರ್ಕ ಕಲ್ಪಿಸುವ ಯತ್ನವನ್ನು ಯೋಗ ಶೃಂಗವು ಮಾಡಲಿದೆ.
ಸಮಾರೋಪ ಸಮಾರಂಭ ಡಿಸೆಂಬರ್ 15ರಂದು ನಡೆಯಲಿದೆ. ದೇಶದ ಪ್ರಸಿದ್ಧ ಶಿಲ್ಪಿ ಶ್ರೀ ಅರುಣ್ ಯೋಗಿರಾಜ್.
ಕರ್ನಾಟಕ ಸರ್ಕಾರದ ಕಂದಾಯ ಸಚಿವ ಶ್ರೀ ಕೃಷ್ಣಬೈರೇಗೌಡ, ಕರ್ನಾಟಕ ಸರ್ಕಾರದ ಕೃಷಿ ಸಚಿವರಾದ ಶ್ರೀ ಎನ್.ಚಲುವರಾಯಸ್ವಾಮಿ, ಕರ್ನಾಟಕ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಶ್ರೀ ದಿನೇಶ್ ಗುಂಡೂರಾವ್, ಕರ್ನಾಟಕ ಸರ್ಕಾರದ ಆಹಾರ ಮತ್ತು ನಾಗರಿಕ ಪೂರೈಕೆ ವ್ಯವಹಾರಗಳ ಸಚಿವ ಶ್ರೀ ಕೆ.ಎಚ್.ಮುನಿಯಪ್ಪ ಪಾಲ್ಗೊಳ್ಳಲಿದ್ದಾರೆ.
ನೋಂದಾಯಿತ ಪ್ರತಿನಿಧಿಗಳಿಗೆ ಯೋಗ ತಜ್ಞರು ಮತ್ತು ಇನ್ನಿತರ ಪರ್ಯಾಯ ಚಿಕಿತ್ಸಾ ತಜ್ಞರಿಂದ ಉಚಿತ ಔಷಧರಹಿತ ಚಿಕಿತ್ಸೆಗಳ ಕನ್ಸಲೇಶನ್ ಲಭ್ಯವಿರಲಿದೆ. ರೇಖ, ಅಕ್ಯುಪಂಕ್ಚರ್, ಆಕ್ಯುಪ್ರೆಷರ್, ಕಲರ್ ಥೆರಪಿ, ಫೇಸ್ ರೀಡಿಂಗ್, ಮೆಡಿಕಲ್ ಆಸ್ಥಾನಮಿ, ಮೆಡಿಕಲ್ ನ್ಯೂಮರಾಲಜಿ, ಕೈಬರಹ ವಿಶ್ಲೇಷಣೆ, ಕಪ್ಪಿಂಗ್ ಥೆರಪಿ, ಅಗ್ನಿಹೋತ್ರ, ಧ್ಯಾನ ಮುಂತಾದವುಗಳ ಬಗ್ಗೆ ಮಾಹಿತಿ ಹಾಗೂ ಪ್ರಯೋಜನವನ್ನು ಇಲ್ಲಿ ಪಡೆಯಬಹುದು.
Comments
Post a Comment