ಭಾರತೀಯ ಕಿಸಾನ್ ಸಂಘ - ಕರ್ನಾಟಕ ಪ್ರದೇಶ (ರಿ. ಪತ್ರಿಕಾ ಗೋಷ್ಠಿ
ಭಾರತೀಯ ಕಿಸಾನ್ ಸಂಘ - ಕರ್ನಾಟಕ ಪ್ರದೇಶ (ರಿ.
ಪತ್ರಿಕಾ ಗೋಷ್ಠಿ
ತಲತಲಾಂತರದಿಂದ ಬೇಸಾಯ ಮಾಡಿಕೊಂಡು ಬಂದಿರುವ ನಮ್ಮ ರೈತರ ಜಮೀನುಗಳು ವಕ್ಸ್ ಬೋರ್ಡ್ ಆಸ್ತಿಯಾಗಿ ಬದಲಾವಣೆಗೊಳ್ಳುತ್ತಿವೆ. ಇಂದು ನಮ್ಮ ಹೆಸರಿನಲ್ಲಿದ್ದ ಮನೆ, ಜಾಗ, ಜಮೀನು, ದೇವಸ್ಥಾನ, ಮಂದಿರ, ಮಠ, ನಾವು ಓದಿದ ಸರ್ಕಾರಿ ಶಾಲೆ, ಗೋಮಾಳ, ಇಷ್ಟೇಕೆ ಊರಿಗೆ ಊರೇ ಎಲ್ಲವೂ ವಕ್ಸ್ ಬೊರ್ಡ್ ಆಸ್ತಿಯಾಗಿ ಹೋಗುತ್ತಿವೆ. ಇದಕ್ಕೆಲ್ಲಾ ಕಾರಣ ಬಾಬಾ ಸಾಹೇಬ್ ಅಂಬೇಡ್ಕರ್ ರವರ ಸಂವಿಧಾನವನ್ನು ಗಾಳಿಗೆ ತೂರಿ ಕೇವಲ ಮುಸಲ್ಮಾನರ ಮತಗಳ ಓಲೈಕೆಗಾಗಿ ನಮ್ಮ ಹಿಂದಿನ ಸರ್ಕಾರಗಳು ವಕ್ಸ್ ಮಂಡಳಿಗೆ ಕೊಟ್ಟಿರುವ ಪರಮೋಚ್ಛ ಅಧಿಕಾರ.
ಪ್ರಪಂಚದ ಯಾವುದೇ ದೇಶದಲ್ಲೂ, ಅಷ್ಟೇಕೆ ಯಾವ ಮುಸಲ್ಮಾನ ದೇಶದಲ್ಲೂ ಇಲ್ಲದ ಹಾಗೂ ಡಾ||ಬಿ.ಆರ್. ಅಂಬೇಡ್ಕರ್ ರವರು ಸ್ಥಾಪಿಸಿದ ಸಂವಿಧಾನದಲ್ಲೂ ಇಲ್ಲದ ಈ ವಕ್ಸ್ ಕಾಯ್ದೆಯನ್ನು ಮೊದಲಿಗೆ ನೆಹರೂ ರವರಿಂದ ಮುಸಲ್ಮಾನರನ್ನು ಓಲೈಸಲು 1954 ರಲ್ಲಿ ಈ ವಕ್ಸ್ ಕಾಯ್ದೆಯನ್ನು ದೇಶದಲ್ಲಿ ಮೊದಲ ಬಾರಿಗೆ ತರಲಾಯಿತು. ನಂತರ 1995 ರಲ್ಲಿ ಪಿ.ವಿ.ನರಸಿಂಹರಾವ್ ರವರು ಪ್ರಧಾನ ಮಂತ್ರಿಯಾಗಿದ್ದಾಗ ಲೋಕಸಭಾ ಚುನಾವಣೆಗೆ ಮುಂಚೆ ಮುಸಲ್ಮಾನರ ಮತಗಳನ್ನು ಕೇಂದ್ರೀಕರಿಸಲು ವಕ್ಸ್ ಕಾಯ್ದೆಗೆ ಮತ್ತೆ ತಿದ್ದುಪಡಿ ತಂದು ಮುಸ್ಲಿಂ ವಕ್ಸ್ ಮಂಡಳಿಗೆ ಸರ್ವೋಚ್ಛ ಅಧಿಕಾರವನ್ನು ನೀಡಿ ಕಾನೂನಿನಿಂದ ಹೊರಗಿಡಲಾಯಿತು.
ಇದಾದ ನಂತರ ಮನಮೋಹನ್ ಸಿಂಗ್ ರವರು ಪ್ರಧಾನಿಯಾಗಿದ್ದಾಗ ಮುಸಲ್ಮಾನರ ಮತ ಬ್ಯಾಂಕನ್ನು ಮತ್ತಷ್ಟು ಗಟ್ಟಿ ಮಾಡಿಕೊಳ್ಳಲು 2014 ರ ಚುನಾವಣೆಗೆ ಮೊದಲು 2013 ರಲ್ಲಿ ಈ ಕಾಯ್ದೆಗೆ ಸೆಕ್ಷನ್ 40 ರ ಅಡಿಯಲ್ಲಿ ಮತ್ತೆ ತಿದ್ದುಪಡಿಯನ್ನು ಮಾಡಿ ದೇಶದ ಯಾವುದೇ ಆಸ್ತಿ ತನಗೆ ಬೇಕು ಅನಿಸಿದರೆ ಸಾಕು ನೆಪಮಾತ್ರಕ್ಕೆ ಒಂದು ನೋಟೀಸನ್ನು ಕೊಟ್ಟು ಆಸ್ತಿಯ ಒಡೆತನವನ್ನು ತನ್ನದಾಗಿಸುವ ಅಧಿಕಾರವನ್ನು ಈ ವಕ್ಸ್ ಮಂಡಳಿಗೆ ಕೊಡಲಾಯಿತು. ಆಸ್ತಿಯನ್ನು ಕಳೆದುಕೊಂಡ ಮೂಲ ಮಾಲೀಕರಿಗೆ ಸಂವಿಧಾನಬದ್ಧ ಯಾವುದೇ ನ್ಯಾಯಾಲಯದಲ್ಲಿ ಪ್ರಶ್ನಿಸುವ ಅಧಿಕಾರವಿಲ್ಲ. ಆ ವ್ಯಕ್ತಿ ವಿಧಿಯಿಲ್ಲದೇ ವಕ್ಸ್ ಮಂಡಳಿಯ ಹತ್ತಿರವೇ ನ್ಯಾಯ ಕೇಳಬೇಕು. ಇದು ಹೇಗೆಂದರೆ, ಉದಾಹರಣೆಗೆ ಕಳ್ಳನ ಕೈಯಲ್ಲಿ ಕೀಲಿ ಕೊಟ್ಟು ಅವನು ಮನೆ ದೋಚಿದ ಮೇಲೆ ಪೊಲೀಸರಾಗಲೀ, ನ್ಯಾಯಾಲಯವಾಗಲೀ ನಮ್ಮ ಸಹಾಯಕ್ಕೆ ರುವುದಿಲ್ಲ. ಆ ಕಳ್ಳನ ಹತ್ತಿರವೇ ಹೋಗಿ ಅಂಗಲಾಚಿ ಬೇಡಿಕೊಳ್ಳುವ ಪರಿಸ್ಥಿತಿ, ಇದೇ ನೋಡಿ ವಕ್ಸ್
ಮಂಡಳಿಗೆ ನಮ್ಮ ಸರ್ಕಾರ ಕೊಟ್ಟಿರುವ ಸವೋಚ್ಛ ಅಧಿಕಾರ. ಈಗ ವಕ್ಸ್ ಮಂಡಳಿಯ ಆಸ್ತಿ ಎಷ್ಟಿದೆ ಇದಕ್ಕೆ ಸರಿಯಾದ ಉತ್ತರವಿಲ್ಲ. ಏಕೆಂದರೆ ದೇಶಾದ್ಯಂತ ಟ್ಟು 9 ಲಕ್ಷ ಕೋಟಿಗೂ ಹೆಚ್ಚು ಮೌಲ್ಯದ ಆಸ್ತಿ ಇದೆ ಎನ್ನಲಾಗುತ್ತಿದೆ.
ಕಳೆದ ಒಂದು ತಿಂಗಳಿನಿಂದ ವಕ್ಸ್ ಮತ್ತು ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆಯ ಸಚಿವರಾದ ಮೀರ್ ಅಹಮದ್ ಖಾನ್ ರವರು ರಾಜ್ಯಾದ್ಯಂತ ಸಂಚರಿಸಿ ಅಧಿಕಾರಿಗಳ ಮೇಲೆ ಒತ್ತಡ ಹೇರಿ, ರೈತರ ಮೀನುಗಳನ್ನು ವಕ್ಸ್ ಮಂಡಳಿಯ ಹೆಸರಿಗೆ ಆರ್.ಟಿ.ಸಿ.ಯಲ್ಲಿ ನಮೂದಾಗುವಂತೆ ಮಾಡಿದ್ದಾರೆ. ಅವರೇ ಆಳಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಅಣತಿಯ ಮೇಲೆ ಈ ಕಾರ್ಯವನ್ನು ಮಾಡಿದ್ದಾರೆ. ತರ ಪರ ಎಂದು ಅಧಿಕಾರಕ್ಕೆ ಬಂದ ಮಾನ್ಯ ಸಿದ್ದರಾಮಯ್ಯರವರ ಸರ್ಕಾರ ರೈತರ ಬದುಕಿಗೆ ಕೊಳ್ಳಿ ಟ್ಟಿದೆ. ಊರಿಗೆ ಊರೇ ವಕ್ಸ್ ಆಸ್ತಿಯಾದರೆ ರೈತರು ಎಲ್ಲಿಗೆ ಹೋಗಬೇಕು. ಸಿದ್ದರಾಮಯ್ಯನವರು ತರಿಗೆ ಅನ್ಯಾವಾಗಲು ಬಿಡುವುದಿಲ್ಲ, ಬದಲಾದ ರೈತರ ಹೆಸರನ್ನು ಮತ್ತೆ ಅವರಿಗೇ ಸೇರಿಸಲು ಕ್ರಮ ಗೊಂಡಿದ್ದೇನೆ ಎಂದು ಹೇಳಿಕೆ ಕೊಟ್ಟು ಸುಮ್ಮನಾದರು. ಆದರೆ ರೈತರ ಹೆಸರಿಗೆ ಎಷ್ಟು ಬದಲಾವಣೆ ಇದೆಯೆಂದರೆ ಯಾರ ಬಳಿಯೂ ಉತ್ತರವಿಲ್ಲ. ಇದಕ್ಕೆಲ್ಲಾ ಮೂಲ ಕಾರಣವಾದ ವಕ್ಸ್ ಕಾಯ್ದೆಯನ್ನು ಮೃಗೊಳಿಸಬೇಕು, ರೈತರ, ದೇಶದ ಆಸ್ತಿ ಮತ್ತೆ ಹಿಂದಿರುಗಬೇಕು, ವಕ್ಸ್ ಬೋರ್ಡ್ ಕಾಯ್ದೆಯಿಂದ ತರಿಗೆ ಅನ್ಯಾಯವಾಗುತ್ತಿದ್ದು, ಸರ್ಕಾರದ ನಿಲುವು ಖಂಡಿಸಿ ಭಾರತೀಯ ಕಿಸಾನ್ ಸಂಘ, ಕರ್ನಾಟಕ ದೇಶ ಇವರ ವತಿಯಿಂದ ಪೂಜ್ಯ ಸ್ವಾಮೀಜಿಗಳ ನೇತೃತ್ವದಲ್ಲಿ ದಿನಾಂಕ 26.11.2024 ರಂದು ಸ್ವಾತಂತ್ರ್ಯ ಬ್ಯಾನವನದಲ್ಲಿ ಸಮಾವೇಶಗೊಂಡು ನಂತರ ವಿಧಾನಸೌಧದ ವರೆಗೆ ಪ್ರತಿಭಟನಾ ರ್ಯಾಲಿಯನ್ನು ನಡೆಸಿ Dಖ್ಯಮಂತ್ರಿಗಳಿಗೆ ಮನವಿ ಪತ್ರವನ್ನು ನೀಡಲಾಗುತ್ತದೆ.
ಮಾನ್ಯ ಮಾಧ್ಯಮ ಬಂಧುಗಳೇ, ಅನ್ನದಾತರಾದ ರೈತರಿಗೆ ಆಗುತ್ತಿರುವ ಈ ಅನ್ಯಾಯದ ವಿರುದ್ಧ ವುಗಳೂ ಸಹ ರೈತರೊಂದಿಗೆ ಕೈಜೋಡಿಸಬೇಕು ಎಂದು ಕಳಕಳಿಯ ಮನವಿ.
ಈ ಮೂಲಕ ಸರ್ಕಾರಕ್ಕೆ ವಕ್ಸ್ ಕಾಯ್ದೆಯನ್ನು ರದ್ದುಗೊಳಿಸುವಂತೆ ಆಗ್ರಹಿಸುತ್ತಿದ್ದೇವೆ. ವಂದನೆಗಳೊಂದಿಗೆ,
ಇಂತಿ ತಮ್ಮ ವಿಶ್ವಾಸಿ,
ಅ ಗೋಷ್ಠಿಯಲ್ಲಿ ಭಾಗವಹಿಸುವವರು :
(ಹಾಡ್ಯ ರಮೇಶ್ ರಾಜು)
ಸೋಮಶೇಖರ್ ಪಿ.ಎಲ್.
ತ ಪ್ರಧಾನ ಕಾರ್ಯದರ್ಶಿ
ಾರಾಯಣಸ್ವಾಮಿ
ತ ಸಂಘಟನಾ ಕಾರ್ಯದರ್ಶಿ
ನ್. ಪ್ರಕಾಶ್
ಊರು ಜಿಲ್ಲಾ ಅಧ್ಯಕ್ಷರು
ಭಾರತೀಯ ಕಿಸಾನ್ ಸಂಘ ದಕ್ಷಿಣ ಪ್ರಾಂತ
ಅಧ್ಯಕ್ಷರು
Comments
Post a Comment