ನಾಮಫಲಕದಲ್ಲಿ ಕನ್ನಡ ಕಡ್ಡಾಯ ಜಾರಿಗೆ ಬಿಬಿಎಂಪಿ ಆಡಳಿತಗಾರರು, ಮುಖ್ಯ ಆಯುಕ್ತರ ದೃಢ ಸಂಕಲ್ಪ*

 *ನಾಮಫಲಕದಲ್ಲಿ ಕನ್ನಡ  ಕಡ್ಡಾಯ ಜಾರಿಗೆ ಬಿಬಿಎಂಪಿ ಆಡಳಿತಗಾರರು, ಮುಖ್ಯ ಆಯುಕ್ತರ ದೃಢ ಸಂಕಲ್ಪ*

*ಸಾಧಕ/ ಸಾಧಕಿಯರಿಗೆ ಕರ್ನಾಟಕ ರತ್ನ ಡಾ||ಪುನೀತ್ ರಾಜ್ ಕುಮಾರ್ ಪ್ರಶಸ್ತಿ ಪ್ರಧಾನ*


ಬಿಬಿಎಂಪಿ ನೌಕರರ ಕನ್ನಡ ಸಂಘದ  ವತಿಯಿಂದ ಪಾಲಿಕೆ ಕೇಂದ್ರ ಕಛೇರಿಯ ಆವರಣದಲ್ಲಿ 69ನೇ ಕನ್ನಡ ರಾಜ್ಯೋತ್ಸವ ಅಚರಣೆ ಮತ್ತು ಸಾಧಕ/ ಸಾಧಕಿಯರಿಗೆ ಡಾ||ಪುನೀತ್ ರಾಜ್ ಕುಮಾರ್ ಪ್ರಶಸ್ತಿ ಪ್ರಧಾನ ಸಮಾರಂಭ.


 ಉದ್ಘಾಟನೆ ಮತ್ತು ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಆಡಳಿತಗಾರರಾದ  ಎಸ್.ಆರ್ ಉಮಾಶಂಕರ್, ಮುಖ್ಯ ಆಯುಕ್ತರಾದ  ತುಷಾರ್ ಗಿರಿ ನಾಥ್ ರವರು  ,ವಿಶೇಷ ಆಯುಕ್ತರಾದ, ಡಾ. ಕೆ. ಹರೀಶ್ ಕುಮಾರ್, ಅವಿನಾಶ್ ಮೆನನ್ ರಾಜೇಂದ್ರನ್, ಉಪ ಆಯುಕ್ತರಾದ ಮಂಜುನಾಥ ಸ್ವಾಮಿ, ಪ್ರಧಾನ ಅಭಿಯಂತರರಾದ ಪ್ರಹ್ಲಾದ್,ಬೆಂಗಳೂರು ವಕೀಲರ ಸಂಘದ ಅಧ್ಯಕ್ಷರಾದ ವಿವೇಕ್ ಸುಬ್ಬಾರೆಡ್ಡಿ,  ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷರಾದ ಎ.ಅಮೃತ್ ರಾಜ್, ಬಿಬಿಎಂಪಿ ನೌಕರರ ಕನ್ನಡ ಸಂಘದ ಅಧ್ಯಕ್ಷರಾದ ಸಾಯಿಶಂಕರ್ ರವರು ದೀಪ ಬೆಳಗಿಸಿ ಉದ್ಘಾಟನೆ ಮಾಡಿದರು.


*ಆಡಳಿತಗಾರರಾದ ಎಸ್.ಆರ್.ಉಮಾಶಂಕರ್ ರವರು* ಮಾತನಾಡಿ ಕರ್ನಾಟಕ ಸಂಸ್ಕೃತಿಯನ್ನು ಹಲವಾರು ವಿದೇಶಿಗರು ಹೊಗಳಿದ್ದಾರೆ. 

ಕುವೆಂಪು ಕನ್ನಡ ಸಾಹಿತ್ಯದ ಎಲ್ಲ ಪ್ರಕಾರದಲ್ಲಿ ಬರೆದರು.


ಕರ್ನಾಟಕಕ್ಕೆ  ಯಾರೇ ಬಂದರು ವಾಪಸ್ಸು ಹೋಗುವುದಿಲ್ಲ ಅಂತಹ ಉತ್ತಮ ವಾತವರಣವಿದೆ, ವಿಶ್ವದ್ಯಾಂತ ಬೆಂಗಳೂರು ಎಂದರೆ ಎಲ್ಲರು ಗುರುತಿಸುತ್ತಾರೆ.


ಬೆಂಗಳೂರು ಹೆಮ್ಮೆಯ ನಗರವಾಗಿ ಬೆಳಯುತ್ತಿದೆ, ಇದಕ್ಕೆ ಶ್ರಮಿಸುತ್ತಿರುವ ಬಿಬಿಎಂಪಿ ಅಧಿಕಾರಿ, ನೌಕರರ ಪರಿಶ್ರಮವಿದೆ.


ಮಳೆ ನಿಂತ ನಂತರ ಗುಂಡಿ ಮುಚ್ಚುವ ಕಾರ್ಯ ಮಾಡಲಾಗುವುದು. ಬಿಬಿಎಂಪಿಯು ಕನ್ನಡ ಸಂಸ್ಕೃತಿ, ಭಾಷೆ ಉಳಿಸುವಲ್ಲಿ ಕೊಡುಗೆ ನೀಡಿದೆ.


ನಾಮಫಲಕದಲ್ಲಿ ಕನ್ನಡ ಭಾಷೆ ಬಳಕೆ ಕಡ್ಡಾಯವಾಗಿ ಕಾನೂನು ಜಾರಿ ಮಾಡಲಾಗುವುದು, ಕನ್ನಡಭಿಮಾನಿಗಳು ಕಾನೂನು ಕೈಗೆತ್ತಿಕೊಳ್ಳ ಬೇಡಿ, ನಮಗೆ ಸಹಕಾರ ನೀಡಿ ಎಂದು ಹೇಳಿದರು.


*ಮುಖ್ಯ ಆಯುಕ್ತರಾದ ತುಷಾರ್ ಗಿರಿನಾಥ್* ರವರು ಮಾತನಾಡಿ ಬಿಬಿಎಂಪಿ ಅಧಿಕಾರಿ ಮತ್ತು ನೌಕರರು ಒಗ್ಗಾಟಗಿ ಬೆಂಗಳೂರು ಅಭಿವೃದ್ದಿಗೆ ಶ್ರಮಿಸುತ್ತಿದ್ದೇವೆ.


ಸಾವಿರಾರು ವರ್ಷಗಳಿಂದ ಎಲ್ಲರನ್ನು ಪ್ರೀತಿಸುವ ಗುಣ ಸಂಸ್ಕೃತಿ ಕನ್ನಡಿಗರು ಬೆಳೆಸಿಕೊಂಡಿದ್ದಾರೆ, ಕನ್ನಡ ನಾಡಿನ ಜನರ ನನಗೆ ಹೆಚ್ಚಿನ ಸಹಕಾರ ನೀಡಿದ್ದಾರೆ.

ಬೆಂಗಳೂರಿನಲ್ಲಿ ವಿದ್ಯಾವಂತರ ಸಂಖ್ಯೆ ಹೆಚ್ಚಿದೆ.  


ನಾಮಫಲಕದಲ್ಲಿ ಕನ್ನಡ ಭಾಷೆ ಶೇಕಡ 60ರಷ್ಟು ಇರಬೇಕು, ಇದನ್ನ ಸಮರ್ಪಕವಾಗಿ ಜಾರಿಗೆ ತರಲು ಜನರ ಸಹಕಾರ ನೀಡಬೇಕು.


ಕನ್ನಡ ಭಾಷೆ ನಿರಂತರ ಅಭ್ಯಾಸ ಮಾಡಬೇಕು ಇದರಿಂದ ಭಾಷೆ ಬರೆಯಲು ಸುಲಭವಾಗುತ್ತದೆ.


*ಎ.ಅಮೃತ್ ರಾಜ್* ರವರು ಮಾತನಾಡಿ ಬಿಬಿಎಂಪಿ ನೌಕರರ ಕನ್ನಡ ಸಂಘ ಪ್ರತಿವರ್ಷ ಅರ್ಥಪೂರ್ಣವಾಗಿ ಅಚರಿಸಲಾಗುತ್ತಿದೆ. ಕಾಶಿಯಲ್ಲಿ ರಾಷ್ಟ್ರ ಮಟ್ಟದಲ್ಲಿ ಕರ್ನಾಟಕ ರಾಜ್ಯೋತ್ಸವ ಮತ್ತು ನೇಪಾಳದಲ್ಲಿ ಅಂತರಾಷ್ಟ್ರೀಯ ಕರ್ನಾಟಕ ರಾಜ್ಯೋತ್ಸವ ಈ ತಿಂಗಳು ನವಂಬರ್ 16ರಂದು ಉತ್ತರಖಂಡ್ ಹರಿದ್ವಾರದ ಗಂಗಾತೀರದಲ್ಲಿ ಕರ್ನಾಟಕ ರಾಜ್ಯೋತ್ಸವ ಮಾಡಲಾಗುತ್ತಿದೆ. ನಾಡು, ನುಡಿಗೆ ಉಳಿಸಿ, ಬೆಳಸುವ ಕಾರ್ಯ ಮಾಡಲಾಗುತ್ತಿದೆ.


ಪುನೀತ್ ರಾಜ್ ಕುಮಾರ್ ಬಿಬಿಎಂಪಿ ಕೇಂದ್ರ ಕಛೇರಿಗೆ ಆಗಮಿಸಿ ಡಾ.ರಾಜ್ ಕುಮಾರ್ ರವರು ಪ್ರತಿಮೆ ಉದ್ಘಾಟನೆ ಮಾಡಿದ್ದರು, ಪುನೀತ್ ರಾಜ್ ಕುಮಾರ್ ರವರು ಬಿಬಿಎಂಪಿ ಅಧಿಕಾರಿ, ನೌಕರರ ಕನ್ನಡಭಿಮಾನದ ಬಗ್ಗೆ ಅಪಾರ ಮೆಚ್ಚುಗೆ ವ್ಯಕ್ತಪಡಿಸಿದ್ದರು.



*ಕರ್ನಾಟಕ ರತ್ನ ಡಾ||ಪುನೀತ್ ರಾಜ್ ಕುಮಾರ್ ಪ್ರಶಸ್ತಿ ಪುರಸ್ಕೃತರ ಪಟ್ಟಿ*

ಪತ್ರಕರ್ತರಾದ ಇಂದ್ರಜಿತ್ ಲಂಕೇಶ್, ಚಲನಚಿತ್ರ ರಂಗದ ಗಿರೀಜಾ ಲೋಕೇಶ್, ಅಭಿಜಿತ್, ಮಂಡ್ಯ ರಮೇಶ್, ಮಿಮಿಕ್ರಿಗೋಪಿ ಹಾಗೂ   ಡಾ. ರಾಜಶೇಖರ ಮಠಪತಿ,ಡಾ. ಸತ್ಯಮಂಗಲ ಮಹದೇವ, 

ವ.ಚ. ಚನ್ನೇಗೌಡ, ನಾ. ಶ್ರೀಧರ್, ಆರ್.ಎ. ಪ್ರಸಾದ್, ಡಾ. ಜಿ. ಸುಕುಮರನ್,ಸಿ.ಎಂ.ಶಿವಕುಮಾರ್ ನಾಯ್ಸ್, ಪತ್ರಕರ್ತರುಗಳಾದ ಶಿವರಾಜ್ ಕುಮಾರ್, ಶ್ರೀಮತಿ ದಿವ್ಯ ರಘುನಾಥ್,ಈರಣ್ಣ ಎನ್ ಶ್ರೀನಿವಾಸಲು ಜಿ.ಹೆಚ್.ಕನ್ನಡ, ಚಂದ್ರು.ರಘು, ಮುನಿರಾಜು, 

ಅವಿರಾಜ್,ವೆಂಕಟೇಶ್ಎಲ್.ಗಂಗಾಧರ್,ಚಂದ್ರಕಾಂತ, ಶ್ರೀನಿವಾಸ್,ರವಿಚಂದ್ರು ಬಿ.ವಿ.ಮಂಜುನಾಥ್ ಮತ್ತು ಬಿಬಿಎಂಪಿ ಅಧಿಕಾರಿ, ನೌಕರರಿಗೆ  ಪ್ರಶಸ್ತಿ ನೀಡಿ, ಗೌರವಿಸಲಾಯಿತು.

Comments

Popular posts from this blog

Methodist Church in India Announces New Leadership, Disputes Former Bishop’s Claims

ಬೆಂಗಳೂರಿನಲ್ಲಿ ಡಿಸೆಂಬರ್ 14, 15ರಂದು ಮೂರನೇ ಆವೃತ್ತಿಯ ಜಾಗತಿಕ ಯೋಗ ಶೃಂಗ

BHARATIYA JAIN SANGHATANA Women’s Wing, Bengaluru Chapter PRESENTS”VANDE MATARAM”The Pride of Nation