ಸಹಕಾರಿ ಸಂಸ್ಥೆಗಳ ಮೂಲಕ ಲಕ್ಷಾಂತರ ಜನರಿಗೆ ಸ್ವಯಂ ಉದ್ಯೋಗ ಕಲ್ಪಿಸಲು ಮೋದಿಯವರು ದೃಢವಾದ ವ್ಯವಸ್ಥೆಯನ್ನು ಸ್ಥಾಪಿಸಿದ್ದಾರೆ: ಅಮಿತ್ ಶಾ
ಸಹಕಾರಿ ಸಂಸ್ಥೆಗಳ ಮೂಲಕ ಲಕ್ಷಾಂತರ ಜನರಿಗೆ ಸ್ವಯಂ ಉದ್ಯೋಗ ಕಲ್ಪಿಸಲು ಮೋದಿಯವರು ದೃಢವಾದ ವ್ಯವಸ್ಥೆಯನ್ನು ಸ್ಥಾಪಿಸಿದ್ದಾರೆ: ಅಮಿತ್ ಶಾ · ತನ್ನ ವಿಸ್ತರಣೆಗಾಗಿ ಈಗ ಇಡೀ ಸಹಕಾರಿ ಕ್ಷೇತ್ರವು ಡಿಜಿಟಲ್ ಜಗತ್ತನ್ನು ಪ್ರವೇಶಿಸಲು ಸನ್ನದ್ಧವಾಗಿದೆ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ಗಳು (ಎಆರ್ಡಿಬಿ) ಮತ್ತು ಸಹಕಾರ ಸಂಘಗಳ (ಆರ್ಸಿಎಸ್) ರಿಜಿಸ್ಟ್ರಾರ್ ಕಚೇರಿಗಳ ಗಣಕೀಕರಣದ ಯೋಜನೆಯನ್ನು ಕೇಂದ್ರ ಗೃಹ ಸಚಿವ ಮತ್ತು ಸಹಕಾರ ಸಚಿವ ಅಮಿತ್ ಶಾ ಮಂಗಳವಾರದಂದು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅಮಿತ್ ಶಾ, ‘ಸಹಕಾರಿ ಸಂಸ್ಥೆಗಳ ಮೂಲಕ ಲಕ್ಷಾಂತರ ಜನರಿಗೆ ಸ್ವಯಂ ಉದ್ಯೋಗ ಕಲ್ಪಿಸಲು ಮೋದಿಯವರು ಒಂದು ದೃಢವಾದ ವ್ಯವಸ್ಥೆಯನ್ನು ಸ್ಥಾಪಿಸಿದ್ದಾರೆ’ ಎಂದು ಸ್ಪಷ್ಟಪಡಿಸಿದರು. ಈ ಯೋಜನೆಯು ಸಹಕಾರಿ ವಲಯದಲ್ಲಿ ಕಾಗದದ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಿ ದಕ್ಷತೆಯನ್ನು ಹೆಚ್ಚಿಸುತ್ತದೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರ ನಾಯಕತ್ವ ಮತ್ತು ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾರವರ ನುರಿತ ಮಾರ್ಗದರ್ಶನದಲ್ಲಿ ಸರಿಸುಮಾರು 23 ಕೋಟಿ ಜನರು ಬಡತನ ರೇಖೆಯಿಂದ ಮೇಲೆ ಬಂದಿದ್ದಾರೆ. ಇಂದು ಲಕ್ಷಾಂತರ ಮನೆಗಳಿಗೆ ಗ್ಯಾಸ್, ವಿದ್ಯುತ್, 5 ಕಿಲೋಗ್ರಾಂ ಉಚಿತ ಪಡಿತರ, ಮತ್ತು ವಿವಿಧ ಸೌಲಭ್ಯ...