ಬೆಟ್ಟಹಲಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಸನ್ಮಾನ್ಯ ಕಂದಾಯ ಸಚಿವರಾದ ಕೃಷ್ಣಭೈರೇಗೌಡರವರಿಂದ ವಿವಿಧ ಅಬಿವೃದ್ಧಿ ಕಾಮಗಾರಿಗಳ ಉದ್ಘಾಟನೆ
ಬೆಟ್ಟಹಲಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಸನ್ಮಾನ್ಯ ಕಂದಾಯ ಸಚಿವರಾದ ಕೃಷ್ಣಭೈರೇಗೌಡರವರಿಂದ ವಿವಿಧ ಅಬಿವೃದ್ಧಿ ಕಾಮಗಾರಿಗಳ ಉದ್ಘಾಟನೆ
ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದ ಚಿಕ್ಕಜಾಲ ಹೋಬಳಿ ಬೆಟ್ಟ ಹಲಸೂರು ಗ್ರಾಮ ಪಂಚಾಯಿತಿ ಅದ್ಯಕ್ಷರಾದ ನಾಗೇಶ್ ರವರ ಅಧ್ಯಕ್ಷತೆಯಲ್ಲಿ ಬೆಟ್ಟ ಹಲಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಸನ್ಮಾನ್ಯ ಕಂದಾಯ ಸಚಿವರಾದ ಕೃಷ್ಣಭೈರೇಗೌಡರ ಅಮೃತ ಹಸ್ತದಿಂದ ಗಡೇನಹಳ್ಳಿ ಗ್ರಾಮದಲ್ಲಿ ಅಂಗನವಾಡಿ ಕಟ್ಟಡ ಉದ್ಘಾಟನೆ, ಬೆಟ್ಟಹಲಸೂರು ಮತ್ತು ನಾರಾಯಣಪುರ ಗ್ರಾಮದಲ್ಲಿ ಸ್ತ್ರೀಶಕ್ತಿ ಭವನ, ಹಾಗೂ ತರುಹುಣಸೆ ಗ್ರಾಮದಲ್ಲಿ ಸ್ಕಂದನ್ ದೀಪ್ ವತಿಯಿಂದ ಏರ್ಪಡಿಸಿದ್ದ ಆರೋಗ್ಯ ಶಿಬಿರ, ಹಕ್ಕು ಪತ್ರ ವಿತರಣೆ, ವಿವಿಧ ಪಲಾನುಭವಿಗಳಿಗೆ ವಿದ್ಯುತ್ ಮೀಟರ್ ಹಾಗೂ ವಾಟರ್ ಪಿಲ್ಟರ್ ವಿತರಿಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಪಾರ್ಥಿಬನ್,ನಾರಾಯಣಸ್ವಾಮಿ,ಅಶ್ವಥ್ ನಾರಾಯಣ, ದಾನೆಗೌಡರು, ಅಶೋಕನ್, ಬೆಟ್ಟ ಹಲಸೂರು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ನಾಗೇಶ್,ಉಪಾಧ್ಯಕ್ಷರಾದ ಪ್ರವೀಣ್, ಸದಸ್ಯರು ನವೀನ್ ಗಡೇನಹಳ್ಳಿ ಸದಸ್ಯರು ಆನಂದ್, ರಾಜಣ್ಣ, ಬೆಟ್ಟ ಹಲಸೂರು,ನಾರಾಯಣಪುರ , ಗಡೇನಹಳ್ಳಿ, ತರುಹುಣುಸೆಯ. ಗ್ರಾಮಸ್ಥರು,ಗ್ರಾಮಪಂಚಾಯ್ತಿ ಸಿಬ್ಬಂದಿ ವರ್ಗದವರು, ಗ್ರಾಮದ ಮುಖಂಡರುಗಳು ಮಾಜಿ ಜಿಲ್ಲಾ ಪಂಚಾಯತ್ ಅದ್ಯಕ್ಷರುಗಳು, ಸದಸ್ಯರುಗಳು, ಮಾಜಿ ತಾಲ್ಲೂಕ್ ಪಂಚಾಯ್ತಿಯ ಅದ್ಯಕ್ಷರು, ಸದಸ್ಯರು, ಹಾಲಿ ಗ್ರಾಮ ಪಂಚಾಯಿತಿ ಸದಸ್ಯರು, ಹಾಗೂ ಕಾರ್ಯಕರ್ತರು ಭಾಗವಹಿಸುವ ಮೂಲಕ ಕಾರ್ಯಕ್ರಮ ಯಶಸ್ವಿ ಯಾಗಿ ನೆಡೆಸಿಕೊಟ್ಟರು.
ಎನ್. ಶೋಭ
ಪಬ್ಲಿಕ್ ರಿಪೋರ್ಟ್ ನ್ಯೂಸ್ ವರದಿಗಾರರು ಬೆಂಗಳೂರು ನಗರ ಜಿಲ್ಲೆ.
Comments
Post a Comment