ಎಸ್.ಯು.ಸಿ.ಐ (ಕಮ್ಯುನಿಸ್ಟ್) ಬೆಂಗಳೂರು*
*ಎಸ್.ಯು.ಸಿ.ಐ (ಕಮ್ಯುನಿಸ್ಟ್) ಬೆಂಗಳೂರು*
ಇಂದು ಎಸ್.ಯು.ಸಿ.ಐ (ಕಮ್ಯುನಿಸ್ಟ್) ಪಕ್ಷದ ಸಂಸ್ಥಾಪಕರಾದ ಕಾಮ್ರೇಢ್ ಶಿವದಾಸ್ ಘೋಷ್ ರವರ ಜನ್ಮ ಶತಮಾನೋತ್ಸವದ ಬೃಹತ್ ಐತಿಹಾಸಿಕ ಸಮಾರೋಪ ಸಮಾರಂಭವು ಕಲ್ಕತ್ತಾದ ಬ್ರಿಗೇಡ್ ಪರೇಡ್ ಮೈದಾನದಲ್ಲಿ ನಡೆಯಿತು. ದೇಶದ ಮೂಲೆಮೂಲೆಗಳಿಂದ ಭಾರತದಲ್ಲಿ ಬಂಡವಾಳಶಾಹಿ ವಿರೋಧಿ ಸಮಾಜವಾದಿ ಕ್ರಾಂತಿ ಬಯಸುವ ಎಸ್.ಯು.ಸಿ.ಐ (ಕಮ್ಯುನಿಸ್ಟ್) ಪಕ್ಷದ ಕಾರ್ಯಕರ್ತರು, ಬೆಂಬಲಿಗರು 2 ಲಕ್ಷಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರು. ಲಕ್ಷಾಂತರ ಜನರ ರ್ಯಾಲಿಗಳು ಕ್ರಾಂತಿ ಘೋಷಣೆಗಳೊಂದಿಗೆ ಬ್ರಿಗೇಡ್ ಮೈದಾನ ಸೇರಿದವು.
"ಕಾಮ್ರೇಡ್ ಶಿವದಾಸ್ ಘೋಷ್ ರವರು ನಮ್ಮ ದೇಶದಲ್ಲಿ ಹಣ, ಮೀಡಿಯಾಗಳ ಯಾವ ಬೆಂಬಲವೂ ಇಲ್ಲದೆ ಎಸ್.ಯು.ಸಿ.ಐ ಪಕ್ಷವನ್ನು ಪ್ರಾರಂಭಿಸಿದ್ದರು." ಎಂಬುದನ್ನು ನೆನೆಯುತ್ತಾ ಶಿವದಾದ್ ಘೋಷ್ ರವರು ಪ್ರಾರಂಭದ ಕಷ್ಟಮಯ ದಿನಗಳಲ್ಲಿ ಅವರ ಸಂಗಾತಿಗಳೊಂದಿಗೆ ಅನೇಕ ಕಷ್ಟಗಳ ನಡುವೆ ಪಕ್ಷವನ್ನು ಬೆಳೆಸಿದ್ದರು. ದೇಶದ ಅಸಂಖ್ಯಾತ ಜನರ ವಿಮುಕ್ತಿಗೆ ಇದೊಂದೆ ದಾರಿ ಎಂದು, ಇಡೀ ಸಮಾಜದ ಶೋಷಿತ ಕಾರ್ಮಿಕರ, ತಂದೆ ತಾಯಂದಿರ ಋಣ ತೀರಿಸಲು ತಮ್ಮದೆಲ್ಲವನ್ನು ಬಿಟ್ಟು ಕ್ರಾಂತಿಗಾಗಿ ಸಂಪೂರ್ಣ ಸಮರ್ಪಿತಗೊಂಡರು ಎಂದು ಎಸ್.ಯು.ಸಿ.ಐ ಪಕ್ಷದ ಪ್ರಧಾನ ಕಾರ್ಯದರ್ಶಿಗಳಾದ ಕಾಮ್ರೇಡ್ ಪ್ರವಾಶ್ ಘೋಷ್ ರವರು ಮೈದಾನದಲ್ಲಿ ಸೇರಿದ್ದ ಲಕ್ಷಾಂತರ ಜನರನ್ನು ಉದ್ದೇಶಿಸಿ ಮಾತನಾಡಿದರು.
"ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಗಾಂಧಿಜಿಯವರ ನೇತೃತ್ವದಲ್ಲಿ ದೊರಕಿದ ಸ್ವಾತಂತ್ರ್ಯವು ಸಂಧಾನಾತ್ಮಕವಾಗಿತ್ತು ಹಾಗೂ ಸ್ವಾತಂತ್ರ್ಯ ಸಂಗ್ರಾಮದಿಂದ ಮುಸಲ್ಮಾನರು, ದಲಿತರು, ಮಹಿಳೆಯರು ಈ ಮೂರು ಜನ ಸಮೂಹವು ಹೊರಗುಳಿಯಿತು ಎಂದು ವಿಶ್ಲೇಷಿಸುವ ಕಾ. ಶಿವದಾಸ್ ಘೋಷ್ ರವರು ಭಾರತವು ಮುಂಬರುವ ದಿನಗಳಲ್ಲಿ ಊಳಿಗಮಾನ್ಯ ಅವಶೇಷಗಳಿಂದಾಗಿ ಕೋಮು ದ್ವೇಷಕ್ಕೆ ಹೊತ್ತಿ ಉರಿಯುವುದೆಂಬ ಅವರ ಭವಿಷ್ಯವಾಣಿ ಈಗ ನಮ್ಮ ಕಣ್ಣ ಮುಂದೆ ಜರುಗುತ್ತಿರುವುದನ್ನು ನಾವು ಕಾಣುತ್ತಿದ್ದೇವೆ" ಎಂದು ಎಸ್.ಯು.ಸಿ.ಐ ನ ಪಾಲಿಟ್ ಬ್ಯೂರೊ ಸದಸ್ಯರಾದ ಕರ್ನಾಟಕದ ಕಾ. ಕೆ. ರಾಧಾಕೃಷ್ಣ ರವರು ಮಾತನಾಡಿದರು. ಮತ್ತೊಬ್ಬ ಪಾಲಿಟ್ ಬ್ಯೂರೊ ಸದಸ್ಯರಾದ ಕಾ. ಸತ್ಯವಾನ್ ರವರು ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಬಾಂಗ್ಲಾದೇಶ, ನೇಪಾಲ, ಶ್ರೀಲಂಕಾ, ಪಾಕಿಸ್ತಾನದ ಕಮ್ಯುನಿಸ್ಟ್ ಪಕ್ಷಗಳು ಕಳುಹಿಸಿರುವ ಸಂದೇಶವನ್ನು ಪಾಲಿಟ್ ಬ್ಯೂರೊ ಸದಸ್ಯರು ಕಾ. ಅಮಿತಾವ್ ಚಟರ್ಜಿ ಓದಿದರು. ಇನ್ನೂ ಅನೇಕ ಪಾಲಿಟ್ ಬ್ಯೂರೊ ಸದಸ್ಯರು ಹಾಗೂ ಕೇಂದ್ರ ಸಮಿತಿ ಸದಸ್ಯರನ್ನು ಒಳಗೊಂಡಂತೆ ಕರ್ನಾಟಕದ ರಾಜ್ಯ ಕಾರ್ಯದರ್ಶಿಗಳಾದ ಕಾ. ಕೆ. ಉಮಾ ರವರು ವೇದಿಕೆಯ ಮೇಲಿದ್ದರು.
Comments
Post a Comment