ಪಿಂಡಕೂರತಿಮ್ಮನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಸ್ಥಾನಕ್ಕೆ ಆನಂದ್ ಉಪಾಧ್ಯಕ್ಷ ಸ್ಥಾನಕ್ಕೆ ನಿಖಿತಾ ಸಾರಿಕಾ ಗೌಡ ಅವಿರೋಧ ಆಯ್ಕೆ"
ಪಿಂಡಕೂರತಿಮ್ಮನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಸ್ಥಾನಕ್ಕೆ ಆನಂದ್ ಉಪಾಧ್ಯಕ್ಷ ಸ್ಥಾನಕ್ಕೆ ನಿಖಿತಾ ಸಾರಿಕಾ ಗೌಡ ಅವಿರೋಧ ಆಯ್
"ಪಿಂಡಕೂರತಿಮ್ಮನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಸ್ಥಾನಕ್ಕೆ ಆನಂದ್ ಉಪಾಧ್ಯಕ್ಷ ಸ್ಥಾನಕ್ಕೆ ನಿಖಿತಾ ಸಾರಿಕಾ ಗೌಡ ಅವಿರೋಧ ಆಯ್ಕೆ". ದೊಡ್ಡಬಳ್ಳಾಪುರ ತಾಲ್ಲೂಕು ಪಿಂಡಕೂರತಿಮ್ಮನಹಳ್ಳಿ ಹಾಲು ಉತ್ಪಾದಕರ ಸಹಕಾರಸಂಘದ ಅಧ್ಯಕ್ಷರಾಗಿ ಆನಂದ್ ಉಪಾಧ್ಯಕ್ಷರಾಗಿ ನಿಖಿತಾಸಾರಿಕಾ ಗೌಡ ಅವಿರೋಧ ಆಯ್ಕೆಯಾದರು.ಸಂಘದ ಕಚೇರಿಯಲ್ಲಿ ನಿಗದಿಯಾಗಿದ್ದ ಚುನಾವಣೆ ಪ್ರಕ್ರಿಯೆಯಲ್ಲಿ ಇಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಅವಿರೋಧ ಆಯ್ಕೆ ಎಂದು ಚುನಾವಣಾಧಿಕಾರಿ ಮಾಧವರೆಡ್ಡಿ ಘೋಷಿಸಿದರು.ನೂತನ ಅಧ್ಯಕ್ಷರಾದ ಆನಂದ್ ಮಾತನಾಡಿ ಸಂಘದ ನಿರ್ದೇಶಕರ ಜೊತೆ ಉತ್ತಮ ಬಾಂಧವ್ಯ ಬೇಳಸಿಕೊಳ್ಳುವ ಮೂಲಕ ಸಂಘದ ಸವಲತ್ತು ದೊರಕಿಸಿಕೊಡುವ ನಿಟ್ಟಿನಲ್ಲಿ ಕೆಲಸ ಮಾಡಲು ಶ್ರಮಿಸುವುದಾಗಿ ತಿಳಿಸಿದರು.ಕೆ.ಎಂ.ಎಫ್.ನಿರ್ದೇಶಕರಾದ ಬಿ.ಸಿ.ಆನಂದ್ ಕುಮಾರ್ ಮಾತನಾಡಿ ಇತ್ತೀಚಿನ ದಿನಗಳಲ್ಲಿ ಲೋಕಸಭೆ, ವಿಧಾನಸಭೆ ಚುನಾವಣೆ ಮೀರಿದ ದೊಡ್ಡ ರಾಜಕೀಯ ಸಹಕಾರಿ ರಂಗದಲ್ಲಿ ಕಂಡು ಬರುತ್ತಿದೆ. ಆದ್ದರಿಂದ ನೂತನ ಅಧ್ಯಕ್ಷರು ರಾಜಕೀಯಕ್ಕೆ ಅವಕಾಶ ಮಾಡಿ ಕೊಡದೆ ಪ್ರಗತಿ ಪಥದಲ್ಲಿ ಮುನ್ನಡೆಸಬೇಕು ಎಂದು ಹೇಳಿದರು. ಈ ಸಂದರ್ಭದಲ್ಲಿ ಮುಖಂಡರಾದ ಮುನಿಹನುಮಯ್ಯ, ಕಸವನಹಳ್ಳಿ ಅಂಬರೀಷ್ ಅರವಿಂದ್ ಶಂಕರಗೌಡ ಅಂಬರೀಷ್, ಮುನಿ ಶಾಮಣ್ಣ, ರವಿಕುಮಾರ್ ಮತ್ತಿತರರು ಇದ್ದರು. ಆರ್. ನಾಗರಾಜು . ಪಬ್ಲಿಕ್ ರಿಪೋರ್ಟ್ ನ್ಯೂಸ್ ವರದಿಗಾರರು ಬೆಂಗಳೂರು ಗ್ರಾಮಾಂತರ ಜಿಲ್ಲೆ.
Comments
Post a Comment