ಉಪಮುಖ್ಯಮಂತ್ರಿಗಳ ಸಮ್ಮುಖದಲ್ಲಿ ಎಸ್.ಟಿ.ಸೋಮಶೇಖರ್ ಬೆಂಬಲಿಗರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ*
*ಉಪಮುಖ್ಯಮಂತ್ರಿಗಳ ಸಮ್ಮುಖದಲ್ಲಿ ಎಸ್.ಟಿ.ಸೋಮಶೇಖರ್ ಬೆಂಬಲಿಗರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ*
ಕೆಪಿಸಿಸಿ ಕಛೇರಿ: ಯಶವಂತಪುರ ವಿಧಾನಸಭಾ ಕ್ಷೇತ್ರದ ಮಾಜಿ ಮಹಾನಗರ ಪಾಲಿಕೆ ಸದಸ್ಯರುಗಳು ಮತ್ತು ಜಿಲ್ಲಾ ಪಂಚಾಯತ್ ಮತ್ತು ಗ್ರಾಮ ಪಂಚಾಯತ ಹಾಗೂ ಬಿಜೆಪಿ ಮುಖಂಡರುಗಳು ಕೆಪಿಸಿಸಿ ಅಧ್ಯಕ್ಷರು, ಉಪಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್ ರವರು ಸಮ್ಮುಖದಲ್ಲಿ ಮಾಜಿ ಮಹಾನಗರ ಪಾಲಿಕೆ ಸದಸ್ಯರುಗಳಾದ ಹೇರೋಹಳ್ಳಿ ರಾಜಣ್ಣ, ಆರ್ಯ ಶ್ರೀನಿವಾಸ್, ರಾಜ್ಯ ಒಕ್ಕಲಿಗರ ಸಂಘದ ಅಧ್ಯಕ್ಷರು, ಬಿಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷರಾದ ಡಿ.ಹನುಮಂತಯ್ಯ, ಚೋಳನಾಯನಹಳ್ಳಿ ಗ್ರಾಮ ಪಂಚಾಯಿತ್ ಸದಸ್ಯರಾದ ಆನಂದಸ್ವಾಮಿ, ರಾಜ್ಯ ಜಿಲ್ಲಾ ಕ್ರಶರ್ ಮಾಲೀಕರ ಸಂಘದ ಅಧ್ಯಕ್ಷರಾದ ಡಿ.ಸಿದ್ದರಾಜು, ಅಜ್ಜಂನಹಳ್ಳಿ ಗ್ರಾಮ ಪಂಚಾಯಿತ್ ಮಾಜಿ ಅಧ್ಯಕ್ಷರಾದ ರುದ್ರಪ್ಪ ಬಿಜೆಪಿ ಮುಖಂಡರಾದ ಹನುಮಂತೇಗೌಡ, ಚಿಕ್ಕರಾಜು, ಶಿವಮಾದಯ್ಯ, ರವರು ಸೇರ್ಪಡೆಯಾದರು.
ಶಾಸಕರುಗಳಾದ ಆನೇಕಲ್ ಶಿವಣ್ಣ,ಶ್ರೀನಿವಾಸ್, ಶರತ್ ಬಚ್ಚೇಗೌಡರವರು ಉಪಸ್ಥಿತರಿದ್ದರು.
ಡಿ.ಕೆ.ಶಿವಕುಮಾರ್ ರವರು ಮಾತನಾಡಿ ಕರ್ನಾಟಕ ರಾಜ್ಯದಲ್ಲಿ ಜನತೆಯ ಆಶೀರ್ವಾದ ಫಲದಿಂದ 136ಶಾಸಕರು ಗೆದ್ದಿದ್ದಾರೆ,1 ಪಕ್ಷೇತರ ಸದಸ್ಯರ ಬೆಂಬಲವಿದೆ.
ಎಸ್.ಟಿ.ಸೋಮಶೇಖರ್ ಬಸ್ ಹೋದ ಮೇಲೆ ಟಿಕೇಟು ತೆಗೆದುಕೊಳ್ಳಬೇಡಿ ಎಂದು ಚುನಾವಣೆ ಮುಂಚೆ ಹೇಳಿದ್ದೇ .
ಯಶವಂತಪುರ ವಿಧಾನಸಭಾ ಕ್ಷೇತ್ರದಲ್ಲಿ ಕುಡಿಯುವ ನೀರಿನ ಸಮಸ್ಯೆ ನಿವಾರಣೆ ಮಾಡಲಾಗುವುದು.
30ನೇ ತಾರೀಖಿಗೆ ಮನೆಯ ಯಾಜಮಾನಿಗೆ 2000ರೂಪಾಯಿ ಅವರ ಖಾತೆ ಹಾಕಲಾಗುವುದು.
ನಾನು ಮನನೊಂದು ಪಕ್ಷ ಬಿಟ್ಟೆ ಅದರೆ ಸಾಯುವ ಮೊದಲು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಬೇಕು ಎಂದು ಬಾಬು ಜಗಜೀವನ್ ರಾಂರವರ ಬಯಕೆಯಾಗಿತ್ತು.
ಸ್ವಾತಂತ್ರ್ಯ ತಂದುಕೊಟ್ಟ ಪಕ್ಷ ಎಂದರೆ ಕಾಂಗ್ರೆಸ್ ಪಕ್ಷ.
ಅಕ್ಬರ್ ಆಸ್ಥಾನದಲ್ಲಿ ಮಂತ್ರಿ ಬೀರ್ ಬಲ್ ಮೇಲೆ ರಾಜರು ಹೆಚ್ಚು ಪ್ರೀತಿಸುತ್ತಿದ್ದರು ಇದನ್ನ ಕಂಡ ಇನ್ನಿತರ ಮಂತ್ರಿಗಳು ರಾಜರಿಗೆ ಏನು ಅಂತ ವ್ಯಾಮೋಹ ಎಂದು ಹೇಳಿದರು.
ಅಕ್ಬರ್ ರವರು ಮಂತ್ರಿಗಳಿಗೆ ಹೇಳಿದರು ಒಂದು ಪ್ರಶ್ನೆ ಕೇಳುತ್ತೇನೆ ಅದಕ್ಕೆ ಉತ್ತರಿಸಿ ಎಂದು ಹೇಳಿದರು.
ಅಸ್ಥಾನದಲ್ಲಿ ಇದ್ದ ಎಲ್ಲ ಮಂತ್ರಿಗಳಿಗೆ ಕೈಯಲ್ಲಿ ಮನುಷ್ಯರಿಗೆ ಕೂದಲು ಯಾಕೆ ಇರುವುದಿಲ್ಲ ಎಂದು ಅಕ್ಬರ್ ರವರು ಹೇಳಿದರು.
ಇದಕ್ಕೆ ಯಾವ ಮಂತ್ರಿಗಳು ಉತ್ತರಿಸಲ್ಲಿಲ ಅದರೆ ಬೀರಬಲ್ ಅವರು ಮಾತನಾಡಿ ಮಹಾರಾಜರೇ ತಾವು ದಾನ ಕೊಟ್ಟು, ಕೊಟ್ಟು ಕೈ ಸವೆದು ಹೋಗಿದೆ, ದಾನ ನಾನು ತೆಗೆದುಕೊಂಡು ನನ್ನ ಕೈ ಸವೆಸದು ಅದರೆ ಅವರೆಲ್ಲ ನಮ್ಮ ನಿಮ್ಮ ದಾನದ ಕುರಿತು ಹೊಟ್ಟೆ ಉರಿದುಕೊಂಡು ಅವರ ಕೈ ಹಿಸುಕಿಕೊಂಡು ಸವೆದು ಹೋಗಿದೆ .
ನಮ್ಮ ಅಭಿವೃದ್ದಿ ಕಂಡು ಬಿಜೆಪಿ, ಜೆಡಿಎಸ್ ಕಥೆನು ಅಷ್ಟೆ, ಹೊಟ್ಟೆಯುರಿಯಿಂದ ಕೈ,ಕೈ ಹಿಸುಕಿಕೊಳ್ಳುತ್ತಿದ್ದಾರೆ ಎಂದು ಹೇಳಿದರು.
Comments
Post a Comment