ಪ್ರಧಾನಿ,ರಾಷ್ಟ್ರಪತಿಗೆ ಮನವಿ
ವಾಲ್ಮೀಕಿ ನಾಯಕ ಸಂಘಟನೆಗಳ ಒಕ್ಕೂಟದ ಮೈಸೂರು ಜಿಲ್ಲಾಧ್ಯಕ್ಷ ತಾಯೂರು ಪ್ರಕಾಶ್ ಪಿಪಿ ಪೋಟೋ
ಪೋಟೋ ಕ್ಯಾಪ್ಷನ್: ತಿ.ನರಸೀಪುರ ಪಟ್ಟಣದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕರ್ನಾಟಕ ರಾಜ್ಯ ವಾಲ್ಮೀಕಿ ನಾಯಕ ಸಂಘಟನೆಗಳ ಒಕ್ಕೂಟದ ಮೈಸೂರು ಜಿಲ್ಲಾಧ್ಯಕ್ಷ ತಾಯೂರು ಪ್ರಕಾಶ್ ಪಿಪಿ ಪೋಟೋ
ತಿ.ನರಸೀಪುರ.ಆ.13 -ಸಿದ್ದರಾಮಯ್ಯ ನೇತೃತ್ವದ ರಾಜ್ಯ ಕಾಂಗ್ರೆಸ್ ಸರ್ಕಾರ ಪ.ಜಾತಿ/ಪಂಗಡಗಳ ಕಲ್ಯಾಣ ನಿಧಿಗೆ ಬಳಸಬೇಕಾದ ಹಣವನ್ನು ಸಂವಿಧಾನ ಬಾಹೀರವಾಗಿ ಸರ್ಕಾರದ ಉಚಿತ ಯೋಜನೆಗಳಿಗೆ ಬಳಕೆ ಮಾಡಿಕೊಳ್ಳುತ್ತಿರುವುದು ಖಂಡನೀಯ ಎಂದು ಕರ್ನಾಟಕ ರಾಜ್ಯ ವಾಲ್ಮೀಕಿ ನಾಯಕ ಸಂಘಟನೆಗಳ ಒಕ್ಕೂಟದ ಮೈಸೂರು ಜಿಲ್ಲಾಧ್ಯಕ್ಷ ತಾಯೂರು ಪ್ರಕಾಶ್ ರಾಜ್ಯ ಸರ್ಕಾರದ ನಡೆಯ ಬಗ್ಗೆ ಕಿಡಿಕಾರಿದ್ದಾರೆ.
ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು ಸಿದ್ದರಾಮಯ್ಯ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಪ.ಜಾತಿ/ವರ್ಗದ ಜನತೆಗೆ ಬಹು ದೊಡ್ಡ ಕೊಡುಗೆ ನೀಡುತ್ತಾರೆಂಬ ಆಶಾಭಾವನೆ ವ್ಯಕ್ತವಾಗಿತ್ತಾದರೂ,ಇತ್ತೀಚಿನ ದಿನಗಳಲ್ಲಿ ತಮ್ಮ ಪಕ್ಷದ ಪ್ರಣಾಳಿಕೆಯಲ್ಲಿ ನೀಡಿದ್ದ ಗ್ಯಾರಂಟಿ ಯೋಜನೆಗಳಿಗೆ ಎಸ್ಸಿಪಿ ಟಿಎಸ್ಪಿ ಯೋಜನೆಗೆ ಮೀಸಲಿಟ್ಟಿದ್ದ 11 ಸಾವಿರ ಕೋಟಿ ರೂ.ಗಳನ್ನು ಬಳಸಿಕೊಳ್ಳಲೊರಟಿರುವುದು ದುರಂತ ಎಂದರು.ಈ ಹಿಂದೆ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದ ವೇಳೆ ಪ.ಜಾತಿ/ವರ್ಗದ 18 ಸಾವಿರ ಕೋಟಿ ರೂ.ಗಳನ್ನು ವಾಪಸ್ ಪಡೆದು ಮೆಟ್ರೋ ಯೋಜನೆಗೆ ಬಳಸಿಕೊಂಡಿತ್ತು.ಆ ವೇಳೆ ವಿರೋಧ ಪಕ್ಷದಲ್ಲಿದ್ದ ಸಿದ್ದರಾಮಯ್ಯ ನವರು ಹಿಂದುಳಿದ ವರ್ಗದ ಹಣವನ್ನು ಬೇರೆ ಉದ್ದೇಶಕ್ಕೆ ಬಳಕೆ ಮಾಡಿದ್ದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರು.ಮೀಸಲಿಟ್ಟ ಹಣ ಯಾವುದೇ ಕಾರಣಕ್ಕೂ ಬೇರೆ ಉದ್ದೇಶಕ್ಕೆ ಬಳಕೆ ಯಾಗಬಾರದೆಂದು ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದ್ದರು.ಆದರೆ ಈಗ ತಮ್ಮದೇ ಸರ್ಕಾರದಲ್ಲಿ ಎಸ್ ಸಿ ಎಸ್ ಟಿ ಸಮಾಜಕ್ಕೆ ಮೀಸಲಿಟ್ಟ 11 ಸಾವಿರ ಕೋಟಿ ರೂ.ಗಳನ್ನು ಗ್ಯಾರಂಟಿ ಯೋಜನೆಗೆ ಬಳಕೆ ಮಾಡಿಕೊಳ್ಳುವ ಮೂಲಕ ಸಂವಿಧಾನದ ಆಶಯಕ್ಕೆ ವಿರುದ್ದವಾಗಿ ನಡೆದುಕೊಂಡಿದ್ದಾರೆ ಎಂದು ಕಿಡಿಕಾರಿದರು.
ಬಿಜೆಪಿ ಸರ್ಕಾರ 18 ಸಾವಿರ ಕೋಟಿ ವಾಪಸ್ ಪಡೆದ ಹಿನ್ನೆಲೆಯಲ್ಲಿ ಬಿಜೆಪಿ ನಡೆಯ ವಿರಿದ್ದ ಸಿಡಿದೆದ್ದ ಎಸ್ ಸಿ,ಎಸ್ ಟಿ ಹಾಗು ಮುಸ್ಲಿಂ ಸಮುದಾಯದವರು ಬಿಜೆಪಿ ವಿರುದ್ದವಾಗಿ ಮತ ನೀಡಿ ಕಾಂಗ್ರೆಸ್ ಗೆ ಅಧಿಕಾರ ನೀಡಿದರು.ಆದರೆ ಇವರು ಸಹ ಬಿಜೆಪಿಗಿಂತ ಘೋರವಾದ ಕೆಲಸ ಮಾಡಲು ಹೊರಟಿದ್ದಾರೆ.ಚುನಾವಣಾ ಪೂರ್ವದಲ್ಲಿ ಸಿದ್ದರಾಮಯ್ಯ ಹಾಗು ಸಚಿವ ಮಹದೇವಪ್ಪ ಸಮುದಾಯದವರಿಗೆ ಕೊಟ್ಟಿದ್ದ ನಂಬಿಕೆ ಹುಸಿಯಾಗಿದೆ,ಎಸ್ ಸಿ,ಎಸ್ಟಿ ಹಣ ಬೇರೆ ಉದ್ದೇಶಕ್ಕೆ ಬಳಕೆ ಯಾಗಬಾರದೆನ್ನುವ ದೃಷ್ಟಿಯಿಂದ 7 ಡಿ ಕಾಯ್ದೆಯಡಿ ಕಾನೂನು ತಂದಿದ್ದ ಸಿದ್ದರಾಮಯ್ಯ ನವರೇ ಈಗ ತಮ್ಮದೇ ಆದೇಶವನ್ನು ವಾಪಸ್ ಪಡೆದು ಹಿಂದುಳಿದ ವರ್ಗಗಳ ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಕೆ ಮಾಡಿಕೊಳ್ಳುತ್ತಿರುವುದು ಸರಿಯಲ್ಲ, ಗ್ಯಾರಂಟಿ ಯೋಜನೆಗಳಿಗೂ ಸಂವಿಧಾನಕ್ಕೂ ಯಾವುದೇ ಸಂಬಂಧವಿಲ್ಲ,ಸಂವಿಧಾನದ ಆಶಯದಂತೆ ಕೆಲಸ ಮಾಡಬೇಕಾದ ರಾಜ್ಯ ಸರ್ಕಾರ ಸಂವಿಧಾನ ಬಾಹೀರವಾಗಿ ಕೆಲಸ ಮಾಡಲೊರಟಿದೆ ಎಂದು ಆರೋಪಿಸಿದರು.
ಗ್ಯಾರಂಟಿ ಯೋಜನೆಗಳು ಅಸಂವಿಧಾನಿಕ!
ಮಾನ್ಯ ಮುಖ್ಯ ಮಂತ್ರಿ ಸಿದ್ದರಾಮಯ್ಯ ನವರು ಎಸ್ ಸಿಪಿ ಟಿಎಸ್ ಪಿ ಹಣವನ್ನು ಅದೇ ಸಮುದಾಯಕ್ಕೆ ಮೀಸಲಿಡಬೇಕು,ಯೋಜನೆಗಳಿಗೆ ಬಳಕೆ ಮಾಡಲೊರಟಿರುವ ಹಣವನ್ನು ಮತ್ತೆ ವಾಒಸ್ ಪಡೆಯಬೇಕು,ನಿಮ್ಮ ಪಕ್ಷದ ಗ್ಯಾರಂಟಿ ಯೋಜನೆ ಗಳಿಗೂ ದೇಶದ ಸಂವಿಧಾನಕ್ಕೂ ಯಾವುದೇ ಸಂಬಂಧವಿಲ್ಲ.ಗ್ಯಾರಂಟಿ ಯೋಜನೆ ಸಂವಿಧಾನಾತ್ಮಕವಾದ ಕೆಲಸವೇ ಅಲ್ಲ.ಆದಾಗ್ಯೂ ನಿಮ್ಮ ಯೋಜನೆಗಳು ನಿಮ್ಮ ಪಕ್ಷದ ಪ್ರಣಾಳಿಕೆ.ಆದರೆ ಈ ಹಣವನ್ನು ನಿಮ್ಮ ಗ್ಯಾರಂಟಿ ಯೋಜಬೆಗಳಿಗೆ ಕೊಟ್ಟಿರುವುದು ವಿಪರ್ಯಾಸ ಎಂದರು.
ಚಿಂತಕರು,ಸಾಹಿತಿಗಳು,ದಸಂಸ ಯವರೆಲ್ಲಿದ್ದಾರೆ!
ಮುಖ್ಯ ಮಂತ್ರಿ ಸಿದ್ದರಾಮಯ್ಯ ಎರಡನೇ ಬಾರಿಗೆ ಅದಿಕಾರ ಹಿಡಿದಿದ್ದಾರೆ.ಪ.ಜಾತಿ,ಪ.ವರ್ಗ ಹಾಗು ಮುಸಲ್ಮಾನರು ನಿಮ್ಮ ಸರ್ಕಾರ ಅಧಿಕಾರಕ್ಕೆ ಬರಲು ಬೆಂಬಲಿಸಿದ್ದಾರೆ.ಆದರೆ ನೀವು ಅವರ ವಿರುದ್ದವಾಗಿ ಕೆಲಸ ಮಾಡಲೊರಟಿದ್ದೀರಿ,ಸಮಾಜದ ಚಿಂತಕರು,ಶೋಷಿತ ವರ್ಗದವರ ದನಿಯಾಗಿ ಕೆಲಸ ಮಾಡುತ್ತಿರುವ ನಿಮ್ಮೊಂದಿಗೆ ಚಿಂತಕರು ಸಾಹಿತಿಗಳ ಪಡೆಯೇ ಇದೆ.ಅವರ್ಯಾರು ಹಿಂದುಳಿದ ವರ್ಗಗಳ ಹಣ ಅನ್ಯ ಉದ್ದೇಶಕ್ಕೆ ಬಳಕೆಯಾಗುತ್ತಿರುವ ಬಗ್ಗೆ ಮಾತನಾಡದೇ ಇರುವುದು ಅಚ್ಚರಿ ಮೂಡಿಸಿದೆ.ದಲಿತ ಸಂಘಟನೆಗಳು ಈ ವಿಚಾರವಾಗಿ ದನಿ ಎತ್ತದಿರುವುದು ಅನುಮಾನ ಹುಟ್ಟಿಸಿದೆ ಎಂದು ಸಂಶಯ ವ್ಯಕ್ತಪಡಿಸಿದರು.
ಪ್ರಧಾನಿ,ರಾಷ್ಟ್ರಪತಿಗೆ ಮನವಿ
ಎಸ್ಸಿಪಿ ಟಿಎಸ್ ಪಿ ಹಣ ಅನ್ಯ ಉದ್ದೇಶಕ್ಕೆ ಬಳಕೆಯಾಗುತ್ತಿರುವ ಕುರಿತಂತೆ ರಾಷ್ಟ್ರಪತಿ,ಪ್ರಧಾನಿ ಹಾಗು ರಾಜ್ಯದ ಮುಖ್ಯ ಕಾರ್ಯದರ್ಶಿಯವರಿಗೆ ಮನವಿ ಸಲ್ಲಿಸಿದ್ದೇನೆ,ಕೂಡಲೇ ರಾಜ್ಯ ಸರ್ಕಾರ ಬೇರೆ ಯೋಜನೆಗಳಿಗೆ ಬಳಕೆ ಮಾಡಲು ಉದ್ದೇಶಿಸಿರುವ ನಿರ್ಧಾರವನ್ನು ಕೈ ಬಿಟ್ಟು 11 ಸಾವಿರ ಕೋಟಿ ರೂ.ಗಳನ್ನು ಪ.ಜಾತಿ ಮತ್ತು ವರ್ಗದ ಕಲ್ಯಾಣಕ್ಕಾಗಿ ಮೀಸಲಿಡಬೇಕು ಇಲ್ಲದಿದ್ದಲ್ಲಿ ಉಗ್ರವಾದ ಹೋರಾಟ ರೂಪಿಸಬೇಕಾಗುತ್ತದೆ ಎಂದು ಪ್ರಕಾಶ್ ಎಚ್ಚರಿಸಿದರು.
Comments
Post a Comment