ಬೆಂಗಳೂರು ಗ್ರಾಮಾಂತರ ಜಿಲ್ಲೆ *ಹೊಸಕೋಟೆ ಇಂಡಸ್ಟ್ರೀಸ್ ವೆಲ್ಫೇರ್ ಫಾರಂ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ

 ಬೆಂಗಳೂರು ಗ್ರಾಮಾಂತರ ಜಿಲ್ಲೆ *ಹೊಸಕೋಟೆ ಇಂಡಸ್ಟ್ರೀಸ್ ವೆಲ್ಫೇರ್ ಫಾರಂ  ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ

ಬೆಂಗಳೂರು ಗ್ರಾಮಾಂತರ ಜಿಲ್ಲೆ *ಹೊಸಕೋಟೆ ಇಂಡಸ್ಟ್ರೀಸ್ ವೆಲ್ಫೇರ್ ಫಾರಂ  ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ ಬೆಂಡಿಗನಹಳ್ಳಿ* ಇವರ ಸಂಯುಕ್ತ ಆಶ್ರಯದಲ್ಲಿ  ಚೊಕ್ಕಹಳ್ಳಿ  ಕೈಗಾರಿಕಾ ಪ್ರದೇಶದ  ಫೈಕಾಂ ಇಂಜಿನಿಯರಿಂಗ್ ಪ್ರೈವೇಟ್ ಲಿಮಿಟೆಡ್ ಕಾರ್ಖಾನೆಯಲ್ಲಿ 2023 ರ " *ವಿಶ್ವ ಪರಿಸರ ದಿನ* " ದ ಅಂಗವಾಗಿ " *ರಕ್ತದಾನ ಶಿಬಿರ* " ವನ್ನು ಆಯೋಜಿಸಲಾಗಿತ್ತು.


 ರಕ್ತದಾನ ಶಿಬಿರವನ್ನು  ಹೊಸಕೋಟೆ ಇಂಡಸ್ಟ್ರೀಸ್ ವೆಲ್ಫೇರ್ ಫಾರಂ ನ ಅಧ್ಯಕ್ಷರಾದ *ಶ್ರೀ ಕೃಷ್ಣಪ್ಪ* ರವರು ಹಾಗೂ ಸದಸ್ಯರುಗಳು , *ತಾಲೂಕು ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಗುರುರಾಜ್* ರವರು ಜಂಟಿಯಾಗಿ ಸಸಿಗಳಿಗೆ ನೀರು ಉಣಿಸುವುದರ ಮೂಲಕ  ಉದ್ಘಾಟಿಸಿದರು.


 ಶಿಬಿರದಲ್ಲಿ ತಾಲೂಕು ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಶ್ರೀ ಗುರುರಾಜ್ ರವರು ಮಾತನಾಡುತ್ತಾ ಜಗತ್ತಿನ *ವೈದ್ಯಕೀಯ ರಂಗದಲ್ಲಿ ಒಬ್ಬರ ರಕ್ತವನ್ನು ಇನ್ನೊಬ್ಬರ ದೇಹಕ್ಕೆ ವರ್ಗಾಯಿಸುವ ಪ್ರಕ್ರಿಯೆಯೇ ಮಹತ್ತರವಾದ ಅನ್ವೇಷಣೆ* ಮತ್ತು *ರಕ್ತದಾನ - ಶ್ರೇಷ್ಠದಾನ*  ಎಂದೂ, ರಕ್ತಕ್ಕೆ ಪರ್ಯಾಯವಾದ ಇನ್ನೊಂದು ವಸ್ತುವಿಲ್ಲವೆಂದು ಹಾಗಾಗಿ ಸಾರ್ವಜನಿಕರು  ಮುಕ್ತವಾಗಿ ರಕ್ತದಾನ ಶಿಬಿರಗಳಲ್ಲಿ ಪಾಲ್ಗೊಂಡು ಸ್ವಯಂ ಪ್ರೇರಿತರಾಗಿ  ರಕ್ತದಾನ ಮಾಡಬೇಕೆಂದು ಮನವಿ ಮಾಡಿದರು.


ಇದೇ ಸಂದರ್ಭದಲ್ಲಿ ಅವರು ಮಾತನಾಡುತ್ತ ಇಂದಿನ ಮತ್ತು *ಮುಂದಿನ ಪೀಳಿಗೆಗಾಗಿ ಪರಿಸರವನ್ನು ಉಳಿಸಿಕೊಳ್ಳಬೇಕಾಗಿರುವುದು ನಮ್ಮೆಲ್ಲರ ಜವಾಬ್ದಾರಿ ಮತ್ತು ಆದ್ಯ ಕರ್ತವ್ಯ* ಎಂದು ತಿಳಿಸುತ್ತಾ, *ಪ್ಲಾಸ್ಟಿಕ್ ಮುಕ್ತ ಸಮಾಜ* ಕ್ಕಾಗಿ ಕರೆ ನೀಡಿದರು.


 ಹೊಸಕೋಟೆ ಇಂಡಸ್ಟ್ರೀಸ್ ವೆಲ್ಫೇರ್ ಫೋರಂ ನ ಅಧ್ಯಕ್ಷರಾದ *ಶ್ರೀ ಕೃಷ್ಣಪ್ಪರವರು*    ತಾಲೂಕು ಆರೋಗ್ಯ ಇಲಾಖೆ  ಕಾರ್ಯಕ್ಷಮತೆಯನ್ನು ಪ್ರಶಂಸಿಸಿ, ಸಾರ್ವಜನಿಕ ಹಿತದೃಷ್ಟಿಯಿಂದ ಕೈಗೊಳ್ಳುವ  ಆರೋಗ್ಯ ಇಲಾಖೆ ಯ ಯಾವುದೇ ಕಾರ್ಯಕ್ರಮಗಳಿಗೆ ತಾವು *ಶೇಕಡ 100 ರಷ್ಟು*  ಸಹಕರಿಸುವುದಾಗಿ ಭರವಸೆ ನೀಡಿದರು.


 ಕಾರ್ಯಕ್ರಮದ ಮುಖ್ಯ ಸಂಯೋಜಕರಾದ ಬೆಂಡಿಗನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯ ನಿರೀಕ್ಷಣಾಧಿಕಾರಿ *ಶ್ರೀ ಶಿವಕುಮಾರ್* ರವರು ರಕ್ತದಾನದ ಬಗ್ಗೆ ಸಾರ್ವಜನಿಕರಿಗೆ ಇರುವ ತಪ್ಪು ಕಲ್ಪನೆ ಹಾಗೂ ರಕ್ತದಾನಕ್ಕೆ ಬೇಕಾದ  *ವೈದ್ಯಕೀಯ ಅರ್ಹತೆ* ವಿಷಯಗಳ ಬಗ್ಗೆ ಆರೋಗ್ಯ ಶಿಕ್ಷಣ ನೀಡಿದರು.


 ಸದರಿ ರಕ್ತದಾನ ಶಿಬಿರಕ್ಕೆ  ಬೆಂಗಳೂರು ಸರ್ ಸಿವಿ ರಾಮನ್ ಸಾರ್ವಜನಿಕ ಆಸ್ಪತ್ರೆಯ ರಕ್ತ ನಿಧಿ  ವಿಭಾಗದ ಮುಖ್ಯಸ್ಥರಾದ  *ಡಾ. ಶೀಲಾ  ಮತ್ತು ಸುನಿಲ್ ಆಚಾರ್ಯರ* ತಂಡ ಆಂಬುಲೆನ್ಸ್ ವಾಹನದೊಂದಿಗೆ ಆಗಮಿಸಿ, ಶಿಷ್ಟಾಚಾರದಂತೆ ಕ್ರಮಬದ್ಧವಾಗಿ  ರಕ್ತ ಸಂಗ್ರಹಿಸಿ, ಅಭಿನಂದನ  ಪ್ರಮಾಣ ಪತ್ರವನ್ನು ರಕ್ತ ದಾನಿಗಳಿಗೆ  ನೀಡಿ ಗೌರವಿಸಿದರು.


 ಕಾರ್ಯಕ್ರಮದಲ್ಲಿ   ಹೊಸಕೋಟೆ ತಾಲೂಕು ಕ್ಷಯ ರೋಗ ವಿಭಾಗದ ಮುಖ್ಯಸ್ಥರಾದ *ಶ್ರೀ ಸುದೀಪ್* ,ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿಗಳಾದ *ಶ್ರೀಮತಿ ಸುಧಾ, ಶ್ರೀಮತಿ ಶಿವಗಂಗಾ, ಶ್ರೀಮತಿ ಕುಮಾರಿ*  ಆಶಾ ಕಾರ್ಯಕರ್ತೆಯರಾದ *ಶ್ರೀಮತಿ ಜಯಮ್ಮ ಶ್ರೀಮತಿ ಶೈಲ* ಸೇರಿದಂತೆ  ಹೊಸಕೋಟೆ  ಇಂಡಸ್ಟ್ರೀಸ್ ವೆಲ್ಫೇರ್ ಫಾರಂ ಸದಸ್ಯರುಗಳಾದ   *ಶ್ರೀ ಗಣೇಶ್ ಪೈ, ಶ್ರೀಮತಿ ವಿನುತಾ,  ಶ್ರೀ ಚಂದ್ರಶೇಖರ್, ಶ್ರೀ ಸುರೇಶ ನಾಥ್* ಹಾಜರಿದ್ದರು.


 ಸದರಿ ರಕ್ತದಾನ ಶಿಬಿರದಲ್ಲಿ *ಒಟ್ಟು 54( ಐವತ್ತ ನಾಲ್ಕು ) ಯೂನಿಟ್*  (350 ಎಮ್ ಲ್ ರಂತೆ  ) ರಕ್ತ ಸಂಗ್ರಹಿಸಲಾಯಿತು.


 ಶಿಬಿರದಲ್ಲಿ ಪಾಲ್ಗೊಂಡ ಸರ್ವರಿಗೂ *ಹಣ್ಣುಗಳು, ಬಾದಾಮಿ ಹಾಲು  ಮತ್ತು ಊಟ* ದ ವ್ಯವಸ್ಥೆಯನ್ನು  ಹೊಸಕೋಟೆ ಇಂಡಸ್ಟ್ರೀಸ್ ವೆಲ್ಫೇರ್ ಫೋರಂ ರವರು ಆಯೋಜಿಸಿದ್ದರು.

Comments

Popular posts from this blog

Methodist Church in India Announces New Leadership, Disputes Former Bishop’s Claims

ಬೆಂಗಳೂರಿನಲ್ಲಿ ಡಿಸೆಂಬರ್ 14, 15ರಂದು ಮೂರನೇ ಆವೃತ್ತಿಯ ಜಾಗತಿಕ ಯೋಗ ಶೃಂಗ

BHARATIYA JAIN SANGHATANA Women’s Wing, Bengaluru Chapter PRESENTS”VANDE MATARAM”The Pride of Nation