ಎಚ್.ಎಸ್.ಆರ್ ಬಡಾವಣೆಯಲ್ಲಿ “ಶ್ರೀ ಗಣೇಶ್ ಡೈಮಂಡ್ ಅಂಡ್ ಜುವೆಲ್ಲರಿ” ಆಭರಣ ಮಳಿಗೆ ಶುಭಾರಂಭ: ಮಹಿಳಾ ಗ್ರಾಹಕರಿಗೆ ಉದ್ಘಾಟನೆ
ಎಚ್.ಎಸ್.ಆರ್ ಬಡಾವಣೆಯಲ್ಲಿ “ಶ್ರೀ ಗಣೇಶ್ ಡೈಮಂಡ್ ಅಂಡ್ ಜುವೆಲ್ಲರಿ” ಆಭರಣ ಮಳಿಗೆ ಶುಭಾರಂಭ: ಮಹಿಳಾ ಗ್ರಾಹಕರಿಗೆ ಉದ್ಘಾಟನೆ
ಬೆಂಗಳೂರು, ಜೂ, 3; ನಗರದ ಎಚ್.ಎಸ್.ಆರ್. ಬಡಾವಣೆಯಲ್ಲಿ ನವ ನವೀನ ವಿನ್ಯಾಸಗಳು, ಹಲವು ವಿಭಿನ್ನ ವಿನ್ಯಾಸಗಳ ವೈಶಿಷ್ಟ್ಯಗಳನ್ನೊಳಗೊಂಡ “ಶ್ರೀ ಗಣೇಶ ಡೈಮಂಡ್ ಅಂಡ್ ಜುವೆಲ್ಲರಿ” ಆಭರಣ ಮಳಿಗೆ ಶುಭಾರಂಭವಾಗಿದೆ.
ಎಚ್.ಎಸ್.ಆರ್. ಬಡಾವಣೆಯ 7 ನೇ ಸೆಕ್ಟರ್ ನ 17 ನೇ ಅಡ್ಡ ರಸ್ತೆಯಲ್ಲಿ ಮಹಿಳಾ ಗ್ರಾಹಕರಾದ ಸವಿತಾ ರೆಡ್ಡಿ, ವಿಜಯ ಲಕ್ಷ್ಮಿ ಆನಂದ್, ರಾಧಾ ಕೊಲ್ಲಿ ಅವರು ಆಭರಣ ಮಳಿಗೆಗೆ ಚಾಲನೆ ನೀಡಿದರು. ಶುಭಾರಂಭದ ಸಂದರ್ಭದಲ್ಲಿ 50 ಸಾವಿರ ರೂ ಗೆ ಅಧಿಕ ಮೊತ್ತದ ಆಭರಣ ಖರೀದಿ ಮಾಡಿದರೆ ಒಂದು ಗ್ರಾಂ ಚಿನ್ನದ ನಾಣ್ಯವನ್ನು ಉಡುಗೊರೆಯಾಗಿ ನೀಡುವುದಾಗಿ ಆಭರಣ ಮಳಿಗೆ ಮಾಲೀಕರಾದ ವಿಮಲ್ ಜೈನ್ ಮತ್ತು ಮನಿಶಾ ಜೈನ್ ಘೋಷಿಸಿದರು.
ಪ್ರಾಚೀನ ಕಾಲದ, ಮದುವೆ ಮತ್ತಿತರ ಆಧುನಿಕ ವಿನ್ಯಾಸಗಳ ಆಭರಣಗಳನ್ನು ಈ ಮಳಿಗೆ ಒಳಗೊಂಡಿದೆ. “ಶ್ರೀ ಗಣೇಶ ಡೈಮಂಡ್ ಅಂಡ್ ಜುವೆಲ್ಲರಿ” ಮಳಿಗೆ 1969 ರಲ್ಲಿ ಬೆಂಗಳೂರಿನಲ್ಲಿ ಆರಂಭಗೊಂಡಿದ್ದು, ರಾಜಾಜಿನಗರ, ಸದಾಶಿವ ನಗರ, ಬಸವೇಶ್ವರ ನಗರ ಮತ್ತಿತರ ಕಡೆಗಳಲ್ಲಿ ಅತ್ಯುತ್ತಮ ಗ್ರಾಹಕ ಸ್ನೇಹಿಯಾಗಿ ಆಭರಣ ಮಳಿಗೆಗಳು ಕಾರ್ಯನಿರ್ವಹಿಸುತ್ತಿವೆ.
Comments
Post a Comment