ವೀರಶೈವ ಲಿಂಗಾಯಿತ ಉಪಪಂಗಡಗಳಿಗೆ ಕೇಂದ್ರ ಒಬಿಸಿ ಮೀಸಲಾತಿಗೆ ಅಗ್ರಹಿಸಿ ಮಠಾಧೀಶರಿಂದ ಒತ್ತಾಯ*

 *ವೀರಶೈವ ಲಿಂಗಾಯಿತ ಉಪಪಂಗಡಗಳಿಗೆ ಕೇಂದ್ರ ಒಬಿಸಿ ಮೀಸಲಾತಿಗೆ ಅಗ್ರಹಿಸಿ ಮಠಾಧೀಶರಿಂದ ಒತ್ತಾಯ*

ಬೆಂಗಳೂರು,ವಿಜಯನಗರದಲ್ಲಿರುವ ಶ್ರೀ ಬಸವೇಶ್ವರ ಸುಜ್ಞಾನ ಮಂಟಪದಲ್ಲಿ ಕೇಂದ್ರ ಒಬಿಸಿ ಮೀಸಲಾತಿಯಲ್ಲಿ ಎಲ್ಲ ವೀರಶೈವ ಲಿಂಗಾಯಿತ ಉಪಪಂಗಡಗಳನ್ನು ಒಟ್ಟಾಗಿ ಸೇರಿಸುವಂತೆ ಕೇಂದ್ರ ಸರ್ಕಾರಕ್ಕೆ ಪ್ರಸ್ಥಾವ ಸಲ್ಲಿಸುವ ಕುರಿತು ವೀರಶೈವ ಲಿಂಗಾಯಿತ ಮಠಾಧೀಶರ ವೇದಿಕೆ ವತಿಯಿಂದ ಬೃಹತ್ ಮಾಧ್ಯಮಗೋಷ್ಟಿ

*ಶ್ರೀಶೈಲ ಪೀಠದ ಜಗದ್ಗುರುಗಳಾದ ಶ್ರೀ ಶ್ರೀ ಶ್ರೀ ಚನ್ನಸಿದ್ದರಾಮ ಪಂಡಿತರಾಧ್ಯ ಸ್ವಾಮೀಜಿಗಳು, ಕಾಶಿ ಪೀಠದ  ಜಗದ್ಗುರು ಶ್ರೀ ಶ್ರೀ ಶ್ರೀ ಡಾ.ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು, ವಿಭೂತಿಪುರಮಠದ ಶ್ರೀ ಶ್ರೀ ಶ್ರೀ ಮಹಾಂತಲಿಂಗ ಶಿವಾಚಾರ್ಯ ಸ್ವಾಮೀಜಿ

ವೀರಶೈವ ಲಿಂಗಾಯಿತ ನಿಗಮದ ಮಾಜಿ ಅಧ್ಯಕ್ಷರಾದ ಪರಮಶಿವಯ್ಯ,ನ್ಯಾಯವಾಧಿ ಗಂಗಾಧರ್ ಗುರುಮಠ್ ರವರು* ದೀಪ ಬೆಳಗಿಸಿ ಮಾಧ್ಯಮಗೋಷ್ಟಿಗೆ ಚಾಲನೆ ನೀಡಿದರು.

100ಕ್ಕೂ ಹೆಚ್ಚು ಮಠಾದೀಶರುಗಳು ಪಾಲ್ಗೊಂಡಿದ್ದರು.

*ಶ್ರೀ ಶ್ರೀ ಶ್ರೀ ಚನ್ನಸಿದ್ದರಾಮ ಪಂಡಿತರಾದ್ಯ ಸ್ವಾಮೀಜಿರವರು* ಮಾತನಾಡಿ ಒಬಿಸಿ ಪಟ್ಟಿಯಲ್ಲಿ ವೀರಶೈವ ಲಿಂಗಾಯಿತ ಸಮಾಜದ ಉಪಪಂಗಡಗಳನ್ನು ಸೇರಿಸಲು ಕೇಂದ್ರ ಸರ್ಕಾರ ಒತ್ತಾಯಿಸಲು ಸಭೆಯನ್ನು ಆಯೋಜಿಸಲಾಗಿದೆ.

 ವೀರಶೈವ ಲಿಂಗಾಯಿತ ಧರ್ಮ ವೃತ್ತಿ ಆಧಾರಿತ ಉಪಪಂಗಡಗಳ ಇರುವ ಧರ್ಮ. ಸಾಮಾಜಿಕ ಮತ್ತು ಆರ್ಥಿಕ,ಶೈಕ್ಷಣಿಕ ವ್ಯವಸ್ಥೆ ಹೇಗಿದೆ ಚಿನ್ನಪ್ಪರೆಡ್ಡಿ ಆಯೋಗ ವರದಿಯಲ್ಲಿ ಹೇಳಿದೆ.

ವೀರಶೈವ ಲಿಂಗಾಯಿತ ಒಳಪಂಗಡಗಳ ಉತ್ತಮ ಪರಿಸ್ಥಿತಿಯಲ್ಲಿ ಇಲ್ಲ.

ಕೇಂದ್ರ ಸರ್ಕಾರದ ಒಬಿಸಿ ಪಟ್ಟಿಯಲ್ಲಿ ಕೆಲವು ಅಂದರೆ 16ಉಪಪಂಗಡಗಳನ್ನು ಸೇರಿಸಲಾಗಿದೆ ಅದರೆ 70ಕ್ಕೂ ಹೆಚ್ಚು ಉಪಪಂಗಡಗಳಿಗೆ ಒಬಿಸಿ ಪಟ್ಟಿಯಲ್ಲಿ ಸೇರಿಸಿಲ್ಲ.

ವೀರಶೈವ ಲಿಂಗಾಯಿತ ಸಮಾಜದ ಎಲ್ಲ ಉಪಪಂಗಡಳನ್ನು ಕೇಂದ್ರ ಸರ್ಕಾರ ಒಬಿಸಿ ಪಟ್ಟಿಯಲ್ಲಿ ಸೇರಿಸಬೇಕು ಮತ್ತು ರಾಜ್ಯ ಸರ್ಕಾರದಲ್ಲಿ ಈಗಾಗಲೇ ಸೇರಿಸಲಾಗಿದೆ.

ದಶಕಗಳಿಂದ ನಮ್ಮ ಸಮಾಜ ಸತತವಾಗಿ ಹೋರಾಟ ಮಾಡುತ್ತಾ ಬಂದಿದೆ.

ಇನ್ನು ಮುಂದಾದರು ಕೇಂದ್ರ ಸರ್ಕಾರ ವೀರಶೈವ ಲಿಂಗಾಯಿತ ಸಮಾಜದ ಎಲ್ಲ ಉಪ ಪಂಗಡಗಳನ್ನು ಒಬಿಸಿ ಪಟ್ಟಿಯಲ್ಲಿ ಸೇರಿಸಬೇಕು, ಆರ್ಥಿಕ ಸಾಮಾಜಿಕವಾಗಿ ಮುಂದೆ ಬರಲು ಸಾಧ್ಯ.

ಅಂತಿಮವಾಗಿ ಮೀಸಲಾತಿ ಸಿಗುವವರಗೆ ನಮ್ಮ ಹೋರಾಟ ನಿಲ್ಲದು ಎಂದು ಹೇಳಿದರು.

*ಜಗದ್ಗರುಡಾ.ಚಂದ್ರಶೇಖರ ಶಿವಚಾರ್ಯ ಸ್ವಾಮೀಜಿರವರು ಮಾತನಾಡಿ* ಸಮಾಜದ ಹಿತದೃಷ್ಟಿಯಿಂದ ಮಠಾಧೀಶರ ನೇತೃತ್ವದಲ್ಲಿ ಕೇಂದ್ರ ಸರ್ಕಾರದ ಒಬಿಸಿ ಪಟ್ಟಿಯಲ್ಲಿ ವೀರಶೈವ ಲಿಂಗಾಯಿತ ಉಪಪಂಗಡಗಳನ್ನು ಸೇರಿಸಬೇಕು ಎಂದು ಮಠಾಧೀಶರ ವೇದಿಕೆ ವತಿಯಿಂದ ಅಗ್ರಹಿಸಿ ನಮ್ಮ ಹೋರಾಟ.

ವೀರಶೈವ ಲಿಂಗಾಯಿತ ಸಮಾಜದ ನ್ಯಾಯ ಸಮ್ಮತ ಬೇಡಿಕೆ ಈಡೇರಿಸಬೇಕು.

ಉಪಪಂಗಡಗಳ ಮೀಸಲಾತಿ ಹೋರಾಟ ನಿಲ್ಲುವುದಿಲ್ಲ.

ವೀರಶೈವ ಲಿಂಗಾಯಿತ ಎಲ್ಲ ರಾಜ್ಯಗಳಲ್ಲಿ ಜನಸಂಖ್ಯೆ ಇದೆ.

ಒಬಿಸಿ ಹಕ್ಕು ಎಲ್ಲ ಉಪಪಂಗಡಗಳಿಗೆ ಸಿಗಬೇಕು.

*ವಿಭೂತಿಪುರ ಮಠದ ಮಹಾಲಿಂಗ ಶಿವಚಾರ್ಯ ಸ್ವಾಮೀಜಿ* ಮಾತನಾಡಿ ಇಂದು ಬೆಂಗಳೂರಿನಲ್ಲಿ ಕೇಂದ್ರ ಒಬಿಸಿ ಮೀಸಲಾತಿ ಪಟ್ಟಿಯಲ್ಲಿ ಎಲ್ಲ ಉಪ ಪಂಗಡಗಳನ್ನು ವಿಸ್ತರಿಸುವಂತೆ ಅಗ್ರಹಿಸಿ ಎಲ್ಲ ಮಠಾಧೀಶರ ಜೊತೆಯಲ್ಲಿ ಸಮಾಜದ ಜನರು ಹೋರಾಟ ಮಾಡಲಾಗುತ್ತಿದೆ.

ಕಾಂಗ್ರೆಸ್ ,ಜೆಡಿಎಸ್ ಮತ್ತು ಬಿಜೆಪಿ ಸರ್ಕಾರ ಆಡಳಿತವಿದ್ದಾಗ ಸತತವಾಗಿ ನಮ್ಮ ಬೇಡಿಕೆಗಳನ್ನು ಗಮನಕ್ಕೆ ತರಲಾಗಿದೆ ಅದರೆ ಯಾವ ಸರ್ಕಾರ ನಮ್ಮ ಬೇಡಿಕೆ ಈಡೇರಿಸಿಲ್ಲ. ಈ ಬಾರಿ ನಮ್ಮ ಹೋರಾಟ ನಿಲ್ಲದು ತಾರ್ಕಿಕ ಅಂತ್ಯ ಕಾಣುವವರಗೆ ನಿಲ್ಲದು ಎಂದು ಹೇಳಿದರು.

Comments

Popular posts from this blog

Methodist Church in India Announces New Leadership, Disputes Former Bishop’s Claims

ಬೆಂಗಳೂರಿನಲ್ಲಿ ಡಿಸೆಂಬರ್ 14, 15ರಂದು ಮೂರನೇ ಆವೃತ್ತಿಯ ಜಾಗತಿಕ ಯೋಗ ಶೃಂಗ

BHARATIYA JAIN SANGHATANA Women’s Wing, Bengaluru Chapter PRESENTS”VANDE MATARAM”The Pride of Nation