Skip to main content

ನಾಳೆಯಿಂದ ಗೃಹ ಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಕೆ.. 2000 ರೂ. ಹಣ ಬೇಕಾದ್ರೆ ಏನ್​ ಮಾಡ್ಬೇಕು ಗೊತ್ತಾ..?

 

ನಾಳೆಯಿಂದ ಗೃಹ ಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಕೆ.. 2000 ರೂ. ಹಣ ಬೇಕಾದ್ರೆ ಏನ್​ ಮಾಡ್ಬೇಕು ಗೊತ್ತಾ..?


ಬೆಂಗಳೂರು :  ನಾಳೆಯಿಂದ ಗೃಹ ಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಕೆಗೆ ಅವಕಾಶವಿದೆ. ಮಹಿಳೆಯರೇ ಬಂತು ಬಂಪರ್​ ಟೈಂ, 2000 ರೂ.ಗೆ ನಾಳೆಯೇ ಅರ್ಜಿ ಸಲ್ಲಿಸಿ. ನಾಳೆ ಮಧ್ಯಾಹ್ನ 1.30ರಿಂದಲೇ ಅರ್ಜಿ ಹಾಕ್ಬೋದು.  ಸಿಎಂ ಸಿದ್ದರಾಮಯ್ಯನವರು ನಾಳೆ ಶಕ್ತಿ ಭವನದಲ್ಲಿ ಚಾಲನೆ ಕೊಡುತ್ತಾರೆ.  2000 ರೂ. ಹಣ ಬೇಕಾದ್ರೆ ಏನ್​ ಮಾಡ್ಬೇಕು ಗೊತ್ತಾ..?

ನಾಳೆ ಮಧ್ಯಾಹ್ನ 1.30ಕ್ಕೆ ‘ಗೃಹಲಕ್ಷ್ಮೀ’ ಅರ್ಜಿ ಸಲ್ಲಿಕೆಗೆ ಸಿಎಂ ಸಿದ್ದರಾಮಯ್ಯ ಸಾಂಕೇತಿಕವಾಗಿ ಚಾಲನೆ ನೀಡಲಿದ್ದಾರೆ ಎಂದು ಮಹಿಳಾ & ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್​ ತಿಳಿಸಿದ್ದಾರೆ. ಸೇವಾ ಸಿಂಧು ಪೋರ್ಟಲ್​ನಲ್ಲಿ ಚಾಲನೆ ನೀಡಲಿದ್ದಾರೆ. ಶಕ್ತಿಭವನದಲ್ಲಿ ಸೇವಾ ಸಿಂಧು ವೆಬ್​ಪೋರ್ಟಲ್​ ಸಿಎಂರಿಂದ ಲಾಂಚ್ ಮಾಡಲಿದ್ದಾರೆ. ಗೃಹ ಲಕ್ಷ್ಮಿ ಅರ್ಜಿ ಸಲ್ಲಿಕೆಗೆ ಯಾವುದೇ ಗಡುವು ಇಲ್ಲ,ಯಾವಾಗ ಬೇಕಾದ್ರೂ ಅರ್ಜಿ ಸಲ್ಲಿಸಬಹುದು. ಅರ್ಜಿಯ ಸಲ್ಲಿಕೆಗೆ ಯಾವುದೇ ಶುಲ್ಕ ಇಲ್ಲ , ಆ ಶುಲ್ಕವನ್ನು ಸರ್ಕಾರವೇ ಭರಿಸುತ್ತದೆ ಎಂದು ಹೇಳಿದ್ಧಾರೆ.  

BPL, APL, ಅಂತ್ಯೋದಯ ಕಾರ್ಡ್​ದಾರರಿಗೆ ಲಾಭ ಪಡೆಯುತ್ತಾರೆ.  ಬರೋಬ್ಬರಿ 1.23 ಕೋಟಿ ಮಹಿಳೆಯರಿಗೆ  ಲಾಭ  ಸಿಗಲಿದೆ. ವರ್ಷಕ್ಕೆ 30,000 ಕೋಟಿ ಗೃಹಲಕ್ಷ್ಮಿಗೆ ಬೇಕಾಗಬಹುದು.  ಆಧಾರ್​​ ಕಾರ್ಡ್​, ರೇಷನ್​ ಕಾರ್ಡ್ ಇದ್ದರೆ ಸಾಕು, ಆನ್​ಲೈನ್​​ನಲ್ಲಾದ್ರೂ ಅರ್ಜಿ ಹಾಕಿ. ಖುದ್ದಾಗಿ ಹೋಗಿ ಬೇಕಾದ್ರೂ ಅರ್ಜಿ ಸಲ್ಲಿಸಬಹುದು. 

ಏನ್​​ ದಾಖಲೆ ಬೇಕು..?

  • ನಾಳೆ ಮಧ್ಯಾಹ್ನದಿಂದಲೇ ಅರ್ಜಿ ಹಾಕಬಹುದು.
  • ಅರ್ಜಿ ಆನ್​​ಲೈನ್​​​​, ಆಫ್​ಲೈನ್​​​​ನಲ್ಲಿ ಹಾಕಬೇಕು.
  • ಸೇವಾ ಸಿಂಧು ಪೋರ್ಟಲ್​​, ಗ್ರಾಮ ಒನ್​​, ಬೆಂಗಳೂರು ಒನ್​​​ನಲ್ಲಿ ಅರ್ಜಿ.
  • ನಿಮ್ಮ ಮೊಬೈಲ್​​ನಲ್ಲೂ ಆಟೋ ಜನರೇಟ್ ಸ್ವೀಕೃತಿ ಲಭ್ಯ.
  • ಅರ್ಜಿದಾರರು, ಪತಿಯ ಆಧಾರ್​ ಕಾರ್ಡ್ ಬೇಕು.
  • ಆಧಾರ್​ ಲಿಂಕ್​ ಇರುವ ಮೊಬೈಲ್​ ಸಮೇತ ಸೆಂಟರ್​ಗೆ ಹೋಗಿ.
  • ಮಂಜೂರಾತಿ ನಂತರ DBT ಮೂಲಕ ಹಣ ವರ್ಗಾವಣೆ.
  • ಅರ್ಜಿ ಸಲ್ಲಿಕೆಗೆ ಹಣ ಪಾವತಿ ಮಾಡುವಂತಿಲ್ಲ.
  • ಮಹಿಳೆಯು ತನ್ನ ಬ್ಯಾಂಕ್​ ಖಾತೆ ವಿವರ ಸಲ್ಲಿಸಬೇಕು.
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಇಲ್ಲವೇ ಇಲ್ಲ.
  • ಹೆಲ್ಪ್​ಲೈನ್​​ 1902ಗೆ ಸಂಪರ್ಕಿಸಿ ಮಾಹಿತಿ ತಿಳಿಯಿರಿ.
  • ವರ್ಷ ಪೂರ್ತಿ ಅರ್ಜಿ ಸಲ್ಲಿಕೆ ಮಾಡಬಹುದು.
  •  ಅರ್ಜಿ ಸ್ವೀಕಾರ ಆದ ಕೂಡಲೇ ಅಕೌಂಟ್​ಗೆ ಹಣ.
  •  ಆಗಸ್ಟ್​​​ 17 ಅಥವಾ 18ರಂದು ಚಾಲನೆ.
  • ಟ್ಯಾಕ್ಸ್ ಕಟ್ಟುವವರು ಬಿಟ್ಟು ಎಲ್ಲರಿಗೂ ಸೌಲಭ್ಯ.
  • ಪತಿ ತೆರಿಗೆದಾರರಾಗಿದ್ದರೆ ಪತ್ನಿಗೆ 2000 ಹಣ ಸಿಗಲ್ಲ.

Comments

Popular posts from this blog

Methodist Church in India Announces New Leadership, Disputes Former Bishop’s Claims

ಬೆಂಗಳೂರಿನಲ್ಲಿ ಡಿಸೆಂಬರ್ 14, 15ರಂದು ಮೂರನೇ ಆವೃತ್ತಿಯ ಜಾಗತಿಕ ಯೋಗ ಶೃಂಗ

BHARATIYA JAIN SANGHATANA Women’s Wing, Bengaluru Chapter PRESENTS”VANDE MATARAM”The Pride of Nation