WHERE IS 1500 NEW BUS… 5,000 STAFFS TO FREE TRAVEL FOR WOMEN SCHEME..

“ಫ್ರೀ ಸ್ಕೀಂ”ಗೆ ಎಷ್ಟ್ ಹಣ ಬೇಕಾದ್ರೂ ಕೊಡಲಿಕ್ಕೆ ಸಿದ್ದವಿರುವ ಕಾಂಗ್ರೆಸ್ ಸರ್ಕಾರಕ್ಕೆ ಹೆಚ್ಚುವರಿ ಬಸ್ ಹಾಗೂ ಸಿಬ್ಬಂದಿಯದ್ದೇ ದೊಡ್ಡ ತಲೆನೋವು
ಬೆಂಗಳೂರು: ಅಧಿಕಾರಕ್ಕೆ ಬರೋ ಏಕೈಕ ಕಾರಣಕ್ಕೆ ಕಾಂಗ್ರೆಸ್ ಉಚಿತ ಗಿಫ್ಟ್ ಗಳನ್ನು ಘೋಷಿಸಿತಾ ಎನ್ನುವ ಅನುಮಾನ ಕಾಡುತ್ತಿದೆ.ಇಂತದ್ದೊಂದು ಅನುಮಾನ ಕಾಡೊಕ್ಕೆ ಕಾರಣ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಸ್ಕೀಂ ಮಾಡಿ ಅದನ್ನು ಘೋಷಿಸುವ ಮುನ್ನ ಪೂರಕ ವ್ಯವಸ್ಥೆ ಮಾಡಿಕೊಳ್ಳದ ಸರ್ಕಾರದ ಸ್ಥಿತಿ. ಏಕಂದ್ರೆ ಉಚಿತ ಪ್ರಯಾಣದ ಘೋಷಣೆ ಮಾಡಿರೋ ಸರ್ಕಾರಕ್ಕೆ ಆ ವ್ಯವಸ್ಥೆ ನಿರ್ವಹಣೆಗೆ ಬೇಕಾದ ಸಂಪನ್ಮೂಲಗಳಿವೆಯೇ.. ಇಲ್ಲವೇ.. ಎನ್ನುವುದರ ಮಾಹಿತಿನೇ ಇಲ್ಲವಾಗಿದೆ.ಸ್ಕೀಂ ಜಾರಿ ಬೆನ್ನಲ್ಲಿ ಸೃಷ್ಟಿಯಾಗುತ್ತಿರುವ ಕೆಲವು ಪ್ರಮುಖ ಆತಂಕಗಳು ಇಲ್ಲಿವೆ.
ಉಚಿತ ಬಸ್ ಪ್ರಯಾಣದ ಘೋಷಣೆ ಮಾಡಲು ಹೊರಟಿರುವ ಕಾಂಗ್ರೆಸ್ ಸರ್ಕಾರಕ್ಕೆ ಸ್ಕೀಂ ಘೋಷಣೆ ಮಾಡ್ತಿದ್ದಂಗೆ ಎಷ್ಟು ಹೆಚ್ಚುವರಿ ಬಸ್ ಗಳ ಅವಶ್ಯಕತೆ ಬೇಕಾಗುತ್ತದೆ..ಆ ಕೊರತೆ ನೀಗಿಸುವ ವ್ಯವಸ್ಥೆ ಇದೆಯಾ..? ಕೊರತೆ ಎದುರಿಸಲಿಕ್ಕೆ ಬೇಕಾದ ಸಂಪನ್ಮೂಲ ಇದೆಯಾ..? ಎನ್ನುವ ಮಾಹಿತಿನೇ ಇಲ್ಲ ಎನಿಸುತ್ತದೆ.ಏಕಂದ್ರೆ ಉಚಿತ ಬಸ್ ಪ್ರಯಾಣ ಘೋಷಣೆಯಾ ಗುತ್ತಿದ್ದಂತೆ ಬಸ್ ನಲ್ಲಿ ಸಂಚರಿಸುತ್ತಿರುವ ಮಹಿಳೆಯರ ಶೇಕಡಾವಾರು ಪ್ರಮಾಣದಲ್ಲಿ ಒಂದಷ್ಟು ಹೆಚ್ಚಳ ಆಗುತ್ತದೆ.ಆದರೆ ಹೆಚ್ಚಳವಾಗಲಿರುವ ಅಷ್ಟೊಂದು ಪ್ರಮಾಣದ ಮಹಿಳಾ ಪ್ರಯಾಣಿಕರನ್ನು ಹೊತ್ತೊಯ್ಯಲು ಬೇಕಾದಷ್ಟು ಬಸ್ ಗಳೇ ಇಲ್ಲವಾಗಿದೆ. ಈ ಅಂಕಿಅಂಶಗಳನ್ನು ಕ್ರೋಢೀಕರಿಸುವ ಕೆಲಸವನ್ನು ಸರ್ಕಾರ ಏನಾದ್ರೂ ಮಾಡಿದೆಯೇ..? ಪಡೆದುಕೊಂಡಿದೆ ಎನ್ನುವುದೇ ಆದಲ್ಲಿ ಅಷ್ಟೊಂದು ಹೆಚ್ಚುವರಿ ಬಸ್ ಗಳೆಲ್ಲಿವೆ..? ಅವುಗಳನ್ನು ಎಲ್ಲಿಂದ ತರುತ್ತೀರಿ..? ನಾಳೆಯೇ ಸ್ಕೀಂ ಘೋಷಣೆಯಾದ್ರೆ ತತ್ ಕ್ಷಣ ಬಸ್ ಗಳತ್ತ ದೌಡಾಯಿಸುವ ಮಹಿಳಾ ಪ್ರಯಾಣಿಕರನ್ನು ಹೇಗೆ ಹೊತ್ತೊಯ್ಯುವ ಕೆಲಸ ಮಾಡ್ತೀರಿ..? ಬಹುಮುಖ್ಯವಾದ ಈ ಪ್ರಶ್ನೆ ಬಗ್ಗೆ ಸರ್ಕಾರ ಆಲೋಚಿಸಿಯೇ ಇಲ್ವೇನೋ..?
“ಹೌದು..ಫ್ರೀ ಸ್ಕೀಂಗೆ ತತ್ ಕ್ಷಣಕ್ಕೆ 1300 ಬಸ್ ಹಾಗೂ ಕನಿಷ್ಟ ಎಂದ್ರೂ 4 ರಿಂದ 5 ಸಾವಿರ ಡ್ರೈವರ್ಸ್-ಕಂಡಕ್ಟರ್ಸ್ ಬೇಕಾಗುತ್ತದೆ.ಇಷ್ಟೊಂದು ಸಂಪನ್ಮೂಲ ಸಧ್ಯಕ್ಕಂತೂ ನಮ್ಮಲ್ಲಿಲ್ಲ.. ದಿಢೀರ್ ತಂದ್ ನಿಲ್ಲಿಸೊಕ್ಕೆ,ನಾಳೆ ಬೆಳಗಾಗವುದರೊಳಗೆ ಅಷ್ಟೊಂದು ಸಿಬ್ಬಂದಿ ನೇಮಿಸಿಕೊಳ್ಳಲಿಕ್ಕೂ ಆಗೊಲ್ಲ.ಏಕೆಂದ್ರೆ ನಮ್ಮ ಬಳಿಯೇನೂ ಮಂತ್ರದಂಡವಿಲ್ಲ..ಇದೆಲ್ಲಾ ದಿಢೀರ್ ನಡೆದುಬಿಡುವಂಥ ಪ್ರಕ್ರಿಯೆಗಳೂ ಅಲ್ಲ..ಹಾಗಂತ ಆಗೋದೇ ಇಲ್ಲ ವೆಂದೇನಲ್ಲ.ಕಡಿಮೆ,ಕಡಿಮೆ ಎಂದ್ರೂ ಒಂದೆರೆಡು ತಿಂಗಳುಗಳೇ ಬೇಕಾಗಬಹುದು.ಆದ್ರೆ ನಮಗಿರುವ ಗೊಂದಲ ಹಾಗೂ ಅನುಮಾನ ಏನಂದ್ರೆ ನಮ ಗೆ ಜನ ಅಷ್ಟೊಂದು ಕಾಲಾವಕಾಶ ಕೊಡ್ತಾರಾ ಎಂದು..ನಮ್ಮ ಪ್ರಯತ್ನವನ್ನಂತೂ ನಾವು ಮಾಡಿದ್ದೇವೆ.ಪ್ರಾಮಾಣಿಕವಾಗಿ ಸರ್ಕಾರಕ್ಕೆ ವರದಿ ನೀಡಿದ್ದೇವೆ” – ಕೆಎಸ್ ಆರ್ ಟಿಸಿ ಹಿರಿಯ ಅಧಿಕಾರಿ
೧೩೦೦-೧೫೦೦ ಹೊಸ ಬಸ್ ಗಳ ಅವಶ್ಯಕತೆ: ಕೆಎಸ್ ಆರ್ ಟಿಸಿ ಅಧಿಕಾರಿಗಳು ಹೇಳುವ ಪ್ರಕಾರ ಹೆಚ್ಚಾಗಲಿರುವ ಮಹಿಳಾ ಪ್ರಯಾಣಿಕರನ್ನು ಹೊತ್ತೊಯ್ಯಲು ಕೆಎಸ್ ಆರ್ ಟಿಸಿ, ಬಿಎಂಟಿಸಿ,ಎನ್ ಡಬ್ಲೂ ಕೆ ಆರ್ ಟಿಸಿ,ಕೆಕೆಆರ್ ಟಿಸಿ ನಿಗಮಗಳನ್ನು ಒಟ್ಟು ಸೇರಿಸಿ 1300 ಕ್ಕೂ ಹೆಚ್ಚು ಬಸ್ ಗಳು ಬೇಕಾಗುತ್ತವೆ.ಬಿಎಂಟಿಸಿ ಬಿಟ್ಟರೆ ಉಳಿದ ಮೂರು ನಿಗಮಗಳಲ್ಲಿ ಬಸ್ ಗಳ ಖರೀದಿಯೇ ನಿರೀಕ್ಷಿತ ಸಂಖ್ಯೆಯಲ್ಲಿ ಆಗಿಯೇ ಇಲ್ಲ.ಕೆಎಸ್ ಆರ್ ಟಿಸಿಗೆ ಹತ್ತಿರತ್ತಿರ 500 ರಿಂದ 600 ಬಸ್ ಗಳು ಬೇಕಾಗುತ್ತವೆ.ಇಷ್ಟೊಂದು ಪ್ರಮಾಣದ ಬಸ್ ಗಳು ಇದ್ದಲ್ಲಿ ಮಾತ್ರ ಫ್ರೀ ಸ್ಕೀಂ ನಲ್ಲಿ ಮಹಿಳೆಯರನ್ನು ಸಮರ್ಪಕವಾಗಿ ಹೊತ್ತೊಯ್ಯಲು ಸಾಧ್ಯವಾಗುತ್ತದೆಯಲ್ಲದೇ ಸ್ಕೀಂ ಕೂಡ ಯಶಸ್ವಿಯಾಗುತ್ತದೆ.
“ನಮಗೆ ಅದೆಲ್ಲಾ ಗೊತ್ತಿಲ್ಲ.ಅದು ಸರ್ಕಾರದ ರಿಸ್ಕ್..ನಾವೇಕೆ ತಲೆಕೆಡಿಸಿಕೊಳ್ಳಬೇಕು.ನಮಗೆ ಸರ್ಕಾ ರ ಘೋಷಿಸಿದ ಭರವಸೆ ಈಡೇರಿಸಬೇಕು ಅಷ್ಟೆ..ಮಾತು ಕೊಡುವ ಮುನ್ನ ಇದೆಲ್ಲಾ ಆಲೋಚಿಸಬೇಕಿತ್ತಲ್ವಾ..?ಹಾಗೆ ನೋಡಿದ್ರೆ ಸರ್ಕಾರ ಅಸ್ಥಿತ್ವಕ್ಕೆ ಬರ್ತಿದ್ದಂಗೆ ಯೋಜನೆ ಜಾರಿ ಮಾಡಬೇಕಿತ್ತು.ಈಗಾಗಲೇ ಟೈಮ್ ಆಗೋಗಿದೆ.ನಾವೆಲ್ಲಾ ಕಾಂಗ್ರೆಸ್ ಗೆ ಮತ ಹಾಕಿದ್ದೇವೆ.ನಾವು ನಮ್ಮ ಮಾತು ಉಳಿಸಿಕೊಂಡಿದ್ದೇವೆ..ಈಗ ಸರ್ಕಾರ ಅದರ ಮಾತು ಉಳಿಸಿಕೊಳ್ಳಲಿ ಅಷ್ಟೇ..ನೆವ ಹೇಳೋದನ್ನು ಬಿಟ್ಟು ಮೊದಲು ಕೆಲಸ ಮಾಡಲಿ.. – ಮಹಿಳಾ ಪ್ರಯಾಣಿಕರು
ಹೋಗ್ಲಿ ಇಷ್ಟೊಂದು ಬಸ್ ಗಳನ್ನು ತತ್ ಕ್ಷಣಕ್ಕೆ ಖರೀದಿಸ್ಲಿಕ್ಕೆ ಆಗುತ್ತಾ..ದಿನ ಬೆಳಗಾಗುವುದರೊಳಗೆ ಅಷ್ಟೊಂದು ಬಸ್ ಗಳನ್ನು ತಂದು ನಿಲ್ಲಿಸಲಾಗುತ್ತಾ..?ಅಷ್ಟೊಂದು ಬಸ್ ಗಳನ್ನು ಖರೀದಿ ಸ್ಲಿಕ್ಕೆ ಯಾವ್ ಹಂತದಲ್ಲಿ ಪ್ರಯತ್ನಗಳಾಗಿವೆ ಎನ್ನುವುದನ್ನು ನೋಡಿದ್ರೆ ಹೊಸ ಬಸ್ ಗಳ ಖರೀದಿಗೆ ಪೂರಕವಾದ ಯಾವುದೇ ಚಟುವಟಿಕೆಗಳು ನಡೆದೇ ಇಲ್ಲವಂತೆ.ಟೆಂಡರ್ ಪ್ರಕ್ರಿಯೆ ಪೂರ್ಣಗೊಳ್ಳೊಕ್ಕೆ ತಿಂಗಳುಗಟ್ಟಲೇ ಸಮಯ ಬೇಕಾಗುತ್ತದೆ.ಆ ಪ್ರಕ್ರಿಯೆಗೆ ಗ್ರೀನ್ ಸಿಗ್ನಲ್ ಕೂಡ ಸಿಕ್ಕಿಲ್ಲವಂತೆ..ಇಂಥಾ ವ್ಯವಸ್ಥೆಗಳಿರುವಾಗ ಯೋಜನೆಯಿಂದ ಹೆಚ್ಚಾಗಲಿರುವ ಲಕ್ಷಾಂತರ ಮಹಿಳಾ ಪ್ರಯಾಣಿಕರಿಗೆ ಸಮರ್ಪಕ ಬಸ್ ವ್ಯವಸ್ಥೆ ಲಭ್ಯವಾಗುತ್ತಾ..? ಆತ್ಮಾವಲೋಕನ ಮಾಡಿಕೊಳ್ಳಬೇಕಿರುವುದು ಯಾರೆನ್ನುವುದನ್ನು ಸರ್ಕಾರವೇ ಹೇಳಬೇಕು.
ಸ್ಕ್ರಾಪ್ ಹಂತದ ಬಸ್ ಗಳ ತಲೆನೋವು: ಇದರ ಜತೆಗೆ ನಾಲ್ಕು ನಿಗಮಗಳಿಗೆ ಎದುರಾಗಿರುವ ಮತ್ತೊಂದು ಸವಾಲೆಂದರೆ ಸ್ಕ್ರಾಪ್ ಬಸ್ ಗಳು. ಒಂದು ಅಂದಾಜಿನ ಪ್ರಕಾರ ಹತ್ತಿರತ್ತಿರ ೧ ಸಾವಿರ ಬಸ್ ಗಳು ಸ್ಕ್ರಾಪ್ ಹಂತ ತಲುಪಿವೆ.ಆ ಬಸ್ ಗಳನ್ನು ಸ್ಕೀಂ ಒಂದಕ್ಕೆ ಅಲ್ಲ,ಯಾವುದಕ್ಕೂ ಬಳಸಲಿಕ್ಕೂ ಆಗೊಲ್ಲ.ಹೊಸ ಬಸ್ ಗಳ ಖರೀದಿಯೇ ನಡೆಯಬೇಕಾಗುತ್ತದೆ.ಇದೆಲ್ಲವನ್ನು ಗಮನಿಸಿದ್ರೆ ೨ ಸಾವಿರ ಹೊಸ ಬಸ್ ಗಳೇ ಸ್ಕೀಂಗೆ ಬೇಕಾಗುತ್ತದೆಯೇನೋ..?
೫ ಸಾವಿರ ಸಿಬ್ಬಂದಿ ನಿಯೋಜನೆಯಾಗಬೇಕು.. ಇದು ಒಂದ್ ಸಮಸ್ಯೆಯಾದ್ರೆ ಮತ್ತೊಂದು ಪ್ರಮುಖ ಸಮಸ್ಯೆ ಹೆಚ್ಚುವರಿ ಬಸ್ ಗಳು ಸೇರಿದಂತೆ ಒಟ್ಟಾರೆ ವ್ಯವಸ್ಥೆ ನಿರ್ವಹಣೆಗೆ ಬೇಕಿರುವ ಸಿಬ್ಬಂದಿ ಕೊರತೆಯದು.ಕೆಎಸ್ ಆರ್ ಟಿಸಿ ಅಧಿಕಾರಿಗಳ ಪ್ರಕಾರ ಜಾರಿಯಾಗಲಿರುವ ಸ್ಕೀಂ ನಿರ್ವಹಣೆಗೆ ಹತ್ತಿರತ್ತಿರ 04 ರಿಂದ 05 ಸಾವಿರ ಸಿಬ್ಬಂದಿ ಬೇಕಾಗುತ್ತದೆಯಂತೆ.ಅದರಲ್ಲಿ ಬಹುತೇಕ ಡ್ರೈವರ್ಸ್-ಕಂಡಕ್ಟರ್ಸ್ ಗಳಂತೆ. ಇನ್ನುಳಿದಂತೆ ಮೆಕ್ಯಾನಿಕ್ಸ್..
ಆದರೆ ಇಷ್ಟೊಂದು ಪ್ರಮಾಣದ ಸಿಬ್ಬಂದಿ ಭರ್ತಿ ಮಾಡಿಕೊಳ್ಳುವುದು ಅಷ್ಟೊಂದು ಸಲೀಸಾ..? ಅದು ಅಂದುಕೊಂಡಷ್ಟು ಸುಲಭದ ಮಾತಾ..? ವಾಸ್ತವ ಏನಂದರೆ ನಾಲ್ಕು ನಿಗಮಗಳಲ್ಲಿ ಭರ್ತಿಯಾಗಬೇಕಾದ ಹುದ್ದೆಗಳೇ ಸಾವಿರಾರು ಬಾಕಿಯಿದೆ.ಅದರ ಭರ್ತಿನೇ ಅನೇಕ ವರ್ಷಗಳಿಂದ ನನೆಗುದಿಗೆ ಬಿದ್ದಿದೆ.ಕಾರಣ ಕೇಳಿದ್ರೆ ತಾಂತ್ರಿಕ-ಆಡಳಿತಾ ತ್ಮಕ ಅನುಮೋದನೆಯ ಸಮಸ್ಯೆ ಎನ್ನಲಾಗ್ತಿದೆ.ಇದರ ನಡುವೆ ಅಗತ್ಯವಿರುವ ಹೆಚ್ಚುವರಿ ಸಿಬ್ಬಂದಿಯನ್ನು ದಿಢೀರ್ ತುಂಬಿಕೊಳ್ಳೊಕ್ಕೆ ಸಾಧ್ಯವಾಗುತ್ತಾ..? ಆ ನಿಟ್ಟಿನಲ್ಲಿ ಪ್ರಕ್ರಿಯೆಗಳು ಪೂರ್ಣಗೊ ಳ್ಳೋದು ಸಾಧ್ಯನಾ..? ಅಧಿಕಾರಿಗಳ ಪ್ರಕಾರ ದಿಢೀರ್ ಸಾಧ್ಯವೇ ಇಲ್ಲ ಎನ್ನುತ್ತಾರೆ.
ಕಾಂಗ್ರೆಸ್ ಘೋಷಿಸಿದಂತೆ ಯೋಜನೆ ಜಾರಿ ಮಾಡಬೇಕು ಅಷ್ಟೆ..ನಮಗೆ ಮೊದಲೇ ಗೊತ್ತಿತ್ತು.ಈ ವಿಷಯದಲ್ಲಿ ಕಾಂಗ್ರೆಸ್ ವಿಫಲವಾಗುತ್ತದೆ ಎಂದು. ಕಾಂಗ್ರೆಸ್ ಅಧಿಕಾರಕ್ಕೆ ಬರುವ ಏಕೈಕ ಕಾರಣಕ್ಕೆ ಆಗದಿರುವ ಭರವಸೆ ಕೊಡ್ತು.ಹಗಲಿನಲ್ಲಿಯೇ ಚಂದ್ರನನ್ನು ತೋರಿಸುವ ಕೆಲಸಕ್ಕೆ ಮುಂದಾಯ್ತು. ಈಗ ಯೋಜನೆ ಜಾರಿಗೆ ಸಾಕಷ್ಟು ಸಮಸ್ಯೆಗಳು ಎದುರಾಗುತ್ತಿರುವುದು ತಿಳಿದುಬಂದಿದೆ.ಇನ್ನೂ ಕಾಲಾವಕಾಶ ಕೇಳಿದ್ರೆ ನಾವು ಬೀದಿಗೆ ಇಳಿಯ ಬೇಕಾಗುತ್ತದೆ.ಕಾಂಗ್ರೆಸ್ ಘೋಷಣೆಗಳ ಜಾರಿ ವಿಳಂಬವಾಗುತ್ತಿರುವುದರ ವಿರುದ್ದ ಈಗಾಗಲೇ ಬಿಜೆಪಿ ಹೋರಾಟ ರೂಪಿಸುತ್ತಿದೆ.ನಮ್ಮ ನಾಯಕರು ಈ ಬಗ್ಗೆ ಕರೆ ಕೊಡ್ತಿದ್ದಂತೆ ಬೀದಿಗೆ ಇಳಿಯೋದೇ..ಹೋರಾಟ ಮಾಡೋದೆ.- ಬೆಂಗಳೂರು ಬಿಜೆಪಿ ಮುಖಂಡ
ಹಾಗಾದ್ರೆ ಸರ್ಕಾರದ ಸ್ಕೀಂ ಫೇಲ್ಯೂರ್ ಆಗಿಬಿಡುತ್ತಾ..? ಸರ್ಕಾರಕ್ಕೆ ಕೆಟ್ಟ ಹೆಸರು ಬಂದುಬಿಡುತ್ತಾ..? ಹಾಗೆಂದು ಹೇಳಲಿಕ್ಕೂ ಆಗೊಲ್ಲ.ಸ್ಕೀಂ ಸಕ್ಸೆಸ್ ಆಗಲೇಬೇಕೆಂದು ಪಣ ತೊಟ್ಟಿರುವ ಸರ್ಕಾರಕ್ಕೆ ಈ ಸವಾಲು-ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳೋದು ಕಷ್ಟವೇನಲ್ಲ..ಆದ್ರೆ ಅದಕ್ಕೆ ಸಮರೋಪಾದಿಯಲ್ಲಿ ಕಾರ್ಯತಂತ್ರ ರೂಪಿಸಬೇಕಾಗುತ್ತದೆ. ಆದ್ರೆ ಸ್ಕೀಂ ಜಾರಿಗೊಳಿಸುವ ಮುನ್ನ ಏನೆಲ್ಲಾ ವ್ಯವಸ್ಥೆಗಳಿವೆ..ಈ ವ್ಯವಸ್ಥೆಯಲ್ಲಿ ಎಲ್ಲವನ್ನೂ ನಿಭಾಯಿಸಲಿಕ್ಕೆ ಸಾಧ್ಯನಾ..? ಹೆಚ್ಚುವರಿ ಆಗಬೇಕಾದ್ರೆ ಏನೆಲ್ಲಾ ಮಾಡಬೇಕಿತ್ತು ಎನ್ನುವುದರ ಸಮಗ್ರ ಚರ್ಚೆ-ಚಿಂತನೆ ಮಾಡಬಹುದಿತ್ತೇನೋ..?
ಆದರೆ ಕಾಂಗ್ರೆಸ್ ಅಧಿಕಾರಕ್ಕೆ ಬಂದು ಕೆಲವೇ ದಿನಗಳಾಗಿವೆ..ಅಷ್ಟರಲ್ಲೇ ಇದನ್ನೆಲ್ಲಾ ಮಾಡಲಿಕ್ಕೆ ಸಾಧ್ಯನಾ.? ಸ್ವಲ್ಪ ಕಾಲಾವಕಾಶ ಬೇಕಾಗುತ್ತದೆ ಎಂಬ ವಾದ ಒಡ್ಡುವವರು ಇದ್ದಾರೆ.ಆ ವಾದದಲ್ಲೂ ಅರ್ಥವಿದೆ.ಆದರೆ ಜನ ಕಾಲಾವಕಾಶ ನೀಡುವ ಸ್ಥಿತಿಯಲ್ಲಿ ಇಲ್ಲವಲ್ಲಾ..? ಅವರಿಗೆ ಸರ್ಕಾರ ಕೊಟ್ಟ ಭರವಸೆ ಈಡೋರದಷ್ಟೇ ಮುಖ್ಯ.ಫ್ರೀ ಸ್ಕೀಂಗೆ ಎಷ್ಟೇ ಕೋಟಿ ಖರ್ಚಾದರೂ, ಅದನ್ನು ಭರಿಸಲಿಕ್ಕೆ ಸಿದ್ದವಿರುವ ಸರ್ಕಾರ -ನಾಲ್ಕು ನಿಗಮಗಳು ತಿಕ್ಕಾಟ-ಪೇಚಾಟ-ಗೊಂದಲಕ್ಕೆ ಸಿಲುಕಿರುವುದೇ ಹೆಚ್ಚುವರಿ ಬಸ್ ಹಾಗೂ ಅದಕ್ಕೆ ಬೇಕಿರುವ ಸಿಬ್ಬಂದಿ ಪೂರೈಕೆ ಹೇಗೆ ಎನ್ನುವ ವಿಚಾರದಲ್ಲಿ..ಈ ಎರಡು ಸವಾಲುಗಳನ್ನು ಹೇಗೆ ಮೆಟ್ಟಿನಿಲ್ಲುತ್ತದೆ..ಹೇಗೆ ಸಕ್ಸೆಸ್ ಆಗುತ್ತದೆ ಎನ್ನುವುದೇ ಕುತೂಹಲ.
Comments
Post a Comment