ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಆರ್.ಕೆ.ರಮೇಶ್ ಮೌಲಾನಾ ಮಕ್ಸೂದ್ ಇಮ್ರಾನ್ ರಷಾದಿ ಬೇಟಿ.
ಬೆಂಗಳೂರು ದಕ್ಷಿಣ ವಿಧಾನಸಭಾ
ಕ್ಷೇತ್ರದ ಅಭ್ಯರ್ಥಿ ಆರ್.ಕೆ.ರಮೇಶ್
ಮೌಲಾನಾ ಮಕ್ಸೂದ್ ಇಮ್ರಾನ್
ರಷಾದಿ ಬೇಟಿ.
ಬಿಜೆಪಿಯಿಂದ ಮುಸ್ಲಿಂರ ದಾರಿ ತಪ್ಪಿಸುವ ಕೆಲಸ; ಆರ್.ಕೆ.ರಮೇಶ್.
ಬೆಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆರ್.ಕೆ. ರಮೇಶ್ ಬೆಂಗಳೂರಿನ ಸಿಟಿ ಮಾರ್ಕೆಟ್ ಬಳಿ ಇರುವ ಜಾಮೀಯಾ ಮಸೀದಿಯಲ್ಲಿ ಮೌಲಾನಾ ಮಕ್ಸೂದ್ ಇಮ್ರಾನ್ ರಶಾದಿ ಅವರನ್ನು ಬೇಟಿ ಮಾಡಿ ಆಶೀರ್ವಾದ ಪಡೆದರು.
ಈ ಸಂದರ್ಭದಲ್ಲಿ ಮಾಜಿ ಪಾಲಿಕೆ ಸದಸ್ಯ ಜುಲ್ಪಿಕರ್ ಅಹಮದ್ ಖಾನ್ ಅಲಿಯಾಸ್ ಟಿಪ್ಪು ಅಲೀಮ್, ಇರ್ಪಾನ್ , ಮಹಮೂದ್ ಅನ್ಸರ್, ಇನಾಯತ್ ಕಾಂಗ್ರೆಸ್ ಮುಖಂಡರು ಮತ್ತು ಮತ್ತಿತರರು ಹಾಜರಿದ್ದರು.
ಬಳಿಕ ಮಾತನಾಡಿದ ಆರ್.ಕೆ.ರಮೇಶ್, ಇಂದು ಮುಸ್ಲಿಂ ಗುರುಗಳನ್ನು ಬೇಟಿಯಾಗಿ ಆಶೀರ್ವಾದ ಪಡೆಯುವ ಉದ್ದೇಶದಿಂದ ಅವರನ್ನು ಬೇಟಿ ಮಾಡಲಾಗಿದೆ. ಮೌಲಾನಾ ಅವರು ಆರೋಗ್ಯ,ಶಿಕ್ಷಣ, ಅನೇಕ ವ್ಯವಸ್ಥೆಗಳನ್ನು ಕಲ್ಪಿಸುವಂತೆ ಸಲಹೆ ನೀಡಿದ್ದಾರೆ. ಅದರಂತೆ ನಡೆದುಕೊಳ್ಳುವುದಾಗಿ ತಿಳಿಸಿದರು.
ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಜೆಡಿಎಸ್ ಗೆ ಯಾವುದೇ ರೀತಿಯ ಅಲೆಯಿಲ್ಲ. ಹಾಲಿ ಶಾಸಕರಾದ ಕೃಷ್ಣಪ್ಪ ಅವರು ಜೆಡಿಎಸ್ ಗೆ ಮತಹಾಕುವಂತೆ ಜನರ ದಿಕ್ಕು ತಪ್ಪಿಸುತ್ತಿದ್ದಾರೆ. ಮುಸ್ಲಿಂ ಸಮುದಾಯದವರು ಇದನ್ನು ಅರ್ಥ ಮಾಡಿಕೊಂಡು ಕಾಂಗ್ರೆಸ್ ಗೆ ಮತ ನೀಡಬೇಕೆಂದು ಮನವಿ ಮಾಡಿದರು.
Comments
Post a Comment