ಪುಲಕೇಶಿ ವಿಧಾನ ಸಭಾ ಕ್ಷೇತ್ರ:ಕೈ ಅಭ್ಯರ್ಥಿ ಗೆ ಮದರ್ ವುಡ್ ಪೌಂಡೇಶನ್ ಬೆಂಬಲ.
ಪುಲಕೇಶಿ ವಿಧಾನ ಸಭಾ ಕ್ಷೇತ್ರ:ಕೈ ಅಭ್ಯರ್ಥಿ ಗೆ ಮದರ್ ವುಡ್ ಪೌಂಡೇಶನ್ ಬೆಂಬಲ.
ಪುಲಕೇಶಿ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎ.ಸಿ.ಶ್ರೀನಿವಾಸ್ ಗೆ ಸಂಪೂರ್ಣ ಬೆಂಬಲ ನೀಡುವುದರ ಮೂಲಕ ಬಾರೀ ಬಹುಮತದಿಂದ ಗೆಲ್ಲಿಸುವುದಾಗಿ ಸಗಾಯಿಪುರಂನ ಮದರ್ ವುಡ್ ಪೌಂಡೇಶನ್ ಸದಸ್ಯರು ಘೋಷಿಸಿದ್ದಾರೆ.
ಪುಲಕೇಶಿ ವಿಧಾನ ಸಭಾ ಕ್ಷೇತ್ರದ ಪ್ರೇಜರ್ ಟೌನ್ ಹೋಲಿ ಚರ್ಚ್ ನಲ್ಲಿ ನಡೆದ ಸಭೆಯಲ್ಲಿ ಈ ವಿಷಯ ತಿಳಿಸಿದ ಮದರ್ ವುಡ್ ಪೌಂಡೇಶನ್ ಅಧ್ಯಕ್ಷ ರಾಜು, ಈ ಬಾರೀ ಪುಲಕೇಶಿ ವಿಧಾನ ಸಭಾ ಕ್ಷೇತ್ರದಲ್ಲಿ ಸಗಾಯಿಪುರಂನಲ್ಲಿ ತನ್ನದೇ ಸಮಾಜಿಕ ಸೇವಾ ಕಾರ್ಯಗಳನ್ನು ಮಾಡಿಕೊಳ್ಳುವ ಮೂಲಕ ಉತ್ತಮ ಚಾಪು ಮೂಡಿಸಿರುವ ಮದರ್ ವುಡ್ ಪೌಂಡೇಶನ್ ಕಾಂಗ್ರೆಸ್ ಅಭ್ಯರ್ಥಿ ಎ.ಸಿ.ಶ್ರೀನಿವಾಸ್ ಗೆ ಸಂಪೂರ್ಣ ಬೆಂಬಲ ನೀಡಲಿದೆ. ಎ.ಸಿ.ಶ್ರೀನಿವಾಸ್ ಅವರು ಗೆಲ್ಲುವುದು ನೂರಕ್ಕೆ ನೂರರಷ್ಟು ಸತ್ಯ ಎಂದು ಹೇಳಿದರು.
ಸಭೆಯಲ್ಲಿ ಮಾತನಾಡಿದ ಅಭ್ಯರ್ಥಿ ಎ.ಸಿ.ಶ್ರೀನಿವಾಸ್ , ಪುಲಕೇಶಿ ನಗರದಲ್ಲಿ ಪ್ರಮುಖವಾಗಿ ಕುಡಿಯುವ ನೀರಿನ ಸಮಸ್ಯೆ ಅತೀಯಾಗಿದ್ದು. ಶಾಸಕನಾಗಿ ಆಯ್ಕೆಯಾದ ಮೊದಲ ದಿನವೇ ನೀರಿನ ಸಮಸ್ಯೆ ಬಗೆಹರಿಸಲಾಗುವುದು. ಈ ಬಾಗದಲ್ಲಿ ವಾಸಿಸುವ ಕೊಳಚೆ ಪ್ರದೇಶದ ಜನರಿಗೆ ಮೂಲ ಭೂತ ಸೌಕರ್ಯ ಒದಗಿಸುವುದು ಮೊದಲ ಆದ್ಯತೆಯಾಗಿದೆ. ಈ ಬಾರೀ ನನ್ನಗೆ ಸಂಪೂರ್ಣ ಬೆಂಬಲ ದೊರೆಯಲಿದೆ ಗೆಲುವು ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮದರ್ ವುಡ್ ಪೌಂಡೇಶನ್ ನ ಗೌರವಾಧ್ಯಕ್ಷ ಗಿರೀಶ್ ಮಾತನಾಡಿ, ಸಮಾಜಿಕ ಸೇವೆಯಲ್ಲಿ ಮುಂಚೂಣಿಯಲ್ಲಿರುವ ಮದರ್ ವುಡ್ ಪೌಂಡೇಶನ್ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಎ.ಸಿ.ಶ್ರೀನಿವಾಸ್ ಗೆ ಸಂಪೂರ್ಣ ಬೆಂಬಲ ನೀಡಲಿದೆ ಎಂದು ಹೇಳಿದರು.
ಸಭೆಯಲ್ಲಿ ಮದರ್ ವುಡ್ ಪೌಂಡೇಶನ್ ಗೌರವಾಧ್ಯಕ್ಷ ರಾಬರ್ಟ್ ಕ್ರಿಸ್ಟೋಫರ್,ದೇವನಹಳ್ಳಿ ಕಾಂಗ್ರೆಸ್ ಮುಖಂಡ ನಾರಾಯಣ ಸ್ವಾಮಿ ಮತ್ತಿತರರು ಹಾಜರಿದ್ದರು.
Comments
Post a Comment