ಮಡಿವಾಳ ಸಂಘದಿಂದ ರಾಜ್ಯ ಮಟ್ಟದ ಪ್ರತಿಭಾ ಪುರಸ್ಕಾರಕ್ಕೆ ಆಹ್ವಾನ.*
ಮಡಿವಾಳ ಸಂಘದಿಂದ ರಾಜ್ಯ ಮಟ್ಟದ ಪ್ರತಿಭಾ ಪುರಸ್ಕಾರಕ್ಕೆ ಆಹ್ವಾನ.
ರಾಜ್ಯ ಮಡಿವಾಳ ಸಂಘದಿಂದ 2023ನೇ ಸಾಲಿಗೆ ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿಯಲ್ಲಿ ಶೇಕಡಾ 90ಕ್ಕಿಂತ ಅಧಿಕ ಅಂಕಗಳಿಸಿದ ಇಪ್ಪತ್ತು ವಿದ್ಯಾರ್ಥಿಗಳನ್ನು ದತ್ತು ತೆಗೆದುಕೊಂಡು ಒದಿಸಲು ಮತ್ತು ಅವರನ್ನು ರಾಜ್ಯ ಮಟ್ಟದ ಪ್ರತಿಭಾ ಪುರಸ್ಕಾರಕ್ಕೆ ವೇದಿಕೆ ಮೇಲೆ ಸನ್ಮಾನಿಸಲು ತೀರ್ಮಾನಿಸಿದೆ ಎಂದು ಸಂಘದ ಅಧ್ಯಕ್ಷ ರಾಜ್ಯಾಧ್ಯಕ್ಷ ಸಿ.ನಂಜಪ್ಪ ತಿಳಿಸಿದರು.
ಬೆಂಗಳೂರು ಪ್ರೆಸ್ ಕ್ಲಬ್ ಏರ್ಪಡಿಸಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಎಲ್ಲ ಭಾಗದ ಮಡಿವಾಳರ ವಿದ್ಯಾರ್ಥಿ, ವಿದ್ಯಾರ್ಥಿನಿಯರನ್ನು ಜಿಲ್ಲಾ ಹಾಗೂ ತಾಲೂಕು ಸಂಘಗಳ ಮೂಲಕ ಗುರುತಿಸಿ ಪ್ರತಿಭಾನ್ವಿತ ಮಕ್ಕಳನ್ನು ಪುರಸ್ಕರಿಸಲಾಗುತ್ತದೆ ಎಂದು ಹೇಳಿದರು.
ರಾಜ್ಯ ಸಂಘ ತಮ್ಮ 2023ರ ಅಂಕಪಟ್ಟಿ, ಇತೀಚಿನ ಬಾವಚಿತ್ರಗಳು, ಆಧಾರ್ ಕಾರ್ಡ್, ಮೊಬೈಲ್ ಸಂಖ್ಯೆ ಎಲ್ಲ ಮಾಹಿತಿಯನ್ನು ಸಂಘದ ಕಚೇರಿಗೆ ಖುದ್ದಾಗಿ ನೀಡಬೇಕೆಂದು ಮನವಿ ಮಾಡಿದರು. ಹೆಚ್ಚಿನ ಮಾಹಿತಿಗಾಗಿ ಕೇಂದ್ರ ಸಂಘದ ದೂರವಾಣಿ 08023460946, ಪ್ರಧಾನ ಕಾರ್ಯದರ್ಶಿ ಬಿ.ಆರ್.ಪ್ರಕಾಶ್ 9611664485, ನೌಕರ ಸಮಿತಿ ಯ ಉಪಾಧ್ಯಕ್ಷ ಜಿ.ಎಮ್. ಶಂಕರಪ್ಪ 9844863818, ಪ್ರಧಾನ ಸಂಚಾಲಕರು ಪ್ರಭಾಕರ್ ಎ. ಇವರನ್ನು ಸಂಪರ್ಕಿಸಬಹುದಾಗಿದೆ ಎಂದು ತಿಳಿಸಿದರು.
ಮಡಿವಾಳ ಸಮುದಾಯಕ್ಕೆ ಎಸ್.ಸಿ.ಮೀಸಲಾತಿ ನೀಡಬೇಕು ಕಳೆದ ಸರ್ಕಾರದ ಅವಧಿಯಲ್ಲಿ ಒತ್ತಡ ಹೇರುತ್ತಾ ಬಂದಿದ್ದೇವೆ. ಈ ಬಗ್ಗೆ ರಾಜ್ಯ ಸರ್ಕಾರಗಳು ನಿರ್ಲಕ್ಷ್ಯ ದೋರಣೆ ತಾಳುತ್ತಿವೆ. ಮಹಾಲಕ್ಷ್ಮಿ ಲೇಔಟ್ ವಿಧಾನ ಸಭಾ ಕ್ಷೇತ್ರದಲ್ಲಿ ಮಡಿವಾಳ ಡೋಬಿಯವರಿಗೆ ಹಂಚಿಕೆಯಾಗಿದ್ದ ಮನೆಗಳು ಬೇರೆಯವರಿಗೆ ಹಂಚಿಕೆಯಾಗಿವೆ. ಈ ಬಗ್ಗೆ ಲೋಕಾಯುಕ್ತ ತನಿಖೆಗೆ ವಹಿಸಬೇಕೆಂದು ದೂರು ನೀಡಲಾಗಿದೆ ಎಂದು ಹೇಳಿದರು.
Comments
Post a Comment