ಕಾಂಗ್ರೆಸ್- ಬಿಜೆಪಿ ಒಳ ಒಪ್ಪಂದದಿಂದ ಟಿಕೇಟ್ ವಂಚಿತನಾದೆ; ಕೃಷ್ಣಯ್ಯ ಶೆಟ್ಟಿ.
ಕಾಂಗ್ರೆಸ್- ಬಿಜೆಪಿ ಒಳ ಒಪ್ಪಂದದಿಂದ ಟಿಕೇಟ್ ವಂಚಿತನಾದೆ; ಕೃಷ್ಣಯ್ಯ ಶೆಟ್ಟಿ.
ಗಾಂಧಿನಗರ ಅಭಿವೃದ್ಧಿ ಕುರಿತ ಪ್ರಣಾಳಿಕೆ ಬಿಡುಗಡೆ.
ಕಾಂಗ್ರೆಸ್ ಮತ್ತು ಬಿಜೆಪಿಯ ಒಳ ಒಪ್ಪಂದದಿಂದಾಗಿ ಗಾಂಧಿನಗರ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಟಿಕೇಟ್ ತಪ್ಪುವಂತಾಯಿತು ಎಂದು ಗಾಂಧಿ ನಗರ ವಿಧಾನ ಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಕೃಷ್ಣಯ್ಯ ಶೆಟ್ಟಿ ಹೇಳಿದರು.
ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ ತಮ್ಮ ಪ್ರಣಾಳಿಕೆ ಬಿಡುಗಡೆಗೊಳಿಸಿ ಬಿಎಸ್ ಪಿ ಜತೆಗಿನ ಮೈತ್ರಿ ಕುರಿತು ಮಾತನಾಡಿದ ಅವರು,ಬೆಂಗಳೂರು ಸಂಸದರೊಬ್ಬರು ಕಾಂಗ್ರೆಸ್ ಪಕ್ಷದ ಶಾಸಕರೊಂದಿಗೆ ತಾವು ಶಾಸಕರಾಗಿ, ನಾನು ಎಂಪಿಯಾಗಿರುತ್ತೇನೆ ಎಂಬ ಒಳ ಒಪ್ಪಂದ ಮಾಡಿಕೊಂಡಿದ್ದಾರೆ ಎಂದು ಕ್ಷೇತ್ರದ ಜನರು ಹೇಳುತ್ತಿದ್ದಾರೆ. ಸತತ ಒಂದು ವರ್ಷಗಳಿಂದ ಗಾಂಧಿನಗರ ವಿಧಾನ ಸಭಾ ಕ್ಷೇತ್ರದಲ್ಲಿ ಅನೇಕ ಸಮಾಜ ಸೇವಾ ಕಾರ್ಯವನ್ನು ಮಾಡಿಕೊಂಡು ಬಂದಿದ್ದೇನೆ.ಮುಂದೆಯೂ ಇದನ್ನು ಮುಂದುವರೆಸಲಿದ್ದೇನೆ. ಇದುವರೆಗೂ 40ಸಾವಿರ ಜನರಿಗೆ ಊಟ ಹಾಗೂ ಆಹಾರದ ಕಿಟ್ ವಿತರಿಸಲಾಗಿದೆ ಎಂದು ತಿಳಿಸಿದರು.
ಗಾಂಧಿನಗರ ವಿಧಾನ ಸಭಾ ಕ್ಷೇತ್ರದ ಶಾಸಕರಾಗಿ ಆಯ್ಕೆಯಾದರೆ ಹತ್ತು ಸಾವಿರ ಕುಟುಂಬಗಳಿಗೆ ಹತ್ತು ಸಾವಿರ ಮನೆ, ಶುದ್ಧ ಕುಡಿಯುವ ನೀರು, ಪ್ರತಿ ಕುಟುಂಬಗಳಿಗೆ ಸುಲಭ ಶೌಚಾಲಯ ವ್ಯವಸ್ಥೆ, ಹಾಲಿ ಇರುವ 32 ಕ್ಯಾಂಟಿನ್ ಗಳನ್ಬು 64ಕ್ಕೆ ಹೆಚ್ಚಿಸಿ ಕ್ಷೇತ್ರದಲ್ಲಿ ಬೆಳಗ್ಗೆ ಮತ್ತು ರಾತ್ರಿ ಊಟದ ವ್ಯವಸ್ಥೆ ಮಾಡಲಾಗುವುದು. ಎಲ್ಲ ಬಡವರಿಗೆ ಉಚಿತ ಆರೋಗ್ಯ ಸೌಲಭ್ಯ ಕಲ್ಪಿಸಲಾಗುವುದು ಎಂದು ತಿಳಿಸಿದರು.
Comments
Post a Comment