*65,990 ರೂ.ಗೆ ಭೀಮ್ ಇವಿ ಬೈಕ್ ಖರೀದಿಸಿ* ಬೆಂಗಳೂರು:ಓಝೋಟೆಕ್ ಕಂಪನಿಯು 'ಭೀಮ್’ ಹೆಸರಿನಲ್ಲಿ ಕೈಗೆಟುಕುವ ದರದಲ್ಲಿಹೊಸ ವಿದ್ಯುತ್‌ಚಾಲಿತ (ಇವಿ) ದ್ವಿಚಕ್ರ ವಾಹನ ಬಿಡುಗಡೆ ಮಾಡಿದೆ. 65,990 ರೂ.ನಿಂದ ಬೆಲೆ ಆರಂಭವಾಗಲಿದೆ. ಕಂಪನಿಯ ವೆಬ್‌ಸೈಟ್ ಮತ್ತು ಶೋರೂಂಗಳಲ್ಲಿ ಭೀಮ್ ವಾಹನದ ಮುಂಗಡ ಬುಕಿಂಗ್ ಮೇ 25ರಿಂದ ಆರಂಭವಾಗಲಿದೆ. ಇತರ ಕಂಪನಿಗಳ ಎಲೆಕ್ಟ್ರಿಕ್ ವಾಹನಗಳಗಿಂತ ಇದು ಭಿನ್ನ. ಎಲ್ಲ ಭೂಪ್ರದೇಶಗಳು ಮತ್ತು ಹವಾಮಾನ ಪರಿಸ್ಥಿತಿಗೆ ಹೊಂದಿಕೊಳ್ಳುವಂತೆ ಇವಿ ಬೈಕ್ ವಿನ್ಯಾಸಗೊಳಿಸಲಾಗಿದೆ. 10 ಕಿಲೋವ್ಯಾಟ್ ಬ್ಯಾಟರಿ ಸಾಮರ್ಥ್ಯ ಹೊಂದಿರುವ ಬೈಕ್, ಒಮ್ಮೆ ಚಾರ್ಜ್ ಮಾಡಿದರೆ 525 ಕಿಮೀ.ವರೆಗೆ ಕ್ರಮಿಸಲಿದೆ. ಇದರಿಂದಾಗಿ ದೀರ್ಘ ಪ್ರಯಾಣಗಳಿಗೂ ಅನುಕೂಲ. ಅಲ್ಯೂಮೀನಿಯಂ ಬಾಡಿ ಹೊಂದಿರುವ ಬೈಕ್, ಸ್ಮಾರ್ಟ್ ಬ್ಯಾಟರಿ ಮ್ಯಾನೇಜ್‌ಮೆಂಟ್ ಸಿಸ್ಟಂ (ಬಿಎಂಎಸ್) ಮತ್ತು ಸುಧಾರಿತ ವೈರ್ ವೆಲ್ಡಿಂಗ್ ತಂತ್ರ ಸಂಯೋಜನೆ ಮಾಡುತ್ತದೆ. ಇದು ಮಾರುಕಟ್ಟೆಯಲ್ಲಿ ಹೆಚ್ಚು ಸುರಕ್ಷತೆ ನೀಡುತ್ತದೆ. ಡ್ಯಾಶ್ ಬೋರ್ಡ್ ನಲ್ಲಿ ಜಿಪಿಎಸ್ ಸ್ಪೀಡ್, ಟ್ರಿಪ್ ಮೀಟರ್, ಜಿಪಿಎಸ್ ನ್ಯಾವಿಗೇಶನ್, ಡಾಕ್ಯುಮೆಂಟ್ ಮತ್ತು ಮೀಡಿಯಾ ವೀವರ್, ಟ್ರಾವೆಲ್ ಹಿಸ್ಟರಿ ಮತ್ತು ಇನ್ನಿತರೆ ಅತ್ಯಾಧುನಿಕ ವೈಶಿಷ್ಟ್ಯತೆಗಳಿವೆ. 7 ವರ್ಷವರೆಗೆ ವಾರಂಟಿ ಇದೆ. ಗ್ರಾಹಕರು ನಿಶ್ಚಿಂತೆಯಿಂದ ವಾಹನ ಖರೀದಿಸಬಹುದು. ಗ್ರಾಹಕರ ಅಭಿರುಚಿಗೆ ತಕ್ಕಂತೆ ಸೇವೆ ಪೂರೈಸುವ ನಿಟ್ಟಿನಲ್ಲಿ ಎಲ್ಲ ಪ್ರಮುಖ ಘಟಕಗಳನ್ನು ದೇಶೀಯವಾಗಿ ವಿನ್ಯಾಸಗೊಳಿಸಲಾಗಿದೆ.
*65,990 ರೂ.ಗೆ ಭೀಮ್ ಇವಿ ಬೈಕ್ ಖರೀದಿಸಿ*
ಬೆಂಗಳೂರು:ಓಝೋಟೆಕ್ ಕಂಪನಿಯು 'ಭೀಮ್’ ಹೆಸರಿನಲ್ಲಿ ಕೈಗೆಟುಕುವ ದರದಲ್ಲಿಹೊಸ ವಿದ್ಯುತ್‌ಚಾಲಿತ (ಇವಿ) ದ್ವಿಚಕ್ರ ವಾಹನ ಬಿಡುಗಡೆ ಮಾಡಿದೆ. 65,990 ರೂ.ನಿಂದ ಬೆಲೆ ಆರಂಭವಾಗಲಿದೆ.
ಕಂಪನಿಯ ವೆಬ್‌ಸೈಟ್ ಮತ್ತು ಶೋರೂಂಗಳಲ್ಲಿ ಭೀಮ್ ವಾಹನದ ಮುಂಗಡ ಬುಕಿಂಗ್ ಮೇ 25ರಿಂದ ಆರಂಭವಾಗಲಿದೆ. ಇತರ ಕಂಪನಿಗಳ ಎಲೆಕ್ಟ್ರಿಕ್ ವಾಹನಗಳಗಿಂತ ಇದು ಭಿನ್ನ. ಎಲ್ಲ ಭೂಪ್ರದೇಶಗಳು ಮತ್ತು ಹವಾಮಾನ ಪರಿಸ್ಥಿತಿಗೆ ಹೊಂದಿಕೊಳ್ಳುವಂತೆ ಇವಿ ಬೈಕ್ ವಿನ್ಯಾಸಗೊಳಿಸಲಾಗಿದೆ.
10 ಕಿಲೋವ್ಯಾಟ್ ಬ್ಯಾಟರಿ ಸಾಮರ್ಥ್ಯ ಹೊಂದಿರುವ ಬೈಕ್, ಒಮ್ಮೆ ಚಾರ್ಜ್ ಮಾಡಿದರೆ 525 ಕಿಮೀ.ವರೆಗೆ ಕ್ರಮಿಸಲಿದೆ. ಇದರಿಂದಾಗಿ ದೀರ್ಘ ಪ್ರಯಾಣಗಳಿಗೂ ಅನುಕೂಲ.
ಅಲ್ಯೂಮೀನಿಯಂ ಬಾಡಿ ಹೊಂದಿರುವ ಬೈಕ್, ಸ್ಮಾರ್ಟ್ ಬ್ಯಾಟರಿ ಮ್ಯಾನೇಜ್‌ಮೆಂಟ್ ಸಿಸ್ಟಂ (ಬಿಎಂಎಸ್) ಮತ್ತು ಸುಧಾರಿತ ವೈರ್ ವೆಲ್ಡಿಂಗ್ ತಂತ್ರ ಸಂಯೋಜನೆ ಮಾಡುತ್ತದೆ. ಇದು ಮಾರುಕಟ್ಟೆಯಲ್ಲಿ ಹೆಚ್ಚು ಸುರಕ್ಷತೆ ನೀಡುತ್ತದೆ. ಡ್ಯಾಶ್ ಬೋರ್ಡ್ ನಲ್ಲಿ ಜಿಪಿಎಸ್ ಸ್ಪೀಡ್, ಟ್ರಿಪ್ ಮೀಟರ್, ಜಿಪಿಎಸ್ ನ್ಯಾವಿಗೇಶನ್, ಡಾಕ್ಯುಮೆಂಟ್ ಮತ್ತು ಮೀಡಿಯಾ ವೀವರ್, ಟ್ರಾವೆಲ್ ಹಿಸ್ಟರಿ ಮತ್ತು ಇನ್ನಿತರೆ ಅತ್ಯಾಧುನಿಕ ವೈಶಿಷ್ಟ್ಯತೆಗಳಿವೆ.
7 ವರ್ಷವರೆಗೆ ವಾರಂಟಿ ಇದೆ. ಗ್ರಾಹಕರು ನಿಶ್ಚಿಂತೆಯಿಂದ ವಾಹನ ಖರೀದಿಸಬಹುದು. ಗ್ರಾಹಕರ ಅಭಿರುಚಿಗೆ ತಕ್ಕಂತೆ ಸೇವೆ ಪೂರೈಸುವ ನಿಟ್ಟಿನಲ್ಲಿ ಎಲ್ಲ ಪ್ರಮುಖ ಘಟಕಗಳನ್ನು ದೇಶೀಯವಾಗಿ ವಿನ್ಯಾಸಗೊಳಿಸಲಾಗಿದೆ.
Comments
Post a Comment