ಮರಳಿ ಗೂಡು ಸೇರಿದ ವೈಎಸ್ ವಿ ದತ್ತಾ... ಜೆಡಿಎಸ್ ಪಕ್ಷದಿಂದ ಕಡೂರಿನಿಂದಲೇ ಸ್ಪರ್ಧೆ...!
ಮರಳಿ ಗೂಡು ಸೇರಿದ ವೈಎಸ್ ವಿ ದತ್ತಾ... ಜೆಡಿಎಸ್ ಪಕ್ಷದಿಂದ ಕಡೂರಿನಿಂದಲೇ ಸ್ಪರ್ಧೆ...!

ಬೆಂಗಳೂರು : ವೈಎಸ್ ವಿ ದತ್ತಾ ಕಾಂಗ್ರೆಸ್ ನಿಂದ ವಾಪಸ್ ಜೆಡಿಎಸ್ ಗೆ ಸೇರಿದ್ದಾರೆ. ವೈಎಸ್ ವಿ ದತ್ತಾ ಜೆಡಿಎಸ್ ಗೆ ಸೇರುವುದು ಫಿಕ್ಸ್ ಆಗಿದೆ. ವೈಎಸ್ ವಿ ದತ್ತಾ H.D ರೇವಣ್ಣ ಭೇಟಿಯಾಗಿದ್ದಾರೆ. ರೇವಣ್ಣ ಭೇಟಿಯಾಗಿ ಜೆಡಿಎಸ್ ಸೇರ್ಪಡೆ ಕುರಿತು ಚರ್ಚೆ ನಡೆಸಿದ್ದಾರೆ. ಮಾತುಕತೆ ಬಳಿಕ ದತ್ತಾ ಜೆಡಿಎಸ್ ಸೇರ್ಪಡೆಯಾಗಿದ್ದಾರೆ. ಜೆಡಿಎಸ್ ಪಕ್ಷದಿಂದ ಕಡೂರಿನಿಂದಲೇ ಸ್ಪರ್ಧೆ ಮಾಡಲಿದ್ದಾರೆ.

ಕಳೆದ ಚುನಾವಣೆಯಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಿ ಸೋತಿದ್ದ ಮಾಜಿ ಸಚಿವ ವೈಎಸ್‌ವಿ ದತ್ತಾ ಅವರು ಬಳಿಕ ಕಾಂಗ್ರೆಸ್‌ಗೆ ಸೇರಿದ್ದರು. ಇತ್ತ ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದಲೂ ಟಿಕೆಟ್ ವಂಚಿತರಾಗಿರುವ ದತ್ತಾ ಅವರು ಪಕ್ಷದ ನಾಯಕರ ನಡೆಗೆ ಮುನಿಸಿಕೊಂಡಿದ್ದಾರೆ. ವೈಎಸ್ ವಿ ದತ್ತಾ ಅವರು ಕಾಂಗ್ರೆಸ್ ಟಿಕೆಟ್ ಕೈ ತಪ್ಪಿದ ಹಿನ್ನೆಲೆ ಮತ್ತೆ ದೇವೇಗೌಡರ ಮನೆ ಬಾಗಿಲು ತಟ್ಟಿದ್ದರು. ಬೆಂಗಳೂರು ನಗರದ ಪದ್ಮನಾಭನಗರದಲ್ಲಿರುವ ದೇವೇಗೌಡರ ನಿವಾಸಕ್ಕೆ ಭೇಟಿ ನೀಡಿದ ದತ್ತಾ ಅವರು ಟಿಕೆಟ್ ನೀಡುವಂತೆ ಮನವಿ ಮಾಡಿದ್ದರು.
ಕಾಂಗ್ರೆಸ್ ಟಿಕೆಟ್ ಕೈತಪ್ಪಿದ್ದಕ್ಕೆ ತೀವ್ರ ಅಸಮಾಧಾನಗೊಂಡಿರುವ ವೈಎಸ್ ವಿ ದತ್ತಾ ಅವರು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲು ತೀರ್ಮಾನಿಸಿದ್ದರು. ಕಾಂಗ್ರೆಸ್ ಸೇರ್ಪಡೆಯಾಗಿ ಪಶ್ಚಾತ್ತಾಪಪಟ್ಟಿದ್ದ ದತ್ತ ಇಂದು ಮಾತುಕತೆ ಬಳಿಕ ಜೆಡಿಎಸ್ ಗೆ ಮರಳಿದ್ದಾರೆ.
Comments
Post a Comment