ರಾಜ್ಯದ ಅತ್ಯಂತ ಕಿರಿಯ ವಯಸ್ಸಿನ ಜೆಡಿಎಸ್ ಅಭ್ಯರ್ಥಿ ಮಲೇಶ್ವರಂ ವಿಧಾನ ಸಭಾ ಕ್ಷೇತ್ರದ ಲ್ಲಿ ಕಣಕ್ಕೆ.
ರಾಜ್ಯದ ಅತ್ಯಂತ ಕಿರಿಯ
ವಯಸ್ಸಿನ ಜೆಡಿಎಸ್
ಅಭ್ಯರ್ಥಿ ಮಲೇಶ್ವರಂ
ವಿಧಾನ ಸಭಾ ಕ್ಷೇತ್ರದ ಲ್ಲಿ
ಕಣಕ್ಕೆ.
ರಾಜ್ಯದ 224 ವಿಧಾನ ಸಭಾ ಕ್ಷೇತ್ರದಲ್ಲಿ ಅತ್ಯಂತ ಕಿರಿಯ ಅಭ್ಯರ್ಥಿಯಾಗಿ ಜೆಡಿಎಸ್ ನ ಉತ್ಕರ್ಷ್ ಅಶೋಕ್ ಕುಮಾರ್ ಗೌಡ ಮಲೇಶ್ವರಂ ವಿಧಾನ ಸಭಾ ಕ್ಷೇತ್ರದಿಂದ ಕಣಕಿಳಿದಿದ್ದಾರೆ.
ಮಲೇಶ್ವರಂ ವಿಧಾನ ಸಭಾ ಕ್ಷೇತ್ರದ ಅಧಿಕೃತ ಅಭ್ಯರ್ಥಿಯಾಗಿ ತಮ್ಮ ಕುಟುಂಬದ ಸದಸ್ಯರೊಂದಿಗೆ ಆಗಮಿಸಿ ನಾಮಪತ್ರ ಸಲ್ಲಿಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಜೆಡಿಎಸ್ ಮಲೇಶ್ವರಂ ವಿಧಾನ ಸಭಾ ಕ್ಷೇತ್ರದ ಅಧ್ಯಕ್ಷ ಅಶೋಕ್ ರಾಮ್ ಮಾತನಾಡಿ, ಮಲೇಶ್ವರಂ ವಿಧಾನ ಸಭಾ ಕ್ಷೇತ್ರ ಈ ಹಿಂದೆ ಜೆಡಿಎಸ್ ಕ್ಷೇತ್ರ ಅತ್ಯಂತ ಪ್ರಬಲವಾಗಿತ್ತು ರಘಪತಿ ಸೇರಿದಂತೆ ಅನೇಕರು ಈ ಕ್ಷೇತ್ರದಿಂದ ಆಯ್ಕೆಯಾಗಿದ್ದಾರೆ. ಈ ಬಾರಿ ಯುವಕರಿಗೆ ಪಕ್ಷದಿಂದ ಹೆಚ್ಚಿನ ಆದ್ಯತೆ ನೀಡುವ ಮಾಜಿ ಪ್ರಧಾನಿ ದೇವೆಗೌಡ, ಎಚ್.ಡಿ.ಕುಮಾರಸ್ವಾಮಿ ಅವರ ನಿರ್ದೇಶನದ ಮೇರೆಗೆ 28 ವರ್ಷದ ಉತ್ಕರ್ಷ್ ಅವರಿಗೆ ಕಣಕ್ಕಿಳಿಸಲಾಗಿದೆ ಎಂದು ತಿಳಿಸಿದರು.
ಅಭ್ಯರ್ಥಿ ಉತ್ಕರ್ಷ್ ಅಶೋಕ್ ಕುಮಾರ್ ಮಾತನಾಡಿ,ಜೆಡಿಎಸ್ ಪಕ್ಷದಿಂದ ಈ ಬಾರಿ ಯುವಕರಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಮಲೇಶ್ವರಂ ವಿಧಾನ ಸಭಾ ಕ್ಷೇತ್ರದಲ್ಲಿ ಮುಂಬರುವ ದಿನಗಳಲ್ಲಿ ಜೆಡಿ ಎಸ್ ಪಕ್ಷವನ್ನು ಇನ್ನಷ್ಟು ಬಲಪಡಿಸಲಾಗುವುದು ಎಂದು ಹೇಳಿದರು.

Comments
Post a Comment