ಕಟ್ಟಾ ಜಗದೀಶ್ ಪರ ಅಣ್ಣಾ ಮಲೈ ಪ್ರಚಾರ. ರಿಯಲ್ ಎಸ್ಟೇಟ್ ದಂದೆಯಲ್ಲಿ ಹಾಲಿ ಶಾಸಕರು; ಅಣ್ಣಾಮಲೈ
ಕಟ್ಟಾ ಜಗದೀಶ್ ಪರ ಅಣ್ಣಾ ಮಲೈ ಪ್ರಚಾರ.
ರಿಯಲ್ ಎಸ್ಟೇಟ್ ದಂದೆಯಲ್ಲಿ ಹಾಲಿ ಶಾಸಕರು; ಅಣ್ಣಾಮಲೈ.
ಯಾವುದೇ ರಾಜ್ಯದಲ್ಲಿ ಕೇಂದ್ರದಲ್ಲಿ, ಸ್ಥಳೀಯವಾಗಿ ಒಂದೇ ಪಕ್ಷದ ಸರ್ಕಾರವಿದ್ದಾಗ ಮಾತ್ರ ಜನಪರ ಕೆಲಸಗಳು ನಡೆಯಲು ಸಾಧ್ಯ ಎಂದು ಅಣ್ಣಾಮಲೈ ತಿಳಿಸಿದರು.
ಬೆಂಗಳೂರಿನ ಹೆಬ್ಬಾಳ ಕ್ಷೇತ್ರದದಲ್ಲಿ ಬಿಜೆಪಿ ಅಭ್ಯರ್ಥಿ ಅಣ್ಣಾಮಲೈ ಪರವಾಗಿ ಪ್ರಚಾರ ಭಾಷಣ ಮಾಡಿದ ಅವರು,ಬಿಜೆಪಿ ಸರ್ಕಾರದಿಂದ ಸುರಕ್ಷತೆ,ಅಭಿವೃದ್ಧಿ ಸಾಧ್ಯ. ಕಟ್ಟಾ ಜಗದೀಶ್ ಅವರು ಈ ಹಿಂದೆ ಮಹಾನಗರ ಪಾಲಿಕೆ ಸದಸ್ಯ ರಾಗಿ ಉತ್ತಮ ಕೆಲಸಮಾಡಿದ್ದಾರೆ ಕಟ್ಟಾ ಸುಬ್ರಹ್ಮಣ್ಯ ಅವರು ಈ ಹಿಂದೆ ಸಚಿವರಾಗಿ ಬಡವರ ಪರ ಕೆಲಸ ಮಾಡಿದ್ದಾರೆ. ಆದರೆ ಕಾಂಗ್ರೆಸ್ ಅಭ್ಯರ್ಥಿ ಬೈರತಿ ಸುರೇಶ್ ಅವರು ರಿಯಲ್ ಎಸ್ಟೇಟ್ ದಂದೆ ನಡೆಸುತ್ತಿದ್ದಾರೆ. ಅವರು ಜನಪರ ಕೆಲಸ ಮಾಡುತ್ತಿಲ್ಲ ಎಂದು ಹೇಳಿದರು.
ನಮ್ಮ ಪ್ರಣಾಳಿಕೆಯನ್ನು ನಾವು ಬಿಡುಗಡೆ ಗೊಳಿಸುತ್ತಿದ್ದೇವೆ. ಕಾಂಗ್ರೆಸ್ ರೀತಿ ಕೇವಲ ವೈಟ್ ಪೇಪರ್ ನಲ್ಲಿ ಬೋಗಸ್ ಭರವಸೆ ನೀಡುತ್ತಿಲ್ಲ. ನಾವು ಹೊರಡಿಸುವ ಪ್ರಣಾಳಿಕೆಯಿಂದ ಬಿಜೆಪಿಯ ನಡೆ ಎಂಬುದು ತಿಳಿಯಲಿದೆ ಎಂದರು.
ಸಭೆಯಲ್ಲಿ ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ಅಭ್ಯರ್ಥಿ ಕಟ್ಟಾ ಜಗದೀಶ್ ಸ್ಥಳೀಯ ಮುಖಂಡರಾದ ಸುನೀತಾ ಸುಮನಾ ಮತ್ತಿತರರು ಹಾಜರಿದ್ದರು.
Comments
Post a Comment