ಭಾವನಾತ್ಮಕ ಬ್ಲಾಕ್ಮೇಲ್ಗೆ ನಾನು ಜಗ್ಗಲ್ಲ.. ನನ್ನ ತೀರ್ಮಾನ ಈ ಬಾರಿ ಕಠಿಣವಾಗಿರುತ್ತೆ : ರೇವಣ್ಣ ಫ್ಯಾಮಿಲಿಗೆ ಹೆಚ್ಡಿಕೆ ಖಡಕ್ ಸಂದೇಶ..!
ಭಾವನಾತ್ಮಕ ಬ್ಲಾಕ್ಮೇಲ್ಗೆ ನಾನು ಜಗ್ಗಲ್ಲ.. ನನ್ನ ತೀರ್ಮಾನ ಈ ಬಾರಿ ಕಠಿಣವಾಗಿರುತ್ತೆ : ರೇವಣ್ಣ ಫ್ಯಾಮಿಲಿಗೆ ಹೆಚ್ಡಿಕೆ ಖಡಕ್ ಸಂದೇಶ..!
![]() |
ಬೆಂಗಳೂರು : ಭಾವನಾತ್ಮಕ ಬ್ಲಾಕ್ಮೇಲ್ಗೆ ನಾನು ಜಗ್ಗಲ್ಲ, ನನ್ನನ್ನು ವೀಕ್ ಮಾಡಲು ಆಗೋದೆ ಇಲ್ಲ, ನನ್ನ ತೀರ್ಮಾನ ಈ ಬಾರಿ ಕಠಿಣವಾಗಿರುತ್ತೆ ಎಂದು ರೇವಣ್ಣ ಫ್ಯಾಮಿಲಿಗೆ ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ ಖಡಕ್ ಸಂದೇಶ ನೀಡಿದ್ಧಾರೆ. ಹಾಸನ ಜೆಡಿಎಸ್ ಟಿಕೆಟ್ ಕ್ಷಣ-ಕ್ಷಣಕ್ಕೂ ಕಗ್ಗಂಟಾಗುತ್ತಿದೆ. ಕುಮಾರಸ್ವಾಮಿ ಅವರು ದೇವೇಗೌಡರ ಜತೆ ಮಿಡ್ನೈಟ್ವರೆಗೂ ಸಭೆ ಮಾಡಿದ್ದಾರೆ. ಹಾಸನ ಟಿಕೆಟ್ ವಿಚಾರದಲ್ಲಿ ಮಾತುಕತೆ ಮಾಡಿದ್ದಾರೆ.
ಈ ಬಗ್ಗೆ ಪದ್ಮನಾಭನಗರ ನಿವಾಸದ ಬಳಿ ಕುಮಾರಸ್ವಾಮಿ ಮಾತನಾಡಿ ಹಾಸನ ಟಿಕೆಟ್ ಚರ್ಚೆ ತಡರಾತ್ರಿ ಸುಗಮವಾಗಿ ಆಗಿದೆ. ಅಂತಿಮವಾಗಿ ಯಾವುದೇ ಗೊಂದಲ ಇಲ್ಲದೆ ಬಗೆಹರಿಯುತ್ತೆ. ಹಾಸನ ವಿಚಾರದಲ್ಲಿ ರೇವಣ್ಣ ಅವರು ತಮ್ಮ ವರ್ಷನ್ನಲ್ಲೇ ಇದ್ದಾರೆ. ನಾನು ಅಲ್ಲಿನ ಗ್ರೌಂಡ್ ರಿಪೋರ್ಟ್ ಏನಿದೆ ಅಂತ ಹೇಳಿದ್ದೇನೆ.ದೇವೇಗೌಡರು ಅವರ ಅನುಭವ ಹೇಳಿದ್ದಾರೆ.
ಇನ್ನೂ ಇದೇ ವೇಳೆ ಎರಡನೇ ಪಟ್ಟಿ ಬಿಡುಗಡೆ ಬಗ್ಗೆ ಕುಮಾರಸ್ವಾಮಿ ಪ್ರತಿಕ್ರಿಯಿಸಿ ಇಂದು ಮಧ್ಯಾಹ್ನ ಮೂರು ಘಂಟೆಗೆ ಜೆಪಿ ಭವನಕ್ಕೆ ಬರುತ್ತೇನೆ. ಸಿ.ಎಂ.ಇಬ್ರಾಹಿಂರವರನ್ನೂ ಬರಲು ಹೇಳಿದ್ದೇನೆ. ಅಲ್ಲಿ ಚರ್ಚೆ ಮಾಡಿ ಎರಡನೇ ಪಟ್ಟಿ ಬಿಡುಗಡೆ ಬಗ್ಗೆ ತೀರ್ಮಾನ ಮಾಡುತ್ತೀವಿ ಎಂದು ಹೇಳಿದ್ದಾರೆ.

Comments
Post a Comment