ಕೃಷ್ಣಬೈರೇಗೌಡಗೆ ಟಕ್ಕರ್ ಕೊಡತ್ತಾರಾ ತಮ್ಮೇಶ್ ಗೌಡ.

 ಕೃಷ್ಣಬೈರೇಗೌಡಗೆ ಟಕ್ಕರ್ ಕೊಡತ್ತಾರಾ

ತಮ್ಮೇಶ್ ಗೌಡ.

ಬೆಂಗಳೂರಿನ ಬ್ಯಾಟರಾಯನ ವಿಧಾನ ಸಭಾ ಕ್ಷೇತ್ರ ಈ ಭಾರೀಯ ಚುನಾವಣೆಯಲ್ಲಿ ಸಾರ್ವಜನಿಕರ ಗಮನ ಸಳೆದಿದೆ. 2008ರಿಂದ ಸತತವಾಗಿ ಕೃಷ್ಣಬೈರೇ ಗೌಡ ಗೆಲುವು ಸಾಧಿಸುತ್ತಲೇ ಬರುತ್ತಿದೆ.ಈ ಬಾರೀ ಗೆಲುವು ಸಾಧಿಸಲೇ ಬೇಕೆಂದು ಹಠ ಸಾಧಿಸಿರುವ ಭಾರತೀಯ ಜನತಾ ಪಕ್ಷ ವಿಜಯೇಂದ್ರ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ. ಕೇಸರಿ ಫೌಂಡೇಶನ್‌ ಮೂಲಕ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ಒಕ್ಕಲಿಗ ಸಮುದಾಯದ ಯುವ ನಾಯಕ ತಮ್ಮೇಶ್ ಗೌಡರಿಗೆ ಟಿಕೆಟ್ ನೀಡಲಾಗಿದ್ದು ಗೆಲುವು ನಿಶ್ಚಿತ ಎಂಬ ಮಾತುಗಳು ಕೇಳಿಬರುತ್ತಿವೆ.


ತಮ್ಮೇಶ್ ಗೌಡ ಅವರು ಕೂಡ ಬಿರುಸಿನ ಪ್ರಚಾರ ಕಾರ್ಯವನ್ನು ಆರಂಭಿಸಿದ್ದು ಗೆಲುವಿಗಾಗಿ ಶ್ರಮಿಸುತ್ತಿದ್ದಾರೆ. ಪ್ರಭಾವಿ ಸಚಿವ ಆರ್.ಅಶೋಕ್ ಅವರ ಸಹೋದರ ರವಿ, ಬಿಬಿಎಂಪಿ ಆಡಳಿತ ಪಕ್ಷದ ಮಾಜಿ ನಾಯಕ ಮುನೇಂದ್ರ ಕುಮಾರ್, ಬಿಜೆಪಿಯ ಈ ಭಾಗದ ಹಿರಿಯ ಮುಖಂಡ ಚಕ್ರಪಾಣಿ ಒಟ್ಟಾಗಿ ಕೆಲಸ ಮಾಡಿದರೆ ಗೆಲುವು ಸಾಧ್ಯ ಎಂಬ ಮಾತುಗಳು ಪ್ರಬಲವಾಗಿ ಕೇಳಿಬರುತ್ತಿವೆ.


ಈ ಕ್ಷೇತ್ರದಲ್ಲಿ ಒಕ್ಕಲಿಗ ಸಮುದಾಯದ ಮತಗಳು ಹೆಚ್ಚಿನ ಪ್ರಮಾಣದಲ್ಲಿದ್ದು. ಜತೆಗೆ ಹಿಂದುಳಿದ, ಎಸ್.ಸಿ.ಎಸ್ಟಿ ಮತಗಳನ್ನು ಯಾರು ಹೆಚ್ಚಿನ ಪ್ರಮಾಣದಲ್ಲಿ ಪಡೆಯುತ್ತಾರೋ ಅವರ ಗೆಲುವು ಗ್ಯಾರಂಟಿ ಎಂಬ ಮಾತುಗಳು ಕ್ಷೇತ್ರದಲ್ಲಿ ಕೇಳಿಬರುತ್ತಿವೆ. ವಿಶೇಷವಾಗಿ ಭಾರತಿ ನಗರ,ಹುಣಸಮಾರನ ಹಳ್ಳಿ ಸೇರಿದಂತೆ ವಿವಿಧಡೆ ಉತ್ತರ ಭಾರತೀಯರು ಹೆಚ್ಚಿನ ಪ್ರಮಾಣದಲ್ಲಿ ವಾಸವಾಗಿದ್ದು ಅವರ ಮತಗಳು ನಿರ್ಣಾಯಕ ವಾಗಿವೆ.


ಈ ಕ್ಷೇತ್ರವನ್ನು ಗೆಲ್ಲಲೇ ಬೇಕೆಂದು ಪಣತೊಟ್ಟಿರುವ ಬಿಜೆಪಿಯ ಕೇಂದ್ರ ನಾಯಕರು ಇಲ್ಲಿ ಪ್ರಚಾರ ಕಾರ್ಯವನ್ನು ಕೈಗೊಂಡಿದ್ದಾರೆ. ಮೊನ್ನೆ ಕೇಂದ್ರ ಹಣಕಾಸು ಸಚಿವೆ ಜಕ್ಕೂರಿನ ಶೋಭಾ ಸಿಟಿ ನಗರದ ವಾಸಿಗಳೊಂದಿಗೆ ಸಂವಾದ ನಡೆಸಿದರು.

Comments

Popular posts from this blog

ಮುಳಖೇಡ, ಸೇಡಂ ತಾಲ್ಲೂಕು, ಕಲಬುರ್ಗಿ ಜಿಲ್ಲಾ ಗ್ರಾಮ ಪಂಚಾಯತ್ ಗ್ರಂಥಪಾಲಕಿ ಶ್ರೀಮತಿ ಭಾಗ್ಯವತಿ ಮಠ ಆತ್ಮಹತ್ಯೆ

ಸಿಬಿಎಸ್‌ಇ ಮಾದರಿ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶ ನಿರ್ಣಯದಮಾನದಂಡ ಜಾರಿ"ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘ ಸ್ವಾಗತ"

ಉತ್ತರ ಕರ್ನಾಟಕದ ಜನತೆಗೆ ಮತ್ತೆ ಅನ್ಯಾಯ ಆಗುತ್ತಿದೆ. ಏಷ್ಯಾ ಖಂಡದ ಅತಿ ದೊಡ್ಡ ನೀರಾವರಿ ಯೋಜನೆಗಳಲ್ಲಿ ಒಂದಾದ ಕೃಷ್ಣಾ ಮೇಲ್ದಂಡೆ ಯೋಜನೆ ಮೂರನೇ ಹಂತದ ಕಾಮಗಾರಿಯನ್ನು ವಿಳಂಬ