ಮೂಡಿಗೆರೆ ಕ್ಷೇತ್ರದ ಟಿಕೆಟ್ ಅನ್ನು ನಯನ ಮೋಟಮ್ಮ ಅವರಿಗೆ ನೀಡದಂತೆ ಮೂಡಿಗೆರೆ ಕಾಂಗ್ರೆಸ್ ಕಾರ್ಯಕರ್ತರ ಆಗ್ರಹ
ಮೂಡಿಗೆರೆ ಕ್ಷೇತ್ರದ ಟಿಕೆಟ್
ಅನ್ನು ನಯನ ಮೋಟಮ್ಮ
ಅವರಿಗೆ ನೀಡದಂತೆ
ಮೂಡಿಗೆರೆ ಕಾಂಗ್ರೆಸ್
ಕಾರ್ಯಕರ್ತರ ಆಗ್ರಹ
ನಯನಾ ಮೋಟಮ್ಮನವರಿಗೆ ಮೂಡಿಗೆರೆ ವಿಧಾನಸಭಾ ಟಿಕೆಟ್ (ಬಿ ಫಾರ್ಮ್) ನೀಡಬಾರದೆಂದು ಪಕ್ಷದ ವರಿಷ್ಠರಲ್ಲಿ ಮೂಡಿಗೆಯ ಅಸಂಖ್ಯ ನಿಷ್ಟಾವಂತ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಮತದಾರರು ಮನವಿ ಮಾಡುಕೊಳ್ಳುತ್ತಿದ್ದೇವೆ.
ಕಳೆದ 20 ವರ್ಷದಿಂದ ನಯನಾ ಮೋಟಮ್ಮ ಅಥವಾ ಮೋಟಮ್ಮನವರು ಕಾಂಗ್ರೆಸ್ ಪಕ್ಷದ ಸಂಘಟನೆಯನ್ನು ಸಮರ್ಥವಾಗಿ ಮಾಡಿಕೊಂಡು ಬಂದಿಲ್ಲ. ಈ ಹಿಂದಿನ ಅನೇಕ ಚುನಾವಣೆಗಳಲ್ಲಿ ಮೋಟಮ್ಮ ಮತ್ತು ನಯನ ಮೋಟಮ್ಮ ಅವರು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸುವಲ್ಲಿ ಪ್ರಾಮಾಣಿಕವಾಗಿ ಪ್ರಯತ್ನ ನಡೆಸಿಲ್ಲ. ಇಡೀ ಮೂಡಿಗೆರೆ ಕ್ಷೇತ್ರದ ಎಲ್ಲಾ ಜಾತಿ ಜನಾಂಗದ ಮತದಾರರು ಮೋಟಮ್ಮನವರು ಮತ್ತು ನಯನಾ ಮೋಟಮ್ಮನವರ ವಿರುದ್ಧವಿದ್ದಾರೆ. ಉತ್ತಮ ಸಂಘಟಕ ಮತ್ತು ಬದ್ಧತೆ ಇರುವ ಹೊಸ ಅಭ್ಯರ್ಥಿಗೆ ಟಿಕೆಟ್ ನೀಡಿದರೆ ಮಾತ್ರ ಈ ಕ್ಷೇತ್ರದಲ್ಲಿ ಗೆಲ್ಲುವ ಅವಕಾಶ ಹೆಚ್ಚಿದೆ. ನಯನರವರು ಈಗಾಗಲೇ ಕ್ಷೇತ್ರದಲ್ಲಿರುವ ಒಕ್ಕಲಿಗ ಸಮುದಾಯದ ವಿರೋಧ ಕಟ್ಟಿಕೊಂಡಿದ್ದಾರೆ. ನಯನರವರಿಗೆ ಪಕ್ಷ ಸಂಘಟನೆ ಮಾಡಲು ಇನ್ನಷ್ಟು ವಯಸ್ಸು ಮತ್ತು ಸಮಯವಿದೆ. ಅಲ್ಲದೆ ಅವರಿಗೆ ರಾಜಕೀಯ ಅನುಭವದ ಅವಶ್ಯಕತೆ ಕೂಡಾ ಇದೆ.
ಮುಂದಿನ 2028ರ ಚುನಾವಣೆಯಲ್ಲಿ ನಯನಾ ಅವರು ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಲಿ. ಈ ಬಾರಿ ಇವರಿಗೆ ಟಿಕೆಟ್ ನೀಡಿದರೆ, ಸುಲಭವಾಗಿ ಗೆಲ್ಲುವ ಕ್ಷೇತ್ರವನ್ನು ಕಾಂಗ್ರೆಸ್ ಕಳೆದುಕೊಳ್ಳಬೇಕಾಗಬಹುದು. ಈ ಬಾರಿ ನಯನ ಮೋಟಮ್ಮ ಅವರ ಬದಲು ಕಾಂಗ್ರೆಸ್ ನಿಂದ ಹೊಸ ಮುಖಕ್ಕೆ ಆಧ್ಯತೆ ನೀಡಬೇಕು. ಮೂಡಿಗೆರೆಯ ಎಲ್ಲ ಸಮುದಾಯಗಳನ್ನು ವಿಶ್ವಾಸಕ್ಕೆ ಪಡೆದುಕೊಂಡು ಕೆಲಸ ಮಾಡುವ ಉತ್ತಮ ನಾಯಕರಿಗೆ ಮನ್ನಣೆ ನೀಡಬೇಕು. ಮೋಟಮ್ಮನವರು ಕಾಂಗ್ರೆಸ್ ಪಕ್ಷದ ಹಿರಿಯ ನಾಯಕಿ ಅನ್ನುವುದು ನಿಜವಾದರೂ ಅವರಿಗೆ ಬೇರೆ ಗೌರವಯುತ ಹುದ್ದೆ ನೀಡಬೇಕು. ಆದರೆ ಯಾವುದೇ ಕಾರಣಕ್ಕೂ ನಯನ ಮೋಟಮ್ಮ ಅವರಿಗೆ ಬಿ ಫಾರ್ಮ್ ನೀಡಬಾರದು ಎಂದು ಮೂಡಿಗೆರೆ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಮತ್ತು ಮತದಾರರು ಆಗ್ರಹಿಸುತ್ತಿದ್ದೇವೆ.
ಮೂಡಿಗೆರೆ ಕ್ಷೇತ್ರದ ನಿಷ್ಟಾವಂತ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಕ್ಷೇತ್ರದ ಪ್ರಜ್ಞಾವಂತ ಮತದಾರರು.

Comments
Post a Comment