ದೊಡ್ಡಬಳ್ಳಾಪುರ ಚುನಾವಣಾ ಅಧಿಕಾರಿ ಕಚೇರಿಯಲ್ಲಿ ಮಂಗಳವಾರ ಚುನಾವಣಾ ಅಧಿಕಾರಿ ತೇಜಸ್ ಕುಮಾರ್ ಗೆ ಬಿಜೆಪಿ ಅಭ್ಯರ್ಥಿ ನಾಮಪತ್ರ ಸಲ್ಲಿಕೆ "
" ದೊಡ್ಡಬಳ್ಳಾಪುರ ಚುನಾವಣಾ ಅಧಿಕಾರಿ ಕಚೇರಿಯಲ್ಲಿ
ಮಂಗಳವಾರ ಚುನಾವಣಾ ಅಧಿಕಾರಿ ತೇಜಸ್ ಕುಮಾರ್ ಗೆ
ಬಿಜೆಪಿ ಅಭ್ಯರ್ಥಿ ನಾಮಪತ್ರ ಸಲ್ಲಿಕೆ "
ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಧೀರಜ್ ಮುನಿರಾಜುರವರು ದೊಡ್ಡಬಳ್ಳಾಪುರ ತಾಲ್ಲೂಕು ಕಚೇರಿಯ ಲ್ಲಿ ಚುನಾವಣಾ ಅಧಿಕಾರಿ ತೇಜಸ್ ಕುಮಾರ್ ಗೆ ತಮ್ಮ ಉಮೇದುವಾರಿಕೆಯನ್ನು ಸಲ್ಲಿಸಿದರು. ನಾಮಪತ್ರ ಸಲ್ಲಿಕೆಗೂ ಮುನ್ನ ನಗರದ ಶಕ್ತಿ ದೇವತೆಯಾದ ಮುತ್ಯಾಲಮ್ಮ, ಸೋಮೇಶ್ವರ, ಗಣೇಶ ಹಾಗೂ ಆಂಜನೇಯ ಸ್ವಾಮಿ ದೇಗುಲಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ ನಂತರ ತೆರೆದ ವಾಹನದಲ್ಲಿ ಪತ್ರ ಸಲ್ಲಿಕೆ ಕೇಂದ್ರದ ವರೆಗೆ ಮೆರವಣಿಗೆ ನಡೆಸಲಾಯಿತು. ಈ ಮೆರವಣಿಗೆ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಹಿರಿಯ ಮುಖಂಡರಾದ ಕೆಎಂ ಹನುಮಂತ ರಾಯಪ್ಪ, ಕೆಎಂಎಫ್ ನಿರ್ದೇಶಕ ಬಿ ಸಿ ಆನಂದ್ ಕುಮಾರ್, ಧೀರಜ್ ಮುನಿರಾಜು, ಲಕ್ಷ್ಮೀನಾರಾಯಣ್, ಮುದ್ದಪ್ಪ, ಮತ್ತಿತರರು ಇದ್ದರು,ಬಿಜೆಪಿಯಲ್ಲಿ ಹಿರಿಯ ನಾಯಕರನ್ನು ಕಡೆಗಣಿಸುವ ಪ್ರಶ್ನೆ ಇಲ್ಲ ಜಗದೀಶ್ ಶೆಟ್ಟರ್ ಹೆತ್ತ ತಾಯಿಯನ್ನು ತುಳಿದು ಹೋಗಿದ್ದಾನೆ, ಅವರಿಗೆ ಜನರೇ ತಕ್ಕ ಪಾಠ ಕಲಿಸುತ್ತಾರೆ ಶೆಟ್ಟರ್ ಗೆ ಬಿಜೆಪಿ ಏನು ಕಡಿಮೆ ಮಾಡಿತ್ತು ಎಂದು ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ ಎಂದು ಕೇಂದ್ರ ಸಚಿವೆ ಶೋಭಾಕರಂದ್ಲಾಜೆ ಕಿಡಿಕಾರಿದರು ಬಿಜೆಪಿ ಅಭ್ಯರ್ಥಿ ಧೀರಜ್ ಮುನಿರಾಜ್ ನಾಮಪತ್ರ ಸಲ್ಲಿಕೆಗೆ ಸಾಥ್ ನೀಡಿ ನಂತರ ಸುದ್ದಿಗಾರರೊಂದಿಗೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಮಾತನಾಡಿದರು.
ಜಗದೀಶ್ ಶೆಟ್ಟರ್ ಅವರನ್ನು ಶಾಸಕ ಮಂತ್ರಿ ಹಾಗೂ ಮುಖ್ಯಮಂತ್ರಿ ಯನ್ನಾಗಿ ಮಾಡಿ ಪಕ್ಷ ಎಲ್ಲವನ್ನು ಕೊಟ್ಟಿತ್ತು, ಬಿ.ಬಿ.ಶಿವಪ್ಪ ಅವರ ವಿರೋಧ ಕಟ್ಟಿಕೊಂಡು ಅನಂತ್ ಕುಮಾರ್ ಮತ್ತು ಬಿಎಸ್ ವೈ ಬೆನ್ನಿಗೆ ನಿಂತು ರಾಜ್ಯ ಅಧ್ಯಕ್ಷರಾಗಿಯೂ ಮಾಡಿದರು ಎಂದು ಶೋಭಾ ನೆನೆಸಿದರು.ಬಿ. ಎಲ್.
ಸಂತೋಷ್ ಬಗ್ಗೆ ಮಾತನಾಡಲು ನೈತಿಕತೆ ಇಲ್ಲ
ಶೆಟ್ಟರ್ ಆರೋಪ ಮಾಡುವುದನ್ನು ನೋಡಿದರೆ ನಿಜವಾಗಿಯೂ ಬಿಜೆಪಿಗೆ ಅವರು ಬದ್ಧರಾಗಿ ಇದ್ದರೆ ಎಂಬ ಅನುಮಾನ ಕಾಡುತ್ತಿದೆ ಬಿ ಎಲ್ ಸಂತೋಷ್ ರವರು ಎಂದೂ ಚುನಾವಣಾ ರಾಜಕೀಯಕ್ಕೆ ಬಂದಿಲ್ಲ ಅವರು ಪಕ್ಷ ಸಂಘಟನೆಯಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದ್ದಾರೆ ಅವರ ವಿರುದ್ಧ ಮಾತನಾಡಲು ಶೆಟ್ಟರಿಗೆ ನೈತಿಕತೆ ಇಲ್ಲ ಎಂದರು.
30ರ ಬಳಿಕ ಪ್ರಧಾನಿ ನರೇಂದ್ರ ಮೋದಿ ರಾಜ್ಯ ಪ್ರವಾಸ
ಸೇರಿದಂತೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಕೇಂದ್ರ ಸಚಿವರಾದ ಅಮಿತ್ ಶಾ, ರಾಜ್‌ನಾಥ್ ಸಿಂಗ್, ಸೇರಿ ಹಲವು ನಾಯಕರು ಏಪ್ರಿಲ್ 30ರ ಬಳಿಕ ರಾಜ್ಯ ಪ್ರವಾಸ ಮಾಡುವ ಮೂಲಕ ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ, ಈಗಾಗಲೇ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ದ ರವರು ರಾಜ್ಯದಲ್ಲಿ ಪ್ರವಾಸ ಮಾಡಿದ್ದಾರೆ ಎಂದು ಶೋಭಾ ಕರಂದ್ಲಾಜೆ ತಿಳಿಸಿದರು.
ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾದ ಮುನಿರಾಜು ಅವರು ಮಾತನಾಡಿ ಕಾರ್ಯಕರ್ತರೊಂದಿಗೆ ಕಾರ್ಯಕರ್ತನಾಗಿ ತಾಲೂಕಿನ ಅಭಿವೃದ್ಧಿಗೆ ಶ್ರಮಿಸಲಾಗುವುದು ಎಲ್ಲಾ ಸಮುದಾಯದವರನ್ನು ಒಟ್ಟಿಗೆ ತೆಗೆದುಕೊಂಡು ಹೋಗುತ್ತೇನೆ ಎಂದು ಬಿಜೆಪಿ ಅಭ್ಯರ್ಥಿ ಧೀರಜ್ ಮುನಿರಾಜು ರವರು ತಿಳಿಸಿದರು.
ಆರ್. ನಾಗರಾಜ್
ಪಬ್ಲಿಕ್ ರಿಪೋರ್ಟ್ ನ್ಯೂಸ್ ವರದಿಗಾರರು ಬೆಂಗಳೂರು ಗ್ರಾಮಾಂತರ ಜಿಲ್ಲೆ.
Comments
Post a Comment