ಪುನಃ ಜೆಡಿ ಎಸ್ ಗೆ ಹೋಗ್ತಾರಾ ವೈಎಸ್‌ವಿ ದತ್ತಾ....!
ಪುನಃ ಜೆಡಿ ಎಸ್ ಗೆ ಹೋಗ್ತಾರಾ ವೈಎಸ್‌ವಿ ದತ್ತಾ....!

ಬೆಂಗಳೂರು : ಮಾಜಿ ಪ್ರಧಾನಿ ದೇವೇಗೌಡರನ್ನು ವೈಎಸ್‌ವಿ
ದತ್ತಾ ಭೇಟಿ ಮಾಡಿದ್ದಾರೆ. ಇಂದು ಪದ್ಮನಾಭನಗರ ನಿವಾಸದಲ್ಲಿ ದೇವೇಗೌಡರನ್ನು ಭೇಟಿ ಮಾಡಿದ್ದು, ವೈಎಸ್‌ವಿ ದತ್ತಾ ಜೆಡಿಎಸ್ ತೊರೆದು ಕಾಂಗ್ರೆಸ್‌ಗೆ ತೆರಳಿದ್ದರು. ಕಾಂಗ್ರೆಸ್‌ನಲ್ಲಿ ಟಿಕೆಟ್ ಕೈ ತಪ್ಪಿದ ಹಿನ್ನೆಲೆ ಮತ್ತೆ ಜೆಡಿಎಸ್‌ಗೆ ಸೇರಲು ವೈ ಎಸ್ ವಿ ದತ್ತಾ ಕಸರತ್ತು ಮಾಡುತ್ತಿದ್ದಾರೆ. ದೇವೇಗೌಡರ ಮೂಲಕ ಪಕ್ಷಕ್ಕೆ ಮರಳಲು ವೈ ಎಸ್ ವಿ ದತ್ತಾ ಪ್ರಯತ್ನ ನಡೆಸುತ್ತಿದ್ದಾರೆ. ಹೆಚ್ ಡಿಕೆ ಪಕ್ಷ ಬಿಟ್ಟುಹೋದವರನ್ನು ಮತ್ತೆ ಸೇರಿಸಿಕೊಳ್ಳುವ ಪ್ರಶ್ನೆ ಇಲ್ಲ ಎಂದಿದ್ದರು. ಹೆಚ್ ಡಿ ಕೆ ಹೇಳಿಕೆಯ ಹಿನ್ನೆಲೆ ವೈ ಎಸ್ ವಿ ದತ್ತಾ ದೇವೇಗೌಡರ ಮೊರೆಹೋಗಿದ್ದಾರೆ.
ಕಳೆದ ಚುನಾವಣೆಯಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಿ ಸೋತಿದ್ದ ಮಾಜಿ ಸಚಿವ ವೈಎಸ್‌ವಿ ದತ್ತಾ ಅವರು ಬಳಿಕ ಕಾಂಗ್ರೆಸ್‌ಗೆ ಸೇರಿದ್ದರು. ಇತ್ತ ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದಲೂ ಟಿಕೆಟ್ ವಂಚಿತರಾಗಿರುವ ದತ್ತಾ ಅವರು ಪಕ್ಷದ ನಾಯಕರ ನಡೆಗೆ ಮುನಿಸಿಕೊಂಡಿದ್ದಾರೆ. ಹಾಗಾಗಿ ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಅವರು ವೈಎಸ್‌ವಿ ದತ್ತಾ ಅವರ ಕಾಲೆಳೆದಿದ್ದರು.
ಕಡೂರು ಪಟ್ಟಣದಲ್ಲಿ ನಡೆದ ಜೆಡಿಎಸ್ ಕಾರ್ಯಕರ್ತರ ಸಮಾವೇಶದಲ್ಲಿ ಎಚ್‌ಡಿ ಕುಮಾರಸ್ವಾಮಿ ಮಾತನಾಡಿ, ವೈಎಸ್‌ವಿ ದತ್ತಾ ಯಾರೆಂದೇ ನನಗೆ ಗೊತ್ತಿಲ್ಲ. ಅವರು ತುಂಬಾ ದೊಡ್ಡವರು. ಅವರ ಬಗ್ಗೆ ನನಗೆ ಏನೂ ಗೊತ್ತಿಲ್ಲ. ಅವರ ಬಗ್ಗೆ ನಾನೇಕೆ ಚರ್ಚೆ ಮಾಡಲಿ. ನನ್ನದು ಸಣ್ಣ ಪಕ್ಷ. ನನ್ನ ಪಕ್ಷಕ್ಕೆ ಅವರೇಕೆ ಬರುತ್ತಾರೆ? ಅವರು ರಾಷ್ಟ್ರೀಯ ಪಕ್ಷದಿಂದ ಸ್ಪರ್ಧಿಸಲು ಹೊರಟವರು. ನನ್ನ ಪಕ್ಷದಲ್ಲಿ ಅವರಿಗೆ ಏನು ಸಿಗುತ್ತೆ ಎಂದು ಹೇಳಿದರು
Comments
Post a Comment