ಸರ್ಕಾರದ ಒಳ ಮೀಸಲಾತಿ ವಿರುದ್ಧ ಹೋರಾಟ: ಸಿ.ಎಸ್.ದ್ವಾರಕನಾಥ್
- Get link
- X
- Other Apps
ಸರ್ಕಾರದ ಒಳ ಮೀಸಲಾತಿ ವಿರುದ್ಧ ಹೋರಾಟ: ಸಿ.ಎಸ್.ದ್ವಾರಕನಾಥ್
ಬೆಂಗಳೂರು: ಒಳ ಮೀಸಲಾತಿ (Internal Reservation) ವರ್ಗೀಕರಣದಲ್ಲಿ 89 ಸಮುದಾಯಗಳಿಗೆ ಅನ್ಯಾಯವಾಗಿದೆ. ಕೂಡಲೇ ಇದನ್ನ ಹಿಂಪಡೆಯಬೇಕು. ಇಲ್ಲದಿದ್ದರೆ ಸರ್ಕಾರದ ವಿರುದ್ಧ ಕಾನೂನು ಹೋರಾಟ ನಡೆಸಲಾಗುವುದು ಎಂದು ಅಲೆಮಾರಿ ಬುಡಕಟ್ಟು ಮಹಾಸಭಾ ಅಧ್ಯಕ್ಷ ಸಿ.ಎಸ್.ದ್ವಾರಕನಾಥ್ (C.S.Dwarakanath) ತಿಳಿಸಿದ್ದಾರೆ.
ಅಲೆಮಾರಿ ಬುಡಕಟ್ಟು ಮಹಾಸಭಾದಿಂದ ಮಂಗಳವಾರ ಸುದ್ದಿಗೋಷ್ಠಿ ನಡೆಸಲಾಯಿತು. ಈ ವೇಳೆ ಮಾತನಾಡಿದ ದ್ವಾರಕನಾಥ್, ಬಿಜೆಪಿ ಸರ್ಕಾರ ಸಂಪುಟ ಸಭೆಯಲ್ಲಿ ಪರಿಶಿಷ್ಟ ಜಾತಿ ಪಟ್ಟಿಯಲ್ಲಿ ಒಳ ಮೀಸಲಾತಿ ಜಾರಿಗೊಳಿಸಿದೆ. ಗ್ರೂಪ್ 1 ರಲ್ಲಿ 6 ಪರ್ಸೆಂಟ್ ಮೀಸಲಾತಿಯನ್ನು ಮಾದಿಗ ಸಮುದಾಯ ಸೇರಿ ಇನ್ನಿತರ ಸಮುದಾಯಕ್ಕೆ ನೀಡಲಾಗಿದೆ. ಗ್ರೂಪ್ 2 ರಲ್ಲಿ, 5.5 ಪರ್ಸೆಂಟ್ ಮೀಸಲಾತಿಯನ್ನು ಹೊಲೆಯ ಸಂಬಂಧಿಸಿದ ಜಾತಿಗಳಿಗೆ ನೀಡಲಾಗಿದೆ. ಸ್ಪಶ್ಯ ಜಾತಿಗಳಿಗೆ 4.5 ಪರ್ಸೆಂಟ್ ಮೀಸಲಾತಿ ಕಲ್ಪಿಸಲಾಗಿದೆ. ಇದನ್ನು ಹೊರತುಪಡಿಸಿ 89 ಜಾತಿಗಳಿಗೆ ಕೇವಲ 1 ಪರ್ಸೆಂಟ್ ಮೀಸಲಾತಿ ನೀಡಲಾಗಿದೆ ಎಂದು ಅಸಮಾಧಾನ ಹೊರಹಾಕಿದ್ದಾರೆ.
ಯಾವುದೇ ವರದಿ, ಸಂಶೋಧನೆಯ ಬಗ್ಗೆ ಸರ್ಕಾರ ಗಮನಹರಿಸಿಲ್ಲ. ಜನಸಂಖ್ಯೆ ಆಧಾರದಲ್ಲಿ ಮೀಸಲಾತಿ ನೀಡಿದ್ರೆ, ಸರ್ಕಾರ ಅದರ ಸಂಪೂರ್ಣ ಡೇಟಾ ನೀಡಲಿ. ಯಾವುದೇ ಚರ್ಚೆ ಇಲ್ಲದೆ ಕೆಲ ಸಚಿವರೇ ಇದರ ಜವಬ್ದಾರಿ ಹೊತ್ತು ಘೋಷಣೆ ಮಾಡಿದ್ದಾರೆ. ಗೋವಿಂದ ಕಾರಜೋಳ, ಸುಧಾಕರ್, ಪ್ರಭು ಚೌಹಾಣ್, ಮಾಧುಸ್ವಾಮಿ ಇವರೇ ಅಂತಾರಾಷ್ಟ್ರೀಯ ತಜ್ಞರಾಗಿದ್ದಾರೆ. 89 ಸಮುದಾಯವನ್ನು ಒಂದೇ ಕಡೆ ಹಾಕಲಾಗಿದೆ. ಅವರ ಶಿಕ್ಷಣ, ಸಾಮಾಜಿಕ, ಆರ್ಥಿಕ, ಸ್ಥಿತಿಗತಿ ಬಗ್ಗೆ ಅರಿವಿಲ್ಲದೇ ಈ ರೀತಿ ಮಾಡಲಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
- Get link
- X
- Other Apps

Comments
Post a Comment