ಕೋವಿಡ್ ಹೆಚ್ಚಳ: ಕರ್ನಾಟಕ ಸೇರಿ 8 ರಾಜ್ಯಕ್ಕೆ ಕೇಂದ್ರ ಎಚ್ಚರಿಕೆ
ಕೋವಿಡ್ ಹೆಚ್ಚಳ: ಕರ್ನಾಟಕ ಸೇರಿ 8 ರಾಜ್ಯಕ್ಕೆ ಕೇಂದ್ರ ಎಚ್ಚರಿಕೆ
ದೇಶದಲ್ಲಿ ಕೋವಿಡ್ ಸಾಂಕ್ರಾಮಿಕ ಇನ್ನೂ ಸಹ ಮುಗಿದಿಲ್ಲ ಎಂದು ಹೇಳಿರುವ ಕೇಂದ್ರ ಸರ್ಕಾರ, ಪಾಸಿಟಿವಿಟಿ ದರ ಶೇ.10ಕ್ಕಿಂತ ಹೆಚ್ಚಿರುವ ಕರ್ನಾಟಕ ಸೇರಿದಂತೆ 8 ರಾಜ್ಯಗಳಿಗೆ ಎಚ್ಚರಿಕೆಯಿಂದ ಇರುವಂತೆ ಸೂಚನೆ ನೀಡಿದೆ.
ಈ ಕುರಿತಾಗಿ 8 ರಾಜ್ಯಗಳಿಗೆ ಪತ್ರ ಬರೆದಿರುವ ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್, ‘ದೇಶದಲ್ಲಿ ಸಾಂಕ್ರಾಮಿಕ ಇನ್ನೂ ಸಹ ಮುಗಿದಿಲ್ಲ. ಹಾಗಾಗಿ ಯಾವುದೇ ಅಲಕ್ಷ್ಯ ತೋರದೇ ನಾವು ಎಚ್ಚರಿಕೆಯಿಂದ ಇರಬೇಕು. ಇಲ್ಲದಿದ್ದರೆ ಈವರೆಗೆ ಕೋವಿಡ್ ನಿಯಂತ್ರಣ ಕ್ರಮಗಳಿಂದ ನಾವು ಸಾಧಿಸಿದ್ದು ಇಲ್ಲವಾಗುತ್ತದೆ’ ಎಂದು ಹೇಳಿದ್ದಾರೆ.
ಕರ್ನಾಟಕಕ್ಕೆ ಕೇಂದ್ರ ಕೊಟ್ಟಿದ್ದು 2,141 ಕೋಟಿ ಕೋವಿಡ್ ಲಸಿಕೆ: ಡಾ.ಕೆ.ಸುಧಾಕರ್
ದೇಶದಲ್ಲಿ ಕೋವಿಡ್‌ನಿಂದಾಗಿ ಆಸ್ಪತ್ರೆಗೆ ದಾಖಲಾಗುವವರು ಮತ್ತು ಸಾಯುವವರ ಸಂಖ್ಯೆ ಕಡಿಮೆಯಾಗಿದೆ. ಆದರೆ ಕೆಲವು ರಾಜ್ಯಗಳಲ್ಲಿ ದಾಖಲಾಗುತ್ತಿರುವ ಸೋಂಕಿನ ಪ್ರಮಾಣ ಹೆಚ್ಚಾಗಿದೆ. ಹಲವು ಜಿಲ್ಲೆಗಳಲ್ಲಿ ಪಾಸಿಟಿವಿಟಿ ದರ ಶೇ.10ನ್ನು ದಾಟಿದೆ. ಇಂತಹ ರಾಜ್ಯಗಳು ಮತ್ತು ಜಿಲ್ಲೆಗಳಲ್ಲಿ ಸೋಂಕು ಹೆಚ್ಚಾಗುವುದನ್ನು ತಡೆಗಟ್ಟಲು ಸಾರ್ವಜನಿಕ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು. ಹೀಗಾಗಿ ಆರಂಭಿಕ ಹಂತದಲ್ಲೇ ಸೋಂಕನ್ನು ತಡೆಗಟ್ಟಬಹುದು ಎಂದು ಅವರು ಹೇಳಿದ್ದಾರೆ.
Comments
Post a Comment