NIE ಮೈಸೂರ್ ಎಡಿನ್ ಕ್ರಿಕೆಟ್ ಪಂದ್ಯಾವಳಿ 2023
“NIE ಮೈಸೂರ್ ಎಡಿನ್ ಕ್ರಿಕೆಟ್ ಪಂದ್ಯಾವಳಿ 2023”
ಎಡಿನ್ ಸಿನರ್ಜಿ, ಮೈಸೂರಿನ ಹೆಸರಾಂತ ಮಾನವ ಸಂಪನ್ಮೂಲ
ಸಂಸ್ಥೆ, ಈ ಸಂಸ್ಥೆಯೂ ತನ್ನ ವಿಶೇಷ ಸೇವಾ ಕಾರ್ಯಕ್ರಮಗಳ ಮೂಲಕ ಜನಪ್ರಿಯವಾಗಿದೆ, ಈ ವರ್ಷ ಎಡಿನ್ ಸಂಸ್ಥೆಯು ತನ್ನ ನಾಲ್ಕನೇ ವರ್ಷದ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿ “NIE ಮೈಸೂರ್ ಎಡಿನ್ ಕ್ರಿಕೆಟ್ ಪಂದ್ಯಾವಳಿ 2023” ಯನ್ನು ಆಯೋಜಿಸಿದೆ.
ದಿನಾಂಕ: 4, 5, 11, 12 ಮತ್ತು 18 ಮಾರ್ಚ್ 2023
ಸ್ಥಳ: ಮೈಸೂರಿನ NIE ಉತ್ತರ (North), ಹೂಟಗಳ್ಳಿ ಕೈಗಾರಿಕಾ ಪ್ರದೇಶ, ಮೈಸೂರು.
ಈ ಕ್ರೀಡಾಕೂಟದಲ್ಲಿ ಮೈಸೂರಿನ ಹಾಗೂ ನಂಜನಗೂಡಿನ ಪ್ರತಿಷ್ಠಿತ ಕಂಪನಿಗಳು, ಪ್ರತಿಷ್ಠಿತ ಕಾಲೇಜು ವಿದ್ಯಾಸಂಸ್ಥೆಗಳು ಭಾಗವಹಿಸುತ್ತಿದ್ದು, ಈ ಕ್ರೀಡಾಕೂಟದಲ್ಲಿ ಹಲವಾರು ಕಂಪೆನಿಯ ನೌಕರರು ಶಿಕ್ಷಣ ಸಂಸ್ಥೆಯ ಬೋಧನ ಮತ್ತು ಬೋಧನೇತರ ಸಿಬ್ಬಂದಿ ಮತ್ತು ನೋಂದಾಯಿತ ವೃತ್ತಿಪರ ಸಂಘಗಳ ಸದಸ್ಯರು ಭಾಗವಹಿಸಲಿದ್ದಾರೆ.
ಎಡಿನ್ ಕ್ರಿಕೆಟ್ ಪಂದ್ಯಾವಳಿಯ ಮೊದಲ ಮೂರು ಆವೃತ್ತಿಯು 2019, 2021 ಮತ್ತು 2022ರಲ್ಲಿ ನಡೆದ್ದಿದ್ದು ಸುಮಾರು 32 ತಂಡಗಳು ಈ ಕ್ರೀಡಾಕೂಟದಲ್ಲಿ ಭಾಗವಹಿಸಿ, ಈ ಪಂದ್ಯಾವಳಿಯನ್ನು ಮೈಸೂರಿನ ಇತಿಹಾಸದಲ್ಲೇ ಅತಿದೊಡ್ಡ ಕಾರ್ಪೊರೇಟ್ ಕ್ರಿಕೆಟ್ ಪಂದ್ಯಾವಳಿ ಎನ್ನುವ ಹಿರಿಮೆಗೆ ಪಾತ್ರವಾಗುವಂತೆ ಮಾಡಿದೆ.ಈ ಪಂದ್ಯಾವಳಿಯ ಮೊದಲ ಸುತ್ತಿನ ಪಂದ್ಯಗಳು ಮಾರ್ಚ್ 5 ರಂದು ಪ್ರಾರಂಭವಾಗಲಿದ್ದು, ಅಂತಿಮ ಸುತ್ತಿನ ಪಂದ್ಯಗಳು ಮಾರ್ಚ್ 18 ರಂದು ನಡೆಯಲಿದೆ.
ಕ್ರೀಡಾಕೂಟವನ್ನು ಸಾಮಾಜಿಕ ಕಾರಣಕ್ಕಾಗಿ ನಡೆಸಲಾಗುತ್ತಿದ್ದು, ಸಂಗ್ರಹವಾದ ಹಣವನ್ನು ಒಂದು ಸಾಮಾಜಿಕ ಕಾರ್ಯಕ್ರಮಕ್ಕೆ ದೇಣಿಗೆಯಾಗಿ ನೀಡಲಾಗುವುದು, ಈ ಪಂದ್ಯಾವಳಿಯು NIE ಮೈಸೂರ್, ಮಣಿಪಾಲ್ ಆಸ್ಪತ್ರೆ, ಹೆಚ್ ಜಿ ಎಸ್, ಮೈಸೂರು ಹೆಚ್ ಅರ್ ಅಸೋಸಿಯೇಷನ್, ಲೈಕ್ ಮೈಂಡ್ಸ್, ಅರಸ್ ಕಾರ್ಸ್, ತೇಜಸ್ವಿನಿ ಎಂಟರ್ಪ್ರೈಸಸ್, ರೆಡ್ ಎಫ್ ಎಂ, ಸ್ಮಾರ್ಟ್ ಸೊಲ್ಯೂಷನ್ಸ್, ಮೆಟ್ರೋ ಮಾರ್ವೆಲ್ಸ್ ಹಾಗೂ ಇನ್ನೂ ಹಲವಾರು ಸಂಸ್ಥೆಗಳ ಸಹವಾಗಿತ್ವದಲ್ಲಿ ನಡೆಯುತ್ತಿದೆ.
ಈ ಹಿಂದೆ ಎಡಿನ್ ಸಂಸ್ಥೆಯು ಹಲವಾರು ಸೇವಾಕಾರ್ಯ (CSR) ದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದು ಉತ್ತರ ಕರ್ನಾಟಕದ ಪ್ರವಾಹ ಸಂದರ್ಭ, ಕೊಡಗಿನ ಪ್ರವಾಹ ಸಂದರ್ಭ, ಹಸಿರು ಮತ್ತು ಸ್ವಚ್ಚ ಮೈಸೂರು ಅಭಿಯಾನ, ಹಾಗೂ ಕೋರೋನ ಲಾಕ್ಡೌನ್ ಸಂದರ್ಭದಲ್ಲಿ ಅತ್ಯಂತ ಅವಶ್ಯಕವಾದ ದಿನನಿತ್ಯದ ಊಟ ತಿಂಡಿ, ಆಹಾರ ಪದಾರ್ಥಗಳು ಕೊರೋನ ಲಾಕ್ಡೌನ್ ಸಂದರ್ಭದಲ್ಲಿ ಪ್ರತಿನಿತ್ಯ ಸುಮರು 2,000 ಆಹಾರ ಪೊಟ್ಟಣಗಳನ್ನು ಮೈಸೂರಿನ ವಿವಿಧ ಬಡಾವಣೆಗಳಲ್ಲಿ ವಿತರಿಸಲಾಗಿದ್ದು, ಮೈಸೂರಿನ ಜನತೆಯಿಂದ ಅತ್ಯಂತ ಮೆಚ್ಚುಗೆಗೆ ಪಾತ್ರವಾಗಿದೆ.
ಹೆಚ್ಚಿನ ವಿವರಗಳಿಗಾಗಿ ಸಂಪರ್ಕಿಸಿ- 7022036998 / 9964005854 ಅಥವಾ www.edinsynergy.com
ಮಾಧ್ಯಮ ವರದಿಯಲ್ಲಿ ಭಾಗವಹಿಸಿದವರು
1. ರಾಘವ್, ಮುಖ್ಯಸ್ಥರು ಎಡಿನ್ ಕ್ರೀಡಾ ವಿಭಾಗ
2. ಪ್ರತಾಪ್ ಹಾಸನ್, ಮುಖ್ಯಸ್ಥರು, ಎಡಿನ್ ಬ್ರಿಡ್ಜ್
3. ಫಣೀಶ್ ಎಂ, ಮುಖ್ಯಸ್ಥರು, ಎಡಿನ್ ಸಿನರ್ಜಿ
4. ಡಾ. ರೋಹಿಣಿ ನಾಗಪದ್ಮ, ಪ್ರಾಂಶುಪಾಲರು, NIE ಕಾಲೇಜು, ಮೈಸೂರು.
5. ಪ್ರಮೋದ್ ಕುಂದರ್, ಹಾಸ್ಪಿಟಲ್ ಡೈರೆಕ್ಟರ್, ಮಣಿಪಾಲ್ ಹಾಸ್ಪಿಟಲ್, ಮೈಸೂರು
6. ಬಿಂದು ಜಿ ಪಿ, ಡೆಪ್ಯುಟಿ ಮ್ಯಾನೇಜರ್ ಹೆಚ್ ಅರ್, ಹಿಂದುಜಾ ಗ್ಲೋಬಲ್ ಸೊಲ್ಯೂಷನ್ಸ್, ಮೈಸೂರು

Comments
Post a Comment