ಟೈನಿ ಸೈಪ್ಸ್ ಶಾಲೆಯ ಗ್ರಾಜುಯೇಷನ್ ಡೇ ಸಮಾರಂಭ*
*ಟೈನಿ ಸೈಪ್ಸ್ ಶಾಲೆಯ
ಗ್ರಾಜುಯೇಷನ್ ಡೇ
ಸಮಾರಂಭ*
ಮಹಾಲಕ್ಷ್ಮೀಲೇಔಟ್ ವಿಧಾನಸಭಾ ಕ್ಷೇತ್ರದ ಶಂಕರಮಠದಲ್ಲಿ ಟೈನಿ ಟೈಸ್ಸ್ ಶಾಲೆಯ ಗ್ರಾಜುಯೇಷನ್ ಡೇ ಸಮಾರಂಭ.
ಅಧ್ಯಕ್ಷರಾದ ನಿರಂಜನ್ ಮತ್ತು ಪ್ರಾಂಶುಪಾಲರಾದ ಶ್ರೀಮತಿ ಶಿಲ್ಪರವರು ಮಕ್ಕಳ ಜೊತೆಯಲ್ಲಿ ದೀಪಾ ಬೆಳಗಿಸಿ ಪದವಿ ಪ್ರಮಾಣ ದಿನ ಅಚರಣೆ ಚಾಲನೆ ನೀಡಿದರು.
ಶೈಕ್ಷಣಿಕ ವರ್ಷದಲ್ಲಿ ಪಾಸದ ಮಕ್ಕಳಿಗೆ ಉಡುಗೂರೆ ನೀಡಿ, ಪ್ರಮಾಣ ಪತ್ರ ವಿತರಣೆ ಮಾಡಿದರು.
ಪ್ರಾಂಶುಪಾಲರಾದ *ಶ್ರೀಮತಿ ಶಿಲ್ಪರವರು* ಮಾತನಾಡಿ ಮಕ್ಕಳಿಗೆ ಮನೆಯೆ ಮೊದಲ ಪಾಠ ಶಾಲೆ ತಾಯಿ ಮೊದಲ ಗುರು ನಂತರ ಶಾಲೆಗೆ ಸೇರಿದ ನಂತರ ತಾಯಿ ಸ್ಥಾನವನ್ನ ಗುರುಗಳು ನಿಭಾಯಿಸಿ, ವಿದ್ಯಾರ್ಥಿಗಳನ್ನ ಉತ್ತಮಪ್ರಜೆಯಾಗಿ, ಸಮಾಜದಲ್ಲಿ ಬದುಕಲು,ಜೀವನ ರೂಪಿಸಲು ಸಹಕಾರಿಯಾಗಿ ನಿಲ್ಲುತ್ತಾರೆ.
ನಮ್ಮ ಶಾಲೆಯಲ್ಲಿ ಮನೆಯ ವಾತವರಣ ಕಲ್ಪಿಸಲಾಗಿದೆ.
ಪ್ರತಿಯೊಂದು ಮಕ್ಕಳ ಆಟ, ಊಟ ಮತ್ತು ಪಾಠ ಸಮರ್ಪಕವಾಗಿ ಹೇಳಿ ಕೊಡುವ ಕೆಲಸ ಮಾಡಲಾಗುತ್ತಿದೆ.
ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ಸಿಗಬೇಕಾದರೆ, ಗುರುಗಳ ಮಾರ್ಗದರ್ಶನ, ಸಲಹೆ ಮುಖ್ಯ ಎಂದು ಹೇಳಿದರು.
ಶಾಲೆಯ ಶಿಕ್ಷಕಿಯರು ಮತ್ತು ಆಡಳಿತ ಮಂಡಳಿಯವರು ಉಪಸ್ಥಿತರಿದ್ದರು.
Comments
Post a Comment