ಬಾಗೇಪಲ್ಲಿ :- ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದಲ್ಲಿ ಬೃಹತ ಕಾರ್ಯಕರ್ತರ ಸಮಾವೇಶವನ್ನು ಉದ್ಘಾಟಿಸಿ

ಬಾಗೇಪಲ್ಲಿ :- ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದಲ್ಲಿ ಬೃಹತ

ಕಾರ್ಯಕರ್ತರ ಸಮಾವೇಶವನ್ನು ಉದ್ಘಾಟಿಸಿ

ಬಾಗೇಪಲ್ಲಿ :- ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದಲ್ಲಿ ಬೃಹತ

ಕಾರ್ಯಕರ್ತರ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಮಾಜಿ ಸಚಿವರಾದ ಗಾಲಿ ಜನಾರ್ದನರೆಡ್ಡಿ ರವರು ನದಿಯಲ್ಲಿ ಸ್ವತಂತ್ರವಾಗಿ ಈಜಾಡುತ್ತಿದ್ದ ಮೀನಿಗೆ ಬಲೆ ಹಾಕಿದಂತೆ, ಕೆಲವರು ನನ್ನ ವಿರುದ್ದ ಕುತಂತ್ರಗಳು ನಡೆಸಿ ಬಂಧಿಸಿದರು ಎಂದು ಮಾಜಿ ಸಚಿವ ಗಾಲಿ ಜನಾರ್ಧನರೆಡ್ಡಿಯವರು ತಿಳಿಸಿದರು. 

ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಕಾರ್ಯಕರ್ತರ ಬೃಹತ್ ಸಮಾವೇಶವನ್ನು ಕೆ.ಎಸ್.ಆರ್.ಟಿ.ಸಿ. ರಸ್ತೆಯಲ್ಲಿರುವ ಕೆ.ಎಚ್.ಬಿ. ಲೇಔಟ್ ನಲ್ಲಿ ಭಾನುವಾರ ಏರ್ಪಡಿಸಲಾಗಿತ್ತು. ಈ ಸಮಾವೇಶದಲ್ಲಿ ಮಾತನಾಡಿದ ಜನಾರ್ಧನರೆಡ್ಡಿಯವರು, ರಾಜಕೀಯವೆಂದರೇನೆ ತಂತ್ರ, ಕುತಂತ್ರ, ಸುಳ್ಳು, ಮೋಸ, ವಂಚನೆ ಎಂದು ತಿಳಿಸಿದರು. ಇದರಿಂದಾಗಿ ನಾನು ರಾಜಕೀಯದಿಂದ 12 ವರ್ಷಗಳು ದೂರ ಉಳಿಯಬೇಕಾಯಿತು. ಆದರೆ ಮತ್ತೆ ನಾನು ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಮೂಲಕ ರಾಜಕೀಯಕ್ಕೆ ಮರು ಪ್ರವೇಶ ಮಾಡಿದ್ದೇನೆ. ಏಕೆಂದರೆ ಬದುಕಿದರೆ ಆಂದ್ರಪ್ರದೇಶದ ದಿವಂಗತ ವೈ.ಎಸ್ ರಾಜಶೇಖರರೆಡ್ಡಿರವರ ರೀತಿಯಲ್ಲಿ ಬದುಕಬೇಕು. ಜನರಿಗಾಗಿ ಒಳ್ಳೆಯ ಕೆಲಸಗಳನ್ನು ಮಾಡಬೇಕು ಎಂದರು. 

ಅದೇ ರೀತಿ ತಮಿಳುನಾಡಿನ ಜಯಲಲಿತಾ ಎಂಬ ಹೆಣ್ಣುಮಗಳಂತೆ ಸಾವಿರ ವರ್ಷಗಳು ಕಳೆದರೂ ಹೆಸರು ಉಳಿಯುವಂತೆ ಮಾಡಬೇಕು. ಹಾಗಾಗಿ ನಾನು ಮತ್ತೆ ರಾಜಕೀಯಕ್ಕೆ ಬಂದಿದ್ದೇನೆ. ಆ ನಿಟ್ಟಿನಲ್ಲಿ ಕಾರ್ಯಗತನಾಗಿದ್ದೇನೆ ಎಂದು ತಿಳಿಸಿದರು.ಈ ಬಾರಿ ರಾಜ್ಯದಲ್ಲಿ ಸುಮಾರು 30-40 ಸೀಟುಗಳು ನಮ್ಮ ಪಕ್ಷದಿಂದ ಗೆಲುವು ಸಾಧಿಸಲಿವೆ ಎಂಬ ಭರವಸೆಯನ್ನು ವ್ಯಕ್ತಪಡಿಸಿದರು. 

ಮುಂಬರುವ ಚುನಾವಣೆಯಲ್ಲಿ ಬಾಗೇಪಲ್ಲಿ ಕ್ಷೇತ್ರದ ಗ್ರಾಮೀಣ ಪ್ರದೇಶಗಳ ಅಭಿವೃದ್ಧಿ ಮಾಡಬೇಕಿದೆ. ಹಾಗಾಗಿ ನಮ್ಮ ಪಕ್ಷದ ಅಭ್ಯರ್ಥಿಯಾಗಿ ಅರಿಕೆರೆ ಕೃಷ್ಣಾರೆಡ್ಡಿ ರವರನ್ನು ಘೋಷಣೆ ಮಾಡುತ್ತಿದ್ದೇನೆ. ಅವರಿಗೆ ತಾವೆಲ್ಲರೂ ಆಶೀರ್ವದಿಸಿ ಗೆಲ್ಲಿಸಬೇಕೆಂದು ಜನರಲ್ಲಿ ಮನವಿ ಮಾಡಿದರು.

ಈಸಂಧರ್ಭದಲ್ಲಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಅಭ್ಯರ್ಥಿ ಅರಿಕೆರೆ ಕೃಷ್ಣಾರೆಡ್ಡಿ,ಯುವಮುಖಂಡ ನಾರಾಯಣಸ್ವಾಮಿ ಸೇರಿದಂತೆ ಹಲವಾರು ಮಂದಿ ಉಪಸ್ಥಿತರಿದ್ದರು.

Comments

Popular posts from this blog

ಗ್ರಾಮ ಸಹಾಯಕರ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಅನಿರ್ದಿಷ್ಠಾವಧಿ ಮುಷ್ಕರ ದಿನಾಂಕ 9/6/2025 ರಂದು ಫ್ರೀಡಂ ಪಾರ್ಕ್ ನಲ್ಲಿ ನಡೆಯುತ್ತದೆ

ಮುಳಖೇಡ, ಸೇಡಂ ತಾಲ್ಲೂಕು, ಕಲಬುರ್ಗಿ ಜಿಲ್ಲಾ ಗ್ರಾಮ ಪಂಚಾಯತ್ ಗ್ರಂಥಪಾಲಕಿ ಶ್ರೀಮತಿ ಭಾಗ್ಯವತಿ ಮಠ ಆತ್ಮಹತ್ಯೆ

Methodist Church in India Announces New Leadership, Disputes Former Bishop’s Claims