ಜಿ ಬೊಮ್ಮಸಂದ್ರ ಗ್ರಾಮ ಪಂಚಾಯಿತಿಯ ನೂತನ ಅಧ್ಯಕ್ಷರಾಗಿ ಬಿ.ಆರ್. ನಾಗಭೂಷಣ್ ರೆಡ್ಡಿ ಅವಿರೋಧವಾಗಿ ಆಯ್ಕೆ
ಜಿ ಬೊಮ್ಮಸಂದ್ರ ಗ್ರಾಮ ಪಂಚಾಯಿತಿಯ ನೂತನ ಅಧ್ಯಕ್ಷರಾಗಿ ಬಿ.ಆರ್. ನಾಗಭೂಷಣ್ ರೆಡ್ಡಿ ಅವಿರೋಧವಾಗಿ ಆಯ್ಕೆ
ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ತಾಲ್ಲೂಕು ತೊಂಡೆಬಾವಿ ಹೋಬಳಿ ಜಿ. ಬೊಮ್ಮಸಂದ್ರಗ್ರಾಮ ಪಂಚಾಯಿತಿಯ ನೂತನಅಧ್ಯಕ್ಷರಾಗಿ ಬಿ.ಆರ್. ನಾಗಭೂಷಣ್ ರೆಡ್ಡಿ ರವರು ಅವಿರೋಧವಾಗಿ ಆಯ್ಕೆಯಾಗಿದ್ದು ಚುನಾವಣಾ ಅಧಿಕಾರಿಯಾಗಿ ಕೃಷಿ ಇಲಾಖೆಯ ಅಧಿಕಾರಿಗಳಾದ ಮೋಹನ್ ರವರು ಚುನಾವಣೆಯ ಪ್ರಕ್ರಿಯೆ ನಂತರ ತಿಳಿಸಿದರು,ಈ ಸಂದರ್ಭದಲ್ಲಿಹಿರಿಯ ಮುಖಂಡರಾದ ಬಿ.ಜಿ. ವೇಣುಗೋಪಾಲ್ ರೆಡ್ಡಿಯವರು ಗೌರಿಬಿದನೂರು ಯೋಜನಾ ಪ್ರಾಧಿಕಾರದ ಅಧ್ಯಕ್ಷರು,ಮಾಜಿ ತಾಲ್ಲೂಕು ಪಂಚಾಯಿತಿ ಅಧ್ಯಕ್ಷರಾದ ಗಂಗಾಧರಪ್ಪನವರು, ಬಿ.ಸಿ. ಶಿವಾನಂದರೆಡ್ಡಿ, ಬಿ.ವಿ.ಸಿಕ್ಕರಪ್ಪರೆಡ್ಡಿ, ವೆಂಕಟರಾಮರೆಡ್ಡಿ ವಿ ಎಸ್ಎಸ್ಎನ್ ಅಧ್ಯಕ್ಷರು ಕುಂಟ ಚಿಕ್ಕನಹಳ್ಳಿ,ಮಾಜಿ ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷರಾದ ಚಂದ್ರಶೇಖರಯ್ಯ, ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷರುಗಳಾದ ಶ್ರೀನಾಥ್, ಮಹಾದೇವಯ್ಯ, ಮಾಜಿ ಗ್ರಾಮ ಪಂಚಾಯತಿ ಉಪಾಧ್ಯಕ್ಷರಾದ ವೆಂಕಟೇಶ್ ರವರು ಹಾಗೂ ಗ್ರಾಮ ಪಂಚಾಯಿತಿಯ ಎಲ್ಲಾ ಸದಸ್ಯರುಗಳು ಪಿಡಿಒ ಹಾಗೂ ಸಿಬ್ಬಂದಿ ವರ್ಗದವರು ಭಾಗವಹಿಸುವ ಮೂಲಕ ನೂತನ ಅಧ್ಯಕ್ಷರಿಗೆ ಹಾರ ಹಾಕಿ ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು, ಈ ಸಂದರ್ಭದಲ್ಲಿ ನೂತನ ಅಧ್ಯಕ್ಷರಾದ ಬಿ ಆರ್ ನಾಗಭೂಷಣ್ ರೆಡ್ಡಿ ರವರು ನನ್ನಗೆಲುವಿಗೆ ಶ್ರಮಿಸಿದ ಎಲ್ಲಾ ಮುಖಂಡರುಗಳಿಗೆ ಚುನಾವಣಾ ಅಧಿಕಾರಿಗಳಿಗೆ ಹಾಗೂ ಎಲ್ಲಾ ಗ್ರಾಮ ಪಂಚಾಯಿತಿಯ ಸದಸ್ಯರುಗಳಿಗೆ ಮಾಜಿ ಅಧ್ಯಕ್ಷರುಗಳಿಗೆ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ಮತ್ತು ಪಂಚಾಯಿತಿಯ ಸಿಬ್ಬಂದಿ ವರ್ಗದವರಿಗೆ ಧನ್ಯವಾದ ತಿಳಿಸಿದರು ಈ ವೇಳೆ ಮಾತನಾಡಿದ ನೂತನ ಅಧ್ಯಕ್ಷರಾದ ಬಿ ಆರ್ ನಾಗಭೂಷಣ್ ರೆಡ್ಡಿ ರವರು ಗ್ರಾಮ ಪಂಚಾಯಿತಿ ಮೂಲಭೂತ ಸೌಕರ್ಯಗಳಾದ ಕುಡಿಯುವನೀರು ಬೀದಿದೀಪ ರಸ್ತೆ ಚರಂಡಿ ವಸತಿ ಇನ್ನಿತರ ಸಮಸ್ಯೆಗಳನ್ನು ಬಗೆಹರಿಸಲುಎಲ್ಲಾ ಗ್ರಾಮ ಪಂಚಾಯಿತಿಯ ಸದಸ್ಯರ ಬೆಂಬಲ ದೊಂದಿಗೆ ಕಾರ್ಯನಿರ್ವಹಿಸುವುದಾಗಿ ತಿಳಿಸಿದರು.
ಎನ್.ಶೋಭಾ
ಪಬ್ಲಿಕ್ ರಿಪೋರ್ಟ್ ನ್ಯೂಸ್ ವರದಿಗಾರರು ಚಿಕ್ಕಬಳ್ಳಾಪುರ ಜಿಲ್ಲೆ.

Comments
Post a Comment