ಶಿಡ್ಲಘಟ್ಟ ವಿಧಾನಸಭಾಕ್ಷೇತ್ರದ ಸಮಾಜಸೇವಕರು ಆಂಜನಪ್ಪ (ಪುಟ್ಟು) ರವರಿಂದ ಯುವ ಮಿಲನ ಸಮಾವೇಶ ಕಾರ್ಯಕ್ರಮ
ಶಿಡ್ಲಘಟ್ಟ ವಿಧಾನಸಭಾಕ್ಷೇತ್ರದ ಸಮಾಜಸೇವಕರು ಆಂಜನಪ್ಪ (ಪುಟ್ಟು) ರವರಿಂದ ಯುವ ಮಿಲನ ಸಮಾವೇಶ ಕಾರ್ಯಕ್ರಮ"
ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದಲ್ಲಿ ಸಮಾಜ ಸೇವಕರು ಹಾಗೂ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾದ ಆಂಜನಪ್ಪ (ಪುಟ್ಟು) ರವರು ಶಿಡ್ಲಘಟ್ಟಹೊರ ವಲಯದ ಹಿತ್ತಲಹಳ್ಳಿ ಗೇಟ್ ಬಳಿ ಯುವ ಮಿಲನ ಸಮಾವೇಶ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು,ಈ ಸಮಾವೇಶದಲ್ಲಿ ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದ ಸಾವಿರಾರು ಕಾಂಗ್ರೆಸ್ ಕಾರ್ಯಕರ್ತರು ಭಾಗವಹಿಸಿದ್ದರು.ಈ ಕಾರ್ಯಕ್ರಮದಲ್ಲಿ ಮಾತನಾಡಿದ ಆಂಜನಪ್ಪ (ಪುಟ್ಟು)ರವರು ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದಲ್ಲಿ ಸುಮಾರು 10 ವರ್ಷಗಳಿಂದಲೂ ಸಹ ಸಾಮಾಜಿಕ ಸೇವೆಯನ್ನು ಮಾಡಿಕೊಂಡು ಬಂದಿರುತ್ತೇನೆ. ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದಲ್ಲಿ ರಾಜಕೀಯವಾಗಿ ಮುಂಬರುವ ದೃಷ್ಟಿಯಿಂದಲೇ ನಾನು ಸಾಮಾಜಿಕ ಸೇವೆಯನ್ನು ನಡೆಸಿಕೊಂಡು ಬಂದಿರುತ್ತೇನೆ. ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದಲ್ಲಿ ರಾಜಕೀಯ ಚದುರಂಗದಾಟಗಳು ಸಾಕಷ್ಟು ಹೆಚ್ಚಾಗುತ್ತಿದೆ. ಚುನಾವಣೆ ಸಮೀಪಿಸುತ್ತಿದ್ದಂತೆ ಕ್ಷೇತ್ರದಲ್ಲಿ ಸಾಕಷ್ಟು ಜನ ವ್ಯಾಪಾರ ಮಾಡಲುಕ್ಷೇತ್ರಕ್ಕೆ ಬಂದಿರುತ್ತಾರೆ. ಅಂತವರನ್ನು ನಂಬಬೇಡಿ.ಈ ಬಾರಿ ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ಪಣ ತೊಟ್ಟಿದ್ದೇನೆ. ಆದ್ದರಿಂದಈಕ್ಷೇತ್ರದ ಜೆಡಿಎಸ್,ಬಿಜೆಪಿ, ಅಭ್ಯರ್ಥಿಗಳುಈ ಬಾರಿಕ್ಷೇತ್ರದಲ್ಲಿ(ಪು ಟ್ಟು) ಆಂಜನಪ್ಪಗೆಲ್ಲಲು ಅವಕಾಶ ಮಾಡಿಕೊಡಬೇಕೆಂದು ಎಂದುವಿವಿಧಪಕ್ಷಗಳ ಮುಖಂಡರಲ್ಲಿಮನವಿ ಮಾಡಿಕೊಂಡಿದ್ದಾರೆ. ಈ ಕ್ಷೇತ್ರದ ಮತಬಾಂಧವರು ಚುನಾವಣೆಯಲ್ಲಿ ನನಗೆ ಅವಕಾಶ ಮಾಡಿಕೊಟ್ಟರೆ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುವುದಾಗಿ ತಿಳಿಸಿದರು.ಈ ಸಮಾವೇಶಕ್ಕೆ ಆಗಮಿಸಿದ ಶಿಡ್ಲಘಟ್ಟ ವಿಧಾನಸಭಾಕ್ಷೇತ್ರದ ಮತಬಾಂಧವರಿಗೆ ಭರ್ಜರಿ ಬಾಡೂಟ ಏರ್ಪಡಿಸಲಾಗಿತ್ತು.ಈ ಕಾರ್ಯಕ್ರಮಕ್ಕೆ ಶಿಡ್ಲಘಟ್ಟ ವಿಧಾನಸಭಾಕ್ಷೇತ್ರದ ಕಾಂಗ್ರೆಸ್ ನ ಮುಖಂಡರುಗಳು, ನಾಯಕರುಗಳು, ಕಾರ್ಯಕರ್ತರುಗಳು ಭಾಗವಹಿಸುವ ಮೂಲಕ ಕಾರ್ಯಕ್ರಮ ಯಶಸ್ವಿಗೊಳಿಸಿದರು.
ಎನ್ ಶೋಭಾ ಪಬ್ಲಿಕ್ ರಿಪೋರ್ಟ್ ವರದಿಗಾರರು ಚಿಕ್ಕಬಳ್ಳಾಪುರ ಜಿಲ್ಲೆ

Comments
Post a Comment